ಕನ್ನಡ ಕಲಿಯಲು ರಾಜ್ಯದ ಸರ್ಕಾರಿ ಶಾಲೆಗೆ ತಮಿಳುನಾಡು ಮಕ್ಕಳು!
ಮಾಲೂರು ತಾಲೂಕು ಮಾಸ್ತಿ ಹೋಬಳಿಯ ದಿನ್ನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹೊಸಮನೆಗಳು ಗ್ರಾಮದ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆಗೆ ತಮಿಳುನಾಡಿನ 5 ಮಂದಿ ಮಕ್ಕಳು ಕನ್ನಡ ಕಲಿಯಲು ಬರುತ್ತಿದ್ದು ತಮಿಳುನಾಡಿನ ಮಕ್ಕಳ ಕನ್ನಡ ಪ್ರೀತಿ, ಭಾಷಾಭಿಮಾನ ಹಾಗೂ ಭಾಷಾ ಸಾಮರಸ್ಯಕ್ಕೆ ಈ ಸರ್ಕಾರಿ ಶಾಲೆಯು ಸಾಕ್ಷಿಯಾಗಿದೆ.
ಟೇಕಲ್ (ನ.17): ಮಾಲೂರು ತಾಲೂಕು ಮಾಸ್ತಿ ಹೋಬಳಿಯ ದಿನ್ನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹೊಸಮನೆಗಳು ಗ್ರಾಮದ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆಗೆ ತಮಿಳುನಾಡಿನ 5 ಮಂದಿ ಮಕ್ಕಳು ಕನ್ನಡ ಕಲಿಯಲು ಬರುತ್ತಿದ್ದು ತಮಿಳುನಾಡಿನ ಮಕ್ಕಳ ಕನ್ನಡ ಪ್ರೀತಿ, ಭಾಷಾಭಿಮಾನ ಹಾಗೂ ಭಾಷಾ ಸಾಮರಸ್ಯಕ್ಕೆ ಈ ಸರ್ಕಾರಿ ಶಾಲೆಯು ಸಾಕ್ಷಿಯಾಗಿದೆ. ಹೊಸಮನೆಗಳು ಗ್ರಾಮದಲ್ಲಿ 24 ಮನೆಗಳಿದ್ದು ಬಹುತೇಕ ಕುಟುಂಬಗಳು ಕೂಲಿಯಿಂದ ಜೀವನ ನಡೆಸುತ್ತಿದೆ.
ಗ್ರಾಮದಲ್ಲಿನ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಒಟ್ಟು 7 ಮಂದಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ಗ್ರಾಮದ ಇಬ್ಬರು ಮಾತ್ರ ಶಾಲೆಗೆ ದಾಖಲಾಗಿದ್ದಾರೆ. ಶಾಲೆಗೆ ಕೂಗಳತೆ ದೂರದಲ್ಲಿರುವ ನೆರೆಯ ತಮಿಳುನಾಡು ರಾಜ್ಯದ ಹಳ್ಳಿಯಿಂದ 5 ಮಂದಿ ವಿದ್ಯಾರ್ಥಿಗಳು ಗ್ರಾಮದ ಕನ್ನಡ ಶಾಲೆಗೆ ಸೇರಿ ಕನ್ನಡ ಕಲಿಯುತ್ತಿರುವುದು ಎರಡು ರಾಜ್ಯಗಳ ಬಾಂಧವ್ಯ ಹಾಗೂ ಭಾಷಾ ಸಾಮರಸ್ಯಕ್ಕೆ ಕನ್ನಡಿ ಹಿಡಿದಂತಿದೆ.
Ricky Kej: ಗ್ರ್ಯಾಮಿಗೆ ರಿಕ್ಕಿ ಕೇಜ್ 3ನೇ ಬಾರಿ ನಾಮ ನಿರ್ದೇಶನ
ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಹೊಸೂರು ತಾಲೂಕಿನ ಚಾಪರಪಲ್ಲಿ ಎಂಬ ಗ್ರಾಮದ ಐವರು ವಿದ್ಯಾರ್ಥಿಗಳು ತಮ್ಮ ಗ್ರಾಮದಲ್ಲಿ ತಮಿಳುನಾಡಿನ ಸರ್ಕಾರಿ ಶಾಲೆ ಇದ್ದರೂ ಕನ್ನಡ ಶಾಲೆಯಲ್ಲಿ ಕಲಿಯಬೇಕೆನ್ನುವ ದೃಷ್ಟಿಯಿಂದಲೇ ಇಲ್ಲಿಗೆ ಬರುತ್ತಾರೆ. ಒಂದನೇ ತರಗತಿಗೆ ಜಿ.ಕುಮಾರ್, ಎರಡನೇ ತರಗತಿಗೆ ಶಂಕರನ್ ಹಾಗೂ ಪ್ರಜ್ವಲ್, ಮೂರನೇ ತರಗತಿಗೆ ನಿತಿನ ಹಾಗೂ ಐದನೇ ತರಗತಿಗೆ ದೀಪಾ ಎಂಬ ವಿದ್ಯಾರ್ಥಿಗಳು ಬರುತ್ತಿದ್ದಾರೆ. ಕನ್ನಡವನ್ನು ಸ್ಪಷ್ಟವಾಗಿ ಬರೆಯಲು, ಓದಲು ಕಲಿತಿದ್ದಾರೆ. ಪ್ರತಿದಿನ ಶಾಲೆಗೆ ಆಗಮಿಸುವ ಮಕ್ಕಳು ಕಲಿಯುತ್ತಿರುವುದು, ಮಾತನಾಡುವುದು ವಿಶೇಷವಾಗಿದೆ.
ಶಾಲೆಯ ಶಿಕ್ಷಕ ಸತ್ಯನಾರಾಯಣೆ ಹೇಳುವಂತೆ ತಮಿಳುನಾಡಿನಿಂಡ ಬರುವ ಐವರು ವಿದ್ಯಾರ್ಥಿಗಳು ಬಹಳ ಚೆನ್ನಾಗಿ ನಮ್ಮ ಶಾಲೆಯಲ್ಲಿ ಕನ್ನಡ ಕಲಿಯುತ್ತಿದ್ದಾರೆ. ಒಟ್ಟು 7 ಮಂದಿ ಇದ್ದು 5 ಮಂದಿ ನೆರೆಯ ರಾಜ್ಯದವರು ಇಬ್ಬರು ನಮ್ಮ ರಾಜ್ಯದವರು, ಎಲ್ಲಾ ಮಕ್ಕಳೊಂದಿಗೆ ಉತ್ತಮ ಬಾಂಧವ್ಯ ಹೊಂದಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಇಲ್ಲಿ ಯಾವುದೇ ರೀತಿಯಾದ ಬೇಧಭಾವವಿಲ್ಲ ಎನ್ನುತ್ತಾರೆ ಶಾಲೆ ಶಿಕ್ಷಕಿ.
ಹೊರ ರಾಜ್ಯದಿಂದ ಗಡಿಯಲ್ಲಿನ ಗ್ರಾಮಗಳಿಂದ ಕನ್ನಡ ಶಾಲೆಗೆ ಬರುವ ಮಕ್ಕಳು ಉತ್ಸಾಹದಿಂದ ಕನ್ನಡ ಕಲಿಯುತ್ತಿದ್ದಾರೆ ಅನ್ನುವುದು ಹೆಮ್ಮೆಯ ಸಂಗತಿಯಾಗಿದೆ. ಹೀಗಿರುವಾಗ ಮಕ್ಕಳ ಕಲಿಕೆಗೆ ಬೇಕಾದ ಪೂರಕ ವಾತಾವರಣ ನಿರ್ಮಾಣ ಮಾಡುವುದು ನಮ್ಮ ಗುರಿ ಹಾಗಾಗಿ ಮಕ್ಕಳಿಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ನೀಡಲಾಗುತ್ತಿದೆ.
- ಚಂದ್ರಕಲಾ, ಮಾಲೂರು ಬಿಇಒ
Chanakya University: ಚಾಣಕ್ಯ ವಿವಿಯಲ್ಲಿ ಉನ್ನತ ಶಿಕ್ಷಣದ ಹೊಸ ಪ್ರಯೋಗ
ಹೊರ ರಾಜ್ಯದಿಂದ ಗಡಿ ಗ್ರಾಮಗಳಿಂದ ಕನ್ನಡ ಶಾಲೆಗೆ ಮಕ್ಕಳು ಬಂದು ಕನ್ನಡ ಕಲಿಯುತ್ತಿದ್ದಾರೆ ಇದರಿಂದ ಶಾಲೆಗೆ ಉತ್ತಮ ವಾತಾವರಣ ನಿರ್ಮಾಣ ಮಾಡುವುದು ನಮ್ಮ ಗುರಿ ಇಂತಹ ಸಮಯದಲ್ಲಿ ಶಾಲೆಗೆ ಮೂಲಸೌಲಭ್ಯಗಳನ್ನು ಒದಗಿಸಿ ಮಕ್ಕಳ ಸಂಖ್ಯೆಯನ್ನು ಹೆಚ್ಚಿಸಬೇಕಿದೆ.
- ಉಮಾಜಲಂದರ್, ದಿನ್ನಹಳ್ಳಿ ಗ್ರಾ.ಪಂ.ಅಧ್ಯಕ್ಷೆ