ಕಲಿತ ಶಾಲೆಯ ಅಭಿವೃದ್ಧಿಗೆ ನೆರವಾದ ನ್ಯಾ. ಅಬ್ದುಲ್‌ ನಝೀರ್‌

ನ್ನ ಸಾಧನೆ ಮತ್ತು ಪರಿಶ್ರಮದಿಂದ ಮೂಡುಬಿದಿರೆಯ ಪುಟ್ಟಹಳ್ಳಿಯೊಂದರಿಂದ ದೇಶದ ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿಯಾಗಿ ಬಳಿಕ ಇದೀಗ ರಾಜ್ಯಪಾಲರಾಗಿ ನಿಯುಕ್ತರಾಗಿರುವ ಅಬ್ದುಲ್‌ ನಝೀರ್‌ ಉನ್ನತ ಸ್ಥಾನಕ್ಕೇರಿದರೂ ತಾನು ಸಾಗಿ ಬಂದ ಹಾದಿಯಲ್ಲಿ ವಿಶೇಷವಾಗಿ ಶಿಕ್ಷಣ ಸಂಸ್ಥೆಗಳನ್ನೂ ಮರೆತವರಲ್ಲ.

Helped in the development of learned school justic Abdul Nazeer at kadalakere rav

ಮೂಡುಬಿದಿರೆ (ಫೆ.13) : ತನ್ನ ಸಾಧನೆ ಮತ್ತು ಪರಿಶ್ರಮದಿಂದ ಮೂಡುಬಿದಿರೆಯ ಪುಟ್ಟಹಳ್ಳಿಯೊಂದರಿಂದ ದೇಶದ ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿಯಾಗಿ ಬಳಿಕ ಇದೀಗ ರಾಜ್ಯಪಾಲರಾಗಿ ನಿಯುಕ್ತರಾಗಿರುವ ಅಬ್ದುಲ್‌ ನಝೀರ್‌ ಉನ್ನತ ಸ್ಥಾನಕ್ಕೇರಿದರೂ ತಾನು ಸಾಗಿ ಬಂದ ಹಾದಿಯಲ್ಲಿ ವಿಶೇಷವಾಗಿ ಶಿಕ್ಷಣ ಸಂಸ್ಥೆಗಳನ್ನೂ ಮರೆತವರಲ್ಲ.

ಶತಮಾನೋತ್ಸವ ಸಂಭ್ರಮದಲ್ಲಿರುವ ಕಡಲಕೆರೆ(Kadalakere)ಯ ಸಂತ ಇಗ್ನೇಯಸ್‌ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ(St. Ignatius Higher Primary School Kadalkere)ಯಲ್ಲಿ ಬಳಿಕ ಶತಮಾನೋತ್ಸವ ಕಂಡ ಅಲಂಗಾರಿನ ಸೈಂಟ್‌ ಥಾಮಸ್‌ ಶಿಕ್ಷಣ ಸಂಸ್ಥೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಅವರು ಪಡೆದಿದ್ದರು. ಹಳೆ ವಿದ್ಯಾರ್ಥಿಯಾಗಿ ನಾಟಕಗಳಲ್ಲಿ ಅವರ ಜತೆ ನಟಿಸಿದ್ದನ್ನು ಪುರಸಭಾ ಸದಸ್ಯರಾಗಿರುವ ಪಿ.ಕೆ. ಥಾಮಸ್‌ ಸಂತಸದಿಂದ ನೆನಪಿಸಿಕೊಂಡಿದ್ದಾರೆ.

ರೀತಿ ನೀತಿಯಿಲ್ಲದ ಕಾಯ್ದೆಯಿಂದ ಕನ್ನಡ ಶಾಲೆಗೆ ಮಾರಕ: ಹೊರಟ್ಟಿ

ಜೈನ್‌ ಹೈಸ್ಕೂಲಿನಲ್ಲಿ ಆಂಗ್ಲ ಮಾಧ್ಯಮದ ಮೊದಲ ಬ್ಯಾಚ್‌ ವಿದ್ಯಾರ್ಥಿಯಾಗಿದ್ದನ್ನು ಎಸ್ಸೆಸ್ಸೆಲ್ಸಿಯಲ್ಲಿ ಅವರ ಜತೆ ಕಂಬೈನ್‌ ಸ್ಟಡಿ ಮಾಡಿದ್ದನ್ನು, ಇಲ್ಲಿನ ಉದಯ ಟೈಪಿಂಗ್‌ ಸ್ಕೂಲ್‌ನಲ್ಲಿ ಬಳಿಕ ಮಹಾವೀರ ಕಾಲೇಜಿನಲ್ಲೂ ಕ್ಲಾಸ್‌ಮೇಟ್‌ ಆಗಿದ್ದ ಹಸ್ದುಲ್ಲ ಇಸ್ಮಾಯಿಲ್‌ ಸಂತಸದಿಂದ ನೆನಪಿಸಿಕೊಳ್ಳುತ್ತಾರೆ.

ಹುಟ್ಟೂರಿಗೆ ಬಂದಾಗ, ಅವಕಾಶ ಸಿಕ್ಕಾಗಲೆಲ್ಲ ಕಲಿತ ಕಡಲಕೆರೆ ಶಾಲೆಗೆ ಬರುತ್ತಿದ್ದ ನಝೀರ್‌(justic Abdul Nazir) ಅವರನ್ನು 2018ರ ಅ.15ರಂದು ನವರಾತ್ರಿಯ ಸಂದರ್ಭದಲ್ಲಿ ಶಾಲೆಯಲ್ಲಿ ಸನ್ಮಾನಿಸಲಾಗಿತ್ತು.

ಕನ್ನಡ ಉಳಿಸಿ ಎಂದು ಕರೆ ಕೊಡುವ ಸರ್ಕಾರ ಕನ್ನಡ ಮಾಧ್ಯಮ ಶಾಲೆಗಳ ಅನುದಾನವನ್ನೇ ಕಿತ್ತು ಹಾಕುತ್ತಿರುವುದು ವಿಪರ್ಯಾಸ. ಗುರುಕುಲ ಪದ್ಧತಿ ನಾಶಪಡಿಸಿ ಮೆಕಾಲೆ ಪದ್ಧತಿಯ ಮೂಲಕ ದೇಶದ ಸಂಸ್ಕೃತಿ ನಾಶವಾಗುವಂತಾಗಿದೆ. ಕನಿಷ್ಠ ಕನ್ನಡ ಶಾಲೆಗಳನ್ನು ಉಳಿಸಿ ನಮ್ಮ ಸಂಸ್ಕೃತಿ ಉಳಿಸುವುದು ರಾಜ್ಯ ಸರ್ಕಾರದ ಕರ್ತವ್ಯ ಎಂದು ನಝೀರ್‌ ಅಂದು ಮಾರ್ಮಿಕವಾಗಿ ನುಡಿದಿದ್ದರು. ಶಾಲೆಯ ಅಭಿವೃದ್ಧಿಯಲ್ಲಿ ನಝೀರ್‌ ಅವರ ವಿಶೇಷ ಕಾಳಜಿಯಿಂದ ಬಹಳಷ್ಟುಸಹಕಾರ ದೊರೆತಿದೆ.

ನ್ಯಾಯಮೂರ್ತಿಯಾಗಿ ಇತಿಮಿತಿಗಳಿದ್ದರೂ ಕಲಿತ ಶಾಲೆಯ ಅಭಿವೃದ್ಧಿಯ ಬಗ್ಗೆ ಅವರು ಚರ್ಚಿಸಿದ್ದ ಕಾರಣದಿಂದಾಗಿ ಕಡಲಕೆರೆ ಶಾಲೆಗೆ ಹಲವು ಅಭಿವೃದ್ಧಿ ಕೆಲಸಗಳಾಗಿದ್ದವು. ಅಂದಿನ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಅವರ ಗಮನ ಸೆಳೆದು ಶಾಲೆಯ ಆಡಳಿತಾತ್ಮಕ ಸಮಸ್ಯೆಗಳ ಬಗ್ಗೆ ಸ್ಪಂದಿಸುವಲ್ಲಿಯೂ ನಝೀರ್‌ ಅವರ ಕಾಳಜಿ ಕೆಲಸ ಮಾಡಿತ್ತು. ನ್ಯಾ.ನಝೀರ್‌ ಅವರ ಈ ಕಾಳಜಿಯನ್ನು ಮಾಜಿ ಸಚಿವ ಸುರೇಶ್‌ ಕುಮಾರ್‌ ಭಾನುವಾರ ಟ್ವೀಟ್‌ ಮೂಲಕ ನೆನಪಿಸಿದ್ದಾರೆ.

ಕನ್ನಡ ಕಲಿಯಲು ರಾಜ್ಯದ ಸರ್ಕಾರಿ ಶಾಲೆಗೆ ತಮಿಳುನಾಡು ಮಕ್ಕಳು!

ಮೂಡುಬಿದಿರೆ ವಕೀಲರ ಸಂಘದ ಸ್ಥಾಪಕಾಧ್ಯಕ್ಷ, ಎಂ.ಸಿ.ಬ್ಯಾಂಕ್‌ನ ಹಾಲಿ ಅಧ್ಯಕ್ಷರಾಗಿರುವ ಹಿರಿಯ ನ್ಯಾಯವಾದಿ ಬಾಹುಬಲಿ ಪ್ರಸಾದ್‌ ಅವರು ಅಬ್ದುಲ್‌ ನಝೀರ್‌ 1979ರಲ್ಲಿ ಮಹಾವೀರ ಕಾಲೇಜು ವಿದ್ಯಾರ್ಥಿಯಾಗಿದ್ದಾಗ ಕಮರ್ಷಿಯಲ್‌ ಲಾ ಪಾಠ ಮಾಡಿದ್ದ ದಿನಗಳನ್ನು ನೆನಪಿಸಿ ನನ್ನ ದ್ಯಾರ್ಥಿಯಾಗಿದ್ದ ನಝೀರ್‌ ಹುಟ್ಟೂರಿನಲ್ಲಿ ರಾಜ್ಯಕ್ಕೇ ಮಾದರಿಯಾದ ಸುಸಜ್ಜಿತ ನ್ಯಾಯಾಲಯ ಕಟ್ಟಡ, ಇತ್ತೀಚಿಗೆ ವಕೀಲರ ಭವನ ಹೀಗೆ ನಿರಂತರ ಕೊಡುಗೆ ನೀಡಿದವರು ಎಂದು ಅಭಿಮಾನದ ಮಾತುಗಳನ್ನು ಕನ್ನಡಪ್ರಭದ ಜತೆಗೆ ಹಂಚಿಕೊಂಡರು.

Latest Videos
Follow Us:
Download App:
  • android
  • ios