ಬೀದರ್: ಶಿಕ್ಷಕರಿಲ್ಲದೆ 10 ವರ್ಷದಿಂದ ಕನ್ನಡ ಶಾಲೆ ಬಂದ್‌!

ಕನ್ನಡ ಭಾಷೆ ಅಭಿವೃದ್ಧಿಗಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡಪರ ಸಂಘಟನೆಗಳ ಸತತ ಹೋರಾಟದ ಫಲವಾಗಿ 2011-12ನೇ ಸಾಲಿಗೆ ಭಾಲ್ಕಿ ತಾಲೂಕಿನ ಅಳವಾಯಿಯಲ್ಲಿ ‘ಗಡಿನಾಡು ಕನ್ನಡ ಕಿರಿಯ ಪ್ರಾಥಮಿಕ ಶಾಲೆ’ ಆರಂಭಿಸಲಾಗಿತ್ತಾದರೂ ಶಿಕ್ಷಕರಿಲ್ಲದೆ ಬೀಗ ಬಿದ್ದಿದೆ.

Kannada school closed from 10 years without teachers in alavayi at bidar rav

ಬೀದರ್‌ (ಜು.11) :

ಕನ್ನಡ ಭಾಷೆ ಅಭಿವೃದ್ಧಿಗಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡಪರ ಸಂಘಟನೆಗಳ ಸತತ ಹೋರಾಟದ ಫಲವಾಗಿ 2011-12ನೇ ಸಾಲಿಗೆ ಭಾಲ್ಕಿ ತಾಲೂಕಿನ ಅಳವಾಯಿಯಲ್ಲಿ ‘ಗಡಿನಾಡು ಕನ್ನಡ ಕಿರಿಯ ಪ್ರಾಥಮಿಕ ಶಾಲೆ’ ಆರಂಭಿಸಲಾಗಿತ್ತಾದರೂ ಶಿಕ್ಷಕರಿಲ್ಲದೆ ಬೀಗ ಬಿದ್ದಿದೆ.

ಸುಮಾರು 26 ವಿದ್ಯಾರ್ಥಿಗಳು ದಾಖಲಾತಿ ಪಡೆದಿದ್ದರಾದರೂ ಶಾಲೆ ಆರಂಭವಾದ ಕೆಲವೇ ತಿಂಗಳಿನಲ್ಲಿ ನೇಮಕಗೊಂಡ ಒಬ್ಬರೇ ಶಿಕ್ಷಕ ಬೇರೆÜಡೆ ವರ್ಗಾವಣೆಯಾಗಿದ್ದಾರೆ. ಬಳಿಕ ಶಿಕ್ಷಕರಿಲ್ಲದೆ ಮಕ್ಕಳು ಅನಿವಾರ್ಯವಾಗಿ ಬೇರೆಡೆ ಸ್ಥಳಾಂತರಗೊಂಡಿದ್ದಾರೆ. ಹೀಗಾಗಿ ಅನಿವಾರ್ಯವಾಗಿ ಅಂದಿನಿಂದ ಶಾಲೆಗೆ ಬೀಗ ಹಾಕಲಾಗಿದೆ. ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಗ್ರಾಮದ ಮಾಜಿ ಗ್ರಾಪಂ ಸದಸ್ಯ ಗುಂಡಪ್ಪ ಗಂದಗೆ ಅವರು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಿಗೆ ಪತ್ರ ಬರೆದಿದ್ದರು.

 

ಗಡಿನಾಡು ಸರ್ಕಾರಿ ಶಾಲೆಗೆ ಮತ್ತೆ ಆಪತ್ತು; ಕನ್ನಡದ ಗಂಧಗಾಳಿ ಗೊತ್ತಿಲ್ಲದ ಮಲಯಾಳಂ ಶಿಕ್ಷಕಿ ನೇಮಿಸಿದ ಕೇರಳ!

ಪತ್ರದ ಬಗ್ಗೆ ಪ್ರಾಧಿಕಾರ ಸರ್ಕಾರದ ಗಮನಕ್ಕೆ ತಂದಾಗ ಅಂದಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಸುನಿಲ್‌ ಕುಮಾರ್‌ 2023ರ ಫೆ.20ರಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಿಗೆ ಪತ್ರ ರವಾನಿಸಿದ್ದರು. ಆದರೆ ಇಲಾಖೆಯಾಗಲಿ ಅಥವಾ ಕನ್ನಡ ಅಭಿವೃದ್ಧಿ ಪ್ರಾಧಿಕಾರವಾಗಲಿ ಗ್ರಾಮದ ಕನ್ನಡ ಶಾಲೆ ಸಮಸ್ಯೆ ಬಗೆಹರಿಸಲು ಯಾವುದೇ ಕ್ರಮ ಕೈಗೊಂಡಿಲ್ಲ. ಅಧಿಕಾರಿಗಳು ಹೀಗೆ ಮಾಡಿದರೆ ಗಡಿ ಭಾಗದ ಜನ ಕನ್ನಡ ಕಲಿಯುವುದು ಹೇಗೆಂಬುದು ಗಡಿ ಗ್ರಾಮಸ್ಥರ ಅಸಮಾಧಾನ.

ಗಮನ ಹರಿಸುತ್ತೇವೆ: ಇದೇ ತಿಂಗಳ 11ರಿಂದ ಶಿಕ್ಷಕರ ವರ್ಗಾವಣೆ ನಡೆಯಲಿದ್ದು, ಆ ಸಮಯದಲ್ಲಿ ಗಡಿ ಭಾಗದ ಗ್ರಾಮಗಳತ್ತ ಗಮನ ಹರಿಸುತ್ತೇನೆ. ನಾನು ಬಂದು ಕೇವಲ 5 ತಿಂಗಳಾಯಿತು. ಹೀಗಾಗಿ ಬಹುತೇಕ ಗ್ರಾಮಗಳ ಸಂಪೂರ್ಣ ಮಾಹಿತಿ ಇನ್ನೂ ಪಡೆಯುತ್ತಿದ್ದೇನೆ. ವಿಶೇಷವಾಗಿ ಅಳವಾಯಿ ಗ್ರಾಮದ ಮಕ್ಕಳಿಗೆ ಕನ್ನಡ ಭಾಷೆ ಕಲಿಸಲು ಎಲ್ಲ ರೀತಿಯಿಂದ ಪ್ರಯತ್ನಿಸಲಾಗುವುದು ಎಂದು ಭಾಲ್ಕಿಯ ಕ್ಷೇತ್ರ ಶಿಕ್ಷಣಾಧಿಕಾರಿ ಮಜರ್‌ ಹುಸೇನ್‌ ಆಗ್ರಹಿಸಿದ್ದಾರೆ.

ಧಾರವಾಡ: ಶಾಲೆ ಆರಂಭಕ್ಕೂ ಮುನ್ನವೇ ಪಠ್ಯಪುಸ್ತಕ ಪೂರೈಕೆ, ಸರ್ಕಾರಿ ಶಾಲೆಗೆ ತಲುಪಿದ ಶೇ.98ರಷ್ಟುಪುಸ್ತಕ!

Latest Videos
Follow Us:
Download App:
  • android
  • ios