ಸೈಕಲ್ ಸುಬ್ಬು ಡಾಕ್ಟ್ರು' ನ್ಯಾಷನಲ್ ಎಜ್ಯುಕೇಷನ್ ಸೊಸೈಟಿ ಅಧ್ಯಕ್ಷರಾಗಿ ನೇಮಕ
ಸೈಕಲ್ ಸುಬ್ಬು ಡಾಕ್ಟರ್ ಎಂದೇ ಪ್ರಸಿದ್ಧಿಯಾಗಿರುವ 91 ವರ್ಷ ವಯಸ್ಸಿನ ಡಾ.ಎಚ್.ಎಚ್.ಸುಬ್ರಹ್ಮಣ್ಯ ಅವರು 105 ವರ್ಷಗಳಷ್ಟು ಇತಿಹಾಸ ಇರುವ ನ್ಯಾಷನಲ್ ಎಜುಕೇಶನ್ ಸೊಸೈಟಿ(National Education Society)ಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಬೆಂಗಳೂರು (ಮಾ.11) :ಸೈಕಲ್ ಸುಬ್ಬು ಡಾಕ್ಟರ್ ಎಂದೇ ಪ್ರಸಿದ್ಧಿಯಾಗಿರುವ 91 ವರ್ಷ ವಯಸ್ಸಿನ ಡಾ.ಎಚ್.ಎಚ್.ಸುಬ್ರಹ್ಮಣ್ಯ ಅವರು 105 ವರ್ಷಗಳಷ್ಟು ಇತಿಹಾಸ ಇರುವ ನ್ಯಾಷನಲ್ ಎಜುಕೇಶನ್ ಸೊಸೈಟಿ(National Education Society)ಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ದಿವಂಗತ ಪದ್ಮಭೂಷಣ ಡಾ. ಎಚ್. ನರಸಿಂಹಯ್ಯ(Dr H Narasimhaiah)ನವರ ಆತ್ಮೀಯ ಸ್ನೇಹಿತ ಹಾಗೂ ಸಹಪಾಠಿಯಾಗಿ ಡಾ. ಸುಬ್ರಹ್ಮಣ್ಯ ಅವರು ಇದೀಗ ಇಂಥ ಸಂಸ್ಥೆಗೆ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಹೆಮ್ಮೆಯ ವಿಚಾರವಾಗಿದೆ. ನ್ಯಾಷನಲ್ ಎಜ್ಯುಕೇಷನ್ ಸೊಸೈಟಿ ಸಂಸ್ಥೆ ಸುಮಾರು 20 ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದು, ಅವುಗಳ ಪೈಕಿ ಬಹುತೇಕ ಸಂಸ್ಥೆಗಳು ಗ್ರಾಮೀಣ ಪ್ರದೇಶಗಳಲ್ಲಿ ಶಿಕ್ಷಣ ಪ್ರಸಾರದಲ್ಲಿ ತೊಡಗಿವೆ.
ನಾಳೆ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಉದ್ಘಾಟನೆ
ಗೌರಿಬಿದನೂರಿನಲ್ಲಿ 'ಸೈಕಲ್ ಸುಬ್ಬು ಡಾಕ್ಟರು'(Cycle subbu doctor) ಎಂದೇ ಜನಪ್ರಿಯರಾಗಿರುವ ಡಾ.ಸುಬ್ರಹ್ಮಣ್ಯ(Dr HH subrahmanya) ಅವರು ನ್ಯಾಷನಲ್ ಹೈಸ್ಕೂಲ್(National highschool)ನ ಹಳೆ ವಿದ್ಯಾರ್ಥಿ. ಅಲ್ಲದೇ ಇದೇ ಶಾಲೆಯಲ್ಲಿ ಡಾ. ನರಸಿಂಹಯ್ಯನವರು ಓದಿದ್ದು. ಅವರಿಬ್ಬರೂ ಸಹಪಾಠಿಗಳಾಗಿದ್ದರು. ನಂತರ, ನರಸಿಂಹಯ್ಯನವರು ಬಸವನಗುಡಿಯ ನ್ಯಾಷನಲ್ ಕಾಲೇಜಿ(Basavanagudi national collage)ನ ಪ್ರಾಂಶುಪಾಲರಾದರೆ, ಸುಬ್ರಹ್ಮಣ್ಯ ಅವರು ವೈದ್ಯಕೀಯ ವಿದ್ಯಾಭ್ಯಾಸ ಮುಗಿಸಿ, ಆರೋಗ್ಯ - ವೈದ್ಯಕೀಯ ಸೇವೆಯನ್ನು ಕಾಣದ, ಗ್ರಾಮೀಣ ಪ್ರದೇಶವಾದ ಗೌರಿಬಿದನೂರಿನ ಹುಟ್ಟೂರಾದ ಹೊಸೂರು ಗ್ರಾಮದಲ್ಲಿ ಬಡಬಗ್ಗರಿಗೆ ವೈದ್ಯಕೀಯ ಸೇವೆ ಸಲ್ಲಿಸಲಾರಂಭಿಸಿದರು.
ಇವರಿಗೆ 91 ವರ್ಷ ವಯಸ್ಸಾಗಿದ್ದು. ಚೈತನ್ಯದ ಚಿಲುಮೆಯಂತಿರುವ ಡಾ. ಸುಬ್ರಹ್ಮಣ್ಯ ಅವರು ವೈದ್ಯಕೀಯ ಸೇವೆಯ ಮೂಲಕ ಗ್ರಾಮೀಣ ಪ್ರದೇಶಗಳ ರೋಗಿಗಳಿಗೆ ಆರೋಗ್ಯ ಭಾಗ್ಯ ಕಲ್ಪಿಸಿದ್ದಾರೆ.
ಬೆಂಗಳೂರಲ್ಲಿ ಏನ್ ಮುಟ್ಟಿದ್ರೂ ಶಾಕ್ ಹೊಡೆದ ಅನುಭವ ಆಗ್ತಿದ್ಯಲ್ಲಾ, ಯಾಕ್ಹೀಗೆ ?
ಗೌರವ ಕಾರ್ಯದರ್ಶಿಗಳಾಗಿ ಶ್ರೀ ವಿ. ವೆಂಕಟಶಿವಾ ರೆಡ್ಡಿ, ಖಜಾಂಚಿಯಾಗಿ ಶ್ರೀ ತಲ್ಲಮ್ ಆರ್. ದ್ವಾರಕನಾಥ್ ಆಯ್ಕೆಯಾಗಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 98440 06736 ಸಂಪರ್ಕಿಸಬಹುದು.