ಬಸವಣ್ಣ ಪಠ್ಯ ತಿದ್ದುಪಡಿ ನೋಡಿ ಎದೆಗೆ ಕಲ್ಲು ಹೊಡೆದಂತಾಗಿದೆ: ಕೂಡಲ ಶ್ರೀ
* ಬಸವಣ್ಣ ಪಠ್ಯ ತಿದ್ದುಪಡಿಗೆ ಸಾಣೆಹಳ್ಳಿ, ಕೂಡಲ ಶ್ರೀ ಕಿಡಿ
* ಬಸವಣ್ಣ, ಶರಣರ ಬಗ್ಗೆ ಪಠ್ಯದಲ್ಲಿ ದೋಷ
* ಸರ್ಕಾರ ಕ್ರಮ ಜರುಗಿಸದಿದ್ದರೆ ಹೋರಾಟ: ಸಿಎಂಗೆ ಶ್ರೀಗಳ ಪತ್ರ
ಚಿತ್ರದುರ್ಗ/ಹುಬ್ಬಳ್ಳಿ(ಜೂ.01): ಆದಿಚುಂಚನಗಿರಿ ಮಠದ ನಿರ್ಮಲಾನಂದ ಶ್ರೀಗಳ ಮತ್ತಿಬ್ಬರು ಮಠಾಧಿಪತಿಗಳು ಶಾಲಾ ಪಠ್ಯಪುಸ್ತಕಗಳ ಪರಿಷ್ಕರಣೆ ವಿರುದ್ಧ ಧ್ವನಿಯೆತ್ತಿದ್ದಾರೆ. ಬಸವಣ್ಣನವರ ಕುರಿತಾಗಿ ಪಠ್ಯದಲ್ಲಿ ಮಾಡಿರುವ ತಿದ್ದುಪಡಿಗಳು ಸಮಂಜಸವಾಗಿಲ್ಲ ಎಂದು ಸಾಣೆಹಳ್ಳಿ ಮಠದ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮತ್ತು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ವಿಚಾರವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಶಿಕ್ಷಣ ಸಚಿವ ನಾಗೇಶ್ ಅವರಿಗೆ ಪತ್ರ ಬರೆದಿರುವ ಸಾಣೆಹಳ್ಳಿ ಶ್ರೀಗಳು, 12ನೇ ಶತಮಾನದ ಬಸವಣ್ಣ ಮತ್ತು ಶರಣರ ವಿಚಾರವಾಗಿಯೂ ಪಠ್ಯದಲ್ಲಿ ಹಲವು ದೋಷಗಳಿದ್ದು ಇವುಗಳ ಪರಿಷ್ಕರಿಸಬೇಕು. ಇಲ್ಲವೇ ಕಳೆದ ವರ್ಷದ ಪಠ್ಯಪುಸ್ತಕವನ್ನೇ ಮುಂದುವರಿಸಬೇಕು. ಈ ಬಗ್ಗೆ ಕೂಡಲೇ ಸರ್ಕಾರ ಕ್ರಮ ಜರುಗಿಸದಿದ್ದರೆ ರಾಜ್ಯಾದ್ಯಂತ ಹೋರಾಟ ನಡೆಯುವುದು ಅನಿವಾರ್ಯ ಎಂದು ಶ್ರೀಗಳು ಎಚ್ಚರಿಸಿದ್ದಾರೆ.
Textbook Revision: ರಾಜಕೀಯಕ್ಕಾಗಿ ನನ್ನ ತೇಜೋವಧೆ: ರೋಹಿತ್ ಚಕ್ರತೀರ್ಥ
ಇನ್ನು ಈ ಕುರಿತು ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೂಡಲಸಂಗಮಶ್ರೀಗಳು, ನೂತನ ಪಠ್ಯ ಪುಸ್ತಕ ಪರಿಷ್ಕರಣೆ ವೇಳೆ ಬಸವಣ್ಣನವರ ಮೂಲ ಉದ್ದೇಶಕ್ಕೆ ದಾರಿ ತಪ್ಪಿಸುವ ಕೆಲಸ ಆಗಿದ್ದು, ಇದನ್ನು ನೋಡಿದ ಬಳಿಕ ಎದೆಗೆ ಕಲ್ಲು ಹೊಡೆದಂತಾಗಿದೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ. ಇಡೀ ಕರ್ನಾಟಕದ ಆತ್ಮವೇ ಬಸವಣ್ಣ, ಇಡೀ ಕರ್ನಾಟಕದ ಪ್ರಾಣ ಕುವೆಂಪು ಆಗಿದ್ದಾರೆ. ಕುವೆಂಪು ಮತ್ತು ಬಸವಣ್ಣನವರ ತತ್ವಕ್ಕೆ ಅಪಚಾರ ಆಗುವಂತಹ ಕೆಲಸ ಆಗಿದೆ. ಸೈದ್ಧಾಂತಿಕವಾಗಿ ವಿಚಾರಕ್ಕೆ ಕೈ ಹಾಕುವ ಮೊದಲು ಅವರ ಸತ್ಯ ಸಂದೇಶಗಳನ್ನು ಪ್ರಕಟಗೊಳಿಸುವ ಕೆಲಸ ಮಾಡಲಿ ಎಂದರು.