ಪಿಯು ಅಡ್ಮಿಷನ್‌ಗೆ ಭಾರೀ ಡಿಮ್ಯಾಂಡ್: ಬ್ಲಾಕ್‌ನಲ್ಲಿ ಸೀಟು ಮಾರಾಟ..!
* ಕಾಮರ್ಸ್ ವಿಭಾಗದ ಸಿಇಬಿಎ ಕೋರ್ಸ್ ಭಾರೀ ಬೇಡಿಕೆ
* ಫಲಿತಾಂಶ ಬರುವ ಮುಂಚಿತವಾಗಿ ಸೀಟು ಬ್ಲಾಕ್
* ಡಿಸ್ಟಿಂಕ್ಷನ್ ಪಡೆದ್ರು ವಿದ್ಯಾರ್ಥಿಗಳು ಬಯಸಿದ ಕಡೆ ಸೀಟು ಸಿಗ್ತಿಲ್ಲ
ವರದಿ -ನಂದೀಶ್ ಮಲ್ಲೇನಹಳ್ಳಿ, ಏಷ್ಯಾನೆಟ್ ಸುವರ್ಣ, ಬೆಂಗಳೂರು
ಬೆಂಗಳೂರು(ಮೇ.28): ರಾಜ್ಯ ಪಠ್ಯಕ್ರಮದ 10 ನೇ ತರಗತಿ ಫಲಿತಾಂಶ ಈಭಾರಿ ದಾಖಲೆ ಮಟ್ಟದಲ್ಲಿ ಫಲಿತಾಂಶ ಬಂದಿದೆ.ಹೀಗಾಗಿ ಕಳೆದ ವರ್ಷಕ್ಕಿಂತಲೂ ಈ ವರ್ಷ ಪಿಯುಸಿ ದಾಖಲಾತಿಗೆ ಸಾಕಷ್ಟು ಡಿಮ್ಯಾಂಡ್ ಹೆಚ್ಚಿದೆ. ಅದರಲ್ಲೂ ಕಾಮರ್ಸ್ ವಿಭಾಗದ ಸಿಇಬಿಎ ಕೋರ್ಸ್ ಭಾರೀ ಬೇಡಿಕೆ ಇದೆ. ಹೀಗಾಗಿ ಫಲಿತಾಂಶ ಬರುವ ಮುಂಚಿತವಾಗಿ ಸೀಟುಗಳನ್ನ ಬ್ಲಾಕ್ ಮಾಡಲಾಗುತ್ತಿದೆ. ಹೆಬ್ಬಾಳ ಕೆಂಪಾಪುರದಲ್ಲಿರುವ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಫಲಿತಾಂಶ ಬರುವ ಮುನ್ನವೇ ಸೀಟು ಬುಕ್ಕಿಂಗ್ ಮಾಡಿ, ಇದೀಗ ಅಪ್ಲಿಕೇಶನ್ ಇಲ್ಲ ಅಂತ ಆಡಳಿತ ಮಂಡಳಿ ಹೇಳಿದೆ.
ಇನ್ನೊಂದು ಕಡೆ ಸಿಬಿಎಸ್ಇ ಹಾಗೂ ICSE 10 ನೇ ತರಗತಿ ಫಲಿತಾಂಶ ಬಂದಿಲ್ಲ. ಮುಂಚಿತವಾಗಿ ಕಾಲೇಜು ಆಡಳಿತ ಮಂಡಳಿ ಹಣವಂತರಿಗೆ ಸೀಟು ಮಾರಾಟ ಮಾರಾಟ ಮಾಡುತ್ತಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ. ಆದ್ರೆ ಈ ಬಾರಿ ಅತಿ ಹೆಚ್ಚು ಅಂಕ ಪಡೆದ್ರು ಸೀಟು ಸಿಕ್ತಿಲ್ಲ. ಡಿಸ್ಟಿಕ್ಷಂನ್ ಬಂದ್ರೂ ಪಿಯುಗೆ ಸೀಟು ಕೊಡ್ತಿಲ್ಲ. ಪಿಯುಗೆ ಅಡ್ಮಿಷನ್‌ಗೆ ಹೋದ ಪೋಷಕರಿಗೆ ಪ್ರೆಸಿಡೆನ್ಸಿ ಕಾಲೇಜು ಪ್ರಾಂಶುಪಾಲ ನಾರಾಯಣಸ್ವಾಮಿ ಉದ್ಧಟತನದಿಂದ ಸೀಟು ಇಲ್ಲ ಹೋಗಿ ಅಂತ ಕಳುಹಿಸುತ್ತಿದ್ದಾರೆ. ಹೀಗಾಗಿ ಕಾಲೇಜು ವಿರುದ್ಧ ಶಿಕ್ಷಣ ಇಲಾಖೆಗೆ ಕೆಲ ಪೋಷಕರು ದೂರು ನೀಡಿದ್ದಾರೆ.
ರೋಹಿತ್ ಚಕ್ರತೀರ್ಥ ಶೈಕ್ಷಣಿಕ ಅರ್ಹತೆ ಬಹಿರಂಗ, ಸಚಿವ ನಾಗೇಶ್ ಸುಳ್ಳು ಹೇಳಿದ್ರಾ?
ಈ ಬಗ್ಗೆ ಮಾತನಾಡಲು ಪ್ರೆಸಿಡೆನ್ಸಿ ಕಾಲೇಜು ಪ್ರಾಂಶುಪಾಲ ನಾರಾಯಣಸ್ವಾಮಿ ನಿರಾಕರಿಸಿದ್ದಾರೆ. ತಾಂತ್ರಿಕ ಕಾರಣಗಳಿಂದ ನಾವು ಅಪ್ಲಿಕೇಶನ್ ಕೊಡ್ತಿಲ್ಲ. ಈಗಾಗಲೇ ಪಿಯು ಬೋರ್ಡ್‌ಗೆ ಸಮಸ್ಯೆ ಬಗೆಹರಿಸುವಂತೆ ಕೇಳಿದ್ದೇವೆ ಅಂತ ಪ್ರಾಂಶುಪಾಲ ನಾರಾಯಣಸ್ವಾಮಿ ಹೇಳಿದ್ದಾರೆ.
ಆದ್ರೆ ಪೋಷಕರು ವಿಚಾರಿಸಿದ್ರೆ ಈಗಾಗಲೇ ಅಪ್ಲಿಕೇಶನ್ ಕ್ಲೋಸ್ ಆಗಿದೆ ಕಳೆದ ಮೂರು ತಿಂಗಳ ಹಿಂದೆಯೇ ಸಿಇಬಿಎ ಕೋರ್ಸ್ ಬುಕ್ಕಿಂಗ್ ಮಾಡಿಕೊಳ್ಳಲಾಗಿದೆ ಅನ್ನೋ ಮಾಹಿತಿಯನ್ನ ಕೊಡ್ತಿದ್ದಾರೆ.
ಆದ್ರೆ ಈ ವರ್ಷ ಡಿಸ್ಟಿಂಕ್ಷನ್ ಪಡೆದ್ರು ವಿದ್ಯಾರ್ಥಿಗಳು ಬಯಸಿದ ಕಡೆ ಸೀಟು ಸಿಗ್ತಿಲ್ಲ ಅನ್ನೋ ಆತಂಕಕ್ಕೆ ಪೋಷಕರು ಒಳಗಾಗಿದ್ದಾರೆ.ಮತ್ತೊಂದು ಅತಿ ಹೆಚ್ಚು ಅಂಕ ಪಡೆದ್ರು ಇಷ್ಟಪಟ್ಟ ಕಾಲೇಜು ಸಿಗ್ತಿಲ್ಲ ಅನ್ನೋ ಬೇಸರದಲ್ಲಿ ವಿದ್ಯಾರ್ಥಿಗಳಿದ್ದಾರೆ.ಆದ್ರೆ ಇದೆಕ್ಕೆಲ್ಲಾ ಪ್ರಮುಖ ಕಾರಣ ಈ ಬಾರಿ ಹೆಚ್ಚು ಫಲಿತಾಂಶ ಬಂದಿರೋದು.
ಕೆಲ ಪ್ರತಿಷ್ಟಿತ ಕಾಲೇಜುಗಳಲ್ಲಿ ಡಿಮ್ಯಾಂಡ್ ಇರುವ ಕೋರ್ಸ್ ಗಳ ಸೀಟುಗಳನ್ನ ಹೆಚ್ಚು ಹಣಕ್ಕೆ ಮಾರಾಟ ಮಾಡಿಕೊಳ್ಳುತ್ತಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದ್ದು, ಶಿಕ್ಷಣ ಇಲಾಖೆ ಇಂತ ಕಾಲೇಜುಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಪೋಷಕರು ಆಗ್ರಹಿಸಿದ್ದಾರೆ.