ರವಿ ಬೆಳಗೆೆರೆ ಆರಂಭಿಸಿದ ಸ್ಕೂಲ್‌ಗೆ ಮಗನಿಂದ ಆಧುನಿಕ ಸ್ಪರ್ಶ, ಹೇಗಿರುತ್ತೆ ಪ್ರಾರ್ಥನಾ ಇನ್ ವರ್ಲ್ಡ್ ಸ್ಕೂಲ್?
ಕನ್ನಡ ಪತ್ರಿಕೋದ್ಯಮದ ಧೀಮಂತ ಪತ್ರಕರ್ತ ದಿ. ರವಿ ಬೆಳೆಗೆರೆ ಸ್ಥಾಪಿಸಿದ ಪ್ರಾರ್ಥನಾ ಗ್ರುಪ್‌ಗೆ ಪ್ರಾರ್ಥನಾ ಇನ್ ವರ್ಲ್ಡ್ ಸ್ಕೂಲ್ ಮತ್ತೊಂದು ಶಾಲೆ ಸೇರ್ಪಡೆಯಾಗಿದೆ. ಬೆಳೆಗೆರೆ ಮಗ ಕರ್ಣ ಮುನ್ನಡೆಸುತ್ತಿರುವ ಈ ಶಾಲೆಯ ವಿಶೇಷ ಏನು ಗೊತ್ತ? ಯಾವುದೇ ವಿದ್ಯಾರ್ಥಿಗೆ ಇಲ್ಲಿ ಡೋನೆಷನ್ ಇಲ್ಲ ಯಾವ ಜಾತಿಯವನು ಅಂತಾನೂ ಕೇಳೋದಿಲ್ಲ!
ವರದಿ-ನಂದೀಶ್ ಮಲ್ಲೇನಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್ ಬೆಂಗಳೂರು
ಬೆಂಗಳೂರು( ನವೆಂಬರ್ 26) ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹೈಟೆಕ್ ಶಾಲೆಗಳಿಗೆ ಏನು ಕಡಿಮೆ ಇಲ್ಲ..ಲಕ್ಷಾಂತರ ರೂಪಾಯಿ ಡೋನೇಷನ್ ಪಡೆದು ಹೈಟೆಕ್ ಶಿಕ್ಷಣ ಕೊಡುವ ಸಂಸ್ಥೆಗಳನ್ನ ನಾವು ನೋಡಿದ್ದೇವೆ..ಆದ್ರೆ ಹೈಟೆಕ್ ಶಿಕ್ಷಣ ಕೊಡುವ ಜೊತೆಗೆ ಡೋನೇಷನ್ ಪಡೆಯದೇ,ಕೇವಲ ಶುಲ್ಕ ಪಡೆದು ಶಿಕ್ಷಣ ಕೊಡಲು ರವಿ ಬೆಳಗೆರೆ ಅವರ ಮಗ ಕರ್ಣ ಬೆಳಗೆರೆ ಮುಂದಾಗಿದ್ದಾರೆ..ಹೌದು , ಬನಶಂಕರಿಯ 6 ನೇ ಹಂತದಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ಪ್ರಾರ್ಥನಾ ವರ್ಲ್ಡ್ ಶಾಲೆಯ ಕಟ್ಟಡವನ್ನ ನಿರ್ದೇಶಕ ಟಿ.ಎನ್ ಸೀತಾರಾಮ್ ಅವರು ಟೇಪ್ ಕಟ್ ಮಾಡುವ ಮೂಲಕ ಉದ್ಘಾಟಿಸಿದರು..
24-25 ನೇ ಸಾಲಿನ ಶೈಕ್ಷಣಿಕ ದಾಖಲಾತಿ ಪ್ರಕ್ರಿಯೆಗೆ ಇಂದಿನಿಂದ ಪ್ರಾರಂಭಗೊಳ್ಳಲಿದೆ ಅಂತ ಪ್ರಾರ್ಥನಾ ವರ್ಲ್ಡ್ ಶಾಲೆಯ ಸ್ಥಾಪಕರಾದ ಕರ್ಣ ಬೆಳಗೆರೆ ಅವರು ತಿಳಿಸಿದ್ರು.ಈಗಾಗಲೇ ನಮ್ಮ ತಂದೆಯವರಾದ ರವಿ ಬೆಳಗೆರೆ ಪ್ರಾರಂಭಿಸಿದ್ದ ಪ್ರಾರ್ಥನಾ ಶಾಲೆ ಪ್ರಾರಂಭವಾಗಿ 21 ವರ್ಷ ಪೂರ್ಣ ಗೊಳಿಸಿದೆ.ಶಾಲೆಯಲ್ಲಿ ಸುಮಾರು 6 ಸಾವಿರಕ್ಕೂ ಹೆಚ್ಚು ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ..ಅವರ ಕನಸಿನಂತೆಯೇ ನಾನು ಮತ್ತೊಂದು ಹೊಸ ಶಾಲೆಯನ್ನ ಪ್ರಾರಂಭಿಸುತ್ತಿದ್ದು,ಡೋನೇಷನ್ ಪಡೆಯದೇ ಶಿಕ್ಷಣವನ್ನ ಕೊಡಲು ನಮ್ಮ ಸಂಸ್ಥೆ ಮುಂದಾಗಿದೆ ಅಂತ ಕರ್ಣ ಬೆಳಗೆರೆ ತಿಳಿಸಿದ್ರು..
ಬೆಂಗಳೂರಿಗೆ 400 ರೂಪಾಯಿ ಕೊಟ್ಟು ಕಳಿಸಿದ್ದನ್ನ ಆತ ಯಾವತ್ತೂ ಮರೆತಿಲ್ಲ: ಆಪ್ತ ಸ್ನೇಹಿತ
ಪ್ರಾರ್ಥನಾ ವರ್ಲ್ಡ್ ಸ್ಕೂಲ್ ನ ವಿಶೇಷತೆ ಏನು?
ನೂತನವಾಗಿ ನಿರ್ಮಾಣಗೊಂಡಿರುವ ಪ್ರಾರ್ಥನಾ ವರ್ಲ್ಡ್ ಸ್ಕೂಲ್ ಕಟ್ಟಡ ವೃತ್ತಾಕಾರದಲ್ಲಿದೆ..ಎರಡು ವರ್ಷ ಮಗು ಪ್ಲೇ ಹೋಂ ನಿಂದ ದ್ವಿತೀಯ ಪಿಯುಸಿ ತನಕ ಮಕ್ಕಳಿಗೆ ಶಿಕ್ಷಣವನ್ನ ಕೊಡಲು ಸಂಸ್ಥೆ ಮುಂದಾಗಿದೆ..
ಹೈಟೆಕ್ ಮಾದರಿಯಲ್ಲಿರುವ ಪ್ರಾರ್ಥನಾ ವರ್ಲ್ಡ್ ಸ್ಕೂಲ್ ನಲ್ಲಿ ಡೋನೇಷನ್ ಪಡೆಯದೇ ಕೇವಲ ಶುಲ್ಕ ಮಾತ್ರ ಪಡೆದು ಶಿಕ್ಷಣ ಕೊಡಲು ಸಂಸ್ಥೆ ಮುಂದಾಗಿದೆ.
ಕನ್ನಡ ಬೆಳೆಸುವುದು ಹೇಗೆ? ರವಿ ಬೆಳಗೆರೆ ಬಾಯಲ್ಲಿ ಕೇಳಿ!
ಮಕ್ಕಳಿಗೆ ಉಚಿತವಾಗಿ ಯೂನಿಫಾರಂ, ಉಚಿತ ಪಠ್ಯಪುಸ್ತಕ, ಹಾಗೂ ಶಾಲೆಯಲ್ಲಿ ಟಿಫಿನ್ ಹಾಗೂ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿದೆ
ಇದರ ಜೊತೆಗೆ ಮಕ್ಕಳಿಗೆ ಅತ್ಯಾಧುನಿಕ ಶಿಕ್ಷಣ ಕೊಡಲು ಪ್ರಾರ್ಥನಾ ವರ್ಲ್ಡ್ ಶಾಲೆ ಮುಂದಾಗಿದೆ.ನಿಜಕ್ಕೂ ಬಿಜಿನೆಸ್ ಮಾಡುವವರ ನಡುವೆ ಈ ರೀತಿ ಹೈಟೆಕ್ ಶಾಲೆ ಮಾಡಿ ಮಧ್ಯಮ ವರ್ಗದ ಜನರಿಗೆ ಕೈಗೆಟುಕುವ ರೀತಿಯಲ್ಲಿ ಶಿಕ್ಷಣ ಕೊಡಲು ಮುಂದಾಗಿರುವ ಕರ್ಣ ಬೆಳಗೆರೆ ಅವರ ಕಾರ್ಯ ನಿಜಕ್ಕೂ ಶ್ಲಾಘನೀಯ.. ಇಂತ ಹತ್ತಾರು ಶಾಲೆಗಳನ್ನ ಹುಟ್ಟು ಹಾಕಿ ಸಾವಿರ, ಲಕ್ಷಾಂತರ ಮಕ್ಕಳಿಗೆ ಶಿಕ್ಷಣ ಕೊಡುವಂತಾಗಲಿ ಅನ್ನೋದು ನಮ್ಮ ಆಶಯ