ಕೋವಿಡ್‌ ಎಫೆಕ್ಟ್: ಶಾಲೆ ಮಕ್ಕಳಲ್ಲಿ ನಿರಾಸಕ್ತಿ, ಸಿಟ್ಟು ಹೆಚ್ಚಳ..!

*  2 ವರ್ಷದ ನಂತರ ಶಾಲೆಗೆ ತೆರಳಿದ ಮಕ್ಕಳಲ್ಲಿ ಸಾಮಾಜಿಕ, ಭಾವನಾತ್ಮಕ ಸಮಸ್ಯೆ
*  ಮಕ್ಕಳ ಜೊತೆ ಎಚ್ಚರದಿಂದ ನಡೆದುಕೊಳ್ಳಲು ಶಿಕ್ಷಕರು, ಪೋಷಕರಿಗೆ ಸಲಹೆ
*  ಕೋವಿಡ್‌ಗೆ ಮುನ್ನ ಬಹಳ ಖುಷಿಯಾಗಿ ಶಾಲೆಗೆ ಹೋಗುತ್ತಿದ್ದ ಮಕ್ಕಳು 
 

Increased apathy and anger in school children Due tom Covid Effect in Karnataka grg

ಬೆಂಗಳೂರು(ಜೂ.29):  ಎರಡು ವರ್ಷಗಳ ದೀರ್ಘ ಕಾಲದ ಅಂತರದ ಬಳಿಕ ಶಾಲೆಗೆ ಮರಳಿರುವ ಹಲವು ಮಕ್ಕಳಲ್ಲಿ ಶಾಲೆಗೆ ಬರಲು, ಕಲಿಕೆಯಲ್ಲಿ ತೊಡಗಲು ನಿರಾಸಕ್ತಿ, ಶಿಕ್ಷಕರು ಹಾಗೂ ಸ್ನೇಹಿತರೊಂದಿಗೆ ಸಂವಹನ, ಹೊಂದಿಕೊಳ್ಳುವ ಕೊರತೆ, ಕೋಪ, ಹಟ ಹೆಚ್ಚಳ ಹೀಗೆ ವಿವಿಧ ಸಾಮಾಜಿಕ ಮತ್ತು ಭಾವನಾತ್ಮಕ ಸಮಸ್ಯೆಗಳು ಕಂಡುಬರುತ್ತಿವೆ.

ಎರಡು ವರ್ಷ ಬಿಟ್ಟು ಶಾಲೆಗೆ ಬಂದ ಮಕ್ಕಳಿಗೆ ಕೆಲ ತಿಂಗಳ ಮಟ್ಟಿಗಾದರೂ ಕ್ರೀಡೆ, ಹಾಡು, ಹರಟೆ ಸೇರಿದಂತೆ ಪಠ್ಯೇತರ ಚಟುವಟಿಕೆಗಳ ಮೂಲಕ ಶಾಲಾ ವಾತಾವರಣಕ್ಕೆ ಹೊಂದಿಕೊಳ್ಳುವ ಕಾರ್ಯಕ್ರಮಗಳ ಕಡೆ ಗಮನ ಹರಿಸದೆ ಶಾಲೆಗಳಲ್ಲಿ ದಿನವಿಡೀ ಪಠ್ಯ ಚಟುವಟಿಕೆ ಮೂಲಕ ಒತ್ತಡ ಹಾಕುತ್ತಿರುವುದೇ ಈ ಸಮಸ್ಯೆಗಳಿಗೆ ಕಾರಣ ಎನ್ನುತ್ತಾರೆ ತಜ್ಞರು.

Mid Day Meal Scheme ಮಕ್ಕಳೊಂದಿಗೆ ಬಿಸಿಯೂಟ ಸವಿದ ಅಧಿಕಾರಿ

ಕೋವಿಡ್‌ನಿಂದಾಗಿ ಶಾಲೆ, ಶಿಕ್ಷಕರು, ಸ್ನೇಹಿತರಿಂದ ಮಾತ್ರವಲ್ಲ ನೆರೆಹೊರೆಯವರಿಂದಲೂ ಭೌತಿಕವಾಗಿ ಎರಡು ವರ್ಷ ಸಂಪರ್ಕ, ಸಂವಹನವಿಲ್ಲದೆ ಮನೆಯಲ್ಲಿದ್ದ ಮಕ್ಕಳಲ್ಲಿ ಮಾನಸಿಕವಾಗಿ ಸಾಕಷ್ಟುಬದಲಾವಣೆಗಳಾಗಿವೆ. ಹೆಚ್ಚು ಒತ್ತಡ ತಡೆಯಲಾಗದ, ಬುದ್ಧಿವಾದ ಹೇಳಿದರೆ, ಬೈದರೆ, ಹೊಡೆದರೆ ಸಹಿಸಿಕೊಳ್ಳುವ ಗುಣ ಕಳೆದುಕೊಂಡಿದ್ದಾರೆ. ಹಾಗಾಗಿ ಪೋಷಕರಾಗಲಿ, ಶಿಕ್ಷಕರಾಗಲಿ ಬಹಳ ಎಚ್ಚರಿಕೆಯಿಂದ ಅವರೊಂದಿಗೆ ನಡೆದುಕೊಳ್ಳಬೇಕಾಗುತ್ತದೆ ಎನ್ನುತ್ತಾರೆ ತಜ್ಞರು.
ಇಂತಹ ಸಮಸ್ಯೆಗಳ ಹಿನ್ನೆಲೆಯಲ್ಲಿ ನಿತ್ಯ ಕೆಲ ಪೋಷಕರು ತಮ್ಮ ಮಕ್ಕಳ ಸಮಸ್ಯೆಗಳನ್ನು ಹೇಳಿಕೊಂಡು ಕೌನ್ಸೆಲಿಂಗ್‌ಗೆ ಬರುತ್ತಿದ್ದಾರೆ. ಕೋವಿಡ್‌ಗೆ ಮುನ್ನ ಬಹಳ ಖುಷಿಯಾಗಿ ಶಾಲೆಗೆ ಹೋಗುತ್ತಿದ್ದ, ಕಲಿಕೆಯಲ್ಲಿ ಆಸಕ್ತಿ ತೋರುತ್ತಿದ್ದ ಮಕ್ಕಳು ಈಗ ಅದಕ್ಕೆ ವಿರುದ್ಧವಾಗಿ ವರ್ತಿಸುತ್ತಿದ್ದಾರೆ ಎಂದು ಕೆಲ ಪೋಷಕರು, ಇನ್ನು ಕೆಲವರು ತಮ್ಮ ಮಗು ವಿಪರೀತ ಕೋಪ, ಹಟ ಮಾಡುತ್ತಾನೆ, ಎಷ್ಟುಬುದ್ದಿಮಾತು ಹೇಳಿದರೂ ಕೇಳುವುದಿಲ್ಲ ಹೀಗೆ ಒಂದೊಲ್ಲೊಂದು ಸಮಸ್ಯೆ ಹೇಳಿಕೊಂಡು ಕೌನ್ಸೆಲಿಂಗ್‌ಗೆ ಬರುತ್ತಿದ್ದಾರೆ ಎನ್ನುತ್ತಾರೆ ಚೈಲ್ಡ್‌ ರೈಟ್ಸ್‌ ಟ್ರಸ್ಟ್‌ನ ನಿರ್ದೇಶಕ ನಾಗಸಿಂಹ ರಾವ್‌.

ಮಕ್ಕಳು ಮಾನಸಿಕ ಸ್ಥೈರ್ಯವನ್ನು ಕಳೆದುಕೊಂಡಿದ್ದಾರೆ ಎಂಬುದಕ್ಕೆ ಉದಾಹರಣೆ ನೀಡುವ ಅವರು ತಮ್ಮ ಬಳಿ ಇತ್ತೀಚೆಗೆ ಏಳು ವರ್ಷದ ಮಗು ಕೌನ್ಸಲಿಂಗ್‌ಗೆ ಬಂದಿತ್ತು. ಆ ಮಗು ಆಗಾಗ ಪ್ರಜ್ಞಾಹೀನವಾಗುತ್ತಿದ್ದದ್ದು ಸಮಸ್ಯೆ. ಇದಕ್ಕೆ ಕಾರಣವೇನು ಎಂದು ಪರಿಶೀಲನೆ ನಡೆಸಿದಾಗ ಮಾನಸಿಕ ಒತ್ತಡ ತಡೆಯಲು ಸಾಧ್ಯವಿಲ್ಲದ ಸ್ಥಿತಿಯಲ್ಲಿ ಮಗುವಿದೆ ಎಂಬುದು ಅರಿವಿಗೆ ಬಂತು.

ವೈದ್ಯಕೀಯ ಪರೀಕ್ಷೆಯಲ್ಲಿ ದೈಹಿಕವಾಗಿ ಸಂಪೂರ್ಣ ಆರೋಗ್ಯವಾಗಿದ್ದರೂ ಒತ್ತಡ ಹೆಚ್ಚಾಗಿರುವುದರಿಂದ ಮಾನಸಿಕವಾಗಿ ತೊಳಲಿದ್ದು ಕಂಡುಬಂತು. ನಂತರ ಆ ಮಗುವಿನ ಶಾಲೆಯವರೊಂದಿಗೆ ಮಾತನಾಡಿ ಮಕ್ಕಳಿಗೆ ತರಗತಿ ಚಟುವಟಿಕೆ ಕಡಿಮೆ ಮಾಡಿ ಪಠ್ಯೇತರ ಚಟುವಟಿಕೆಗಳನ್ನು ನಡೆಸಲು ಸಲಹೆ ನೀಡಿದೆವು. ಈಗ ಆ ಮಗು ಆರೋಗ್ಯವಾಗಿದೆ ಎಂದು ಅವರು ವಿವರಿಸುತ್ತಾರೆ.

SSLC ಪಾಸ್‌ ಕಣ್ಣಿಗೆ ಕೂಲಿಂಗ್ ಗ್ಲಾಸ್: ತನಗೆ ತಾನೇ ಫ್ಲೆಕ್ಸ್ ಹಾಕಿಸಿ ಬಾಲಕನ ಬಿಂದಾಸ್ ಪೋಸ್‌

ಕೋವಿಡ್‌ ಪೂರ್ವ ಮಾದರಿಯಲ್ಲಿ ಮಕ್ಕಳು ಶಾಲಾ ವಾತಾವರಣಕ್ಕೆ ಒಗ್ಗಿಕೊಳ್ಳಲು ಇನ್ನೂ ಕೆಲ ತಿಂಗಳು ಬೇಕಾಗಬಹುದು. ಏಕೆಂದರೆ ಮನುಷ್ಯ ಒಂದು ನಿರ್ದಿಷ್ಟಅವಧಿಯಲ್ಲಿ ಏನನ್ನಾದರೂ ರೂಢಿಸಿಕೊಂಡಾಗ ಅದೇ ಅಭ್ಯಾಸವಾಗುತ್ತದೆ. ನಂತರ ಅದೇ ದೈನಂದಿನ ಜೀವನವಾಗಿಬಿಡುತ್ತದೆ. ಅದರಿಂದ ಹೊರಬರಲು ಕಾಲಾವಕಾಶ ಬೇಕಾಗುತ್ತದೆ ಎನ್ನುತ್ತಾರೆ ಮನೋ ವೈದ್ಯ ಡಾ.ಎ.ಸುದರ್ಶನ್‌.

ಎರಡು ವರ್ಷ ನಂತರ ಶಾಲೆಗೆ ಹೋಗುತ್ತಿರುವ ಮಕ್ಕಳಲ್ಲಿ ಸಾಮಾಜಿಕವಾಗಿ ಮತ್ತು ಭಾವನಾತ್ಮಕವಾಗಿ ಸಾಕಷ್ಟು ಬದಲಾವಣೆಗಾಗಿವೆ. ಅಂತಹ ಮಕ್ಕಳಿಗೆ ತಜ್ಞರಿಂದ ಸೂಕ್ತ ಸಮಾಲೋಚನೆ ಅಗತ್ಯ, ಇದಕ್ಕಾಗಿ ಸರ್ಕಾರಿ ಶಾಲೆಗಳಲ್ಲೂ ಸಮಾಲೋಚಕರನ್ನು ನೇಮಿಸುವಂತೆ ಮನವಿ ಮಾಡಿದ್ದೆವು. ಆದರೆ, ಸರ್ಕಾರ ಗಮನ ಹರಿಸಿಲ್ಲ ಅಂತ ಚೈಲ್ಡ್‌ ರೈಟ್ಸ್‌ ಟ್ರಸ್ಟ್‌ ನಿರ್ದೇಶಕ ನಾಗಸಿಂಹ ರಾವ್‌ ತಿಳಿಸಿದ್ದಾರೆ.  
 

Latest Videos
Follow Us:
Download App:
  • android
  • ios