ಐಬಿಎಂ, ಕೇಂಬ್ರಿಜ್ ಯೂನಿವರ್ಸಿಟಿ ಮತ್ತು ಎಸ್-ವ್ಯಾಸ ವಿಶ್ವವಿದ್ಯಾಲಯಗಳು ಸೇರಿ ೨೦೨೫-೨೬ರ ಶೈಕ್ಷಣಿಕ ವರ್ಷದಿಂದ ಎಂಬಿಎ, ಎಂಸಿಎ ಮತ್ತು ಎಂಎಸ್ಸಿ ಕಂಪ್ಯೂಟರ್ ಸೈನ್ಸ್ ಪಠ್ಯಕ್ರಮಗಳಿಗೆ ಐಬಿಎಂ ಜಾಗತಿಕ ಪ್ರವೇಶ ಪರೀಕ್ಷೆ (IBM GET) ಆರಂಭಿಸಿವೆ. ಈ ಪರೀಕ್ಷೆಯು ವಿದ್ಯಾರ್ಥಿಗಳಿಗೆ ಉದ್ಯೋಗ ಸಿಗಲಿದೆ.
ಬೆಂಗಳೂರು: ತಂತ್ರಜ್ಞಾನ ದಿಗ್ಗಜ ಐಬಿಎಂ, ಕೇಂಬ್ರಿಜ್ ಯೂನಿವರ್ಸಿಟಿ ಪ್ರೆಸ್ & ಅಸೆಸ್ಮೆಂಟ್ ಮತ್ತು ಎಸ್-ವ್ಯಾಸ ಡೀಮ್ಡ್-ಟು-ಬಿ ವಿಶ್ವವಿದ್ಯಾಲಯದ ಸಹಭಾಗಿತ್ವದಲ್ಲಿ, 2025–26 ಶೈಕ್ಷಣಿಕ ವರ್ಷದ ಎಂ.ಬಿ.ಎ., ಎಂ.ಸಿಎ ಮತ್ತು ಎಂ.ಎಸ್ಸಿ ಕಂಪ್ಯೂಟರ್ ಸೈನ್ಸ್ ಪಠ್ಯಕ್ರಮಗಳಿಗೆ ಪ್ರವೇಶಕ್ಕಾಗಿ ಐಬಿಎಂ ಗ್ಲೋಬಲ್ ಎಂಟ್ರನ್ಸ್ ಟೆಸ್ಟ್ (IBM GET) ಅನ್ನು ಪ್ರಾರಂಭಿಸಲಾಗಿದೆ. ಈ ಪ್ರವೇಶ ಪರೀಕ್ಷೆಯನ್ನು ಆಗಸ್ಟ್ 17 ರಂದು ಆನ್‌ಲೈನ್‌ನಲ್ಲಿ ನಡೆಸಲಾಗುತ್ತದೆ.
Q²D ಮಾದರಿಯಲ್ಲಿ ಕೋರ್ಸ್‌ಗಳು: ಕೈಗಾರಿಕಾ ಸಿದ್ಧತೆಯ ಮೇಲ್ಮಟ್ಟ
ಈ ಪಠ್ಯಕ್ರಮಗಳನ್ನು ಐಬಿಎಂನ Q²D ಮಾದರಿಯಲ್ಲಿ (ಕ್ವಾಂಟಮ್ ಕ್ವೋಷಿಯಂಟ್ ಡಿಕೋಡ್) ನೀಡಲಾಗುತ್ತದೆ. ಇದರಲ್ಲಿ ತಾಂತ್ರಿಕ ತರಬೇತಿ, ಇಂಗ್ಲಿಷ್ ಭಾಷಾ ನೈಪುಣ್ಯ ವೃದ್ಧಿ, ಮೃದು ಕೌಶಲ್ಯಗಳು ಹಾಗೂ ವಾಸ್ತವಿಕ ಯೋಜನೆಗಳನ್ನೊಳಗೊಂಡ ಸಮಗ್ರ ಅಭ್ಯಾಸವನ್ನು ಒದಗಿಸಲಾಗುತ್ತದೆ. ಕೋರ್ಸ್ ಪೂರ್ಣಗೊಳಿಸಿದವರಿಗೆ ಎಸ್ ವ್ಯಾಸ ವಿಶ್ವವಿದ್ಯಾಲಯದಿಂದ ಪ್ರಮಾಣಪತ್ರಗಳೊಂದಿಗೆ ಐಬಿಎಂ ಬ್ಯಾಡ್ಜ್ ಕೂಡ ನೀಡಲಾಗುತ್ತದೆ.
ಪ್ರವೇಶ ಪರೀಕ್ಷೆಯ ಶ್ರೇಣಿಗಳು ಮತ್ತು ಉದ್ದೇಶ
ಈ ಪರೀಕ್ಷೆಯು ಅಭ್ಯರ್ಥಿಗಳ ವಿಜ್ಞಾನ ಸಾಮರ್ಥ್ಯ, ತಾರ್ಕಿಕ ಚಿಂತನ ಹಾಗೂ ಇಂಗ್ಲಿಷ್ ಭಾಷಾ ಪ್ರಾವೀಣ್ಯತೆ ಮೇಲೆ ಕೇಂದ್ರೀಕೃತವಾಗಿರುತ್ತದೆ. ಕೇಂಬ್ರಿಜ್ ಯೂನಿವರ್ಸಿಟಿಯ ಸಹಭಾಗಿತ್ವ, ಇಂಗ್ಲಿಷ್ ಮೌಲ್ಯಮಾಪನದಲ್ಲಿ ಜಾಗತಿಕ ಗುಣಮಟ್ಟವನ್ನು ಖಚಿತಪಡಿಸುತ್ತದೆ.
ಐಬಿಎಂನ ವ್ಯವಹಾರ ಅಭಿವೃದ್ಧಿ ಮತ್ತು ಶೈಕ್ಷಣಿಕ ಸಂಬಂಧದ ವಿಭಾಗದ ಮುಖ್ಯಸ್ಥ ಹರಿ ರಾಮ ಸುಬ್ರಮಣಿಯನ್ ಮಾತನಾಡುತ್ತಾ, “ಅಭ್ಯರ್ಥಿಗಳನ್ನು ಕೇವಲ ಆಯ್ಕೆಮಾಡುವುದು ನಮ್ಮ ಗುರಿಯಲ್ಲ. ಅವರ ಸಾಮರ್ಥ್ಯಗಳನ್ನು ಗುರುತಿಸಿ, ಉದ್ಯೋಗ, ಸಂಶೋಧನೆ ಅಥವಾ ಉದ್ಯಮಶೀಲತೆಗೆ ತಕ್ಕ ಮಾರ್ಗದರ್ಶನ ನೀಡುವುದು ಮುಖ್ಯವಾದ ಉದ್ದೇಶ ಎಂದು ಹೇಳಿದರು.
ಉದ್ಯಮ ಮೌಲ್ಯಮಾಪನ ಮತ್ತು ತರಬೇತಿಯು ನಿರಂತರ
ವಿದ್ಯಾರ್ಥಿಗಳಿಗೆ ಕೋರ್ಸ್ ಅವಧಿಯಲ್ಲಿಯೇ ಕೈಗಾರಿಕಾ ತಜ್ಞರಿಂದ ನಿರಂತರ ಮೌಲ್ಯಮಾಪನ ನಡೆಯಲಿದೆ. ತರಬೇತಿ ನಂತರ ವಿದ್ಯಾರ್ಥಿಗಳನ್ನು ಉದ್ಯೋಗ, ಸಂಶೋಧನೆ ಅಥವಾ ಸ್ಟಾರ್ಟ್-ಅಪ್ ಗುರಿಯಾದ್ರು ಒಂದು ಮಾರ್ಗದ ಕಡೆಗೆ ಸ್ಪಷ್ಟವಾಗಿ ಮಾರ್ಗದರ್ಶನ ನೀಡಲಾಗುತ್ತದೆ.
