NTA JEE ಮೇನ್ಸ್ 2022 ಸೆಷನ್ 2 ಫಲಿತಾಂಶ ಪ್ರಕಟ: ನಿಮ್ಮ ರಿಸಲ್ಟ್‌ ನೋಡಲು ಇಲ್ಲಿ ಕ್ಲಿಕ್‌ ಮಾಡಿ..

ದೇಶದ ಐಐಟಿಯಂತಹ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಎಂಜಿನಿಯರಿಂಗ್ ಪ್ರವೇಶಕ್ಕೆ ನಡೆಯುವ ಜೆಇಇ ಮೇನ್ಸ್‌ ಸೆಷನ್‌ 2 ಫಲಿತಾಂಶ ಪ್ರಕಟವಾಗಿದೆ. ನಿಮ್ಮ ಫಲಿತಾಂಶಗಳನ್ನು ಪರಿಶೀಲಿಸಲು ಹಾಗೂ ಸ್ಕೋರ್‌ ಕಾರ್ಡ್‌ ಡೌನ್ಲೋಡ್‌ ಮಾಡಲು ಹೀಗೆ ಮಾಡಿ..

jee mains session 2 results declared check your result scorecard here ash

ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (National Testing Agency) (ಎನ್‌ಟಿಎ) ಜುಲೈ ಸೆಷನ್ಸ್ ಜಂಟಿ ಪ್ರವೇಶ ಪರೀಕ್ಷೆಯ ಮೇನ್ಸ್‌ 2022 ಫಲಿತಾಂಶವನ್ನು ಇಂದು ಘೋಷಿಸಿದೆ. ಜುಲೈ 25 ಮತ್ತು ಜುಲೈ 30 ರ ನಡುವೆ ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ಈಗ ನಿಮ್ಮ ಫಲಿತಾಂಶವನ್ನು ಪರಿಶೀಲಿಸಬಹುದು. ಹಾಗೆ, ನಿಮ್ಮ ಸ್ಕೋರ್‌ಕಾರ್ಡ್‌ ಅನ್ನು ಸಹ ಡೌನ್ಲೋಡ್‌ ಮಾಡಬಹುದು. ಜುಲೈ ನಡೆದ ಪರೀಕ್ಷೆಯಲ್ಲಿ ಸುಮಾರು 6.29 ಲಕ್ಷ ಅಭ್ಯರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು.

ಜುಲೈ 25 ಮತ್ತು ಜುಲೈ 30 ರ ನಡುವೆ ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ನಿಮ್ಮ ಫಲಿತಾಂಶವನ್ನು JEE ಮೇನ್ಸ್‌ ಅಧಿಕೃತ ವೆಬ್‌ಸೈಟ್ jeemain.nta.nic.in ಹಾಗೂ ntaresults.nic.in ನಲ್ಲಿ ನಿಮ್ಮ ಫಲಿತಾಂಶವನ್ನು ಪರಿಶೀಲಿಸಬಹುದು ಹಾಗೂ ಅರ್ಜಿ ಸಂಖ್ಯೆ, (Application Number), ಹುಟ್ಟಿದ ದಿನಾಂಕದ (Date of birth) ಮೂಲಕ ನಿಮ್ಮ ಸ್ಕೋರ್‌ಕಾರ್ಡ್ ಅನ್ನು ಡೌನ್‌ಲೋಡ್ ಮಾಡಬಹುದಾಗಿದೆ. ಈ ಹಿಂದೆ ಆಗಸ್ಟ್ 7 ರಂದು, ಪೇಪರ್ 1, ಅಥವಾ ಬಿಇ, ಬಿ.ಟೆಕ್ ಪೇಪರ್, ಹಾಗೂ ಪೇಪರ್ 2, ಅಥವಾ ಬಿ.ಪ್ಲಾನಿಂಗ್ ಮತ್ತು ಬಿ.ಆರ್ಚ್ ಪೇಪರ್‌ಗಳಿಗೆ ಜೆಇಇ ಮೇನ್ಸ್ 2022 ಉತ್ತರ ಕೀಯನ್ನು ಪ್ರಕಟಿಸಲಾಗಿತ್ತು.

ಜೆಇಇ ಪರೀಕ್ಷೆಯಲ್ಲಿ 300/300 ಅಂಕ ಪಡೆದರೂ ಮತ್ತೆ ಪರೀಕ್ಷೆ ಬರೆಯುತ್ತೇನೆಂದ ಟಾಪರ್ ನವ್ಯಾ!

NTA JEE ಮುಖ್ಯ ಫಲಿತಾಂಶ 2022 ಪ್ರಕಟ: ಚೆಕ್‌ ಮಾಡುವುದು ಹೀಗೆ..
- ಫಲಿತಾಂಶ ಚೆಕ್‌ ಮಾಡಲು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ - jeemain.nta.nic.in
- ಮುಖಪುಟದಲ್ಲಿ, 'JEE ಮೇನ್‌ 2022 ಸೆಷನ್ 2 ಪೇಪರ್ 1 ಗಾಗಿ ಸ್ಕೋರ್ ಕಾರ್ಡ್ ಅನ್ನು ಡೌನ್‌ಲೋಡ್ ಮಾಡಿ' ಎಂದು ಹೇಳುವ ಲಿಂಕ್ ಅನ್ನು ಕ್ಲಿಕ್ ಮಾಡಿ.
- ನೋಂದಣಿ ID, ಹುಟ್ಟಿದ ದಿನಾಂಕ ಮತ್ತು ಲಾಗ್ ಇನ್‌ನಂತಹ ನಿಮ್ಮ ರುಜುವಾತುಗಳನ್ನು ನಮೂದಿಸಿ
- ನಿಮ್ಮ JEE ಮೇನ್‌ ಫಲಿತಾಂಶ 2022 ಅನ್ನು ಪರದೆಯ ಮೇಲೆ ಪ್ರದರ್ಶಿಸಲಾಗುತ್ತದೆ
- ಭವಿಷ್ಯದ ಉಲ್ಲೇಖಗಳಿಗಾಗಿ JEE ಸ್ಕೋರ್ ಕಾರ್ಡ್‌ನ ಪ್ರಿಂಟ್‌ಔಟ್ ಅನ್ನು ಡೌನ್‌ಲೋಡ್ ಮಾಡಿ ಮತ್ತು ತೆಗೆದುಕೊಳ್ಳಿ.

NTA JEE ಮೇನ್ಸ್‌ 2022 ಪರೀಕ್ಷೆಗಳನ್ನು ಈ ವರ್ಷ ಜೂನ್ ಮತ್ತು ಜುಲೈನಲ್ಲಿ ಎರಡು ಅವಧಿಗಳಲ್ಲಿ ನಡೆಸಿತು. ವಿದ್ಯಾರ್ಥಿಗಳು ಎರಡೂ ಅವಧಿಗಳಲ್ಲಿ ಪರೀಕ್ಷೆ ಬರೆಯಲು ಅವಕಾಶವಿತ್ತು. ಅಂತಿಮ ಮೆರಿಟ್ ಪಟ್ಟಿಯನ್ನು ಸಿದ್ಧಪಡಿಸುವಾಗ ಜೆಇಇ ಮೇನ್‌ನಲ್ಲಿ ಅಭ್ಯರ್ಥಿಯ ಅತ್ಯುತ್ತಮ ಅಂಕಗಳನ್ನು ಪರಿಗಣಿಸಲಾಗಿದೆ. ಟಾಪ್‌ 2.5 ಲಕ್ಷ ಅಭ್ಯರ್ಥಿಗಳು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (Indian Institute of Technology) (ಐಐಟಿ) ಪ್ರವೇಶಕ್ಕಾಗಿ ಜಂಟಿ ಪ್ರವೇಶ ಪರೀಕ್ಷೆ ಅಡ್ವಾನ್ಸ್ಡ್ (ಜೆಇಇ ಅಡ್ವಾನ್ಸ್ಡ್) (JEE Advanced) ಗೆ ನೋಂದಾಯಿಸಲು ಅರ್ಹರಾಗುತ್ತಾರೆ. ಜೆಇಇ ಅಡ್ವಾನ್ಸ್ಡ್ ಪರೀಕ್ಷೆಯ ಅರ್ಜಿ ಸಲ್ಲಿಕೆ ಆಗಸ್ಟ್ 7 ರಂದು ಆರಂಭವಾಗಿದ್ದು, ಈ ಪರೀಕ್ಷೆ ಆಗಸ್ಟ್ 28 ರಂದು ನಡೆಸಲು ಪರೀಕ್ಷಾ ಮಂಡಳಿ ತೀರ್ಮಾನ ಮಾಡಿದೆ. 

ಜಮ್ಮು ಮತ್ತು ಕಾಶ್ಮೀರದ ಬುಡಕಟ್ಟು ವಿದ್ಯಾರ್ಥಿಗಳಿಗೆ ಉಚಿತ NEET, JEE ತರಬೇತಿ

ಪರೀಕ್ಷೆ ಬರೆದ 6 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಜೆಇಇ ಮೇನ್‌ ಫಲಿತಾಂಶ 2022 ಸೆಷನ್ 2 ಘೋಷಣೆಯಾಗಿದೆ. JEE ಮೇನ್‌ ಟಾಪರ್ಸ್ 2022 ಪಟ್ಟಿಯನ್ನು NTA ಇನ್ನೂ ಬಿಡುಗಡೆ ಮಾಡಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ. ಆದರೂ, ಕಟ್‌ ಆಫ್‌ಗಿಂತ ಹೆಚ್ಚು ಅಂಕ ಪಡೆದ ಎಲ್ಲರೂ ಈಗ JEE ಅಡ್ವಾನ್ಸ್ಡ್ 2022 ಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

Latest Videos
Follow Us:
Download App:
  • android
  • ios