ಶ್ರೀರಾಮ ಜಗತ್ತಿಗೆ ಆದರ್ಶ ಪುರುಷನಾಗಿದ್ದು, ವಿಶ್ವ ಶಾಂತಿಗಾಗಿ ರಾಮನ ಆದರ್ಶ ಪಾಲನೆ ಅತ್ಯಗತ್ಯವಾಗಿದೆ. ಅಂತಹ ಶ್ರೀರಾಮನ ಆದರ್ಶವನ್ನು ಶಿಕ್ಷಣ ಸಂಸ್ಥೆಗಳಲ್ಲಿ ನೀಡುವುದು ಕಾಲದ ಅನಿವಾರ್ಯತೆಯಾಗಿದೆ ಎಂದು  ಡಾ. ಕಲ್ಲಡ್ಕ ಪ್ರಭಾಕರ ಭಟ್‌ ಹೇಳಿದ್ದಾರೆ. 

 ಉಪ್ಪಿನಂಗಡಿ (ಡಿ.31): ಶ್ರೀರಾಮ ಜಗತ್ತಿಗೆ ಆದರ್ಶ ಪುರುಷನಾಗಿದ್ದು, ವಿಶ್ವ ಶಾಂತಿಗಾಗಿ ರಾಮನ ಆದರ್ಶ ಪಾಲನೆ ಅತ್ಯಗತ್ಯವಾಗಿದೆ. ಅಂತಹ ಶ್ರೀರಾಮನ ಆದರ್ಶವನ್ನು ಶಿಕ್ಷಣ ಸಂಸ್ಥೆಗಳಲ್ಲಿ ನೀಡುವುದು ಕಾಲದ ಅನಿವಾರ್ಯತೆಯಾಗಿದೆ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್‌ ತಿಳಿಸಿದರು. ಅವರು ಶುಕ್ರವಾರ ರಾತ್ರಿ ಉಪ್ಪಿನಂಗಡಿ ವೇದಶಂಕರ ನಗರದಲ್ಲಿನ ಶ್ರೀರಾಮ ಶಾಲೆಯ ವಾರ್ಷಿಕೋತ್ಸವದಲ್ಲಿ ಮಾತನಾಡುತ್ತಿದ್ದರು.

ಮುಖ್ಯ ಅತಿಥಿಯಾಗಿದ್ದ ತೂಗುಸೇತುವೆಗಳ ಸರದಾರ, ಪದ್ಮಶ್ರೀ ಪುರಸ್ಕೃತ ಗಿರೀಶ್‌ ಭಾರಧ್ವಜ್‌ ಮಾತನಾಡಿ, ವಿದ್ಯೆಯ ಜೊತೆಗೆ ವಿವೇಕವನ್ನು ಮೂಡಿಸಿದಾಗ ವಿನಯವು ಬರುವುದು . ಈ ಮೂರು ಅಂಶಗಳು ವ್ಯಕ್ತಿಗೆ ದೊರೆತರೆ ಯಶಸ್ಸು ತಾನೇ ತಾನಾಗಿ ಲಭಿಸುತ್ತದೆ. ಬದುಕನ್ನು ಪ್ರೀತಿಸೋಣ ಮತ್ತು ಪ್ರೀತಿಸುತ್ತಾ ಬದುಕೊಣ ಎಂಬ ತತ್ವ ನಮ್ಮೆಲ್ಲರಿಂದಲೂ ಪಾಲಿಸಲ್ಪಟ್ಟಾಗ ವಿಶ್ವ ಶಾಂತಿ ಕಾಣಬಹುದು ಎಂದರು.

ಮುಖ್ಯ ಅತಿಥಿಯಾಗಿ ನ್ಯಾಯವಾದಿ ರಾಜಶೇಖರ್‌ ಹೀಲ್ಯಾರ್‌ ಭಾಗವಹಿಸಿದ್ದರು. ಶ್ರೀರಾಮ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಸುನಿಲ್‌ ಅನಾವು, ನಿಕಟಪೂರ್ವಾಧ್ಯಕ್ಷ ಕರುಣಾಕರ ಸುವರ್ಣ, ಸಂಚಾಲಕ ಯು.ಜಿ. ರಾಧ, ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕ ರಘುರಾಮ ಭಟ್‌, ಪ್ರಾಥಮಿಕ ವಿಭಾಗದ ವಿಮಲಾ , ಪೋಷಕ ಸಂಘದ ಅಧ್ಯಕ್ಷ ಮೋಹನ್‌ ಭಟ್‌ , ವಿದ್ಯಾರ್ಥಿ ನಾಯಕ ಸುದೀಪ್‌ ಉಪಸ್ಥಿತರಿದ್ದರು.

ABVP STATE CONFERENCE: ಬೆಳಗಾವಿಯಲ್ಲಿ ಜ.6ರಿಂದ ಎಬಿವಿಪಿ ರಾಜ್ಯ ಸಮ್ಮೇಳನ

ಕಾರ್ಯಕ್ರಮದಲ್ಲಿ ಗುಣಕರ ಅಗ್ನಾಡಿ, ಚಂದಪ್ಪ ಮೂಲ್ಯ, ಜಯಂತ ಪೊರೋಳಿ, ಗೀತಾಲಕ್ಷ್ಮೇ ತಾಳ್ತಜೆ, ಗಣೇಶ್‌ ಕುಲಾಲ್‌, ಕಂಗ್ವೆ ವಿಶ್ಬಾನಾಥ ಶೆಟ್ಟಿ, ಯು. ರಾಜೇಶ್‌ ಪೈ, ಕೆ. ಜಗದೀಶ್‌ ಶೆಟ್ಟಿ, ಕರಾಯ ರಾಘವೇಂದ್ರ ನಾಯಕ್‌, ರವೀಂದ್ರ ಆಚಾರ್ಯ, ಆದೇಶ್‌ ಶೆಟ್ಟಿ, ರಾಘವೇಂದ್ರ ನಾಯಕ್‌ ನಟ್ಟಿಬೈಲು, ಅನುರಾಧ ಆರ್‌. ಶೆಟ್ಟಿ, ಸುಧಾಕರ್‌ ಶೆಟ್ಟಿಮತ್ತಿತರರು ಭಾಗವಹಿಸಿದ್ದರು. ಕಾರ್ಯಕ್ರಮದ ಅಂಗವಾಗಿ ಶಿಶು ಮಂದಿರದ ಪುಟಾಣಿ ಮಕ್ಕಳಿಂದ ಹಾಗೂ ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ರಾಜ್ಯದ 3800 ಸರ್ಕಾರಿ ಶಾಲೆಯಲ್ಲಿ 5ಕ್ಕಿಂತಲೂ ಕಡಿಮೆ ಮಕ್ಕಳಿಂದ ಓದು: ಸಚಿವ ಬಿಸಿ ನಾಗೇಶ್

ಖಗೋಳ ವಿಜ್ಞಾನ, ಬ್ರಹ್ಮಾಂಡ ವಿಷಯ ಕುರಿತು ಮಾಹಿತಿ ಕಾರ್ಯಾಗಾರ
ಮೂಡುಬಿದಿರೆ: ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್‌್ಸ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯ ವಿಜ್ಞಾನ ಮೇಳದಲ್ಲಿ ಖಗೋಳ ವಿಜ್ಞಾನ ಹಾಗೂ ಬ್ರಹ್ಮಾಂಡದ ವಿಷಯದ ಕುರಿತು ಮಾಹಿತಿ ಕಾರ್ಯಾಗಾರ ನಡೆಯಿತು. ಏಳು ದಿನಗಳ ಕಾಲ ನಡೆದ ಕಾರ್ಯಾಗಾರದಲ್ಲಿ ಸುಮಾರು 9500 ವಿದ್ಯಾರ್ಥಿಗಳು ಪ್ರಯೋಜನ ಪಡೆದುಕೊಂಡರು.

ನಕ್ಷತ್ರ ವೀಕ್ಷಣೆ, ರಾಶಿ ಮತ್ತು ಇತರ ಅಂತರಿಕ್ಷಕ್ಕೆ ಸಂಬಂಧಿಸಿದ ಮಾಹಿತಿ ತಿಳಿಸಲು ಬೆಂಗಳೂರಿನ ಆರ್ಯಭಟ ಸಂಸ್ಥೆಯು ನೈಟ್‌ ಶೇಡ್‌ ಅಪ್ಲೀಕೇಷನ್‌ ಮೂಲಕ ಗ್ರಹಗಳ ಸಂಪೂರ್ಣ ಮಾಹಿತಿ ನೀಡಿತು.

ಪೂರ್ಣ ಪ್ರಜ್ಞಾ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಹಾಗೂ ಖಗೋಳ ವಿಜ್ಞಾನಿ ಡಾ.ಎ.ಪಿ. ಭಟ್‌, ಮಹಾವೀರ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ. ರಮೇಶ್‌ ಭಟ್‌, ಪೂರ್ಣ ಪ್ರಜ್ಞಾ ಕಾಲೇಜಿನ ಅಮೆಚೂರ್‌ ಆಸ್ಟೊ್ರೕನೊಮ​ರ್‍ಸ್ ಕ್ಲಬ್‌ನ ಸಂಯೋಜಕ ಅತುಲ್‌ ಭಟ್‌, ಶಿರಸಿಯ ಶ್ರೀ ಶಾರದಾಂಭ ಪ್ರೌಢಶಾಲೆಯ ಮುಖ್ಯ ಶಿಕ್ಷಕ ವಸಂತ ಹೆಗ್ಡೆ, ಕೇರಳದ ಸೆಂಟ್ರಲ್‌ ವಿ.ವಿ.ಯ ವಿದ್ಯಾರ್ಥಿ ವಿಭವ್‌ ಮಂಗಳೂರು, ಆರ್ಯಭಟ ಸಂಸ್ಥೆಯ ಸಂಸ್ಥಾಪಕ ಸತೀಶ್‌ ಬಿ.ಎಸ್‌. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದರು.