ರಾಜ್ಯ ಶಿಕ್ಷಣ ನೀತಿಗೆ ರೂಪುರೇಷೆ ಪ್ರಸ್ತಾವನೆ ಸಿದ್ಧಪಡಿಸಲು  ಅಧಿಕಾರಿಗಳಿಗೆ ನಿರ್ದೇಶನ ನೀಡಿದ ಸಚಿವದ್ವಯರು ಸೂಚನೆ ನೀಡಿದ್ದಾರೆ. 

ಬೆಂಗಳೂರು (ಜು.30): ಬಜೆಟ್‌ನಲ್ಲಿ ಘೋಷಿಸಿರುವಂತೆ ರಾಜ್ಯದಲ್ಲಿ ಎನ್‌ಇಪಿ ಬದಲು ರಾಜ್ಯದ್ದೇ ಆದ ಹೊಸ ಶಿಕ್ಷಣ ನೀತಿ ರೂಪಿಸಿಕೊಳ್ಳಲು ಅಗತ್ಯ ರೂಪುರೇಷೆಗಳ ಪ್ರಸ್ತಾವನೆ ಸಿದ್ಧಪಡಿಸುವಂತೆ ಉನ್ನತ ಶಿಕ್ಷಣ ಇಲಾಖೆ ಸಚಿವ ಡಾ ಎಂ.ಸಿ.ಸುಧಾಕರ್‌ ಮತ್ತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧುಬಂಗಾರಪ್ಪ ತಮ್ಮ ಇಲಾಖಾ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಹೊಸ ಶಿಕ್ಷಣ ನೀತಿ ಸಂಬಂಧ ಉಭಯ ಸಚಿವರು ಶುಕ್ರವಾರ ರಾಜ್ಯ ಉನ್ನತ ಶಿಕ್ಷಣ ಪರಿಷತ್‌ನಲ್ಲಿ ತಮ್ಮ ಇಲಾಖಾ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಈ ವೇಳೆ, ರಾಜ್ಯದ ಹೊಸ ಶಿಕ್ಷಣ ನೀತಿ ರೂಪಿಸುವ ಬಗ್ಗೆ ಮುಖ್ಯಮಂತ್ರಿಗಳು ಶೀಘ್ರ ಸಭೆ ಕರೆಯಲಿದ್ದು ಈ ಸಭೆಯಲ್ಲಿ ಹೊಸ ನೀತಿಯ ಬಗ್ಗೆ ರೂಪುರೇಷೆಗಳ ಪ್ರಸ್ತಾವನೆಗಳನ್ನು ಸಲ್ಲಿಸಬೇಕಿದೆ. ಸಭೆಯಲ್ಲಿ ಈ ಪ್ರಸ್ತಾವನೆಯಲ್ಲಿನ ಅಂಶಗಳನ್ನು ಚರ್ಚಿಸಿ ಹೊಸ ನೀತಿ ತಯಾರು ಮಾಡಲು ಸಮಿತಿ ರಚನೆ ಸೇರಿದಂತೆ ಇನ್ನಿತರೆ ನಿರ್ಧಾರಗಳನ್ನು ಮುಖ್ಯಮಂತ್ರಿ ಅವರ ಸಲಹೆ, ಸೂಚನೆಯಂತೆ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಹಣಕಾಸು ಕ್ಷೇತ್ರದಲ್ಲಿ ಕೋರ್ಸ್‌ಗೆ ಬೇಸ್‌ ವಿವಿ-ಎನ್‌ಎಸ್‌ಇ ಒಪ್ಪಂದ

ಈ ಸಂಬಂಧ ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಸಚಿವ ಡಾ. ಎಂ.ಸಿ.ಸುಧಾಕರ್‌ ಅವರು, ಎನ್‌ಇಪಿ ಕೈಬಿಟ್ಟು ರಾಜ್ಯದ್ದೇ ಹೊಸ ಶಿಕ್ಷಣ ನೀತಿ ರೂಪಿಸಿ ಜಾರಿಗೆ ತರುವುದಾಗಿ ಈಗಾಗಲೇ ಮುಖ್ಯಮಂತ್ರಿ ಅವರು ಬಜೆಟ್‌ನಲ್ಲಿ ಘೋಷಿಸಿದ್ದಾರೆ. ಅದರಂತೆ ಯಾವ ರೀತಿ ನೀತಿ ರೂಪಿಸಬೇಕು ಎಂಬ ಬಗ್ಗೆ ಪ್ರಸ್ತಾವನೆ ಸಿದ್ಧಪಡಿಸಿಕೊಂಡು ಮುಖ್ಯಮಂತ್ರಿಗಳ ಮುಂದೆ ಹೋಗುತ್ತೇವೆ. ನಂತರ ಮುಖ್ಯಮಂತ್ರಿಗಳು ನೀಡುವ ಸಲಹೆ, ಸೂಚನೆಯೊಂದಿಗೆ ಹೊಸ ನೀತಿ ರೂಪಿಸುವ ಪ್ರಕ್ರಿಯೆ ಆರಂಭಿಸಲಾಗುವುದು. ಮಕ್ಕಳಿಗೆ ಶೈಕ್ಷಣಿಕವಾಗಿ ಯಾವುದೇ ರೀತಿ ಗೊಂದಲವಾಗದಂತೆ ನಾವು ಹೊಸ ನೀತಿ ರೂಪಿಸಿ ಜಾರಿಗೆ ತರುತ್ತೇವೆ ಎಂದು ತಿಳಿಸಿದರು.

ಕೆಎಎಸ್ ಅಧಿಕಾರಿಯಾಗಿ ಯುಪಿಎಸ್‌ಸಿ ಬರೆದು ಐಎಎಸ್‌ ಅಧಿಕಾರಿಯಾದ ಅಂದಿನ

ಮಾಹಿತಿ ಪ್ರಕಾರ ಆ.2ರಂದು ರಾಜ್ಯ ಶಿಕ್ಷಣ ನೀತಿ ರೂಪಿಸುವ ಸಂಬಂಧ ಚರ್ಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮಯ ನಿಗದಿಪಡಿಸಿದ್ದರು. ಆದರೆ, ಕಾರಣಾಂತರಗಳಿಂದ ಈ ಸಭೆ ಮುಂದೂಡಿಕೆಯಾಗಿದ್ದು ಹೊಸ ದಿನಾಂಕ ನಿಗದಿಯಾಗಬೇಕಿದೆ.