Asianet Suvarna News Asianet Suvarna News

JEE Advanced Result 2022: ರಾಷ್ಟ್ರೋತ್ಥನ ಸಂಸ್ಥೆಯ 12 ವಿದ್ಯಾರ್ಥಿಗಳು Rank

ಭಾನುವಾರ ಪ್ರಕಟಗೊಂಡ ಜೆಇಇ ಅಡ್ವಾನ್ಸಡ್ -2022ರ ಪರೀಕ್ಷೆಯಲ್ಲಿ ಬೆಂಗಳೂರಿನ ರಾಷ್ಟೊ್ರೕತ್ಥಾನ ಸಂಸ್ಥೆಯ ‘ತಪಸ್‌’ ಯೋಜನೆಯಡಿ ತರಬೇತಿ ಪಡೆದಿದ್ದ 12 ವಿದ್ಯಾರ್ಥಿಗಳು ಉತ್ತಮ ಅಂಕಗಳೊಂದಿಗೆ ಐಐಟಿಗಳಲ್ಲಿ ಪ್ರವೇಶಕ್ಕೆ ಅರ್ಹತೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

JEE Advanced Result 2022 12 students rank rashtrothana bengaluru rav
Author
First Published Sep 12, 2022, 10:39 AM IST

ಬೆಂಗಳೂರು (ಸೆ.12):ಭಾನುವಾರ ಪ್ರಕಟಗೊಂಡ ಜೆಇಇ ಅಡ್ವಾನ್ಸಡ್ -2022ರ ಪರೀಕ್ಷೆಯಲ್ಲಿ ಬೆಂಗಳೂರಿನ ರಾಷ್ಟೊ್ರೕತ್ಥಾನ ಸಂಸ್ಥೆಯ ‘ತಪಸ್‌’ ಯೋಜನೆಯಡಿ ತರಬೇತಿ ಪಡೆದಿದ್ದ 12 ವಿದ್ಯಾರ್ಥಿಗಳು ಉತ್ತಮ ಅಂಕಗಳೊಂದಿಗೆ ಐಐಟಿಗಳಲ್ಲಿ ಪ್ರವೇಶಕ್ಕೆ ಅರ್ಹತೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

 

JEE Advanced 2022; ದೇಶದ ಎಲ್ಲಾ 23  ಐಐಟಿ ಗಳಲ್ಲಿ ಒಟ್ಟು 16,598 ಸೀಟು

ತಪಸ್‌ನ 39 ವಿದ್ಯಾರ್ಥಿಗಳು ಈ ಬಾರಿ ಜೆಇಇ ಅಡ್ವಾನ್ಸಡ್ ಪರೀಕ್ಷೆ(JEE Advanced exam) ಬರೆದಿದ್ದರು. ಅವರಲ್ಲಿ 12 ವಿದ್ಯಾರ್ಥಿಗಳು ದೇಶದ ಐಐಟಿ(IIT)ಗಳ ಪ್ರವೇಶಕ್ಕೆ ಅರ್ಹತೆ ಪಡೆದಿದ್ದು, ಉಳಿದ 27 ಮಂದಿ ಎನ್‌ಐಟಿ(NIT) ಸೇರಿದಂತೆ ಇತರೆ ಎಂಜಿನಿಯಿರಿಂಗ್‌ ಸಂಸ್ಥೆಗಳಲ್ಲಿ ಪ್ರವೇಶಕ್ಕೆ ಅರ್ಹತೆಯ ಅಂಕ ಗಳಿಸಿದ್ದಾರೆ. ಸ್ಕಂದ ಐತಾಳ್‌, ಕಾರ್ತಿಕ್‌ ಸತೀಶ್‌, ಲಿಕಿತ್‌ ಆರ, ಪ್ರಕಾಶ್‌ ಗೌಡ, ಚಂದ್ರು ಸಿ.ಪಿ., ಸಾಗರ ಶಿವಲಿಂಗಪ್ಪ ಅಥಣಿ, ಆವಿಷ್ಕಾರ ದವಳೆ, ಸುಮುಖ ಸುಬ್ರಹ್ಮಣ್ಯ ಶೆಟ್ಟಿ, ಸಾಯಿ ಚಿರಂತನ್‌, ಚನ್ನಪ್ಪ ಎನ್‌. ಕಲಹಲ್‌, ಗಿರೀಶ್‌ ಭಜಂತ್ರಿ, ರಘುನಾಯಕ್‌ ಉತ್ತಮ ರಾರ‍ಯಂಕ್‌ ಗಳಿಸಿದ್ದು ಬಹುತೇಕ ಮಂದಿ ಗ್ರಾಮೀಣ ಭಾಗದ ಆರ್ಥಿಕವಾಗಿ ದುರ್ಬಲ ಹಾಗೂ ಕನ್ನಡ ಮಾಧ್ಯಮ ಹಿನ್ನೆಲೆಯಿಂದ ಬಂದವರಾಗಿದ್ದಾರೆ ಎಂದು ರಾಷ್ಟೊ್ರೕತ್ಥಾನ ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.

ರಾಷ್ಟ್ರೋತ್ಥಾನ(Rashtrothan) ಸಂಸ್ಥೆಯು ರಾಜ್ಯದ ಗ್ರಾಮೀಣ, ಹಿಂದುಳಿದ ಪ್ರದೇಶಗಳ ಪ್ರತಿಭಾವಂತ ವಿದ್ಯಾರ್ಥಿಗಳು ಉತ್ತಮ ತರಬೇತಿಯೊಂದಿಗೆ ಜೆಇಇ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಸಮರ್ಥವಾಗಿ ಎದುರಿಸುವಂತಾಗಲೆಂದು ತಪಸ್‌ ಯೋಜನೆಯನ್ನು ರೂಪಿಸಿ ಉಚಿತ ಊಟ, ವಸತಿಯೊಂದಿಗೆ ತರಬೇತಿಯನ್ನೂ ನೀಡುತ್ತಿದೆ. ಇದುವರೆಗೆ 9 ಬ್ಯಾಚ್‌ನಲ್ಲಿ 392 ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದು 26 ಮಂದಿ ಐಐಟಿ ಪ್ರವೇಶ ಪಡೆದಿದ್ದರೆ, ಉಳಿದವರು ಎನ್‌ಐಟಿಗಳಲ್ಲಿ ಪ್ರವೇಶ ಪಡೆದಿದ್ದಾರೆ. 2022-24ನೇ ಸಾಲಿನ ತಪಸ್‌ ತರಬೇತಿಗೆ ಅರ್ಜಿ ಆಹ್ವಾನಿಸಿದ್ದು ಸೆ.15ರಿಂದ ಡಿ.10ರೊಳಗೆ ಅರ್ಹರು ಆನ್‌ಲೈನ್‌ (ಡಿಡಿಡಿ.ಠಿapassaadha್ಞa.ಟ್ಟಜ) ಮೂಲಕ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ಮೊ:9481201144 ಸಂಪರ್ಕಿಸಬಹುದು ಎಂದು ಸಂಸ್ಥೆಯು ತಿಳಿಸಿದೆ.

ಜೆಇಇ: ಕನ್ನಡಿಗ ದೇಶಕ್ಕೇ ಟಾಪರ್:

ದೇಶದ ಐಐಟಿಗಳ ಪ್ರವೇಶಕ್ಕೆ ನಡೆದಿದ್ದ ‘ಜೆಇಇ ಅಡ್ವಾನ್ಸ್‌$್ಡ-2022’ರ ಫಲಿತಾಂಶ ಭಾನುವಾರ ಪ್ರಕಟವಾಗಿದ್ದು, ಬೆಂಗಳೂರಿನ ಹುಡುಗ ಶಿಶಿರ್‌ ರಾಷ್ಟ್ರಕ್ಕೇ ಪ್ರಥಮ Rankj ಪಡೆದುಕೊಂಡಿದ್ದಾನೆ. ರಾಜ್ಯದ ವಿದ್ಯಾರ್ಥಿಯೊಬ್ಬ ಜೆಇಇ ಅಡ್ವಾನ್ಸ್‌$್ಡನಲ್ಲಿ ಟಾಪರ್‌ ಆಗಿ ಹೊರಹೊಮ್ಮಿರುವುದು ಇದೇ ಮೊದಲು ಎನ್ನಲಾಗಿದೆ. ಬೆಂಗಳೂರಿನ ಸಹಕಾರ ನಗರದ ನಾರಾಯಣ ಇ-ಟೆಕ್ನೋ ಶಾಲೆಯ ವಿದ್ಯಾರ್ಥಿಯಾದ ಶಿಶಿರ್‌ ಜಂಟಿ ಪ್ರವೇಶ ಪರೀಕ್ಷೆ (ಜೆಇಇ) ಅಡ್ವಾನ್ಸ್‌$್ಡನಲ್ಲಿ 360 ಅಂಕಗಳಿಗೆ 314 ಅಂಕ ಗಳಿಸಿ ಪ್ರಥಮ ರಾರ‍ಯಂಕ್‌ಗೆ ಭಾಜನರಾಗಿದ್ದಾರೆ. ಇವರು ಜೆಇಇ ಮೇನ್ಸ್‌ನಲ್ಲಿ ರಾಷ್ಟ್ರಮಟ್ಟದಲ್ಲಿ 56ನೇ Rank ಗಳಿಸಿದ್ದರು. ಅಲ್ಲದೆ, ಕರ್ನಾಟಕದ ಸಿಇಟಿ ಫಾರ್ಮಸಿ ವಿಭಾಗದಲ್ಲಿ ಪ್ರಥಮ ರಾರ‍ಯಂಕ್‌ ಮತ್ತು ಎಂಜಿನಿಯರಿಂಗ್‌ ವಿಭಾಗದಲ್ಲಿ 4ನೇ ಸ್ಥಾನ ಗಳಿಸಿದ್ದರು. ಇದೀಗ ಜೆಇಇ ಅಡ್ವಾನ್ಸ್‌$್ಡ ಪರೀಕ್ಷೆಯಲ್ಲಿ ಪ್ರಥಮ ರಾರ‍ಯಂಕ್‌ ಪಡೆದಿದ್ದು ಐಐಟಿ ಪ್ರವೇಶಕ್ಕೆ ಅರ್ಹತೆ ಪಡೆದಿದ್ದಾರೆ.

ರಾಜ್ಯದ ಹಲವು ವಿದ್ಯಾರ್ಥಿಗಳ ಸಾಧನೆ:

ರಾಜ್ಯದ ಇನ್ನೂ ಹಲವು ವಿದ್ಯಾರ್ಥಿಗಳು ಜೆಇಇ ಅಡ್ವಾನ್ಸ್‌$್ಡನಲ್ಲಿ ಉತ್ತಮ ಸಾಧನೆ ತೋರಿದ್ದಾರೆ. ಬೆಂಗಳೂರಿನ ಅಲೇನ್‌ ಕರೀಯರ್‌ ಇನ್‌ಸ್ಟಿಟ್ಯೂಟ್‌ನ ವಿಶಾಲ್‌ ಬೈಸಾನಿ ಅಖಿಲ ಭಾರತ ಮಟ್ಟದಲ್ಲಿ 13ನೇ ರಾರ‍ಯಂಕ್‌, ತೇಜಸ್‌ ಶರ್ಮಾ 27ನೇ ರಾರ‍ಯಂಕ್‌, ನಾರಾಯಣ ಇ-ಟೆಕ್ನೋದ ಹರೇನ್‌ ಸಾತ್ವಿಕ್‌ 40ನೇ ರಾರ‍ಯಂಕ್‌, ಮಹೇಶ್‌ಕುಮಾರ್‌ 79ನೇ ರಾರ‍ಯಂಕ್‌ ಪಡೆದಿದ್ದಾರೆ. ಜೆಇಇ ಮೇನ್ಸ್‌ನಲ್ಲಿ 31ನೇ ರಾರ‍ಯಂಕ್‌ ಪಡೆದಿದ್ದ ವಿಶಾಲ್‌ ಅವರು ಕಾಮೆಡ್‌-ಕೆ ಫಲಿತಾಂಶದಲ್ಲಿ ಟಾಪರ್‌, ಕರ್ನಾಟಕ ಸಿಇಟಿಯಲ್ಲಿ 5ನೇ ಟಾಪರ್‌ ಆಗಿದ್ದರು. ಅಲೇನ್‌ ಸಂಸ್ಥೆಯ ಮಾರ್ಗದರ್ಶಕರ ನೆರವಿನಿಂದ ಇಂದು ಜೆಇಇ ಅಡ್ವಾನ್ಸ್‌$್ಡನಲ್ಲಿ ಉತ್ತಮ ರಾರ‍ಯಂಕ್‌ ಪಡೆಯಲು ಸಾಧ್ಯವಾಯಿತು. ಪೋಷಕರು ಕೂಡ ಅಷ್ಟೆಉತ್ತಮ ಪ್ರೋತ್ಸಾಹ ನೀಡಿದರು ಎಂದು ಹೇಳಿದರು.

ಪೋಷಕರು, ಗುರುಗಳು ಕಾರಣ: ಪ್ರಥಮ Rank ಪಡೆದ ಶಿಶಿರ್‌ ತಂದೆ ಆರ್‌.ವಿ.ಕೃಷ್ಣ ಆಂಗ್ಲ ಪತ್ರಿಕೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದು, ತಾಯಿ ಕೃಪಾ ರಾಣಿ ಗೃಹಿಣಿ. ತನ್ನ ಇಂದಿನ ಸಾಧನೆಗೆ ಪೋಷಕರ ಸಹಕಾರ ಮತ್ತು ಗುರುಗಳಾದ ರಾಮು ಅವರನ್ನೂ ಒಳಗೊಂಡು ಹಲವು ಶಿಕ್ಷಕರ ಮಾರ್ಗದರ್ಶನ ಕಾರಣ ಎಂದು ಹೇಳಿದ್ದಾರೆ. ತಮ್ಮ ಸಾಧನೆ ಬಗ್ಗೆ ‘ಕನ್ನಡಪ್ರಭ’ದೊಂದಿಗೆ ಅನಿಸಿಕೆ ಹಂಚಿಕೊಂಡ ಶಿಶಿರ್‌, ಐಐಟಿ ಬಾಂಬೆಯಲ್ಲಿ ಕಂಪ್ಯೂಟರ್‌ ಸೈನ್ಸ್‌ ಎಂಜಿನಿಯರಿಂಗ್‌ ಕೋರ್ಸಿಗೆ ಪ್ರವೇಶ ಪಡೆಯುವುದಾಗಿ ಹೇಳಿದ್ದಾರೆ.

ಇಂತಹ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ರಾರ‍ಯಂಕ್‌ ಪಡೆಯಲು ಎಷ್ಟುಗಂಟೆ ಓದುತ್ತೇವೆ ಎನ್ನುವುದಕ್ಕಿಂತ ಗುಣಮಟ್ಟಮುಖ್ಯವಾಗುತ್ತದೆ. ಓದಿದ್ದನ್ನು ಎಷ್ಟರ ಮಟ್ಟಿಗೆ ನಮ್ಮ ನೆನಪಿನಲ್ಲಿ ಸದಾ ಉಳಿಸಿಕೊಳ್ಳುತ್ತೇವೆ ಎಂಬುದು ಮುಖ್ಯ. ನಾನೇನು ನಿತ್ಯ ಹತ್ತು ಹದಿನೈದು ಗಂಟೆ ಓದುತ್ತಿರಲಿಲ್ಲ. ಒಂದೆರಡು ಗಂಟೆ ಓದಿನ ಬಳಿಕ ಬಿಡುವು ಪಡೆಯುತ್ತಿದ್ದೆ. ಓದಿದ್ದನ್ನು ಮನನ ಮಾಡಿಕೊಂಡು ಮತ್ತೆ ಓದು ಶುರು ಮಾಡುತ್ತಿದ್ದೆ. ಇದು ನನ್ನ ಯಶಸ್ಸಿಗೆ ಕಾರಣವಾಯಿತು. ಓದು ಮುಗಿದ ಬಳಿಕ ಸ್ಟಾರ್ಚ್‌ಅಪ್‌ ಆರಂಭಿಸಿ ಸಮಾಜದ ಸಮಸ್ಯೆಗಳಿಗೆ ಪರಿಹಾರಗಳನ್ನು ಹುಡುಕುವುದು ನನ್ನ ಗುರಿಯಾಗಿದೆ ಎಂದು ಹೇಳಿದ್ದಾರೆ.

ಸ್ವದೇಶಿ ಎಲೆಕ್ಟ್ರಿಕ್ ಜೀಪ್ ನಿರ್ಮಿಸಿದ ಯುವಕ: ಸಂಪರ್ಕಿಸಲು ಆನಂದ್ ಮಹೀಂದ್ರಾ ಸೂಚನೆ

ಸಿಎಂ ಅಭಿನಂದನೆ: ಜೆಇಇ ಅಡ್ವಾನ್‌್ಡ ಪರೀಕ್ಷೆಯಲ್ಲಿ ದೇಶಕ್ಕೆ ಮೊದಲ ರಾರ‍ಯಂಕ್‌ ಪಡೆದ ಶಿಶಿರ್‌ ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಟ್ವೀಟ್‌ ಮೂಲಕ ಅಭಿನಂದನೆ ತಿಳಿಸಿ ಭವಿಷ್ಯದಲ್ಲಿ ಮತ್ತಷ್ಟುಯಶಸ್ಸು ನಿಮ್ಮದಾಗಲಿ ಎಂದು ಹಾರೈಸಿದ್ದಾರೆ.

Follow Us:
Download App:
  • android
  • ios