Asianet Suvarna News Asianet Suvarna News

Breaking: ದ್ವಿತೀಯ ಪಿಯುಸಿ 81.15% ಫಲಿತಾಂಶ ಪ್ರಕಟ, ಈ ಬಾರಿ ಕೂಡ ದಕ್ಷಿಣ ಕನ್ನಡ ನಂ.1, ಉಡುಪಿ ಸೆಕೆಂಡ್

2023-24ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶ ಬುಧವಾರ ಬಿಡುಗಡೆಯಾಗಿದೆ.   ಈ ಬಾರಿ ದ್ವಿತೀಯ ಪಿಯುಸಿ  81.15% ಫಲಿತಾಂಶ ಬಂದಿದೆ. ಪ್ರತೀ ವರ್ಷದಂತೆ ಈ ಬಾರಿ ಕೂಡ  ಬಾಲಕಿಯರೇ (84.87%) ಮೇಲುಗೈ ಸಾಧಿಸಿದ್ದಾರೆ.

karnataka second puc examination result 2024 announced by  by KSEAB gow
Author
First Published Apr 10, 2024, 10:23 AM IST

ಬೆಂಗಳೂರು(ಏ.10): 2023-24ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶ ಬುಧವಾರ ಬಿಡುಗಡೆಯಾಗಿದೆ.  ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ (Karnataka School Examination and Assessment Board -KSEAB) ಪತ್ರಿಕಾಗೋಷ್ಠಿ ನಡೆಸಿ ಘೋಷಿಸಿದೆ. https://karresults.nic.in/ ವೆಬ್ ಸೈಟ್ ನಲ್ಲಿ 11 ಗಂಟೆ ನಂತರ ಫಲಿತಾಂಶ ವೀಕ್ಷಿಸಬಹುದು ಎಂದು ತಿಳಿಸಿದೆ. ಮಂಡಳಿಯ ಅಧ್ಯಕ್ಷೆ ಎನ್. ಮಂಜುಶ್ರೀ, ಪರೀಕ್ಷಾ ವಿಭಾಗದ ನಿರ್ದೇಶಕ ಗೋಪಾಲಕೃಷ್ಣ ಸೇರಿ ಹಿರಿಯ ಅಧಿಕಾರಿಗಳು ಫಲಿತಾಂಶವನ್ನು ಘೋಷಣೆ ಮಾಡಿದ್ದಾರೆ. ಕಳೆದ ವರ್ಷಕ್ಕಿಂತ  ಶೇಕಾಡ 6.48% ಹೆಚ್ಚಿನ‌ ಫಲಿತಾಂಶ ಈ ಬಾರಿ ಬಂದಿದೆ.

ಈ ಬಾರಿ ದ್ವಿತೀಯ ಪಿಯುಸಿ 81.15% ಫಲಿತಾಂಶ ಬಂದಿದೆ. ಪ್ರತೀ ವರ್ಷದಂತೆ ಈ ಬಾರಿ ಕೂಡ  ಬಾಲಕಿಯರೇ (84.87%) ಮೇಲುಗೈ ಸಾಧಿಸಿದ್ದಾರೆ. ಬಾಲಕರು 76.98% ಮಂದಿ ಉತ್ತೀರ್ಣರಾಗಿದ್ದಾರೆ. ವಿಜ್ಞಾನ ವಿಭಾಗ 89.96% , ವಾಣಿಜ್ಯ ವಿಭಾಗ 80.94%, ಕಲಾ ವಿಭಾಗದಲ್ಲಿ 68.36 % ಫಲಿತಾಂಶ ಬಂದಿದೆ. ದುರಾದೃಷ್ಟವೆಂದರೆ 35 ಕಾಲೇಜುಗಳಿಗೆ ಈ ಬಾರಿ  ಶೂನ್ಯ ಫಲಿತಾಂಶ ಬಂದಿದೆ. ಒಟ್ಟು 463 ಕಾಲೇಜುಗಳಲ್ಲಿ ಶೇ. 100% ಫಲಿತಾಂಶ ಬಂದಿದ್ದು, ಅದರಲ್ಲಿ 91 ಸರ್ಕಾರಿ ಕಾಲೇಜುಗಳಲ್ಲಿ ಶೇ.100% ಫಲಿತಾಂಶ ಬಂದಿದೆ. ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಬಿಬಿಎಂಪಿ ಕಾಲೇಜುಗಳಲ್ಲಿ ಫಲಿತಾಂಶ ಕುಸಿತ ಕಂಡಿದೆ.

ಕಳೆದ ಬಾರಿಯಂತೆ ಈ ಬಾರಿ ಕೂಡ  ದಕ್ಷಿಣ ಕನ್ನಡ (97.37%) ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದೆ. ಉಡುಪಿ (96.80%) ಎರಡನೇ ಸ್ಥಾನ ಪಡೆದಿದೆ. ವಿಜಯಪುರ (94.89%) ತೃತೀಯ ಸ್ಥಾನ ಪಡೆದಿದೆ.  ಗದಗ (72.86%) ಕೊನೆಯ ಸ್ಥಾನ ಪಡೆದಿದೆ.

ಜಿಲ್ಲೆಗಳ ಶೇಕಡಾವಾರು ಫಲಿತಾಂಶ: 
1. ದಕ್ಷಿಣ ಕನ್ನಡ        97.37%
2. ಉಡುಪಿ        96.80%
3. ವಿಜಯಪುರ        94.89%
4. ಉತ್ತರ ಕನ್ನಡ        92.51%
5. ಕೊಡಗು        92.13%
6. ಬೆಂಗಳೂರು ದಕ್ಷಿಣ    89.57%
7. ಬೆಂಗಳೂರು ಉತ್ತರ    88.67%
8. ಶಿವಮೊಗ್ಗ        88.58%
9. ಚಿಕ್ಕಮಗಳೂರು    88.20%
10. ಬೆಂಗಳೂರು ಗ್ರಾಮಾಂತರ    87.55%
11. ಬಾಗಲಕೋಟೆ        87.54%
12. ಕೋಲಾರ        86.12%
13. ಹಾಸನ        85.83%
14. ಚಾಮರಾಜನಗರ    84.99%
15. ಚಿಕ್ಕೋಡಿ        84.10%
16. ರಾಮನಗರ        83.58%
17. ಮೈಸೂರು        83.13%
18. ಚಿಕ್ಕಬಳ್ಳಾಪುರ     82.84%
19. ಬೀದರ್         81.69%
20. ತುಮಕೂರು         81.03%
21. ದಾವಣಗೆರೆ        80.96%
22. ಕೊಪ್ಪಳ     80.83%
23. ಧಾರವಾಡ    80.70%
24. ಮಂಡ್ಯ    80.56%
25. ಹಾವೇರಿ       78.36%

26.ಯಾದಗಿರಿ    77.29%
27. ಬೆಳಗಾವಿ    77.20%
28. ಕಲಬುರಗಿ    75.48%
29. ಬಳ್ಳಾರಿ    74.70%
30. ರಾಯಚೂರು    73.11%
31. ಚಿತ್ರದುರ್ಗ    72.92%
32. ಗದಗ    72.86%

ಕಲಾ ವಿಭಾಗದಲ್ಲಿ 596 ಅಂಕಗಳೊಂದಿಗೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದವರು
ಬೆಂಗಳೂರಿನ ಮೇಧಾ ಡಿ
ವಿಜಯಪುರದ ವೇದಾಂತ್
ಬಳ್ಳಾರಿಯ ಕವಿತಾ

ವಾಣಿಜ್ಯ ವಿಭಾಗದಲ್ಲಿ  ರಾಜ್ಯಕ್ಕೆ  ಟಾಪರ್‌
ಗಾನವಿ ಎಂ. ವಿದ್ಯಾನಿಧಿ ಪಿಯು ಕಾಲೇಜು ತುಮಕೂರು  (597) ಪ್ರಥಮ ಸ್ಥಾನ
ಪವನ್ ಎಂ.ಎಸ್ ಕುಮಧ್ವತಿ ಪಿಯು ಕಾಲೇಜು ಶಿವಮೊಗ್ಗ 596 ದ್ವಿತೀಯ ಸ್ಥಾನ
ಹರ್ಷಿತಾ ಪೂರ್ಣ ಪ್ರಜ್ಞಾ ಪಿಯು ಕಾಲೇಜ್ ಉಡುಪಿ 596 ದ್ವಿತೀಯ ಸ್ಥಾನ
ತುಳಸಿ ಪೈ ಕೆನರಾ ಕಾಲೇಜು ಮಂಗಳೂರು 596 ದ್ವಿತೀಯ ಸ್ಥಾನ
ತೇಜಸ್ವಿನಿ ಕೆ. ಕಾಲೆ , MES ಮಲ್ಲೇಶ್ವರ 596  ದ್ವಿತೀಯ ಸ್ಥಾನ

ವಿಜ್ಞಾನ ವಿಭಾಗ ರಾಜ್ಯಕ್ಕೆ  ಟಾಪರ್‌
ವಿದ್ಯಾಲಕ್ಷ್ಮಿ - ವಿದ್ಯಾನಿಕೇತನ ಎಸ್.ಸಿ ಪಿಯು ಕಾಲೇಜು -598 (ಪ್ರಥಮ ಸ್ಥಾನ)
ಉರ್ವಿಷ್​​​ ಪ್ರಶಾಂತ್ -‌ಆದಿಚುಂಚನಗಿರಿ ಪಿಯು ಕಾಲೇಜು ತುಮಕೂರು-597 (ದ್ವಿತೀಯ ಸ್ಥಾನ)
ವೈಭವಿ ಆಚಾರ್ಯ - ವಿದ್ಯೋಧಯ ಪಿಯು ಕಾಲೇಜು, ಉಡುಪಿ -597 (ದ್ವಿತೀಯ ಸ್ಥಾನ)
ಜಾಹ್ನವಿ - ಆರ್.ವಿ.ಪಿಬಿ ಪಿಯು ಕಾಲೇಜು ಮೈಸೂರು -597 (ದ್ವಿತೀಯ ಸ್ಥಾನ)
ಗುಣಸಾಗರ್ - ಎಕ್ಸಲೆಂಟ್ ಪಿಯು ಕಾಲೇಜು ಮೂಡುಬಿದಿರೆ - 597 (ದ್ವಿತೀಯ ಸ್ಥಾನ)

35 ಕಾಲೇಜುಗಳು ಶೂನ್ಯ ಫಲಿತಾಂಶ ಬಂದಿದೆ. ಶೂನ್ಯ ಫಲಿತಾಂಶ ಪಡೆದ ಕಾಲೇಜುಗಳ ವಿವರ ಇಂತಿದೆ. 
ಸರ್ಕಾರಿ ಕಾಲೇಜು- 02
ಅನುದಾನಿತ ಕಾಲೇಜು - 06
ಅನುದಾನ‌‌‌ ರಹಿತ ಕಾಲೇಜು - 26
ವಿಭಜಿತ ಪದವಿ ಪೂರ್ವ ಕಾಲೇಜು - 01

ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿ ಗಳು - 6,98,378
ತೇರ್ಗಡೆಯಾದ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ 5,52690
ಶೇ.85% ಹಾಗೂ ಅದಕ್ಕಿಂತ ಹೆಚ್ಚಿನ ಅಂಕ - 1,53,370
ಶೇ.60% - 2,89733
ದ್ವಿತೀಯ ದರ್ಜೆ- 72,098 
ತೃತೀಯ ದರ್ಜೆಯಲ್ಲಿ ಉತ್ತೀರ್ಣರಾದವರು - 37,489

Follow Us:
Download App:
  • android
  • ios