ಗುಜರಾತ್‌ ಶಾಲಾ ಪಠ್ಯಕ್ಕೆ ‘ಭಗವದ್ಗೀತೆ’ ಪ್ರತ್ಯೇಕ ಪಠ್ಯ ಪುಸ್ತಕ: 2024 ರಿಂದ ಜಾರಿ

ಕುರುಕ್ಷೇತ್ರದ ಯುದ್ಧ ಭೂಮಿಯಲ್ಲಿ ಅರ್ಜುನ ಮತ್ತು ಭಗವಾನ್‌ ಕೃಷ್ಣನ ನಡುವೆ ಭಗವದ್ಗೀತೆ ಸಂಭಾಷಣೆ ನಡೆದ ದಿನವೆಂದು ಗುರುತಿಸಲಾಗುವ ‘ಗೀತಾ ಜಯಂತಿ’ಯಂದೇ ಪಠ್ಯವನ್ನು ಬಿಡುಗಡೆ ಮಾಡಲಾಗಿದೆ.

gujarat adds additional text book on gita for classes 6 to 8 ash

ಅಹಮದಾಬಾದ್‌ (ಡಿಸೆಂಬರ್ 23, 2023): ಮುಂದಿನ ಶೈಕ್ಷಣಿಕ ವರ್ಷದಿಂದ 6 ರಿಂದ 8 ನೇ ತರಗತಿಗಳ ಪಠ್ಯಕ್ರಮಕ್ಕೆ ಸೇರಿಸಲು ‘ಭಗವದ್ಗೀತೆ’ ಕುರಿತು ನೂತನ ಪಠ್ಯಪುಸ್ತಕವೊಂದನ್ನು ಗುಜರಾತ್‌ ಸರ್ಕಾರ ಶುಕ್ರವಾರ ಬಿಡುಗಡೆ ಮಾಡಿದೆ.

ಈಗಿರುವ ಶಾಲಾ ಪಠ್ಯ ಪುಸ್ತಕಗಳನ್ನು ಹೊರತುಪಡಿಸಿ 6 ರಿಂದ 8ನೇ ತರಗತಿ ಮಕ್ಕಳು ಇನ್ನು ಭಗವದ್ಗೀತೆಯ ಸಾರಾಂಶವನ್ನೊಳಗೊಂಡ ಮೊದಲ ಭಗವದ್ಗೀತೆ ಪಠ್ಯಪುಸ್ತಕವನ್ನು ಹೆಚ್ಚುವರಿ ಅಧ್ಯಯನ ಮಾಡಲಿದ್ದಾರೆ. ಇನ್ನು 9 ರಿಂದ 12ನೇ ತರಗತಿಗೆ ಭಗವದ್ಗೀತೆಯ ಮುಂದುವರಿದ ಭಾಗ ಅಥವಾ ‘ಭಗವದ್ಗೀತೆ’ಯ 2ನೇ ಭಾಗವನ್ನು ಮುಂದಿನ ದಿನಗಳಲ್ಲಿ ಅಳವಡಿಸಲಾಗುತ್ತದೆ ಎಂದು ಸರ್ಕಾರ ಹೇಳಿದೆ.

ಇದನ್ನು ಓದಿ: ಭಗವದ್ಗೀತೆ: ಕಳ್ಳತನವೆಂದೆರ ಇನ್ನೊಬ್ಬರ ವಸ್ತು ಮಾತ್ರವಲ್ಲ, ಸುಖ-ಸಂತೋಷ ಕದಿಯೋದೂ ಹೌದು!

ಕುರುಕ್ಷೇತ್ರದ ಯುದ್ಧ ಭೂಮಿಯಲ್ಲಿ ಅರ್ಜುನ ಮತ್ತು ಭಗವಾನ್‌ ಕೃಷ್ಣನ ನಡುವೆ ಭಗವದ್ಗೀತೆ ಸಂಭಾಷಣೆ ನಡೆದ ದಿನವೆಂದು ಗುರುತಿಸಲಾಗುವ ‘ಗೀತಾ ಜಯಂತಿ’ಯಂದೇ ಪಠ್ಯವನ್ನು ಬಿಡುಗಡೆ ಮಾಡಲಾಗಿದೆ. ಬಳಿಕ ಸುದ್ದಿಗಾರರ ಜತೆ ಮಾತನಾಡಿದ ರಾಜ್ಯ ಶಿಕ್ಷಣ ಸಚಿವ ಪ್ರಫುಲ್‌ ಕನ್ಶೇರಿಯಾ ‘ರಾಷ್ಟ್ರೀಯ ಶಿಕ್ಷಣ ನೀತಿ - 2020 (ಎನ್‌ಇಪಿ) ಚೌಕಟ್ಟಿನಡಿ ಈ ನಿರ್ಧಾರ ಕೈಗೊಳ್ಳಲಾಗಿದೆ’ ಎಂದರು.

ಇದನ್ನು ಓದಿ: ಭಗವದ್ಗೀತೆ ಯಾಕೆ ಓದಬೇಕು ? ಸಾಮಾನ್ಯ ವ್ಯಕ್ತಿ ಇದರ ಸಾರವನ್ನು ಪಡೆದುಕೊಳ್ಳುವುದು ಹೇಗೆ ?

Latest Videos
Follow Us:
Download App:
  • android
  • ios