Asianet Suvarna News Asianet Suvarna News

ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮತ್ತೆ ಪರೀಕ್ಷೆ ಬರೆಯಲು ಅವಕಾಶ, ಇಂದಿನಿಂದ 1 ವಾರ ಟೈಂ

2023-24ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮರು ಮೌಲ್ಯಮಾಪನ ಅಥವಾ ಮರು ಪರೀಕ್ಷೆ ಬರೆಯಲು ಇಂದಿನಿಂದ 1 ವಾರಗಳ ಕಾಲಾವಕಾಶ ನೀಡಲಾಗಿದೆ.

karnataka 2nd puc result 2024 re exam and revaluation for failed students gow
Author
First Published Apr 10, 2024, 12:04 PM IST

ಬೆಂಗಳೂರು (ಏ.10): ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಮಾರ್ಚ್ ನಲ್ಲಿ ನಡೆಸಿದ್ದ 2023-24ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷಾ ಫಲಿತಾಂಶ ಶುಕ್ರವಾರ  ಪ್ರಕಟಗೊಂಡಿದೆ.  ಈ ಬಾರಿ ದ್ವಿತೀಯ ಪಿಯುಸಿ  81.15% ಫಲಿತಾಂಶ ಬಂದಿದೆ. ಅಂದರೆ ಈ ಬಾರಿ 18.85% ವಿದ್ಯಾರ್ಥಿಗಳು ಫೇಲ್‌ ಆಗಿದ್ದಾರೆ. ಪರೀಕ್ಷೆಗೆ ಹಾಜರಾದ  6,98,378 ವಿದ್ಯಾರ್ಥಿಗಳಲ್ಲಿ 5,52690 ವಿದ್ಯಾರ್ಥಿಗಳು ಪಾಸ್‌ ಆಗಿದ್ದು, 1,45,688 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ.

ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ಪರೀಕ್ಷೆ ಬರೆಯಲು  ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ  ಅವಕಾಶ ನೀಡುತ್ತಿದೆ. ಅದಕ್ಕಾಗಿ 1 ವಾರಗಳ ಕಾಲಾವಕಾಶ  ನೀಡಿದೆ.  ಮರು ಪರೀಕ್ಷೆಗೆ ಹೆಸರು ನೋಂದಾವಣೆ ಮಾಡಲು ಇಂದಿನಿಂದಲೇ ಕಾಲಾವಕಾಶ ನೀಡಲಾಗಿದೆ.

Breaking: ದ್ವಿತೀಯ ಪಿಯುಸಿ 81.15% ಫಲಿತಾಂಶ ಪ್ರಕಟ, ಈ ಬಾರಿ ಕೂಡ ದಕ್ಷಿಣ ಕನ್ನಡ ನಂ.1, ಉಡುಪಿ ಸೆಕೆಂಡ್

ಏಪ್ರಿಲ್‌ 10 ರಿಂದ ಎಪ್ರಿಲ್‌ 16ರವೆಗೆ 1 ವಾರಗಳ ಕಾಲ ಹೆಸರು ನೋಂದಣಿಗೆ ಅವಕಾಶ ನೀಡಿದ್ದು, ಅನುತ್ತೀರ್ಣರಾದ ವಿದ್ಯಾರ್ಥಿಗಳು ಮರು ಪರೀಕ್ಷೆ ಬರೆಯಲು ಇಚ್ಚಿಸಿದಲ್ಲಿ  ಕಾಲೇಜು ಅಥವಾ  ಪರೀಕ್ಷಾ ಮಂಡಳಿಯ ಅಧಿಕೃತ ಪೋರ್ಟಲ್‌ https://karresults.nic.in/ ನಲ್ಲಿ   ಹೆಸರು ನೋಂದಾವಣೆ ಮಾಡಬಹುದು.

ಪೂರಕ ಪರೀಕ್ಷೆ 1 ವಿಷಯಕ್ಕೆ 140 ರೂ. ಎರಡು ವಿಷಯಗಳಿಗೆ 270  ರೂ ಮತ್ತು 3 ಮತ್ತು ಅದಕ್ಕಿಂತ ಹೆಚ್ಚಿನ ವಿಷಯಗಳಿಗೆ 400 ರೂ ಶುಲ್ಕ ಪಾವತಿಸಬೇಕು (ಪ.ಜಾತಿ ಮತ್ತು ಪ.ಪಂಗಡ ವಿದ್ಯಾರ್ಥಿಗಳನ್ನು ಹೊರತುಪಡಿಸಿ)

ಇನ್ನು ಇಂದಿನ ಫಲಿತಾಂಶದ ಬಗ್ಗೆ ರೀ ವಾಲ್ಯೂವೇಷನ್ (ಮರು ಮೌಲ್ಯಮಾಪನ)ಗೆ ಅರ್ಜಿ ಸಲ್ಲಿಸಲು ಇಚ್ಚಿಸುವವರು ಪ್ರತೀ ವಿಷಯಕ್ಕೆ  175 ರೂ ನಂತೆ ಶುಲ್ಕ ಪಾವತಿ ಮಾಡಬೇಕು ಎಂದು ಮಂಡಳಿ ತಿಳಿಸಿದೆ.

2023ರಲ್ಲಿ ಅಥವಾ ಅದಕ್ಕೂ ಮತ್ತು ಅನುತೀರ್ಣರಾದ ವಿದ್ಯಾರ್ಥಿಗಳಿದ್ದರೆ 2024ರಲ್ಲಿ ಮರು ಪರೀಕ್ಷೆ ಬರೆಯಲು ಇಚ್ಚಿಸಿದಲ್ಲಿ ಎಂಸಿಎ (marks card cum applications) ಆಧಾರದಲ್ಲಿ ಅಂದರೆ ಅಂಕಪಟ್ಟಿ ಸಹಿತ ಹೆಸರು ನೋಂದಾವಣೆ ಮಾಡಬೇಕು.

Follow Us:
Download App:
  • android
  • ios