ಸಿಬಿಎಎಸ್‌ಇ, ಐಸಿಎಸ್‌ಇ ಶಾಲೆಗಳಲ್ಲಿ ಕನ್ನಡ ಭಾಷೆಯ ಸ್ಥಾನ ಮೇಲ್ದರ್ಜೆಗೇರಿಸಿದ ಸರ್ಕಾರ!
ರಾಜ್ಯಾದ್ಯಂತ ಈವರೆಗೆ ಕನ್ನಡವನ್ನು ತೃತೀಯ ಭಾಷೆಯಾಗಿ ಬೋಧನೆ ಮಾಡಲು ಅವಕಾಶ ನೀಡಿದ್ದ ನಿಯಮಾವಳಿ ತಿದ್ದುಪಡಿ ಮಾಡಿ ಮೇಲ್ದರ್ಜೇರಿಸಿದ ಸರ್ಕಾರ ಎಲ್ಲ ಸಿಬಿಎಸ್‌ಇ, ಐಸಿಎಸ್‌ಇ ಶಾಲೆಗಳನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಕನ್ನಡ ಕಡ್ಡಾಯ ಬೋಧನೆ ಮಾಡುವಂತೆ ಆದೇಶ ಹೊರಡಿಸಿದೆ.
ಬೆಂಗಳೂರು (ಜೂ.29): ರಾಜ್ಯಾದ್ಯಂತ ಈವರೆಗೆ ಕನ್ನಡವನ್ನು ತೃತೀಯ ಭಾಷೆಯಾಗಿ ಬೋಧನೆ ಮಾಡಲು ಅವಕಾಶ ನೀಡಿದ್ದ ನಿಯಮಾವಳಿ ತಿದ್ದುಪಡಿ ಮಾಡಿ ಮೇಲ್ದರ್ಜೇರಿಸಿದ ಸರ್ಕಾರ ಎಲ್ಲ ಸಿಬಿಎಸ್‌ಇ, ಐಸಿಎಸ್‌ಇ ಶಾಲೆಗಳನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಕನ್ನಡ ಕಡ್ಡಾಯ ಬೋಧನೆ ಮಾಡುವಂತೆ ಆದೇಶ ಹೊರಡಿಸಿದೆ.
ರಾಜ್ಯಾದ್ಯಂತ ಶಿಕ್ಷಣ ಪ್ರಸಾರ ಮಾಡುತ್ತಿರುವ ಶಾಲೆಗಳಲ್ಲಿ ಕನ್ನಡ ಭಾಷೆಯನ್ನು ಒಂದು ವಿಷಯವನ್ನಾಗಿ ಅಧ್ಯಯನ ಮಾಡುವುದನ್ನು ಕಡ್ಡಾಯಗೊಳಿಸಿ ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ. ಕನ್ನಡ ಭಾಷೆಯನ್ನು ಪ್ರಥಮ, ದ್ವಿತೀಯ ಭಾಷೆಯಾಗಿ ಬೋಧನೆ ಮಾಡಬೇಕು. ಈ ಹಿಂದೆ ತೃತೀಯ ಭಾಷೆಯನ್ನಾಗಿ ಬೋಧನೆ ಮಾಡಲು ಅವಕಾಶವನ್ನು ತಿದ್ದುಪಡಿ ಮೂಲಕ ಬದಲಾವಣೆ ಮಾಡಿ ಆದೇಶ ಹೊರಡಿಸಿದೆ. ಈ ಮೂಲಕ ಎಲ್ಲ ಶಾಲೆಗಳಲ್ಲಿ ಕನ್ನಡ ಭಾಷಾ ಬೋಧನೆ ಮಾಡದ ಶಾಲೆಗಳ ವಿರುದ್ಧ ಸರ್ಕಾರ ನೇರವಾಗಿ ಕ್ರಮ ಕೈಗೊಳ್ಳಬಹುದು.
ಹೌದು, ಸಿಬಿಎಸ್ ಇ ಶಾಲೆ ಮಕ್ಕಳಿಗೆ ಶಾಲೆ ಮಕ್ಕಳಿಗೆ ಕನ್ನಡ ಭಾಷೆ ಕಡ್ಡಾಯಗೊಳಿಸಲಾಗಿದೆ. ಪ್ರಥಮ, ದ್ವಿತೀಯ ಭಾಷೆಯಾಗಿ ಕನ್ನಡ ಬೋಧನೆ ಕಡ್ಡಾಯಗೊಳಿಸಲಾಗಿದೆ. ಈ ಕುರಿತು ರಾಜ್ಯದ ಎಲ್ಲ ಶಾಲೆಗಳಿಗೆ ಸರ್ಕಾರದಿಂದ ರಾಜ್ಯಪತ್ರದ ಮೂಲಕ ಆದೇಶ ಹೊರಡಿಸಲಾಗಿದೆ. ಸಿಬಿಎಸ್‌ಇ, ಐಸಿಎಸ್ಇ ಹಾಗೂ ಕೇಂದ್ರೀಯ ಪಠ್ಯಕ್ರಮದ ಶಾಲೆಗಳಿಗೆ ರಾಜ್ಯ ಪತ್ರ ಹೊರಡಿಸಿದೆ. ಕನ್ನಡವನ್ನ ಪ್ರಥಮ ಅಥವಾ ದ್ವಿತೀಯ ಭಾಷೆಯನ್ನಾಗಿ ಬೋಧಿಸುವುದು ಕಡ್ಡಾಯ ಎಂದು ಆದೇಶಿಸಲಾಗಿದೆ.
ಸರ್ಕಾರಿ ಶಾಲೆಗಳ ಎಲ್‌ಕೆಜಿ, ಯುಕೆಜಿಗೆ ಮಕ್ಕಳ ದಾಖಲಾತಿಗೆ ಮುಗಿಬಿದ್ದ ಪೋಷಕರು!
ಇನ್ನು ನಿಯಮಾವಳಿ ತಿದ್ದುಪಡಿ ತಂದು ರಾಜ್ಯ ಸರ್ಕಾರ ರಾಜ್ಯಪತ್ರ ಹೊರಡಿಸಲಾಗಿದೆ. ಈ ಹಿಂದೆ ಕೇಂದ್ರೀಯ ಪಠ್ಯಕ್ರಮದ ಶಾಲೆಗಳಲ್ಲಿ ಕನ್ನಡ ಭಾಷೆ ಬೋಧನೆ ಮಾಡಬೇಕೆಂದು ನಿಯಮವಿದ್ದರೂ, ಅನೇಕ ಶಾಲೆಗಳಲ್ಲಿ ಕನ್ನಡ ಭಾಷೆಯನ್ನು ಬಿಟ್ಟು ತ್ರಿಭಾಷಾ ಸೂತ್ರ ಅಥವಾ ದ್ವಿಭಾಷಾ ಸೂತ್ರವನ್ನು ಅಳವಡಿಸಿಕೊಂಡು ಪಠ್ಯವನ್ನು ಬೋಧನೆ ಮಾಡಲಾಗುತ್ತಿತ್ತು. ಆದರೆ, ಕನ್ನಡ ಭಾಷೆಯನ್ನು ಬೋಧನಾ ವಿಷಯವನ್ನಾಗಿ ಅಳವಡಿಕೆ ಮಾಡಿಕೊಂಡಿರಲಿಲ್ಲ. ಇನ್ನು ಸರ್ಕಾರದ ನಿಯಮ ಇತ್ತಾದರೂ ಇದನ್ನ ಯಾರು ಪಾಲನೆ ಮಾಡುತ್ತಿರಲಿಲ್ಲ.
ಹೀಗಾಗಿಯೇ, ರಾಜ್ಯ ಸರ್ಕಾರ ನಿಯಮಾವಳಿಗೆ ತಿದ್ದುಪಡಿ ತಂದು ದ್ವಿತೀಯ ಅಥವಾ ತೃತೀಯ ಭಾಷೆಯನ್ನಾಗಿ ಬೋಧನೆ ಮಾಡಲು ತಿದ್ದುಪಡಿ ಮಾಡಲಾಗಿತ್ತು. ಇದಕ್ಕೆ ಕನ್ನಡ ಪರ ಸಂಘಟನೆಗಳು, ಸಾಹಿತಿಗಳು, ಶಿಕ್ಷಣ ತಜ್ಞರು ವಿರೋಧ ವ್ಯಕ್ತಪಡಿಸಿದ್ದರು. ಬಳಿಕ ಮತ್ತೆ ನಿಯಮಾವಳಿಗೆ ತಿದ್ದುಪಡಿ ಮಾಡಿಕನ್ನಡ ಭಾಷೆಯನ್ನ ಪ್ರಥಮ ಅಥವಾ ದ್ವಿತೀಯ ಭಾಷೆಯನ್ನಾಗಿ ಬೋಧಿಸಬೇಕೆಂದು ಆದೇಶ ಹೊರಡಿಸಲಾಗಿದೆ. ಇದೀಗ ಅಧಿಕೃತವಾಗಿ ರಾಜ್ಯ ಸರ್ಕಾರ ರಾಜ್ಯಪತ್ರ ಹೊರಡಿಸಿ ಆದೇಶ ಹೊರಡಿಸಿದ್ದು, ಕನ್ನಡ ಭಾಷೆ ಬೋಧನೆ ಮಾಡದ ಶಾಲೆಗಳ ವಿರುದ್ಧ ನೇರವಾಗಿ ಕ್ರಮ ಕೈಗೊಳ್ಳಲು ಅವಕಾಶವಿದೆ.
ನರ್ಸಿಂಗ್ ಕಾಲೇಜು ಪ್ರವೇಶಕ್ಕೆ ನಕಲಿ ವಿದ್ಯಾರ್ಥಿಗಳ ಸೃಷ್ಟಿಸಿ ಅಕ್ರಮ..!
ಕಂದಾಯ ಜಮೀನಿನಲ್ಲಿ ಶಾಲೆ ನಿರ್ಮಾಣ ನಿಷೇಧ: ಅದೇ ರೀತಿ ಖಾಸಗಿ ಶಾಲೆಗಳನ್ನು ಆರಂಭಿಸಲು ಅಗತ್ಯವಿರುವ ಭೂಮಿಯನ್ನು 'ಶೈಕ್ಷಣಿಕ ಉದ್ದೇಶಕ್ಕಾಗಿ' ಎಂದು ಕಂದಾಯ ಇಲಾಖೆಯಿಂದ ಭೂ ಪರಿವರ್ತನೆ ಪಡೆಯುವುದು ಕೂಡ ಕಡ್ಡಾಯಗೊಳಿಸಲಾಗಿದೆ. ಇದುವರೆಗೆ 'ಕೃಷಿಯೇತರ ಉದ್ದೇಶಕ್ಕೆ' ಎಂಬ ಭೂ ಪರಿವರ್ತನೆ ಮಾಡಿದ ಯಾವುದೇ ಭೂಮಿಯಲ್ಲಿ ಶಾಖೆ ಶಾಲೆಗಳನ್ನು ನಡೆಸಲು ಅವಕಾಶವಿತ್ತು. ಈ ಮೂಲಕ ಕಂದಾಯ ಜಮೀನಿನಲ್ಲಿ ಶಾಲೆ ನಿರ್ಮಾಣವನ್ನು ನಿಷೇಧಿಸಲಾಗಿದೆ. ಜೊತೆಗೆ, ಕೈಗಾರಿಕೆ, ಉದ್ಯಮ ಅಥವಾ ವಸತಿ ಪ್ರದೇಶಗಳಲ್ಲಿಯೂ ಶಾಲೆ ನಿರ್ಮಾಣ ಮಾಡದೇ ಭೂಮಿಯನ್ನು ಶೈಕ್ಷಣಿಕ ಉದ್ದೇಶಕ್ಕೆ ಎಂದು ಪರಿವರ್ತನೆ ಮಾಡಿಸಿಕೊಳ್ಳಬೇಕು ಎಂದು ಆದೇಶ ಹೊರಡಿಸಲಾಗಿದೆ.