ವಿದ್ಯಾರ್ಥಿಗಳಿಗೆ ಗಣಿತ ಹೇಳಿಕೊಡಲು ಎಂಎನ್‌ಸಿ ಉದ್ಯೋಗ ತೊರೆದ IITian

ದೇಶದ ಪ್ರತಿಯೊಬ್ಬ  ವಿದ್ಯಾರ್ಥಿಯೂ  ಉತ್ತಮವಾದ ಗಣಿತ ಜ್ಞಾನವನ್ನು ಹೊಂದಬೇಕು ಎಂಬ ಉದ್ದೇಶದಿಂದ ಯೂಟ್ಯೂಬ್ ಚಾನೆಲ್ ವೊಂದನ್ನು ತೆರೆದು ಅದರ ಮೂಲಕ ಆಸಕ್ತ ವಿದ್ಯಾರ್ಥಿಗಳಿಗೆ ಲೆಕ್ಕದ ಜ್ಞಾನ ನೀಡುತ್ತಿದ್ದಾರೆ. ಅವರೇ IIT ಪದವೀಧರ ಶ್ರವಣ್‌. 

IITian Quits MNC Job To Teach Maths To Students his inspired story goes viral in twitter akb

ಮುಂಬೈ : ಅವರು ಮನಸ್ಸು ಮಾಡಿದ್ದರೆ ತಿಂಗಳಿಗೆ ಲಕ್ಷಾಂತರ ರೂಪಾಯಿಯ ಸಂಬಳ ಎಣಿಸಬಹುದಿತ್ತು. ಎಂಎನ್‌ಸಿ  ಐಐಟಿ, ಕೋಚಿಂಗ್ ಸೆಂಟರ್‌ಗಳು ಅವರನ್ನು ಕೋಟ್ಯಂತರ ಹಣ ನೀಡಿ ಉದ್ಯೋಗಕ್ಕೆ ಕರೆಸಿಕೊಳ್ಳುವ ಉತ್ಸಾಹದಲ್ಲಿದ್ದವು. ಆದರೆ ಯಾವತ್ತು ಹಣದ ಹಿಂದೆ ಹೋಗದ ಅವರು ಬಡವರು ಶ್ರೀಮಂತರು ಎನ್ನದೇ ದೇಶದ ಪ್ರತಿಯೊಬ್ಬ  ವಿದ್ಯಾರ್ಥಿಯೂ  ಉತ್ತಮವಾದ ಗಣಿತ ಜ್ಞಾನವನ್ನು ಹೊಂದಬೇಕು ಎಂಬ ಉದ್ದೇಶದಿಂದ ಯೂಟ್ಯೂಬ್ ಚಾನೆಲ್ ವೊಂದನ್ನು ತೆರೆದು ಅದರ ಮೂಲಕ ಆಸಕ್ತ ವಿದ್ಯಾರ್ಥಿಗಳಿಗೆ ಲೆಕ್ಕದ ಜ್ಞಾನ ನೀಡುತ್ತಿದ್ದಾರೆ. ಅವರೇ ಶ್ರವಣ್‌. 

ನೋಡಲು ಕುರುಚಲು ಗಡ್ಡ ಬಿಟ್ಟುಕೊಂಡು ಸಾಮಾನ್ಯರಲ್ಲಿ ಸಾಮಾನ್ಯರಂತೆ ಇದ್ದು ಯೂಟ್ಯೂಬ್‌ನಲ್ಲಿ ಗಣಿತಕ್ಕೆ ಸಂಬಂಧಿಸಿದ ವಿಡಿಯೋ ಮಾಡುವ ಇವರು ಗುವಾಹಟಿ ಐಐಟಿಯ ಪದವೀಧರರು. ಇವರ ಬಾಲ್ಯದ ಗೆಳೆಯ ಹಾಗೂ ಟ್ವಿಟ್ಟರ್ ಬಳಕೆದಾರ ರಾಹುಲ್ ರಾಜ್‌ ಇವರ ಬಗ್ಗೆ ಬರೆದುಕೊಂಡ ನಂತರ ಇವರು ಫೇಮಸ್ ಆಗಿದ್ದು, ಇವರ ಬಗ್ಗೆಗಿನ ಟ್ವಿಟ್ಟರ್ ಪೋಸ್ಟ್  ವೈರಲ್ ಆಗಿದೆ.  ಅವರು ಟ್ವಿಟ್ಟರ್‌ನಲ್ಲಿ ಹೀಗೆ ಬರೆದುಕೊಂಡಿದ್ದಾರೆ. 'ನನ್ನ ಶಾಲಾ ದಿನಗಳಲ್ಲಿ ಗೆಳೆಯ ಶ್ರವಣ್ ಗಣಿತದಲ್ಲಿ ಬಹಳ ಬುದ್ಧಿವಂತರಾಗಿದ್ದರು. ಜೆಇಇ ಅರ್ಹತಾ ಪರೀಕ್ಷೆಯಲ್ಲಿ ಪಾಸಾದ ಅವರು ಐಐಟಿ ಗುವಾಹಟಿಯಲ್ಲಿ ಪದವಿ ಪಡೆದಿದ್ದಾರೆ.  ಹಲವು ಎಂಎನ್‌ಸಿ ಉದ್ಯೋಗಗಳನ್ನು ತೊರೆದ ಅವರು  ಗಣಿತದ ಬಗ್ಗೆ ಅಧ್ಯಯನ ಮಾಡಲು ಹಾಗೂ ಪಾಠ ಮಾಡಲು ದಾರಿಗಳನ್ನು ಹುಡುಕಿದರು. ಕೆಲವು ಕೋಚಿಂಗ್‌ ಸೆಂಟರ್‌ಗಳು ಹತ್ಯೆ ಮಾಡಿರುವಂತಹ  ಉತ್ತಮ ಗಣಿತವನ್ನು ಎಲ್ಲರಿಗೂ ಕಲಿಸಲು ಅವರು ಋಷಿಗಳಂತೆ, ಪ್ರಯಾಣಿಕರಂತೆ, ಅಲೆಮಾರಿಗಳಂತೆ, ಹುಚ್ಚರಂತೆ ಬದುಕುತ್ತಾರೆ ಎಂದು ರಾಹುಲ್ ರಾಜ್‌ ಬರೆದುಕೊಂಡಿದ್ದಾರೆ. 

ಮೈಕ್ರೋಸಾಫ್ಟ್‌ನಲ್ಲಿ ಕೆಲಸ ಕಳೆದುಕೊಂಡ ಐಐಟಿಯಲ್ಲಿ ಅಧ್ಯಯನ ಮಾಡಿದ್ದ ಭಾರತೀಯ ಟೆಕ್ಕಿ: ಟ್ವೀಟ್‌ ವೈರಲ್‌

ಶ್ರವಣ್ ಬಯಸಿದ್ದರೆ, ಭಾರತದಲ್ಲಿನ ಯಾವುದೇ IIT JEE ಕೋಚಿಂಗ್ ಕ್ಲಾಸ್‌ನಲ್ಲಿ ಅಧ್ಯಾಪಕ ಸ್ಥಾನವನ್ನು ಪಡೆಯಬಹುದಿತ್ತು ಮತ್ತು ಕೋಟಿ ಕೋಟಿಗಳನ್ನು ಗಳಿಸಲು ಪ್ರಾರಂಭಿಸಬಹುದು, ಆದರೆ ಅವರು ಈ ಕೋಚಿಂಗ್ ಸೆಂಟರ್‌ಗಳನ್ನು ಮೂಲತಃ ಒಪ್ಪುವುದಿಲ್ಲ. ಈ ಕ್ವಿಕ್ ಫಿಕ್ಸ್ ತರಗತಿಗಳು ವಿದ್ಯಾರ್ಥಿಗಳಲ್ಲಿ ಗಣಿತ ಕಲಿಯುವ ಉತ್ಸಾಹವನ್ನೇ ಕೊಂದು ಹಾಕುತ್ತವೆ ಎಂಬುದು ಅವರ ಮನಸ್ಸಿನ ತಲ್ಲಣ ಎಂದು ರಾಹುಲ್ ರಾಜ್ ಸರಣಿ ಟ್ವಿಟ್‌ಗಳ ಮೂಲಕ ಬರೆದುಕೊಂಡಿದ್ದಾರೆ. 

ಪ್ರತಿಷ್ಠಿತ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಓದಿದ ನಂತರ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಕೆಲಸ ಗಿಟ್ಟಿಸಿಕೊಂಡ ವ್ಯಕ್ತಿ ತನ್ನ ಕೆಲಸವನ್ನು ತೊರೆದು ಇಂಟರ್ನೆಟ್‌ನಲ್ಲಿ ವಿದ್ಯಾರ್ಥಿಗಳಿಗೆ ಗಣಿತವನ್ನು ಕಲಿಸಲು ನಿರ್ಧರಿಸುವಂತಹ ಇಂತಹ ನಿರ್ಧಾರಗಳನ್ನು ಎಲ್ಲರೂ ಮಾಡಲು ಸಾಧ್ಯವಿಲ್ಲ. 

ಟೀಚರ್ ಆಗಿ ಬದಲಾದ ಈ ಐಐಟೀಯನ್ ಕಳೆದ ಐದು ತಿಂಗಳ ಹಿಂದೆ  Maths with Shrawan ಎಂಬ ಯೂಟ್ಯೂಬ್ ಚಾನೆಲ್ ಶುರು ಮಾಡಿದ್ದು,  20ಕ್ಕೂ ಹೆಚ್ಚು ಗಣಿತಕ್ಕೆ ಸಂಬಂಧಿಸಿದ ವಿಡಿಯೋಗಳು ಇವರ ಚಾನೆಲ್‌ನಲ್ಲಿ ಇದೆ.  7,700 ಸಬ್‌ಸ್ಕ್ರೈಬರ್‌ಗಳನ್ನು ಇವರು ಹೊಂದಿದ್ದಾರೆ. ಈ ಸ್ಪೂರ್ತಿದಾಯಕ ಕಥೆಯು ಬಹಳಷ್ಟು ಜನರ ಗಮನವನ್ನು ಸೆಳೆದಿದೆ, ಅನೇಕರು ಈ ವ್ಯಕ್ತಿಯ ನಿರ್ಧಾರವನ್ನು ಶ್ಲಾಘಿಸಿದ್ದಾರೆ. 

ಬೆಂಗಳೂರಿನಲ್ಲಿ ಕೆಲಸಕ್ಕೆ ಸೇರಿದ 6 ತಿಂಗಳಲ್ಲೇ ಉದ್ಯೋಗದಿಂದ ವಜಾಗೊಂಡ ಐಐಟಿ ಪದವೀಧರ!

ತನ್ನ ಗೆಳೆಯನ ಬಗ್ಗೆ ಮಾಡಿದ ಈ ಪೋಸ್ಟ್ ಮಿಲಿಯನ್‌ಗೂ ಹೆಚ್ಚು ಜನ ವೀಕ್ಷಿಸಿದ್ದಾರೆ, 2500ಕ್ಕೂ ಹೆಚ್ಚು ಜನ ಈ ಪೋಸ್ಟ್‌ನ್ನು ರಿಟ್ವಿಟ್ ಮಾಡಿದ್ದಾರೆ. 18 ಸಾವಿರಕ್ಕೂ ಹೆಚ್ಚು ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.  ನಿಜಕ್ಕೂ ಈ ವ್ಯಕ್ತಿ ಅನೇಕರಿಗೆ ಸ್ಪೂರ್ತಿ ಎಂದು ಹೇಳಿದ್ದಾರೆ. ಇವರ ಬಗ್ಗೆ ತಿಳಿದಿದ್ದು, ಖುಷಿ ಆಯ್ತು, ಇವರು ನಮ್ಮಂತಹ ಅನೇಕರಿಗೆ ಸ್ಪೂರ್ತಿ ಎಂದು ಓರ್ವ ಗಣಿತಶಾಸ್ತ್ರಜ್ಞರಾಗಿರುವ ಶ್ರೀನಿವಾಸ ರಾಘವ ಎಂಬುವವರು ಹೇಳಿಕೊಂಡಿದ್ದಾರೆ. ಇವರು ನಿಜವಾದ ಗುರುಗಳು ಇವರ ಬಗ್ಗೆ ಹೆಮ್ಮೆಯಾಗುತ್ತಿದೆ ಎಂದು ಮತ್ತೊಬ್ಬರು ಟ್ವಿಟ್ಟರ್ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ. 

 

Latest Videos
Follow Us:
Download App:
  • android
  • ios