ರಾಯಚೂರು (ಜ.31):  ಶಾಲಾ ಶುಲ್ಕ ಕಡಿತ ಬೆನ್ನಲ್ಲೇ ಶುರುವಾಯ್ತು ಸರ್ಕಾರಕ್ಕೆ ಮತ್ತೊಂದು ಟೆನ್ಷನ್.  ಕಲ್ಯಾಣ ಕರ್ನಾಟಕ ಭಾಗದ 4500 ಶಾಲೆಗಳು ಬಂದ್ ಆಗುವ ಸಾಧ್ಯತೆ ಇದೆ. 
ಶಾಲೆ ಬಂದ್ ಆದ್ರೆ 4 .5 ಲಕ್ಷ ಮಕ್ಕಳು ಶಿಕ್ಷಣದಿಂದ ವಂಚಿತವಾಗುವ ಸಾಧ್ಯತೆ ಹೆಚ್ಚಾಗಿದೆ.

ಸುಮಾರು 7 ವರ್ಷಗಳಿಂದ ಶೈಕ್ಷಣಿಕ ಅಭಿವೃದ್ಧಿಗೆ ಮೀಸಲಿಟ್ಟ ಹಣ ಬಳಸಿಕೊಳ್ಳದೆ ಹಣ ವಾಪಸ್ ಆಗಿದ್ದು, ಅನುದಾನ ನಂಬಿದ್ದ 4500 ಶಾಲೆಗಳ ಶೈಕ್ಷಣಿಕ ಅಭಿವೃದ್ಧಿ ಕುಂಠಿತವಾಗಿದ್ದು, ಕಲಬರುಗಿ, ರಾಯಚೂರು, ಬೀದರ್, ಯಾದಗಿರಿ ಹಾಗೂ ಬಳ್ಳಾರಿ ಭಾಗದ ಶಾಲೆಗಳು ಮುಚ್ಚುವ ಸ್ಥಿತಿಗೆ ಬಂದಿವೆ. 

9 ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಮಹತ್ವದ ಸುತ್ತೋಲೆ ಹೊರಡಿಸಿದ ಶಿಕ್ಷಣ ಇಲಾಖೆ ...

ಈಗಾಗ್ಲೇ ಈ ಭಾಗದ ಸಾಕಷ್ಟು ಮಕ್ಕಳು ಶಾಲೆಯಿಂದ ಹೊರಗುಳಿದಿರುವ ಮಾಹಿತಿ ಇದ್ದು, ಶಿಕ್ಷಣ ಇಲಾಖೆ ಬಳಿ ಇರೋ‌ ಮಾಹಿತಿ ಪ್ರಕಾರ ಬಾಲ ಕಾರ್ಮಿಕರಯ ಬಾಲ್ಯ ವಿವಾಹ ಹೆಚ್ಚಾಗುತ್ತಿವೆ,  ದುಶ್ಚಟಗಳಿಗೂ ಮಕ್ಕಳು ಒಳಾಗುತ್ತಿದ್ದಾರೆ ಎನ್ನುವ ಮಾಹಿತಿ ಇದೆ. 

ಈ ನಿಟ್ಟಿನಲ್ಲಿ ಸರ್ಕಾರಕ್ಕೆ ಕಲ್ಯಾಣ ಕರ್ನಾಟಕದ ಖಾಸಗಿ ಶಾಲೆಗಳ ಒಕ್ಕೂಟ ಹಾಗೂ ರುಪ್ಸಾ ಹಲವು ಬೇಡಿಕೆಗಳನ್ನು ಮುಂದಿಟ್ಟಿದೆ. 

ಕನ್ನಡ ಮಾಧ್ಯಮದಲ್ಲಿರುವ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸುವುದು. 371 ಜೆ ಅಡಿಯಲ್ಲಿರುವ ಶೈಕ್ಷಣಿಕ ಅಭಿವೃದ್ಧಿ ಗೆ ಅನುದಾನ ಬಳಕೆ ಮಾಡಿಕೊಳ್ಳುವುದು. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಸಮಿತಿಯ ಬೋರ್ಡ್ ಗೆ ಅಧ್ಯಕ್ಷ ನೇಮಕ ಮಾಡುವುದು. ಬೋರ್ಡ್ ಗೆ ಸದಸ್ಯರನ್ನ ನೇಮಕ‌ ಮಾಡುವುದು. 

ಆದ್ರೆ ಇದುವರೆಗೂ ಬೋರ್ಡ್ ಗೆ ಸದಸ್ಯರನ್ನು ನೇಮಕ ಮಾಡಿಲ್ಲ, ಸರ್ಕಾರಿ ಹಾಗೂ ಖಾಸಗಿ ಶಾಲೆಗಳ ತಾರತಮ್ಯ ಮಾಡಬಾರದು. ಬೇಡಿಕೆ ಈಡೇರಿಸಲು ಸರ್ಕಾರಕ್ಕೆ 10 ದಿನಗಳ ಗಡವು
ರುಪ್ಸಾ ಅಡಿಯಲ್ಲಿ ಬರುವ ಕಲ್ಯಾಣ ಕರ್ನಾಟಕ ಖಾಸಗಿ ಶಾಲೆಗಳ ಒಕ್ಕೂಟದಿಂದ ಸರ್ಕಾರಕ್ಕೆ ಮನವಿ ಮಾಡಲಾಗಿದ್ದು, ಬೇಡಿಕೆ ಈಡೇರದಿದ್ದಲ್ಲಿ ಶಾಲೆಗಳು ಸಂಪೂರ್ಣ ಬಂದ್ ಆಗಲಿವೆ ಎಂದು ಹೇಳಿದ್ದು ಶಾಲೆಗಳನ್ನ ಮುಚ್ಚುವ ನಿರ್ಧಾರಕ್ಕೆ ಬರಲಾಗಿದೆ.