Asianet Suvarna News Asianet Suvarna News

Assistant Professor Merit list: ಸಹಾಯಕ ಪ್ರಾಧ್ಯಾಪಕರ ತಾತ್ಕಾಲಿಕ ಮೆರಿಟ್‌ ಪಟ್ಟಿ ಬಿಡುಗಡೆ

ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿನ ಸಹಾಯಕ ಪಾಧ್ಯಾಪಕರ 1,242 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ದಾಖಲೆಗಳ ಪರಿಶೀಲನೆ ನಡೆಸಿ ವಿಷಯವಾರು ತಾತ್ಕಾಲಿಕ ಪರಿಶೀಲನಾ ಮತ್ತು ಮೆರಿಟ್‌ ಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಿಸಿದೆ.

Karnataka Examination Authority released Provisional Merit List of Assistant Professor post gow
Author
First Published Jan 13, 2023, 12:38 PM IST

ಬೆಂಗಳೂರು (ಜ.13): ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿನ ಸಹಾಯಕ ಪಾಧ್ಯಾಪಕರ 1,242 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ದಾಖಲೆಗಳ ಪರಿಶೀಲನೆ ನಡೆಸಿ ವಿಷಯವಾರು ತಾತ್ಕಾಲಿಕ ಪರಿಶೀಲನಾ ಮತ್ತು ಮೆರಿಟ್‌ ಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಿಸಿದೆ. ಕಳೆದ ವರ್ಷದ ಮಾರ್ಚ್ ತಿಂಗಳಲ್ಲಿ ಲಿಖಿತ ಪರೀಕ್ಷೆ ನಡೆಸಲಾಗಿತ್ತು.

ಆ ಬಳಿಕ ತಾತ್ಕಾಲಿಕ ಕೀ ಉತ್ತರ ಪ್ರಕಟಿಸಿ, ಆಕ್ಷೇಪಣೆ ಸಲ್ಲಿಕೆಗೆ ಅವಕಾಶ ನೀಡಿ, ಅಂತಿಮ ಕೀ ಉತ್ತರವನ್ನು ಪ್ರಕಟಿಸಲಾಗಿತ್ತು. ಆಗಸ್ಟ್‌ನಲ್ಲಿ ತಾತ್ಕಾಲಿಕ ಮೆರಿಟ್‌ ಪಟ್ಟಿಪ್ರಕಟಿಸಲಾಗಿತ್ತು. ಇದೀಗ ತಾತ್ಕಾಲಿಕ ಪರಿಶೀಲನಾ ಪಟ್ಟಿಪ್ರಕಟಗೊಂಡಿದೆ.

ವೈದ್ಯಕೀಯ ಪರೀಕ್ಷೆಯ ಬಳಿಕ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ಪರಿಶೀಲನಾ ಪಟ್ಟಿಯಲ್ಲಿ ಅರ್ಜಿಯ ಸಂಖ್ಯೆ, ಅರ್ಹತೆ ಪಡೆದವರ ಹೆಸರು, ವಿಷಯಗಳಲ್ಲಿ ಪಡೆದ ಅಂಕ, ಐಚ್ಛಿಕ ವಿಷಯಗಳಲ್ಲಿ ಪಡೆದ ಅಂಕ, ಮೀಸಲಾತಿ ವಿಭಾಗ ಮುಂತಾದ ಮಾಹಿತಿಯನ್ನು ನೀಡಲಾಗಿದೆ.

ಅಳವಂಡಿಯಲ್ಲಿ ಅತಿಥಿ ಶಿಕ್ಷಕರ ನೇಮಕಕ್ಕೆ ಅರ್ಜಿ ಆಹ್ವಾನ
ಕೊಪ್ಪಳ: ತಾಲೂಕಿನ ಅಳವಂಡಿ ಗ್ರಾಮದ ಡಾ. ಬಿ.ಆರ್‌. ಅಂಬೇಡ್ಕರ ಬಾಲಕಿಯರ ವಸತಿ ಶಾಲೆಯ ಪ್ರಸಕ್ತ ಸಾಲಿನಲ್ಲಿ ಅತಿಥಿ ಶಿಕ್ಷಕರ ನೇಮಕಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಖಾಲಿ ಇರುವ ಕನ್ನಡ ಭಾಷಾ ಶಿಕ್ಷಕರ(ಬಿಎ ಬಿಎಡ್‌ ಅಥವಾ ಎಂಎ ಬಿಎಡ್‌) ಹುದ್ದೆಗೆ ತಾತ್ಕಾಲಿಕವಾಗಿ ಕಾರ್ಯ ನಿರ್ವಹಿಸಲು ಅತಿಥಿ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಬೇಕಿದೆ. ಅರ್ಹ ಅಭ್ಯರ್ಥಿಗಳು ಜ. 23ರೊಳಗಾಗಿ ಅರ್ಜಿ ಸಲ್ಲಿಸಬಹುದು ಎಂದು ಅಳವಂಡಿಯ ಡಾ. ಬಿ.ಆರ್‌. ಅಂಬೇಡ್ಕರ ಬಾಲಕಿಯರ ವಸತಿ ಶಾಲೆಯ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶಿಕ್ಷಕರ ವರ್ಗ ಪರಿಷ್ಕೃತ ವೇಳಾಪಟ್ಟಿ ಪ್ರಕಟ, ಜ.16ರ ವರೆಗೆ ಹೆಚ್ಚುವರಿ ಶಿಕ್ಷಕರ ದಾಖಲೆಗಳ ಪರಿಶೀಲನೆ

ಅಪ್ರೆಂಟಿಶಿಪ್‌ ತರಬೇತಿಗೆ ಅರ್ಜಿ ಆಹ್ವಾನ
ಬಾಗಲಕೋಟೆ: ನವನಗರದ ಸರ್ಕಾರಿ ಐಟಿಐ ಕಾಲೇಜಿನಲ್ಲಿ ವಿವಿಧ ಕಂಪನಿಗಳಿಂದ ಅಪ್ರೆಂಟಿಶಿಪ್‌ ಹುದ್ದೆಗಳ ನೇಮಕಾತಿಗಾಗಿ ಡಿಪ್ಲೋಮಾ, ಐಟಿಐ, ಪಿಯುಸಿ, ಪದವಿ ಅಭ್ಯರ್ಥಿಗಳಿಗೆ ಸಂದರ್ಶನ ಹಮ್ಮಿಕೊಳ್ಳಲಾಗಿದೆ. ಆಸಕ್ತ ಅಭ್ಯರ್ಥಿಗಳು ತಮ್ಮ ಎಲ್ಲ ಅಂಕಪಟ್ಟಿದೃಢೀಕೃತ ಪ್ರತಿಗಳೊಂದಿಗೆ ಜನವರಿ 17 ರಂದು ಬೆಳಗ್ಗೆ 10 ಗಂಟೆಗೆ ಸಂದರ್ಶನಕ್ಕೆ ಹಾಜರಾಗುವಂತೆ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮಾಹಿತಿಗಾಗಿ ದೂ:08354-200773, 9945522838 ಗೆ ಸಂಪರ್ಕಿಸಬಹುದಾಗಿದೆ.

ಮೈಸೂರು ಮಹಾರಾಣಿ ಮಹಿಳಾ ಪ್ರಶಿಕ್ಷಣ ಸಂಸ್ಥೆ ಮುಚ್ಚದಿರಲು ಆಗ್ರಹ

ಜ.18ಕ್ಕೆ ಆರೋಗ್ಯ ನಿರೀಕ್ಷಕರ ನೇಮಕಾತಿಗೆ ಸಂದರ್ಶನ
ಹುಬ್ಬಳ್ಳಿ: ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಖಾಲಿ ಇರುವ 9 ಜನ ಅರ್ಹ ಶಿಕ್ಷಣ ಪಡೆದ ಆರೋಗ್ಯ ನಿರೀಕ್ಷಕರನ್ನು ನೇರ ಸಂದರ್ಶನದ ಮೂಲಕ 1:3ರ ಅನುಪಾತದಲ್ಲಿ ಷರತ್ತು ಹಾಗೂ ಆಯ್ಕೆಯ ಮಾನದಂಡಗಳನ್ವಯ ಒಂದು ವರ್ಷದ ಅವಧಿಗೆ ಮಾಸಿಕ ಗೌರವಧನ ಆಧಾರದ ಮೇಲೆ ನೇಮಕಾತಿಗೆ ಸಂದರ್ಶನ ನಡೆಯಲಿದೆ. ಅರ್ಹ ಶಿಕ್ಷಣ ಪಡೆದ ಆಸಕ್ತಿವುಳ್ಳ ಅಭ್ಯರ್ಥಿಗಳು ಮೂಲ ದಾಖಲೆಗಳೊಂದಿಗೆ ಹಾಗೂ ದೃಢೀಕೃತ ನಕಲು ಸರ್ಟಿಫಿಕೆಟ್‌ಗಳೊಂದಿಗೆ ಜ. 18ರಂದು ಬೆಳಗ್ಗೆ 9ರಿಂದ ಮಧ್ಯಾಹ್ನ 1ರ ವರೆಗೆ ಪಾಲಿಕೆ ಆಯುಕ್ತರ ಕಚೇರಿಯ ಸಭಾಭವನದಲ್ಲಿ ಹಾಜರಾಗಬೇಕು. ಜ. 16ರೊಳಗಾಗಿ ಆರೋಗ್ಯ ಖಾತೆಯ (ಹು) ಎರಡನೇ ದರ್ಜೆ ಸಹಾಯಕರ ಹತ್ತಿರ ಹೆಸರು ನೋಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗೆ 0836 2213825 ಸಂಪರ್ಕಿಸಬಹುದು ಎಂದು ಪಾಲಿಕೆ ಆರೋಗ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow Us:
Download App:
  • android
  • ios