IGNOU MACSR: ಕಾರ್ಪೊರೇಟ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿ ಎಂಎ ಕೋರ್ಸ್ ಆರಂಭ
* MACSR ಕೋರ್ಸ್ ಅನ್ನು ಇಗ್ನೋ ಜನವರಿ ಮತ್ತು ಜುಲೈ ಎರಡೂ ಅವಧಿಗಳಲ್ಲೂ ನೀಡುತ್ತಿದೆ.
* ಈ ಹೊಸ MACSR ಕೋರ್ಸ್ ಎರಡು ವರ್ಷ ಅವಧಿಯದ್ದಾಗಿದೆ
* ಹೆಚ್ಚಿನ ವಿವರಗಳಿಗಾಗಿ ignou.ac.in ಜಾಲತಾಣಕ್ಕೆ ಭೇಟಿ ನೀಡಿ ಪರಿಶೀಲಿಸಬಹುದು.
ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾನಿಲಯವು (Indira Ghandhi National Open University- IGNOU) ಮಾಸ್ಟರ್ ಆಫ್ ಆರ್ಟ್ಸ್ (Corporate Social Responsibility- MACSR) ಕಾರ್ಯಕ್ರಮವನ್ನು ಪ್ರಾರಂಭಿಸಿದೆ. ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾನಿಲಯವು (IGNOU) ಮುಕ್ತ ಮತ್ತು ದೂರಶಿಕ್ಷಣ (Open and Distance Learning -ODL) ಮೋಡ್‌ನಲ್ಲಿ ಮಾಸ್ಟರ್ ಆಫ್ ಆರ್ಟ್ಸ್ (ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ-MACSR) ಕಾರ್ಯಕ್ರಮವನ್ನು ನೀಡುತ್ತಿದೆ.IGNOU ಈ ಕಾರ್ಯಕ್ರಮವನ್ನು ಜನವರಿ ಮತ್ತು ಜುಲೈ ಎರಡೂ ಅವಧಿಗಳಲ್ಲಿ ನೀಡಲಾಗುತ್ತದೆ. IGNOU ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ಕುರಿತ MA ಪ್ರೋಗ್ರಾಂನಲ್ಲಿ ಆಸಕ್ತಿಯುಳ್ಳ ವಿದ್ಯಾರ್ಥಿಗಳು ಭಾಗವಹಿಸಬಹುದು. ಈ ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸಲು ಜನವರಿ 31 ಕೊನೆಯ ದಿನಾಂಕವಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ignouadmission.samarth.edu.inನಲ್ಲಿ ಅರ್ಜಿ ಸಲ್ಲಿಸಬಹುದು. MACSR ಭಾರತದಾದ್ಯಂತ ಈ ಕಾರ್ಯಕ್ರಮವನ್ನು CSR (Corporate Social Responsibility) ವೃತ್ತಿಪರರಿಗೆ ಮತ್ತು CSR(ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ)ವೃತ್ತಿಪರರಾಗಿ ವೃತ್ತಿಜೀವನವನ್ನು ಮುಂದುವರಿಸಲು ಆಸಕ್ತಿ ಹೊಂದಿರುವ ಪದವೀಧರರು / ಸ್ನಾತಕೋತ್ತರ ಪದವೀಧರರಿಗಾಗಿ ಆಯೋಜಿಸಲಾಗಿದೆ.
ಎರಡು ವರ್ಷಗಳ ಎಂ.ಎ ಪದವಿ ಕಾರ್ಯಕ್ರಮ ಇದಾಗಿದ್ದು, ಸಿಎಸ್ಆರ್ ಮೂಲಭೂತ ಅಂಶಗಳು, ಸಿಎಸ್ಆರ್ ಪ್ರಕ್ರಿಯೆ ಮತ್ತು ಯೋಜನೆಗಳು ಮತ್ತು ಕಾರ್ಯಕ್ರಮಗಳ ಅಭಿವೃದ್ಧಿ, ಅನುಷ್ಠಾನ ಮತ್ತು ನಿರ್ವಹಣೆ ಮತ್ತು ಕಾರ್ಪೊರೇಟ್ ನೀತಿಶಾಸ್ತ್ರ, ಸಂಘರ್ಷ ಪರಿಹಾರ, ಆಡಳಿತ ಮತ್ತು ಅದರ ಸಂಪರ್ಕಗಳಂತಹ ವಿವಿಧ ಅಂಶಗಳನ್ನು ಒಳಗೊಂಡಿರುತ್ತದೆ. ಈ ಮೂಲಕ ಸಿಎಸ್ಆರ್ ನ ಸಮಗ್ರ ತಿಳುವಳಿಕೆಯನ್ನು ಹೆಚ್ಚಿಸುವ ರೀತಿಯಲ್ಲಿ ಎಂ.ಎ ಕೋರ್ಸ್ ಅನ್ನು ವಿನ್ಯಾಸಗೊಳಿಸಲಾಗಿದೆ. ಪ್ರಾಜೆಕ್ಟ್ ವರ್ಕ್ ಅನ್ನು ಆಯ್ಕೆ ಮಾಡುವ ಮೂಲಕ ವಿದ್ಯಾರ್ಥಿಗಳು ಸಿಎಸ್ಆರ್ ಯೋಜನೆಗಳ ಮೊದಲ ಅನುಭವವನ್ನು ಪಡೆಯಬಹುದು.
UPSC Success Story: 10 ವರ್ಷ ಕಂಪನಿಯಲ್ಲಿ ಕೆಲಸ ಮಾಡಿ, IAS ಅಧಿಕಾರಿಯಾದ ಪ್ರೇಮ್ ಪ್ರಕಾಶ್ ಮೀನಾ
ಮುಕ್ತ ಮತ್ತು ದೂರಶಿಕ್ಷಣದ ಮೂಲಕ ಸಿಎಸ್ಆರ್ ಬಗ್ಗೆ ಜ್ಞಾನ ಮತ್ತು ತಿಳುವಳಿಕೆಯನ್ನು ನೀಡುವುದು ಕಾರ್ಯಕ್ರಮದ ಉದ್ದೇಶವಾಗಿದೆ. ಸಿಎಸ್‌ಆರ್ ಕೈಗೊಳ್ಳುವ ಕಂಪನಿಗಳ ಉದ್ಯೋಗಿಗಳು, ಅಭಿವೃದ್ಧಿ ವಲಯದಲ್ಲಿ ಕೆಲಸ ಮಾಡುವ ವೃತ್ತಿಪರರು ಮತ್ತು ಸಿಎಸ್‌ಆರ್ ಚಟುವಟಿಕೆಗಳನ್ನು ಅನುಷ್ಠಾನಗೊಳಿಸುವ ಎನ್‌ಜಿಒಗಳು ಹಾಗೂ ಅಧ್ಯಾಪಕರು, ಸಂಶೋಧಕರು ಮತ್ತು ವಿಶ್ವವಿದ್ಯಾಲಯಗಳಲ್ಲಿನ ವಿದ್ಯಾರ್ಥಿಗಳು, ಸಂಶೋಧನಾ ಸಂಸ್ಥೆಗಳು ಮತ್ತು ಕಾಲೇಜುಗಳ ಪದವೀಧರರು ಸಿಎಸ್‌ಆರ್‌ನಲ್ಲಿ ವೃತ್ತಿಜೀವನವನ್ನು ಮುಂದುವರಿಸಲು ಬಯಸುವವರು ಕೋರ್ಸ್‌ಗೆ ಅರ್ಜಿ ಸಲ್ಲಿಸಬಹುದು.
ಕಂಪನಿಗಳ ಕಾಯಿದೆ (Companies Act) 2013 ರ ಜಾರಿಯು ಸಂಪನ್ಮೂಲಗಳನ್ನು ಕ್ರೋಢೀಕರಿಸಲು ಮತ್ತು ದೇಶದಲ್ಲಿ ಅಂತರ್ಗತ ಅಭಿವೃದ್ಧಿಯನ್ನು ಉತ್ತೇಜಿಸಲು ಕಾರ್ಯವಿಧಾನಗಳನ್ನು ನಿರ್ಮಿಸಲು ಪ್ರಮುಖ ಅವಕಾಶವನ್ನು ಸೃಷ್ಟಿಸಿದೆ. ಸಿಎಸ್ಆರ್ ವೃತ್ತಿಪರರಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪರಿಗಣಿಸಿ, ಮಾಸ್ಟರ್ ಆಫ್ ಆರ್ಟ್ಸ್ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (ಎಂಎಸಿಎಸ್ಆರ್) ಅನ್ನು ಪ್ರಾರಂಭಿಸುವ ಮೂಲಕ ತರಬೇತಿ ಪಡೆದ ಸಿಎಸ್ಆರ್ ವೃತ್ತಿಪರರ ಬೇಡಿಕೆಯಲ್ಲಿನ ಈ ಅಂತರವನ್ನು ಕಡಿಮೆ ಮಾಡಲು IGNOU ಹೆಜ್ಜೆ ಹಾಕಿದೆ.
ಮುಕ್ತ ಮತ್ತು ದೂರಶಿಕ್ಷಣದ ಮೂಲಕ ಸಿಎಸ್ಆರ್ ಬಗ್ಗೆ ಜ್ಞಾನ ಮತ್ತು ತಿಳುವಳಿಕೆಯನ್ನು ನೀಡುವುದು, ಸಿಎಸ್ಆರ್ ಮತ್ತು ಅಭಿವೃದ್ಧಿ ಕಾರ್ಯಗಳ ವಿವಿಧ ಸೈದ್ಧಾಂತಿಕ ಮತ್ತು ಪ್ರಾಯೋಗಿಕ ಅಂಶಗಳ ಮೇಲೆ ಕಲಿಯುವವರ ಸಾಮರ್ಥ್ಯವನ್ನು ವಿಸ್ತರಿಸುವುದು, ಸೂತ್ರೀಕರಣ, ಅನುಷ್ಠಾನ, ಮೇಲ್ವಿಚಾರಣೆ ಮತ್ತು ಮೌಲ್ಯಮಾಪನದಲ್ಲಿ ವೃತ್ತಿಪರ ಜ್ಞಾನವನ್ನು ಅಭಿವೃದ್ಧಿಪಡಿಸುವುದು- ಈ ಕಾರ್ಯಕ್ರಮಗಳ ಉದ್ದೇಶಗಳಾಗಿವೆ. CSR ಯೋಜನೆಗಳು ಮತ್ತು ಕಾರ್ಯಕ್ರಮಗಳು, ಮತ್ತು ಕಾರ್ಪೊರೇಟ್ ನೀತಿಶಾಸ್ತ್ರ, ಆಡಳಿತ ಮತ್ತು ಸಂಘರ್ಷ ಪರಿಹಾರದಲ್ಲಿ ಅಗತ್ಯವಿರುವ ಕೌಶಲ್ಯಗಳೊಂದಿಗೆ ಕಲಿಯುವವರನ್ನು ಸಜ್ಜುಗೊಳಿಸಲು ಈ ಕೋರ್ಸ್ ಸಹಕಾರಿಯಾಗಲಿದೆ.
English Medium: ಇಂಗ್ಲೀಷ್ ಮೀಡಿಯಂನಲ್ಲಿ ಓದುವ ಭಾಗ್ಯವಿಲ್ಲ ಎಂದು ಕೊರಗುವ ಮಕ್ಕಳ ನೆರವಿಗೆ ಸರ್ಕಾರ
MACSR ಮುಕ್ತ ಮತ್ತು ದೂರ ಕಲಿಕೆ (ODL) ಮೋಡ್‌ನಲ್ಲಿ ವಿಷಯ ಮತ್ತು ಸಮಯದ ಪರಿಭಾಷೆಯಲ್ಲಿ ಬಹಳ ಸೂಕ್ತವಾದ ಪ್ರೋಗ್ರಾಂ ಆಗಿದೆ. ಇದು CSR ವೃತ್ತಿಪರರ ಜ್ಞಾನವನ್ನು ಪಡೆಯಲು ಮತ್ತು ನವೀಕರಿಸಲು ಒಂದು ಅನನ್ಯ ಅವಕಾಶವನ್ನು ಒದಗಿಸುತ್ತದೆ ಅಂತಾರೆ ಈ ಕಾರ್ಯಕ್ರಮ ಕೋ-ಆರ್ಡಿನೇಟರ್ಸ್ ಗಳಾದ ಪ್ರೊ.ಡಾ.ನಿಶಾ ವರ್ಗೀಸ್ ಹಾಗೂ ಪ್ರೊ.ಶಶಿಧರ್.
ಅಂದಹಾಗೇ ಈ ಕೋರ್ಸ್ ಸೇರಲು ಜನವರಿ 31 ಕೊನೆಯ ದಿನಾಂಕವಾಗಿದೆ. ಎರಡು ವರ್ಷಗಳ ಈ ಕೋರ್ಸ್‌ಗೆ, ಅಭ್ಯರ್ಥಿಗಳು ರೂ 14,400 (ಎರಡೂ ವರ್ಷಗಳಿಗೆ ರೂ 7,200) ಅರ್ಜಿ ಶುಲ್ಕವನ್ನು ಪಾವತಿಸಬೇಕು. ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾನಿಲಯವು (Indira Ghandhi National Open University- IGNOU) ಮಾಸ್ಟರ್ ಆಫ್ ಆರ್ಟ್ಸ್ (Corporate Social Responsibility- MACSR) ಕಾರ್ಯಕ್ರಮದ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ಅಭ್ಯರ್ಥಿಗಳು ವಿವಿಯ ಅಧಿಕೃತ ವೆಬ್‌ಸೈಟ್-ignou.ac.in ಗೆ ಭೇಟಿ ನೀಡಿ ಪರಿಶೀಲಿಸಬಹುದು.
Online Course ನೀಡುತ್ತಿರುವ ಎಜುಟೆಕ್ ಸಂಸ್ಥೆಗಳಿಗೆ UGC ಎಚ್ಚರಿಕೆ