World Literacy Day 2024: ಶಿಕ್ಷಣ ಕ್ಷೇತ್ರದಲ್ಲಿ ಆರ್ಟ್ ಆಫ್ ಲಿವಿಂಗ್ ಸಾಧನೆ ಕಿರುನೋಟ ಇಲ್ಲಿದೆ

ಐತಿಹಾಸಿಕ ಆರ್ಟ್ ಆಫ್ ಲಿವಿಂಗ್ ಅಂತಾರಾಷ್ಟ್ರೀಯ ಕೇಂದ್ರದ ನಿರ್ಮಾಣ ಕಾರ್ಯ ನಡೆಯುತ್ತಿದ್ದಾಗ, ಕಟ್ಟಡ ಕಾರ್ಮಿಕರ ಮಕ್ಕಳು ಮರಳು ಮತ್ತು ಕಲ್ಲುಗಳೊಡನೆ ಆಟವಾಡುತ್ತಿದ್ದರು. ಗುರುದೇವ್ ಶ್ರೀ ಶ್ರೀ ರವಿಶಂಕರರು ಕೆಲವು ಸ್ವಯಂಸೇವಕರನ್ನು ಕರೆದು, ಆ ಮಕ್ಕಳನ್ನು ಸೇರಿಸಿ, ಅವರಿಗೆ ಸ್ವಚ್ಛತೆಯ ಬಗ್ಗೆ ಹಾಗೂ ಓದಲು - ಬರೆಯಲು ಕಲಿಸಲು ಹೇಳಿದರು. ಇದು ಕ್ರಮೇಣವಾಗಿ ದೊಡ್ಡ ಶಾಲೆಯಾಗಿ ಬೆಳೆದು ನಿಂತಿದೆ.

International Literacy Day 2024 art of living achievementin education sector rav

International Literacy Day 2024: ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು ಉಚಿತವಾಗಿ ನಡೆಸುತ್ತಿರುವ ಗ್ರಾಮೀಣ  ಶಾಲೆಯು ಸಮಗ್ರ ಮತ್ತು ಮೌಲ್ಯಾಧಾರಿತವಾದ ಶಿಕ್ಷಣಕ್ಕೆ ಮಾದರಿಯಾಗಿದೆ. ಅಲ್ಲದೇ, ಇಲ್ಲಿ ಮಕ್ಕಳಲ್ಲಿ ಆತ್ಮವಿಶ್ವಾಸ, ಮನೋಸ್ಥೈರ್ಯವನ್ನು ಬೆಳೆಸುವಂತಹ ವಾತಾವರಣವಿದೆ. ಈ ಮಕ್ಕಳು ಪರೀಕ್ಷೆ, ಸ್ಪರ್ಧೆಯಂತಹ ಒತ್ತಡವನ್ನು,  ಚಿಂತೆಗಳನ್ನು, ಸಹಪಾಠಿಗಳ ಒತ್ತಡವನ್ನು ಎದುರಿಸಿದಾಗ, ತಮ್ಮ ಮನಸ್ಸು ಹಾಗೂ ದೇಹವನ್ನು ಕಾಪಾಡಿಕೊಳ್ಳುವ ವಿಧಾನಗಳನ್ನು ಕಲಿಯುತ್ತಿದ್ದಾರೆ. ಗ್ರಾಮೀಣ ಬೆಂಗಳೂರಿನ ವೇದ ವಿಜ್ಞಾನ ಮಹಾ ವಿದ್ಯಾಪೀಠದ, ಆರ್ಟ್ ಆಫ್ ಲಿವಿಂಗ್ ನ ಉಚಿತ ಶಾಲೆಯ ಬಗೆಗಿನ ಅನುಪಮವಾದ ಹತ್ತು ವಿಷಯಗಳು ಹೀಗಿವೆ:        

ಇದರ ಆರಂಭ: ಐತಿಹಾಸಿಕ ಆರ್ಟ್ ಆಫ್ ಲಿವಿಂಗ್ ಅಂತಾರಾಷ್ಟ್ರೀಯ ಕೇಂದ್ರದ ನಿರ್ಮಾಣ ಕಾರ್ಯ ನಡೆಯುತ್ತಿದ್ದಾಗ, ಕಟ್ಟಡ ಕಾರ್ಮಿಕರ ಮಕ್ಕಳು ಮರಳು ಮತ್ತು ಕಲ್ಲುಗಳೊಡನೆ ಆಟವಾಡುತ್ತಿದ್ದರು. ಗುರುದೇವ್ ಶ್ರೀ ಶ್ರೀ ರವಿಶಂಕರರು ಕೆಲವು ಸ್ವಯಂಸೇವಕರನ್ನು ಕರೆದು, ಆ ಮಕ್ಕಳನ್ನು ಸೇರಿಸಿ, ಅವರಿಗೆ ಸ್ವಚ್ಛತೆಯ ಬಗ್ಗೆ ಹಾಗೂ ಓದಲು - ಬರೆಯಲು ಕಲಿಸಲು ಹೇಳಿದರು. ಇದು ಕ್ರಮೇಣವಾಗಿ ದೊಡ್ಡ ಶಾಲೆಯಾಗಿ ಬೆಳೆದು, ಅಂದಿನಿಂದಲೂ ಸಮವಸ್ತ್ರ, ಪುಸ್ತಕಗಳು, ಮಧ್ಯಾಹ್ನದ ಬಿಸಿಯೂಟ ಮತ್ತು ಸಂಚಾರಕ್ಕೆ ಬಸ್ಸು ಮತ್ತು ಶಿಕ್ಷಣವೂ ಒಳಗೊಂಡಂತೆ ಎಲ್ಲವನ್ನೂ ಉಚಿತವಾಗಿ ನೀಡುತ್ತಿದೆ. ಈ ಶಾಲೆಯು 1981 ರಲ್ಲಿ ಕನಕಪುರ ರಸ್ತೆಯಲ್ಲಿ ಆರಂಭವಾಯಿತು. ಭಾರತದದಾದ್ಯಂತ ಆರ್ಟ್ ಆಫ್ ಲಿವಿಂಗ್ ನಡೆಸುತ್ತಿರುವ 1262  ಉಚಿತ ಶಾಲೆಗಳಲ್ಲಿ ಈ  ಶಾಲೆಯೇ ಪ್ರಪ್ರಥಮವಾಗಿ ಪ್ರಾರಂಭವಾಗಿದ್ದು. ಸಂಸ್ಥೆಯು ಈ ಶಾಲೆಗಳ ಮೂಲಕ ಭಾರತದ 22 ರಾಜ್ಯಗಳಲ್ಲಿ 1,00,000ಕ್ಕೂ ಹೆಚ್ಚಿನ ಮಕ್ಕಳಿಗೆ ಉಚಿತ ಶಿಕ್ಷಣವನ್ನು ನೀಡುತ್ತಿದೆ.

International Literacy Day 2024 art of living achievementin education sector rav

World Culture Film Festival 2024: ಸ್ಫೂರ್ತಿದಾಯಕವಾದ - ಜಾಗತಿಕ ಚಲನಚಿತ್ರೋತ್ಸವ    

ವಿದ್ಯಾರ್ಥಿಗಳ ಸಾಧನೆ: ಈ ಶಾಲೆಯಲ್ಲಿನ ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಅತ್ಯುನ್ನತವಾದ  ಸಾಧನೆಯನ್ನು ಮಾಡಿದ್ದಾರೆ. ಪ್ರತಿಷ್ಠಿತ ಫುಟ್ಬಾಲ್ ಯು-12, ಜೆನ್-ಎಕ್ಸ್ ಪಂದ್ಯಾವಳಿ, 2019 ರಲ್ಲಿ ಮಣಿಪುರದಲ್ಲಿ ಜಿಲ್ಲಾ ಮಟ್ಟ, ರಾಜ್ಯ ಮಟ್ಟ ಹಾಗೂ ರಾಷ್ಟ್ರ ಮಟ್ಟದಲ್ಲೂ ಫುಟ್ಬಾಲ್ ಪಂದ್ಯಾವಳಿಗಳಲ್ಲಿ ಜಯಭೇರಿ ಬಾರಿಸಿದ್ದಾರೆ. ರಿಲಯನ್ಸ್ ಫೌಂಡೇಶನ್ ಯುವ ಕ್ರೀಡಾ ಸ್ಪರ್ಧೆಗಳಲ್ಲಿ ಗೋಲ್ಡನ್ ಬೂಟ್, ಗೋಲ್ಡನ್ ಗ್ಲೋವ್ ಮತ್ತು ಗೋಲ್ಡನ್ ಬಾಲ್ ಅನ್ನು ಗೆದ್ದರು ಮತ್ತು ಆರ್ ಎ ವೈ ಎಫ್ ಎಸ್ ನ 2019-20 ಚಾಂಪಿಯನ್ ಟ್ರಾಫಿಯನ್ನೂ ಗೆದ್ದರು. ರಾಜ್ಯ ಮಟ್ಟದ ಫುಟ್ಬಾಲ್ ಪಂದ್ಯಾವಳಿಯನ್ನೂ ಗೆದ್ದರು.

ಹಳೆಯ ವಿದ್ಯಾರ್ಥಿ: ನಮ್ಮ ಹಳೆಯ ವಿದ್ಯಾರ್ಥಿಯಾದ   ಪ್ರಿಯಾಂಕಾ ಎನ್, ಬೆಂಗಳೂರಿನ ಪ್ರಥಮ ಮಹಿಳಾ ಮೆಟ್ರೋ ಚಾಲಕರಾಗಿದ್ದಾರೆ.    

International Literacy Day 2024 art of living achievementin education sector rav    

ತನ್ನ ಬಾಲ್ಯದಲ್ಲಿಯೇ ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡ ರಿಡಾಲಿನ್ ಆರ್ಟ್ ಆಫ್ ಲಿವಿಂಗ್ ನ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಮಮತೆ, ಪೋಷಣೆ, ಅಕ್ಕರೆಯನ್ನು ಪಡೆದು ಬೆಳೆದಳು. ಹಿಂದೆ ಮಾನವ ಕಳ್ಳ ಸಾಗಾಟಣೆ ಹಾಗೂ ವೇಶ್ಯಾವಾಟಿಕೆಯು ಸರ್ವೇಸಾಮಾನ್ಯವಾಗಿರುವಂತಹ ಪರಿಸರದಲ್ಲಿದ್ದಳು. ಈಗ ರಾಷ್ಟ್ರೀಯ ಟಾಯ್ಕೊಂಡು ಪಂದ್ಯಾವಳಿಯಲ್ಲಿ ಕರ್ನಾಟಕವನ್ನು  ಪ್ರತಿನಿಧಿಸಿದಳು. ಈಕೆ ಇಂದು ಯಶಸ್ವಿ ಆರ್ಕಿಟೆಕ್ಟ್ ಆಗಿದ್ದಾಳೆ.                               

 ಅಸ್ಸಾಂ, ಮೇಘಾಲಯ ಮತ್ತು ನಾಗಾಲ್ಯಾಂಡ್ ನ 200 ಹಿಂದುಳಿದ ಮಕ್ಕಳು ಆರ್ಟ್ ಆಫ್ ಲಿವಿಂಗ್ ನ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ವಾಸ ಮಾಡುತ್ತಿದ್ದಾರೆ ಮತ್ತು ಉಚಿತ ಶಾಲೆಯಲ್ಲಿ ಓದುತ್ತಿದ್ದಾರೆ. ಆರ್ಟ್ ಆಫ್ ಲಿವಿಂಗ್ ಉಚಿತ ಶಾಲಾ ಯೋಜನೆಯ ಅಡಿಯಲ್ಲಿ ಇವರ ಪೂರ್ಣ ಪೋಷಣೆ ನಡೆಯುತ್ತಿದೆ. ಪಠ್ಯೇತರ ಚಟುವಟಿಕೆಗಳಲ್ಲೂ ಇವರು ಎತ್ತಿದ ಕೈ.                       

ಕೋಡಿಂಗ್: ಮಕ್ಕಳು ಕೋಡ್ ಮಾಡುವುದನ್ನು ಕಲಿಯುತ್ತಿದ್ದಾರೆ ಮತ್ತು C , C++ ನಲ್ಲಿ ಪ್ರೋಗ್ರಾಂ ಬರೆಯುವುದನ್ನು ಕಲಿಯುತ್ತಿದ್ದಾರೆ.  

ಮಕ್ಕಳ ಸಂಸತ್ತು: ಈ ಶಾಲೆಯಲ್ಲಿ ತನ್ನದೇ ಆದ ಶಾಲಾ ಸಂಸತ್ತಿದೆ. ಕಳೆದ 16 ವರ್ಷಗಳಲ್ಲಿ, ಪ್ರತಿ ವರ್ಷವೂ ಸಹ ಶಾಲೆಯು ಓರ್ವ ಅಧ್ಯಕ್ಷರನ್ನು ಮತ್ತು ಅಧ್ಯಕ್ಷರ ಮಂತ್ರಿಗಳನ್ನು ಆಯ್ಕೆ ಮಾಡುತ್ತದೆ. ಇವರು ಶಾಲೆಯನ್ನು ನಡೆಸುತ್ತಾರೆ ಮತ್ತು ಮಕ್ಕಳು ಇದರಿಂದ ಸಮಗ್ರ ನಾಯಕತ್ವವನ್ನು ಮತ್ತು ನಿಭಾವಣಾ ಕುಶಲತೆಯನ್ನು ಕಲಿಯುತ್ತಾರೆ.

 ಹಸಿರು ಶಾಲೆ: ಶಾಲೆಯಲ್ಲಿ ಸೌರವಿದ್ಯುತ್ ಇದೆ ಮತ್ತು ಶುದ್ಧ ಮತ್ತು ಪುನರುಜ್ಜೀವಿಸಬಲ್ಲ ಈ ವಿದ್ಯುತ್ತನ್ನು ಭಾಗಶಃ ರಾಜ್ಯ ಸರ್ಕಾರದ ಬಳಕೆಗಾಗಿ ನೀಡಲಾಗುತ್ತಿದೆ. ಈ ಯೋಜನೆಯಿಂದಾಗಿ ನಮ್ಮ ಶಾಲೆಯು, ವಿಶ್ವಸಂಸ್ಥೆಯ ಎಸ್ ಡಿಜಿ7  ಗೆ ಅನುಗುಣವಾಗಿ ಹಸಿರು ಶಾಲಾ ಆವರಣವಾಗಿದೆ.  

ಇಲ್ಲಿ 95% ಮಕ್ಕಳು ಪ್ರಥಮ ಬಾರಿಗೆ ಶಾಲೆಯ ಮೆಟ್ಟಿಲೇರಿದ್ದಾರೆ. ಅವರ ಇಡೀ ಕುಟುಂಬದಲ್ಲಿ ಈವರೆಗೆ  ಯಾರೂ  ಶಾಲೆಯ ಹಿನ್ನೆಲೆಯನ್ನು ಹೊಂದಿರಲಿಲ್ಲ. ಮತ್ತು ಈ ವಿದ್ಯಾರ್ಥಿಗಳ ಪೈಕಿ ಅರ್ಧದಷ್ಟು ಹೆಣ್ಣು ಮಕ್ಕಳು ಎಂಬುದು ಹೆಮ್ಮೆಯ ವಿಷಯ. 

International Literacy Day 2024 art of living achievementin education sector rav

World Nature Conservation Day 2024: ಕಣ್ಮರೆಯಾದ ದೇಸೀ ಬೀಜಗಳಿಗೆ ಮರುಜೀವ!

10. ಈ ಶಾಲೆಯಲ್ಲಿ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಎರಡೂ ಇದೆ. ಸುತ್ತಮುತ್ತಲಿನ 61 ಹಳ್ಳಿಗಳಿಂದ ಸುಮಾರು 1265 ಮಕ್ಕಳು ಇಲ್ಲಿ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ನಾವು ಉಚಿತ ಸಾರಿಗೆ, ಮಧ್ಯಾಹ್ನದ ಬಿಸಿ ಊಟ, ಪಠ್ಯ ಪುಸ್ತಕಗಳು, ಶಾಲಾ ಚೀಲಗಳು, 4 ಜೊತೆ ಸಮವಸ್ತ್ರಗಳು, ಸ್ವೆಟರ್, ಬೂಟ್ ಮತ್ತು  ಸಾಕ್ಸ್ ಗಳನ್ನು ಕೊಡುತ್ತೇವೆ.     

ಒಮ್ಮೆ ನಮ್ಮ ಶಾಲೆಗೆ ಭೇಟಿ ನೀಡಿ ಮತ್ತು ನಮ್ಮ ಉಚಿತ ಶಾಲೆಯು ಹಿಂದುಳಿದ ಮಕ್ಕಳ ಭವಿಷ್ಯಗಳನ್ನು ಹೇಗೆ ರೂಪಿಸುತ್ತಿದೆ ಮತ್ತು ಸಮುದಾಯದ ಅಭಿವೃದ್ಧಿ ಹೇಗೆ ಉಂಟಾಗುತ್ತಿದೆ ಮತ್ತು ಈ ಮಕ್ಕಳು ಸಂತೋಷಮಯವಾದ, ಆರ್ಥಿಕವಾಗಿ ಸಬಲರಾದ, ಅಪರಾಧಗಳಿಂದ ಮುಕ್ತವಾದಂತಹ ಜೀವನವನ್ನು ಹೇಗೆ ನಡೆಸಲು ಸಾಧ್ಯವಾಗುತ್ತಿದೆಯೆಂಬ ಕಥೆಯನ್ನು ಎಲ್ಲರೊಂದಿಗೂ ಹಂಚಿಕೊಳ್ಳಿ.

Latest Videos
Follow Us:
Download App:
  • android
  • ios