Asianet Suvarna News Asianet Suvarna News

IIT Mandi New Director: ಪ್ರೊ. ಲಕ್ಷ್ಮೀಧರ್ ಬೆಹೆರಾ ಐಐಟಿ ಮಂಡಿಯ ನೂತನ ನಿರ್ದೇಶಕ

*ಹೊಸ ನಿರ್ದೇಶಕರನ್ನು ಪಡೆದುಕೊಂಡ ಮಂಡಿ ಭಾರತೀಯ ತಾಂತ್ರಿಕ ಸಂಸ್ಥೆ 
*ಐಐಟಿ ಕಾನ್ಪುರದಲ್ಲಿದ್ದ ಪ್ರೊ.ಲಕ್ಷ್ಮೀಧರ್ ಬೆಹೆರಾ ಮಂಡಿಯ ನೂತನ ನಿರ್ದೇಶಕ
*ಪ್ರೊ. ಎ.ಕೆ.ಚತುರ್ವೇದಿ ಮಂಡಿ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫಾ ಟೆಕ್ನಾಲಜಿಯ ಸ್ಥಾಪಕ ನಿರ್ದೇಶಕ

IIT Mandi Appoints New Director Laxmidhar Behera From IIT Kanpur gow
Author
Bengaluru, First Published Jan 13, 2022, 5:35 PM IST

ನವದೆಹಲಿ:ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ (IIT) ಗಳು ದೇಶದ ಪ್ರಮುಖ ಶೈಕ್ಷಣಿಕ ಸಂಸ್ಥೆಗಳು ಎಂದು ಪ್ರಖ್ಯಾತಿ ಪಡೆದುಕೊಂಡಿವೆ. ಉತ್ಕೃಷ್ಟ ಶಿಕ್ಷಣವನ್ನು ಈ ಸಂಸ್ಥೆಗಳು ನೀಡುತ್ತವೆ. ಈ ಪೈಕಿ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ ಮಂಡಿ ( Indian Institute of Technology-IIT Mandi)ಗೆ ಹೊಸ ಮುಖ್ಯಸ್ಥರು ನೇಮಕವಾಗಿದ್ದಾರೆ. ಪ್ರೊಫೆಸರ್ ಲಕ್ಷ್ಮೀಧರ ಬೆಹೆರಾ (Prof. Laxmidhar Behera) ಅವರನ್ನು IIT Mandi ಸಂಸ್ಥೆಯ ನಿರ್ದೇಶಕರನ್ನಾಗಿ ಕೇಂದ್ರ ಸರ್ಕಾರ ನೇಮಕ ಮಾಡಿದೆ. ಪ್ರಸ್ತತು ಪ್ರೊಪೆಸರ್ ಎ.ಕೆ. ಚತುರ್ವೇದಿ (Prof A K Chaturvedi) ಅವರು ಐಐಟಿ ಮಂಡಿ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರೊಫೆಸರ್ ಬೆಹೆರಾ ಅವರು ಅತ್ಯುತ್ತಮ ಶಿಕ್ಷಣ ತಜ್ಞರಾಗಿದ್ದು, ಅವರ ಸ್ಫೂರ್ತಿದಾಯಕ ನಾಯಕತ್ವದಲ್ಲಿ ಐಐಟಿ ಮಂಡಿ ಅತ್ಯುತ್ತಮ ಬೆಳವಣಿಗೆಯನ್ನು ಸಾಧಿಸಲಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಐಐಟಿ ಮಂಡಿ ಸ್ಥಾಪಕ ನಿರ್ದೇಶಕ ಪ್ರೊಫೆಸರ್ ತಿಮೋಥಿ ಗೋನ್ಸಾಲ್ವಿಸ್ ಅವರು ಹಾಕಿಕೊಟ್ಟ ಭದ್ರ ಅಡಿಪಾಯ ಮೇಲೆ ಬೆಳವಣಿಗೆಯನ್ನ ಸಾಧಿಸಲಿದ್ದಾರೆ ಎಂದು ಪ್ರೊಫೆಸರ್ ಚತುರ್ವೇದಿ ಅವರು ಹೇಳಿದ್ದಾರೆ. 

ಐಐಟಿ ಮಂಡಿಯ ನೂತನ ನಿರ್ದೇಶಕರಾಗಿ ನೇಮಕವಾಗಿರುವ ಪ್ರೊಫೆಸರ್ ಲಕ್ಷ್ಮೀಧರ ಬೆಹೆರಾ ಅವರು ಪ್ರಸ್ತುತ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ-ಕಾನ್ಪುರ (IIT Kanpur)ದ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇಷ್ಟು ಮಾತ್ರವಲ್ಲದೇ ಪ್ರೊಫೆಸರ್ ಲಕ್ಷ್ಮೀಧರ್ ಬೆಹೆರಾ ಅವರು, ಟಾಟಾ ಕನ್ಸಲ್ಟನಿಸಿ ಸರ್ವಿಸ್ (TCS) ಫ್ಯಾಕಲಿಟಿ ಸದಸ್ಯರಾಗಿದ್ದಾರೆ.  

Multiple Universities Admission Tips: ವಿಶ್ವವಿದ್ಯಾಲಯ ಪ್ರವೇಶ ಹೇಗೆ? ಗೊಂದಲಗಳಿವೆಯೇ? ಇಲ್ಲಿವೆ ಟಿಪ್ಸ್    

ಪ್ರೊಫೆಸರ್ ಲಕ್ಷ್ಮೀಧರ್ ಬೆಹೆರಾ ಅವರು ತಮ್ಮ ಬಿಎಸ್‌ಸಿ (ಎಂಜಿನಿಯರಿಂಗ್) ಪದವಿ ಹಾಗೂ ಎಂಎಸ್‌ಸಿ (ಎಂಜಿನಿಯರಿಂಗ್) ಪದವವಿಯನ್ನು ಕ್ರಮವಾಗಿ 1988 ಹಾಗೂ 1990ರಲ್ಲಿ ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್  ಟೆಕ್ನಾಲಜಿ ರೂರ್ಕೆಲಾದಿಂದ ಪಡೆದುಕೊಂಡಿದ್ದಾರೆ. ಐಐಟಿ ದಿಲ್ಲಿಯಿಂದ ಪಿಎಚ್‌ಡಿಯನ್ನು ಸಂಪಾದಿಸಿಕೊಂಡಿದ್ದಾರೆ. ನಿರ್ದೇಶಕರಾಗಿ ನೇಮಕಗೊಂಡ ಬಗ್ಗೆ ಬೆಹೆರಾ ಹೇಳಿದರು, ಇದು ಒಂದು ದೊಡ್ಡ ಗೌರವ ಮತ್ತು ಏಕಕಾಲದಲ್ಲಿ ದೊಡ್ಡ ಜವಾಬ್ದಾರಿಯಾಗಿದೆ. ಶ್ರೇಷ್ಠತೆಯ ಸಂಸ್ಕೃತಿಯನ್ನು ರೂಢಿಸಿಕೊಳ್ಳುವ ಸಂಸ್ಥೆಯ ಸರ್ವತೋಮುಖ ಮತ್ತು ಸಮಗ್ರ ಅಭಿವೃದ್ಧಿಗೆ ನಾನು ಶ್ರಮಿಸುತ್ತೇನೆ ಎಂದಿದ್ದಾರೆ.

ತಮ್ಮ ಸಂಶೋಧನೆ ಮತ್ತು ಬೋಧನಾ ವೃತ್ತಿಯ ಕಳೆದ 26 ವರ್ಷಗಳಲ್ಲಿ ಪ್ರೊ. ಲಕ್ಷ್ಮೀಧರ್ ಬೆಹೆರಾ ಅವರು ಇಂಟೆಲಿಜೆಂಟ್ ಸಿಸ್ಟಮ್ಸ್ ಮತ್ತು ಕಂಟ್ರೋಲ್, ವಿಷನ್-ಆಧಾರಿತ ರೊಬೊಟಿಕ್ಸ್, ವೇರ್‌ಹೌಸ್ ಆಟೊಮೇಷನ್, ಬ್ರೈನ್-ಕಂಪ್ಯೂಟರ್-ಇಂಟರ್‌ಫೇಸ್ ಮತ್ತು ಡ್ರೋನ್ ಆಧಾರಿತ ಪೈಪ್‌ಲೈನ್ ಇನ್‌ಸ್ಪೆಕ್ಷನ್ ಸಿಸ್ಟಮ್‌ಗಳಂತಹ ಕ್ಷೇತ್ರಗಳಿಗೆ ಗಣನೀಯ ಕೊಡುಗೆ ನೀಡಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಯುಟ್ಯೂಬ್ ಕ್ಲಾಸ್ ನೋಡಿಯೇ ರಾಂಕ್ ಗಳಿಸಿದ ವಿದ್ಯಾರ್ಥಿ: ದೇಶದಲ್ಲಿರುವ 20 ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್‌ ಮ್ಯಾನೇಜ್‌ಮೆಂಟ್ (Indian Institute Of Management-IIT) ಸಂಸ್ಥೆಗಳಲ್ಲಿ ಸ್ನಾತಕೋತ್ತರ ಕೋರ್ಸ್‌ಗಳಿಗೆ ಪ್ರವೇಶ ಪಡೆಯಬೇಕೆಂದರೆ ಕ್ಯಾಟ್ (Common Admission Test) ಎದುರಿಸಬೇಕು. ಅಭ್ಯರ್ಥಿಗಳು ಕ್ಯಾಟ್(CAT) ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದಲ್ಲಿ  ವಿದ್ಯಾರ್ಥಿಗಳಿಗೆ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್‌ ಮ್ಯಾನೇಜ್‌ಮೆಂಟ್(IIT) ಗೆ ಪ್ರವೇಶ ನೀಡಲಾಗುತ್ತದೆ. ಕ್ಯಾಟ್ ಪರೀಕ್ಷೆಯನ್ನು ಪಾಸ್ ಮಾಡಲು ಅಭ್ಯರ್ಥಿಗಳು ವರ್ಷಗಟ್ಟಲೆ ತಯಾರಿ ನಡೆಸುತ್ತಾರೆ. ಕೋಚಿಂಗ್ ಕ್ಲಾಸ್ ಗಳಿಗೆ ಸೇರಿ ಪರೀಕ್ಷೆ ಎದುರಿಸಲು ಸಜ್ಜಾಗುತ್ತಾರೆ. ಪ್ರತಿ ವರ್ಷ ಸಾವಿರಾರು ಅಭ್ಯರ್ಥಿಗಳು ಕ್ಯಾಟ್ ಪರೀಕ್ಷೆಗಾಗಿ ಹಲವು ರೀತಿಯಲ್ಲಿ ತಯಾರಿ ನಡೆಸುತ್ತಾರೆ.ಕೆಲವರು ಈ ಪರೀಕ್ಷೆ ಎದುರಿಸುವಲ್ಲಿ ಯಶಸ್ವಿಯಾಗುತ್ತಾರೆ. ಆದ್ರೆ ಈ ಸಲ ಅಭ್ಯರ್ಥಿಯೊಬ್ಬರು, ಯಾವುದೇ ಪುಸ್ತಕಗಳನ್ನು ಓದದೆ ಕೇವಲ ಯೂಟ್ಯೂಬ್ ಪಾಠಗಳಿಂದಲೇ CAT 2021 ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಸಾಂಪ್ರದಾಯಿಕ ಮಾರ್ಗಕ್ಕಿಂತ ಭಿನ್ನವಾಗಿ ಪರೀಕ್ಷೆ ಎದುರಿಸಿ ಗೆದ್ದಿದ್ದಾರೆ. 

NEET EXAM FREE COACHING: ನೀಟ್ ಆಕಾಂಕ್ಷಿ ಅಭ್ಯರ್ಥಿಗಳಿಗೆ ಉಚಿತ ತರಬೇತಿ ನೀಡುವ ಆ್ಯಪ್‌    

CAT 2021 ಗಾಗಿ ಅಹಮದಾಬಾದ್ (Ahmedabad) ಮೂಲದ, 21 ವರ್ಷದ ಚಿರಾಗ್ ಗುಪ್ತಾ (Chirag Gupta) ಅವರ ತಯಾರಿ ತಂತ್ರವೇ ವಿಭಿನ್ನವಾಗಿತ್ತು. ಈ ವರ್ಷದ ಕ್ಯಾಟ್ ಪರೀಕ್ಷೆಯಲ್ಲಿ ಸಾಧನೆಗೈದ 9 ಮಂದಿ ಪೈಕಿ ಇವರು ಒಬ್ಬರು. ಯಾವುದೇ ಕೈಬರಹದ ಟಿಪ್ಪಣಿಗಳು ಅಥವಾ ಪುಸ್ತಕಗಳನ್ನು ಚಿರಾಗ್ ಅವಲಂಬಿಸಿರಲಿಲ್ಲ. ಬದಲಾಗಿ, ಅವರು ಸಂಪೂರ್ಣವಾಗಿ ಆನ್‌ಲೈನ್ ಕಲಿಕೆ ಅದರಲ್ಲೂ ಯುಟ್ಯೂಬ್ ಮೂಲಕ ಪರೀಕ್ಷೆಗೆ ಸಿದ್ಧರಾಗಿದ್ದರು. ಚಿರಾಗ್ ಗುಪ್ತಾ ಅವರು ಪ್ರಸ್ತುತ ಪುಣೆಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಎಜುಕೇಷನ್ ಅಂಡ್ ರಿಸರ್ಚ್ (IISER) ನಲ್ಲಿ BS-MS ಕಾರ್ಯಕ್ರಮದ ಅಂತಿಮ ವರ್ಷದಲ್ಲಿದ್ದಾರೆ. 

Follow Us:
Download App:
  • android
  • ios