ಸರ್ಕಾರಿ ಶಾಲೆಗೆ ಅಡ್ಮಿಶನ್ ಆಗಿರುವ ಟಾಪ್ ಜಿಲ್ಲೆಯಲ್ಲಿ ಮಕ್ಕಳಿಗಿಲ್ಲ ತರಗತಿ ಕೊಠಡಿ!
- ರಾಜ್ಯದಲ್ಲೇ ಅತಿ ಹೆಚ್ಚು ಸರ್ಕಾರಿ ಶಾಲೆಗಳಿಗೆ ಅಡ್ಮಿಶನ್ ಆಗಿರುವ ಜಿಲ್ಲೆಗಳಲ್ಲಿ ರಾಮನಗರ ಫಸ್ಟ್
- ಕೊಠಡಿಗಳಿಲ್ಲದೇ ಹೊರಗಡೆ ಕುಳಿತು ಪಾಠ ಕೇಳುವ ಮಕ್ಕಳು
ವರದಿ : ಜಗದೀಶ್ ಏಷ್ಯಾನೆಟ್ ಸುವರ್ಣನ್ಯೂಸ್
ರಾಮನಗರ (ಜೂನ್ 23): ಸರ್ಕಾರಿ ಶಾಲೆಗಳೆಂದ್ರೆ ಮೂಗು ಮುರಿಯುವವರ ಸಂಖ್ಯೆಯೇ ಹೆಚ್ಚು, ಖಾಸಗಿ ಶಾಲೆಗಳ ಹಾವಳಿಯ ನಡುವೆ, ಸರ್ಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೇರಿಸಿದ್ದಾರೆ. ಆದ್ರೆ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳಿಲ್ಲದೇ ವಿಧ್ಯಾರ್ಥಿಗಳು ಪ್ರತಿನಿತ್ಯ ತೊಂದರೆ ಅನುಭವಿಸ್ತಿದ್ದಾರೆ.
ಚಿಕ್ಕ ಚಿಕ್ಕ ಕೊಠಡಿಗಳಲ್ಲಿ ಪಾಠ ಕೇಳ್ತಿರುವ ಮಕ್ಕಳು, ಮತ್ತೊಂದೆಡೆ ಬಿರುಕು ಬಿಟ್ಟಿರುವ ಗೋಡೆಗಳು, ಕೊಠಡಿ ಇಲ್ಲದೇ ಹೊರಗಡೆ ಕುಳಿತು ಪಾಠ ಕೇಳ್ತಿರೋ ವಿದ್ಯಾರ್ಥಿಗಳು ಇವೆಲ್ಕಾ ದೃಶ್ಯಗಳು ಕಂಡು ಬಂದಿದ್ದು, ರಾಮನಗರ ಟೌನ್ ನ ಜಿಕೆಎಂಪಿಎಸ್ ಶಾಲೆಯಲ್ಲಿ. ಹೌದು ರಾಜ್ಯದಲ್ಲೇ ಸರ್ಕಾರಿ ಶಾಲೆಗಳಿಗೆ ಹೆಚ್ಚು ಮಕ್ಕಳು ಅಡ್ಮಿಶನ್ ಆಗಿರುವ ಜಿಲ್ಲೆಗಳಲ್ಲಿ ರಾಮನಗರ ಜಿಲ್ಲೆ ರಾಜ್ಯದಲ್ಲೇ ಟಾಪ್ ಆಗಿದೆ. ಆ ನಿಟ್ಟಿನಲ್ಲಿ ಜಿಕೆಎಂಪಿಎಸ್ ಶಾಲೆಯಲ್ಲೇ 1ರಿಂದ 8ನೇ ತರಗತಿವರೆಗೂ 800 ಕ್ಕೂ ಹೆಚ್ಚು ಮಕ್ಕಳು ಅಡ್ಮಿಶನ್ ಆಗಿದ್ದಾರೆ. ಟಯೋಟ ಸಂಸ್ಥೆಯ ಸಹಕಾರದೊಂದಿಗೆ ಕಟ್ಟಡ ನಿರ್ಮಿಸಲಾಗಿದ್ದು, ಹೆಚ್ಚು ಮಕ್ಕಳು ಶಾಲೆಗೆ ಅಡ್ಮಿಶನ್ ಆದ ಹಿನ್ನೆಲೆ, ಪಾಠ ಮಾಡಲು ಸೂಕ್ತ ಕೊಠಡಿಗಳಿಲ್ಲ. ಬಿರುಕು ಬಿಟ್ಟಿರುವ, ಚಿಕ್ಕ ಚಿಕ್ಕ ಕೊಠಡಿಗಳಲ್ಲೇ ಪಾಠ ಮಾಡುವ ಅನಿವಾರ್ಯತೆ ಇದೆ.
ಅಂದಹಾಗೆ, ಈ ಜಿಕೆಎಂಪಿಎಸ್ ಶಾಲೆಯಲ್ಲಿ ಅತಿ ಹೆಚ್ಚು ವಿಧ್ಯಾರ್ಥಿಗಳ ದಾಖಲಾತಿಯಾಗಿದ್ದು 800 ವಿಧ್ಯಾರ್ಥಿಗಳು ಅಡ್ಮಿಶನ್ ಆಗಿದ್ದಾರೆ. ಇಷ್ಟು ಮಕ್ಕಳಿಗೆ ಪಾಠ ಮಾಡಲು ಕೇವಲ 12 ಜನ ಶಿಕ್ಷಕರು ಇದ್ದಾರೆ. ಮತ್ತೊಂದು ಕಡೆ ಕೊಠಡಿಗಳಿಲ್ಲದೇ ಶಾಲೆಯ ಅಕ್ಕಪಕ್ಕ ಇರುವಂತಹ ಹಾಸ್ಟೆಲ್ ಗಳು, ಬಿರುಕು ಬಿಟ್ಟಿರುವ ಕೊಠಡಿಗಳಲ್ಲಿ ಪಾಠ ಮಾಡಲಾಗುತ್ತಿದೆ. ಖಾಸಗಿ ಶಾಲೆಗಳ ಪೀಸ್ ಹಾವಳಿಯಿಂದ ಬೇಸತ್ತು ಸರ್ಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸಿರುವ ಪೋಷಕರು ಪ್ರತಿನಿತ್ಯ ಸರ್ಕಾರಕ್ಕೆ ಹಿಡಿ ಶಾಪ ಹಾಕ್ತಿದ್ದಾರೆ. ಕೂಡಲೇ ಸಮಸ್ಯೆ ಬಗೆಹರಿಸುವಂತೆ ಪೋಷಕರು ಮನವಿ ಮಾಡಿದ್ದಾರೆ.
ಬಾಳೆಹೊನ್ನೂರು ಶಾಖಾ ಮಠದ 16ನೇ ವರ್ಷದ ವಾರ್ಷಿಕೋತ್ಸವ, ಸಾಮೂಹಿಕ ವಿವಾಹ
ಒಟ್ಟಾರೆ ಸರ್ಕಾರಿ ಶಾಲೆಗಳಿಗೆ ಸೇರಿಸಿ ಅನ್ನುವ ಸರ್ಕಾರ, ಸೂಕ್ತ ಸೌಲಭ್ಯ ನೀಡದೇ ವಂಚಿಸುತ್ತಿದೆ. ಜನರು ಖಾಸಗಿ ಶಾಲೆಗಳ ವ್ಯಾಮೋಹ ಬಿಟ್ಟು ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸುತ್ತಿದ್ದಾರೆ. ಇನ್ನಾದರೂ ಸರ್ಕಾರ ಎಚ್ಚೆತ್ತು ಮಕ್ಕಳ ಭವಿಷ್ಯಕ್ಕೆ ಸಹಕಾರಿಯಾಗಬೇಕು ಎಂಬುದೇ ನಮ್ಮ ಆಶಯ.
ವಿದ್ಯಾರ್ಥಿಗಳ ಸ್ಕಾಲರ್‌ಶಿಪ್ ನುಂಗಿದ ಸಿಬ್ಬಂದಿ!: ಎಂಜಿನಿಯರಿಂಗ್ ಪದವಿ ಕನಸು ಹೊತ್ತು ಬಂದ ಪ್ರತಿಭಾವಂತ ವಿದ್ಯಾರ್ಥಿಗಳ ಸ್ಕಾಲರ್‌ಶಿಪ್, ಶೈಕ್ಷಣಿಕ ಸಾಲದ ಹಣ ಸೇರಿದಂತೆ ಕೋಟ್ಯಂತರ ರು. ಗಳನ್ನು ಸಿಬ್ಬಂದಿಯೇ ತಿಂದು ನೀರು ಕುಡಿದಿರುವ ಪ್ರಕರಣ ಇಲ್ಲಿಯ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.
KHADAK MOVIE REVIEW; ಡ್ರಗ್ಸ್ ಮಾಫಿಯಾ ಕಥೆ ಸುತ್ತ ಖಡಕ್ ಚಿತ್ರ
ಎಂಜಿನಿಯರಿಂಗ್ ಕಾಲೇಜಿನ ಸಿಬ್ಬಂದಿ ಮಾಡಿದ ಅವ್ಯವಹಾರದಿಂದ ಮೆರಿಟ್ ಆಧಾರದಲ್ಲಿ ಎಂಜಿನಿಯರಿಂಗ್ ಪ್ರವೇಶ ಪಡೆದಿರುವ ನೂರಾರು ಬಡ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಸರ್ಕಾರದಿಂದ ನೀಡುವ ಸ್ಕಾಲರ್‌ಶಿಪ್‌ಗೆ ಕನ್ನ ಹಾಕಿರುವ ಸಿಬ್ಬಂದಿ, ಶಿಕ್ಷಣ ಪೂರೈಸಲು ವಿವಿಧ ಬ್ಯಾಂಕುಗಳಲ್ಲಿ ವಿದ್ಯಾರ್ಥಿಗಳು ಮಾಡಿರುವ ಸಾಲವನ್ನೂ ತಮ್ಮ ಜೇಬಿಗೆ ಇಳಿಸಿಕೊಂಡಿರುವುದು ಬೆಳಕಿಗೆ ಬಂದಿದೆ.
ಏನಿದು ಅವ್ಯವಹಾರ?: ದಾಖಲೆಗಳನ್ನು ತಿದ್ದುಪಡಿ ಮಾಡಿ ಪ್ರವೇಶ ಶುಲ್ಕ, ಪರೀಕ್ಷಾ ಶುಲ್ಕ, ಸಿಸಿಟೆಕ್ ಅನುದಾನ, ಸ್ಕಾಲರ್‌ಶಿಫ್, ವಿದ್ಯಾರ್ಥಿಗಳ ಶೈಕ್ಷಣಿಕ ಸಾಲದ ಹಣ ಸೇರಿ ಒಟ್ಟು .3,14 ಕೋಟಿಗಳನ್ನು ದುರುಪಯೋಗ ಪಡಿಸಿಕೊಂಡಿರುವ ಪ್ರಕರಣ ಇದಾಗಿದೆ. ಸಮಗ್ರ ತನಿಖೆ ನಡೆದರೆ ಇದು ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಈ ಸಂಬಂಧವಾಗಿ ಎರಡು ತಿಂಗಳ ಹಿಂದಷ್ಟೇ ನಿವೃತ್ತರಾಗಿರುವ ಪ್ರಾಚಾರ್ಯ ಡಾ. ಕೆ.ಬಿ. ಪ್ರಕಾಶ, ಕಚೇರಿ ಅಧೀಕ್ಷಕ ಎಚ್. ವಾಸುದೇವ, ಗುರಪ್ಪ ಸುಂಕದವರ, ಪ್ರಥಮ ದರ್ಜೆ ಸಹಾಯಕಿ ಜಯಮ್ಮ ಕಾಚೇರ, ಕರ್ತವ್ಯಕ್ಕೆ 4 ತಿಂಗಳಿನಿಂದ ಗೈರಾಗಿರುವ ದ್ವಿತೀಯ ದರ್ಜೆ ಸಹಾಯಕ ರವೀಂದ್ರಕುಮಾರ ಹಾಗೂ ಮತ್ತೊಬ್ಬ ದ್ವಿತೀಯ ದರ್ಜೆ ಸಹಾಯಕ ಅನಿಲಕುಮಾರ ಕಟ್ಟೆಗಾರ ವಿರುದ್ಧ ಕಾಲೇಜಿನ ಹಾಲಿ ಪ್ರಾಚಾರ್ಯ ಡಾ. ಜಗದೀಶ ಕೋರಿ ಪೊಲೀಸರಿಗೆ ದೂರು ನೀಡಿದ್ದು, ಎಫ್‌ಐಆರ್ ದಾಖಲಾಗಿದೆ.