Asianet Suvarna News Asianet Suvarna News

Jaro Global Expansion : ಜಾರೋದಿಂದ ಜಾಗತಿಕ ವಿಸ್ತರಣೆ, 100 ಕೋಟಿ ರೂ. ಹೂಡಿಕೆಗೆ ಚಿಂತನೆ

*ಭಾರತದ ನೂರಕ್ಕೂ ಅಧಿಕ ಅನಾಥಾಶ್ರಮಗಳೊಂದಿಗೆ ಪಾಲುದಾರಿಕೆ
*ಸಾವಿರಕ್ಕೂ ಅಧಿಕ ಮಕ್ಕಳ ಶೈಕ್ಷಣಿಕ ಅಗತ್ಯಗಳ ಪೂರೈಸಲು ಕ್ರಮ
* ಶಿಕ್ಷಣ-ಸಂಬಂಧಿತ ವೆಚ್ಚಗಳನ್ನು ಭರಿಸುವ ಕಾಯಕ ಮಾಡುತ್ತಾ ಬರುತ್ತಿದೆ.

Jaro Education is planning to expand global and invest RS 100 Crore
Author
Bengaluru, First Published Feb 27, 2022, 6:15 PM IST | Last Updated Feb 27, 2022, 6:15 PM IST

ನವದೆಹಲಿ(ಫೆ.27): Ed-Tech ಕಂಪನಿಯಾಗಿರುವ ಜಾರೋ ಎಜುಕೇಷನ್ (Jaro Education) , ಜಾಗತಿಕವಾಗಿ ವಾರ್ಷಿಕ ಚಟುವಟಿಕೆಯನ್ನು ವಿಸ್ತರಿಸಿ ಕೊಳ್ಳಲು ಮುಂದಾಗಿದೆ. ಈ ಹಿಂದೆ ಜ್ಯಾರೋ ಸಿಎಸ್ಆರ್ (Jaro CSR) ಚಟುವಟಿಕೆಯ ಭಾಗವಾಗಿ 'ಐ ವಿಶ್ ಟು ಮೇಕ್ ಎ ಡಿಫರೆನ್ಸ್ (I wish to make A Difference)' ಎಂಬ ಶಿಕ್ಷಣ ಯೋಜನೆಯನ್ನು ಘೋಷಿಸಿತ್ತು. ಸಾವಿರಕ್ಕೂ ಹೆಚ್ಚು ಮಕ್ಕಳ ಶೈಕ್ಷಣಿಕ ಅಗತ್ಯಗಳನ್ನು ಬೆಂಬಲಿಸಲು ಕಂಪನಿಯು ಭಾರತದಾದ್ಯಂತ ನೂರಕ್ಕೂ ಹೆಚ್ಚು ಅನಾಥಾಶ್ರಮಗಳೊಂದಿಗೆ ಪಾಲುದಾರಿಕೆಯನ್ನು ಹೊಂದಿದೆ. ಕಂಪನಿಯು ಈ ಮಕ್ಕಳಿಗೆ ಬೋಧನಾ ಶುಲ್ಕ ಮತ್ತು ಇತರ ಶಿಕ್ಷಣ-ಸಂಬಂಧಿತ ವೆಚ್ಚಗಳನ್ನು ಭರಿಸುವ ಕಾಯಕ ಮಾಡುತ್ತಾ ಬರುತ್ತಿದೆ.  ಕಳೆದ ಕೆಲವು ವರ್ಷಗಳಲ್ಲಿ ಅನಾಥಾಶ್ರಮಗಳು ಮತ್ತು ವೃದ್ಧಾಶ್ರಮಗಳಿಗೆ ಹಣ ಸಹಾಯ ಹಾಗೂ ಪುಸ್ತಕ ದೇಣಿಗೆಯ ಮೂಲಕ ಸಾಮಾಜಿಕ ಚಟುವಟಿಕೆಗಳಿಗೆ ಸಕ್ರಿಯವಾಗಿ ಕೊಡುಗೆ ನೀಡಿದೆ.

 ಇತ್ತೀಚೆಗೆ, ಜಾರೋ ಕಂಪನಿಯು KPMG ಯೊಂದಿಗೆ ಜಾಗತಿಕ ಪಾಲುದಾರಿಕೆಯನ್ನು ಘೋಷಿಸಿದೆ. ಜಾರೋ ಎಜುಕೇಷನ್ ವೈವಿಧ್ಯಮಯ ಡೊಮೇನ್‌ಗಳಲ್ಲಿ 3 ಲಕ್ಷಕ್ಕೂ ಹೆಚ್ಚು ಕೆಲಸ ಮಾಡುವ ವೃತ್ತಿಪರರ ವೃತ್ತಿಜೀವನವನ್ನು ಪರಿವರ್ತಿಸಿದೆ. ಮುಂಬರುವ ಆರ್ಥಿಕ ವರ್ಷ 2023ರಲ್ಲಿ ಶಿಕ್ಷಣ (Education) ವಲಯದಲ್ಲಿ ಸುಮಾರು 100 ಕೋಟಿ ರೂ. ಹೂಡಿಕೆ ಮಾಡುವ ಯೋಜನೆ ಇಟ್ಟುಕೊಂಡಿದೆ. ಮುಂದಿನ ಒಂದು ತಿಂಗಳಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹೊರತರುವುದಾಗಿ ಜಾರೋ ಎಡ್-ಟೆಕ್ ಕಂಪನಿ ಹೇಳಿಕೊಂಡಿದೆ. 

 ಅನುದಾನಿತ ನೌಕರರ ಪ್ರತಿಭಟನೆ, ಮಾರ್ಚ್​ 4 ರಂದು ಶಾಲಾ-ಕಾಲೇಜು ಬಂದ್!

ನಾವು ಈ ಜಾಗತಿಕ ಮಾರುಕಟ್ಟೆಗಳನ್ನು ಪ್ರವೇಶಿಸಲು ದೊಡ್ಡ ತಂಡವನ್ನು ಕಟ್ಟಿಕೊಂಡಿದ್ದೇವೆ.  ವ್ಯವಹಾರ ವಿಶ್ಲೇಷಣೆ, ಕೃತಕ ಬುದ್ಧಿಮತ್ತೆ, ಯಂತ್ರ ಕಲಿಕೆ, ಸೈಬರ್ ಭದ್ರತೆ, ಕ್ಲೌಡ್ ಕಂಪ್ಯೂಟಿಂಗ್ ಮುಂತಾದ ನಿರ್ವಹಣೆ, ಕ್ರಿಯಾತ್ಮಕ ಮತ್ತು ತಾಂತ್ರಿಕ-ಕ್ರಿಯಾತ್ಮಕ ಕಾರ್ಯಕ್ರಮಗಳಿಗೆ ಸಂಬಂಧಿಸಿದ ಕೋರ್ಸ್ ಗಳನ್ನು ನೀಡುತ್ತಿದ್ದೇವೆ. ಈ ಕೋರ್ಸ್‌ಗಳು ಭಾರತೀಯ ಮಾರುಕಟ್ಟೆಯಲ್ಲಿ ಮತ್ತು ಜಗತ್ತಿನಾದ್ಯಂತ ನುರಿತ ವೃತ್ತಿಪರರ ಬೇಡಿಕೆಯನ್ನು ಪೂರೈಸುತ್ತವೆ ಎಂದು ಜಾರೋ ಎಜುಕೇಷನ್‌ ಸಿಇಒ ರಂಜಿತಾ ರಾಮನ್ (Ranjita Raman)  ತಿಳಿಸಿದ್ದಾರೆ.
 
ಪ್ರಸ್ತುತ ಈ ಎಡ್-ಟೆಕ್ ಪ್ಲಾಟ್‌ಫಾರ್ಮ್ 4  ಕೋಟಿ ರೂ. ಲಾಭವನ್ನು ಗಳಿಸಿದೆ. ಆದರೆ ನಿವ್ವಳ ಆದಾಯವು 2019 ರಲ್ಲಿ 49 ಕೋಟಿ ರೂ.ಗಳಷ್ಟಿತ್ತು ಎನ್ನಲಾಗಿದೆ.  ಕಂಪನಿಯು ದಾಖಲಾತಿ ಸೇವೆಗಳಿಂದ ರೂ 47.5 ಕೋಟಿ ಮತ್ತು ಪ್ರೋಗ್ರಾಂ ಮ್ಯಾನೇಜರ್ ಸೇವೆಗಳಿಂದ ರೂ 1.5 ಕೋಟಿ ಆದಾಯ ಗಳಿಸಿದೆ. ಜಾರೋ ಕಂಪನಿಯು 10-15% ಬಜೆಟ್ ವೆಚ್ಚವನ್ನು ಮಾನವ ಶಕ್ತಿಯನ್ನು ಹೆಚ್ಚಿಸಲು ಮತ್ತು ಸಂಭಾವನೆಗಾಗಿ ವಿನಿಯೋಗಿಸುವುದಾಗಿ ಹೇಳಿಕೊಂಡಿದೆ. ಹಾಗೇ ಮಾರ್ಕೆಟಿಂಗ್‌ನಲ್ಲಿ ಉದ್ಯಮದ ವಿಸ್ತರಣೆಗೂ ಒಂದಷ್ಟು ಖರ್ಚು ಮಾಡಲಾಗುವುದು ಎಂದು ರಾಮನ್ ಹೇಳಿದ್ದಾರೆ. ಯುಎಸ್ (USA), ಯುಕೆ (UK) ಮತ್ತು ಗಲ್ಫ್ (Gulf) ಪ್ರದೇಶದಂತಹ ಮಾರುಕಟ್ಟೆಗಳಲ್ಲಿ ಕಲಿಯುವವರನ್ನು ನೇಮಿಸಿಕೊಳ್ಳುವ ಪ್ರಯತ್ನದಲ್ಲಿದೆ. ಜೊತೆಗೆ ಸಿಬ್ಬಂದಿ ನೇಮಕ,ಅಗತ್ಯವಿರುವ ಪರಿಸರ ವ್ಯವಸ್ಥೆಯನ್ನು ರಚಿಸಲು ಹೂಡಿಕೆ ಮಾಡಲಾಗುವುದು ಇದಲ್ಲದೆ, ಈ ಎಡ್-ಟೆಕ್ ಸಂಸ್ಥೆಯು ಎರಡು ವಿಶ್ವವಿದ್ಯಾನಿಲಯ (Universty) ಗಳೊಂದಿಗೆ ಪಾಲುದಾರಿಕೆಯನ್ನು ಹೊಂದಲು ಚಿಂತನೆ ನಡೆಸಿದೆ. ಅದಾನಿ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ (Adani Institute of Management) ಹಾಗೂ ಐಐಎಂ ಅಹಮದಾಬಾದ್‌ (IIM-Ahmadabad) ನಂತಹ ಉನ್ನತ ಮಟ್ಟದ ಸಂಸ್ಥೆಗಳೊಂದಿಗೆ ಪಾಲುದಾರಿಕೆ ಮಾಡಿಕೊಳ್ಳಲು ಯೋಜಿಸಿದೆ.

 ಕರ್ನಾಟಕದಲ್ಲಿ 18 ಕಂಪನಿಗಳಿಂದ ಮಳಿಗೆ ಸ್ಥಾಪನೆ, 15 ಸಾವಿರ ಉದ್ಯೋಗ ಸೃಷ್ಠಿ

ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಲ್ಲಿ ವಿದ್ಯಾರ್ಥಿಗಳು ಮತ್ತು ವೃತ್ತಿಪರರು, ಕಲಿಯುವವರ ನೆಲೆಯಲ್ಲಿ 150% ಬೆಳವಣಿಗೆಯನ್ನು ಸಾಧಿಸಿದೆ ಎಂದು ಹೇಳಿಕೊಂಡಿದೆ. ಕಂಪನಿಯ ಪ್ರಕಾರ ಈ ಬೆಳವಣಿಗೆಯು ಮುಖ್ಯವಾಗಿ 3,00,000 ಮಂದಿ ವೃತ್ತಿಪರರಿಗೆ ಕಾರಣವಾಗಿದೆ. ಅವರು ಭಾರತದ ಉನ್ನತ ಪ್ರತಿಷ್ಠಿತ ಸಂಸ್ಥೆಯಿಂದ ತನ್ನ ಕಾರ್ಯನಿರ್ವಾಹಕ ಶಿಕ್ಷಣ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ.

Latest Videos
Follow Us:
Download App:
  • android
  • ios