ಪ್ರತಿಷ್ಠಿತ ಐಐಟಿ ಬಾಂಬೆಯಲ್ಲಿ ಮಾಂಸಾಹಾರ ಸೇವಿಸಿದ ವಿದ್ಯಾರ್ಥಿಗೆ ಅವಮಾನ! ಭುಗಿಲೆದ್ದ ಆಕ್ರೋಶ
ಐಐಟಿ ಬಾಂಬೆಯಲ್ಲಿ ಹಾಸ್ಟೆಲ್ ಕ್ಯಾಂಟೀನ್‌ನಲ್ಲಿ ಮಾಂಸಾಹಾರ ಮತ್ತು ಸಸ್ಯಾಹಾರ ವಿವಾದ ಎದ್ದಿದ್ದು, ಮಾಂಸಾಹಾರ ಸೇವಿಸಿದ ವಿದ್ಯಾರ್ಥಿ ಅವಮಾನಿಸಿರುವ ಬಗ್ಗೆ ವರದಿಯಾಗಿದೆ.
ಮುಂಬೈ (ಜು.31): ಪ್ರತಿಷ್ಠಿತ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಬಾಂಬೆಯಲ್ಲಿ ಹಾಸ್ಟೆಲ್ ಕ್ಯಾಂಟೀನ್‌ನಲ್ಲಿ ಮಾಂಸಾಹಾರ ಸೇವಿಸಿದ್ದಕ್ಕಾಗಿ ವಿದ್ಯಾರ್ಥಿಯೊಬ್ಬನಿಗೆ ಮತ್ತೊಬ್ಬ ವಿದ್ಯಾರ್ಥಿ ಅವಮಾನ ಮಾಡಿದ ಘಟನೆ ವರದಿಯಾಗಿದ್ದು, ಇದು ಸಸ್ಯಾಹಾರ ಮತ್ತು ಮಾಂಸಹಾರ ಎಂಬ ವಿವಾದವೊಂದು ಭುಗಿಲೆದ್ದಿದೆ. ಕಳೆದ ವಾರ ಹಾಸ್ಟೆಲ್ 12 ರ ಕ್ಯಾಂಟೀನ್‌ನಲ್ಲಿ ಈ ಘಟನೆ ಸಂಭವಿಸಿದೆ ಎಂದು ವಿದ್ಯಾರ್ಥಿ ಸಮೂಹವಾದ APPSC ಹೇಳಿದೆ.
ಕೆಲವು ವಿದ್ಯಾರ್ಥಿಗಳು ಕ್ಯಾಂಟೀನ್ ಗೋಡೆಗಳ ಮೇಲೆ “ಸಸ್ಯಾಹಾರಿಗಳಿಗೆ ಮಾತ್ರ ಇಲ್ಲಿ ಕುಳಿತುಕೊಳ್ಳಲು ಅವಕಾಶವಿದೆ ಎಂದು ಘೋಷಿಸುವ ಪೋಸ್ಟರ್‌ಗಳನ್ನು ಹಾಕಿದ್ದರು ಮತ್ತು ಅವರು ಮಾಂಸಾಹಾರಿ ಆಹಾರಕ್ಕೆ ಆದ್ಯತೆ ನೀಡುವವರನ್ನು ಸ್ಥಳ ಖಾಲಿ ಮಾಡುವಂತೆ ಒತ್ತಾಯಿಸಿದ್ದು, ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ವಿದ್ಯಾರ್ಥಿ ಸಮೂಹವಾದ ಅಂಬೇಡ್ಕರ್ ಪೆರಿಯಾರ್ ಫುಲೆ ಸ್ಟಡಿ ಸರ್ಕಲ್ (APPSC) ಪ್ರತಿನಿಧಿಗಳು ಘಟನೆ ಖಂಡಿಸಿ, ಹಾಸ್ಟೆಲ್ 12 ರ ಕ್ಯಾಂಟೀನ್‌ನಲ್ಲಿ ಸಸ್ಯಾಹಾರಿಗಳು ಮಾತ್ರ ಎಂಬ ಪೋಸ್ಟರ್‌ಗಳನ್ನು ಹರಿದು ಹಾಕಿ ಪ್ರತಿಭಟಿಸಿದರು.
ಕೇವಲ 3 ವರ್ಷದಲ್ಲಿ ದೇಶದಲ್ಲಿ 13 ಲಕ್ಷ ಮಹಿಳೆಯರು ನಾಪತ್ತೆ, ಕರ್ನಾಟಕದಲ್ಲಿ 40 ಸಾವಿರ
ಮೂರು ತಿಂಗಳ ಹಿಂದೆ, ವಿದ್ಯಾರ್ಥಿಗಳು ಸಲ್ಲಿಸಿದ ಆರ್‌ಟಿಐ ಪ್ರಶ್ನೆಯಲ್ಲಿ ಸಂಸ್ಥೆಯು ಅಧಿಕೃತ ಆಹಾರ ಪ್ರತ್ಯೇಕ ನೀತಿಯನ್ನು ಹೊಂದಿಲ್ಲ ಎಂದು ಬಹಿರಂಗಪಡಿಸಿತು. ಆದಾಗ್ಯೂ, ವಿದ್ಯಾರ್ಥಿಗಳ ಆಹಾರದ ಆಯ್ಕೆಯ ಆಧಾರದ ಮೇಲೆ ವಿವಿಧ ಆಸನ ವ್ಯವಸ್ಥೆಗಳನ್ನು ಸಂಸ್ಥೆಯಲ್ಲಿ ಇನ್ನೂ ಅಭ್ಯಾಸ ಮಾಡಲಾಗುತ್ತಿದೆ ಎಂದು APPSC ಆರೋಪಿಸಿದೆ.
ಕ್ಯಾಂಟೀನ್ ಗೋಡೆಗಳ ಮೇಲೆ ಹಾಕಲಾಗಿರುವ ಪೋಸ್ಟರ್ ಫೋಟೋ ವೈರಲ್ ಆಗುತ್ತಿದ್ದಂತೆ ಪ್ರತಿಕ್ರಿಯಿಸಿದ ಐಐಟಿ ಬಾಂಬೆಯ ಅಧಿಕಾರಿಯೊಬ್ಬರು, "ಈ ರೀತಿಯ ಪೋಸ್ಟರ್ ಅನ್ನು ಯಾರು ಹಾಕಿದ್ದಾರೆ ಎಂದು ಗೊತ್ತಿಲ್ಲ. ವಿವಿಧ ರೀತಿಯ ಆಹಾರವನ್ನು ಸೇವಿಸುವವರಿಗೆ ಇಲ್ಲಿ ನಿಗದಿತ ಸ್ಥಳವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಎನ್‌ಐಎ ತನಿಖೆ ವೇಳೆ ಶಾಕ್, ಮಂಗ್ಳೂರು ಕುಕ್ಕರ್ ಬಾಂಬ್ ಕಿಂಗ್‌ಪಿನ್ ಬೆಳಗಾವಿ ಲಷ್ಕರ್
ಈ ವಿಷಯವನ್ನು ಹಾಸ್ಟೆಲ್‌ನ ಪ್ರಧಾನ ಕಾರ್ಯದರ್ಶಿಗೆ ತಿಳಿಸಿದಾಗ, ಅವರು ತಕ್ಷಣವೇ ಕ್ಯಾಂಟೀನ್‌ನಲ್ಲಿ ಸಸ್ಯಾಹಾರ ಆಹಾರ ವಿತರಣೆಗೆ ಬೇರೆಯೇ ಕೌಂಟರ್ ಇದೆ ಆದರೆ ಆಹಾರ ಸೇವಿಸುವವರಿಗೆ ಗೊತ್ತುಪಡಿಸಿದ ಆಸನ ಪ್ರದೇಶವಿಲ್ಲ. ಆಹಾರ ಪಡೆದುಕೊಂಡ ಮೇಲೆ ಎಲ್ಲಿ ಬೇಕಾದರೂ ಕುಳಿತುಕೊಳ್ಳಬಹುದು. ಇಂತಹ ನಡವಳಿಕೆ ಸ್ವೀಕಾರಾರ್ಹವಲ್ಲ. ನಿರ್ದಿಷ್ಟ ಸಮುದಾಯಕ್ಕೆ ಮೀಸಲಾಗಿದೆ ಎಂಬ ಕಾರಣಕ್ಕಾಗಿ ಯಾವುದೇ ವಿದ್ಯಾರ್ಥಿಯನ್ನು ಆ ಸ್ಥಳದಿಂದ ನಿಷೇಧಿಸುವ ಹಕ್ಕನ್ನು ಯಾರೂ ಹೊಂದಿಲ್ಲ. ಘಟನೆಗಳು ಮರುಕಳಿಸಿದರೆ, ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿ ಎಲ್ಲಾ ವಿದ್ಯಾರ್ಥಿಗಳಿಗೆ ಇಮೇಲ್ ಕಳುಹಿಸಿದರು ಜೊತೆಗೆ ಕ್ಯಾಂಟೀನ್‌ನಲ್ಲಿರುವಾಗ ಇತರರ ಆಹಾರದ ಆದ್ಯತೆಗಳನ್ನು ಗೌರವಿಸುವಂತೆ ಪ್ರಧಾನ ಕಾರ್ಯದರ್ಶಿ ವಿದ್ಯಾರ್ಥಿಗಳಿಗೆ ಖಡಕ್ ಸೂಚನೆ ನೀಡಿದರು.