Asianet Suvarna News Asianet Suvarna News

ಬಿಗ್ ನ್ಯೂಸ್: ಕರ್ನಾಟಕದಲ್ಲಿ ಶಾಲೆ ಪ್ರಾರಂಭಿಸಲು ಸಕಲ ಸಿದ್ಧತೆ

ಕೊರೊನಾ ವೈರಸ್‌ ಶೈಕ್ಷಣಿಕ ರಂಗದ ಮೇಲೆ ಬೃಹತ್ ಮಟ್ಟದಲ್ಲಿಯೇ ಮಾರಕವಾಗಿದೆ. ಕೋವಿಡ್-19 ಹಾವಳಿಯಿಂದ ಜಗತ್ತಿನಾದ್ಯಂತ ಶೈಕ್ಷಣಿಕ ಚಟುವಟಿಕೆಗಳು ಸ್ಥಗಿತಗೊಂಡಿದ್ದು ಅವುಗಳ ಪುನರಾರಂಭದ ಬಗ್ಗೆ ಚಿಂತನೆಗಳು ನಡೆದಿವೆ.

Karnataka Education Dept Preopening of schools reopening In Nov Last Week rbj
Author
Bengaluru, First Published Oct 30, 2020, 7:48 PM IST

ಬೆಂಗಳೂರು, (ಅ.30): ಕೊರೋನಾ ವೈರಸ್‌ನಿಂದಾಗಿ ಶೈಕ್ಷಣಿಕ ಕ್ಷೇತ್ರ ಸಂಪೂರ್ಣವಾಗಿ ಸ್ಥಗಿತವಾಗಿದೆ. ಮತ್ತೆ ಚಟುವಟಿಕೆ ಆರಂಭಿಸಲು ಹಲವು ಸಾಧ್ಯತೆಗಳ ಪರಿಶೀಲನೆ ನಡೆಯುತ್ತಿದೆ.

ಹೌದು...ಕರ್ನಾಟಕದಲ್ಲಿ ಶಾಲೆಗಳನ್ನ ಪ್ರಾರಂಭಿಸುವ  ವಿಚಾರ ಮತ್ತೆ ಮುನ್ನೆಲೆಗೆ ಬಂದಿದ್ದು, ನವೆಂಬರ್ ಕೊನೆಯ ವಾರದಲ್ಲಿ ಶಾಲೆ ಪ್ರಾರಂಭಿಸುವ ಸಾಧ್ಯತೆ ಎನ್ನಲಾಗುತ್ತಿದೆ.

ಈ ಬಗ್ಗೆ ಸಾಧಕ–ಬಾಧಕಗಳನ್ನ ಚರ್ಚಿಸಲು ನವೆಂಬರ್ 2 ರಂದು ಸಾರ್ವಜನಿಕ ಶಿಕ್ಷಣ ‌ಇಲಾಖೆ ಆಯುಕ್ತ ಅನ್ಬುಕುಮಾರ್ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ನಡೆಯಲಿದೆ.

ನ.17ರಿಂದ ಕಾಲೇಜು ಅರಂಭ: ಮೊದಲು ಪ್ರಾಕ್ಟಿಕಲ್‌, ಬಳಿಕ ಥಿಯರಿ ಕ್ಲಾಸ್‌

ಈಗಾಗಲೇ ರಾಜ್ಯದಲ್ಲಿ ಕೋವಿಡ್ ಸೋಂಕಿತ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಶಾಲೆಗಳನ್ನ ಪ್ರಾರಂಭಿಸುವ ಚಿಂತನೆಗಳು ಸರ್ಕಾರದ ಮಟ್ಟದಲ್ಲಿ ನಡೆದಿವೆ.

ಇದೇ ನವೆಂಬರ್ 17 ರಿಂದ ಕಾಲೇಜು ಪ್ರಾರಂಭವಾಗಲಿವೆ. ಇದರಂತೆ ಶಾಲೆಗಳನ್ನ ಪ್ರಾರಂಭಿಸಲು  ಶಿಕ್ಷಣ ಇಲಾಖೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಇದಕ್ಕೆ ಪೂಕರವೆಂಬಂತೆ ನವೆಂಬರ್ 2 ರಿಂದ ಶಿಕ್ಷಕರು ಹಾಗೂ ಸಿಬ್ಬಂದಿ  ಹಾಜರಿಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

ಈಗಾಗಲೇ ‌ಮೊದಲ ಹಂತದಲ್ಲಿ ಯುಜಿ ಹಾಗೂ ಪಿಜಿ ತರಗತಿಗಳು ನವೆಂಬರ್ 17 ರಿಂದ ಪ್ರಾರಂಭವಾಗಲಿದ್ದು, ನವೆಂಬರ್ ಕೊನೆಯ ವಾರದಲ್ಲಿ ಶಾಲೆ ತೆರಯುವ ಸಾಧ್ಯತೆ ಇದೆ. ಅದಕ್ಕಾಗಿ ಶಾಲೆಯ ಆವರಣ ಹಾಗೂ ಕೊಠಡಿಗಳನ್ನ ಸ್ವಚ್ಚವಾಗಿ ಇಡುವಂತೆ ಸೂಚನೆ ಕೊಡಲಾಗಿದೆ ಎಂದು ಸುವರ್ಣ ನ್ಯೂಸ್ ಶಿಕ್ಷಣ ಇಲಾಖೆಯ ಉನ್ನತ ಮೂಲಗಳಿಂದ ತಿಳಿದುಬಂದಿದೆ.

ನವೆಂಬರ್ 2 ರಂದು ನಡೆಯಲಿರುವ ಸಭೆಯಲ್ಲಿ ಏನೆಲ್ಲಾ ನಿರ್ಣಯ ಕೈಗೊಳ್ಳುತ್ತಾರೋ ಎನ್ನುವುದನ್ನು ಕಾದನೋಡಬೇಕಿದೆ.

Follow Us:
Download App:
  • android
  • ios