ಬೆಂಗಳೂರು, (ಜ.30): ಕೊರೋನಾ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಶೈಕ್ಷಣಿಕ ಕ್ಷೇತ್ರ ಇದೀಗ ಹಂತ-ಹಂತವಾಗಿ ಶುರುವಾಗುತ್ತಿದೆ. ಮೊದಲ ಹಂತದಲ್ಲಿ ಈಗಾಗಲೇ ಎಸ್‌ಎಸ್ಎಲ್‌ಸಿ ಹಾಗೂ ಪಿಯುಸಿ ಪದವಿ ಕಾಲೇಜುಗಳನ್ನು ಪ್ರಾರಂಭಿಸಲಾಗಿದೆ.
 
ಇದೀಗ ಫೆಬ್ರವರಿ 1ರಿಂದ 9-12ನೇ ತರಗತಿಗಳಿ​ಗೆ ಫುಲ್​ ಡೇ ಕ್ಲಾಸ್​ಗಳು ನಡೆಯಲಿವೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕೃತ ಸುತ್ತೋಲೆ ಹೊರಡಿಸಿದೆ.

ಖಾಸಗಿ ಶಾಲೆಗಳ ಶುಲ್ಕ ನಿಗದಿಪಡಿಸಿ ಆದೇಶ ಹೊರಡಿಸಿದ ಸರ್ಕಾರ...!

ಸೋಮವಾರದಿಂದ ಶನಿವಾರದವರೆಗೆ ಪೂರ್ಣ ತರಗತಿಗಳು ಇರುತ್ತವೆ. ಬೆಳಗ್ಗೆ 10 ರಿಂದ ಸಂಜೆ 4.30ರವರೆಗೆ ಪೂರ್ಣ ತರಗತಿ ಇರಲಿವೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ. ಈ ಮೊದಲ ಆಫ್‌ ಡೇ ತರಗತಿಗಳು ನಡೆಯುತ್ತಿದ್ದವು.

ಸುತ್ತೋಲೆಯ ಮುಖ್ಯಾಂಶಗಳು
* ಬೆಳಗ್ಗೆ 10 ರಿಂದ ಸಂಜೆ 4.30ರವರೆಗೆ ಪೂರ್ಣ ತರಗತಿ
* 6 ರಿಂದ 8ನೇ ಕ್ಲಾಸ್​​ವರೆಗೆ ವಿದ್ಯಾಗಮ ತರಗತಿ
* ಬೆಳಗ್ಗೆ 10 ರಿಂದ 12ಗಂಟೆವರೆಗೆ ವಿದ್ಯಾಗಮ ತರಗತಿ
* ಶಾಲೆಗೆ ಬರಲು ಪೋಷಕರ ಅನುಮತಿ ಪತ್ರ ಕಡ್ಡಾಯ
* ಅನುಮತಿ ಪತ್ರದಲ್ಲಿ ಕೊರೊನಾ ನೆಗೆಟಿವ್ ದೃಢೀಕರಿಸಬೇಕು
* ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಹಾಜರಾತಿ ಕಡ್ಡಾಯವಿಲ್ಲ