Asianet Suvarna News Asianet Suvarna News

ISRO Young Scientist ಕಾರ್ಯಕ್ರಮಕ್ಕೆ ಜಾರ್ಖಂಡ್‌ನ 10ನೇ ತರಗತಿ ವಿದ್ಯಾರ್ಥಿ ಆಯ್ಕೆ

* ಯುವ ವಿಜ್ಞಾನಿಗಳಿಗಾಗಿ ಕಾರ್ಯಕ್ರಮ ರೂಪಿಸಿದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ
* ಜಾರ್ಖಂಡ್‌ನಲ್ಲಿ 10ನೇ ತರಗತಿಯಲ್ಲಿ ವಿದ್ಯಾರ್ಥಿ ಈ ಯುವ ವಿಜ್ಞಾನ ಕಾರ್ಯಕ್ರಮಕ್ಕೆ ಆಯ್ಕೆ
* ಯುವ ವಿಜ್ಞಾನ್ ಕಾರ್ಯಕ್ರಮದಲ್ಲಿ 150 ಕಿರಿಯ ವಿಜ್ಞಾನಿಗಳು ಭಾಗವಹಿಸಲಿದ್ದಾರೆ

A student from Jharkhand selected for ISRO Young Scientists Program
Author
Bengaluru, First Published Apr 28, 2022, 4:16 PM IST

ನವದೆಹಲಿ(ಎ.28): ಬಾಹ್ಯಾಕಾಶ (Space) ವಲಯದಲ್ಲಿ ಜಗತ್ತಿನಲ್ಲಿ ಗಮನ ಸೆಳೆದು ಹೊಸ ಹೊಸ ಮೈಲಿಗಲ್ಲು ಸೃಷ್ಟಿಸುವಲ್ಲಿ ಸಕ್ಸಸ್‌ ಆಗಿರುವ ನಮ್ಮ ಹೆಮ್ಮೆಯ ಭಾರತೀಯ ಬಾಹ್ಯಾಕಾಶ ಸಂಸ್ಥೆ(ISRO), ಇದೀಗ ಯುವ ವಿಜ್ಞಾನಿಗಳಿಗಾಗಿ ಕಾರ್ಯಕ್ರಮ ಆಯೋಜಿಸಿದೆ. ಯುವ ವಿಜ್ಞಾನಿ (Young Scientist) ಗಳಿಗಾಗಿ ಇಸ್ರೋ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಜಾರ್ಖಂಡ್ (Jharkhand) ವಿದ್ಯಾರ್ಥಿಯೊಬ್ಬರು ಆಯ್ಕೆಯಾಗಿದ್ದಾರೆ.

ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿನ ಉದಯೋನ್ಮುಖ ಪ್ರವೃತ್ತಿಗಳ ಬಗ್ಗೆ ಅರಿವು ಮೂಡಿಸಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO), ಎರಡು ವಾರಗಳ ಕಾಲ 'ಯುವ ವಿಜ್ಞಾನ್ ಕಾರ್ಯಕ್ರಮ್' ಆಯೋಜಿಸಿದೆ. ಜಾರ್ಖಂಡ್‌ನ ರಾಮಗಢ ಜಿಲ್ಲೆಯ ಗ್ರಾಮಾಂತರ ಪ್ರದೇಶದ 10 ನೇ ತರಗತಿಯ ವಿದ್ಯಾರ್ಥಿಯು ಇಸ್ರೋ ಆಯೋಜಿಸಿರುವ ಕಾರ್ಯಕ್ರಮಕ್ಕಾಗಿ ದೇಶಾದ್ಯಂತ ಆಯ್ಕೆಯಾದ 150 ಕಿರಿಯ ವಿಜ್ಞಾನಿಗಳ ತಂಡದ ಭಾಗವಾಗಲಿದ್ದಾರೆ.  ಇಸ್ರೋದ ಯುವ ವಿಜ್ಞಾನಿಗಳ ಕಾರ್ಯಕ್ರಮ 2022ರ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿನ ಉದಯೋನ್ಮುಖ ಪ್ರವೃತ್ತಿಗಳ ಬಗ್ಗೆ ಅರಿವು ಮೂಡಿಸಲು ಮೇ 16 ರಿಂದ 28 ರಿಂದ  ಕಾರ್ಯಕ್ರಮದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಬಾಹ್ಯಾಕಾಶ ವಿಜ್ಞಾನ, ತಂತ್ರಜ್ಞಾನ ಮತ್ತು ಅಪ್ಲಿಕೇಶನ್‌ಗಳ ಕುರಿತು ಮೂಲಭೂತ ಜ್ಞಾನವನ್ನು ನೀಡಲಾಗುತ್ತದೆ. 

 SBI RECRUITMENT 2022: ಒಟ್ಟು 35 ಸ್ಪೆಷಲಿಸ್ಟ್ ಕೇಡರ್ ಅಧಿಕಾರಿ ಹುದ್ದೆಗಳಿಗೆ ನೇಮಕಾತಿ

ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ ಸೇರಿದಂತೆ ವಿವಿಧ ಇಸ್ರೋ ಕೇಂದ್ರಗಳಲ್ಲಿ ಪ್ರಯೋಗಾಲಯಗಳಿಗೆ ಭೇಟಿ ನೀಡುವುದು, ಖ್ಯಾತ ವಿಜ್ಞಾನಿಗಳ ಮಾತುಕತೆ ಮತ್ತು ಪ್ರಾಯೋಗಿಕ ಪ್ರದರ್ಶನಗಳನ್ನು ವೀಕ್ಷಿಸುವುದು ಈ ಕಾರ್ಯಕ್ರಮದ ಭಾಗವಾಗಿವೆ ಎಂದು ರಾಷ್ಟ್ರೀಯ ಪರೀಕ್ಷೆಯ ಮೂಲಕ ಕಾರ್ಯಕ್ರಮಕ್ಕೆ ಆಯ್ಕೆಯಾಗಿರುವ ಪಟ್ರಾಟುವಿನ ಸಿಬಿಎಸ್‌ಇ-ಸಂಯೋಜಿತ ಒಪಿ ಜಿಂದಾಲ್ ಶಾಲೆಯ ವಿದ್ಯಾರ್ಥಿನಿ ರಿಷಿಕಾ ಅಗರ್ವಾಲ್ (15) ಹೇಳಿದ್ದಾರೆ. “ಇದು ನನ್ನ ಅತ್ಯುತ್ತಮ ಬೇಸಿಗೆ ರಜೆಯಾಗಿದೆ. ಬಾಹ್ಯಾಕಾಶ ವಿಜ್ಞಾನಿಯಾಗುವ ನನ್ನ ಕನಸನ್ನು ನನಸಾಗಿಸಲು ಇದು ನನಗೆ ಸಹಾಯ ಮಾಡುತ್ತದೆ. ಇದು ನಮ್ಮ ಸಂಸ್ಥೆಗೆ ಹೆಮ್ಮೆಯ ಕ್ಷಣವೆಂದು ಅವರ ಶಾಲೆಯ ಪ್ರಾಂಶುಪಾಲೆ ಶ್ವೇತಾ ಮಲಾನಿ ಹೇಳುತ್ತಾರೆ ಎಂದು ಖುಷಿ ಪಡುತ್ತಾರೆ ರಿಷಿಕಾ.

ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿನ ಉದಯೋನ್ಮುಖ ಪ್ರವೃತ್ತಿಗಳ ಬಗ್ಗೆ ಅರಿವು ಮೂಡಿಸುವುದು ಇದರ ಉದ್ದೇಶವಾಗಿದೆ. ಮೇ 16 ರಿಂದ 28ರವರೆಗೆ ನಡೆಯುವ ಕಾರ್ಯಕ್ರಮದಲ್ಲಿ ಬಾಹ್ಯಾಕಾಶ ವಿಜ್ಞಾನ, ತಂತ್ರಜ್ಞಾನ ಮತ್ತು ಅಪ್ಲಿಕೇಶನ್‌ಗಳ ಕುರಿತು ಮೂಲಭೂತ ಜ್ಞಾನವನ್ನು ನೀಡಲಾಗುತ್ತದೆ. 

ಇಸ್ರೋದ ‘ಯುವ ವಿಜ್ಞಾನ ಕಾರ್ಯಕ್ರಮ’ ಅಥವಾ ಯುವಿಕಾ,  ಗ್ರಾಮೀಣ ಪ್ರದೇಶಗಳಿಗೆ ಆದ್ಯತೆ ನೀಡುವ ಮೂಲಕ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಬಾಹ್ಯಾಕಾಶ ತಂತ್ರಜ್ಞಾನ, ಬಾಹ್ಯಾಕಾಶ ವಿಜ್ಞಾನ ಮತ್ತು ಬಾಹ್ಯಾಕಾಶ ಅನ್ವಯಗಳ ಕುರಿತು ಮೂಲಭೂತ ಜ್ಞಾನವನ್ನು ನೀಡುವ ಗುರಿಯನ್ನು ಹೊಂದಿದೆ.

 KEA Exam Paper Leak ರಿಜಿಸ್ಟ್ರಾರ್ ರನ್ನು ಕೆವಿವಿಯಿಂದ ಕೈಬಿಡಲು ಎಬಿವಿಪಿ ಆಗ್ರಹ

ಆಗಸ್ಟ್‌ನಲ್ಲಿ ಚಂದ್ರಯಾನ-3: COVID-19 ಸಾಂಕ್ರಾಮಿಕ-ಪ್ರೇರಿತ ಲಾಕ್‌ಡೌನ್‌ನಿಂದ ಉಂಟಾದ ಅನನುಕೂಲದಿಂದ ಚಂದ್ರಯಾನ-3 ವಿಳಂಬವಾಗಿದೆ. ಬಹುಶಃ ಕೋವಿಡ್ ಸಾಂಕ್ರಾಮಿಕ ಪರಿಸ್ಥಿತಿ ಇರದಿದ್ದರೆ ಭಾರತವು ಇಷ್ಟೊತ್ತಿಗೆ ತನ್ನ ಮಹತ್ವಾಕಾಂಕ್ಷಿಯ ಚಂದ್ರಯಾನ-3 ಮಿಷನ್ ಆರಂಭಿಸುತ್ತಿರುತ್ತಿತ್ತು. ಆದರೆ, ಇದೀಗ ಇಸ್ರೋ- ಭಾರತೀಯ ಬಾಹ್ಯಾಕಾಶ ಮತ್ತು ಸಂಶೋಧನಾ ಸಂಸ್ಥೆ (ISRO - Indian Space & Research Organisation ) "ಸ್ಪೇಸ್ ಆನ್ ವೀಲ್ಸ್ (Space On Wheels)" ಹೆಸರಿನ ವೀಡಿಯೊದಲ್ಲಿ ಚಂದ್ರಯಾನ-3 ಮಿಷನ್‌ಗೆ ಸಂಬಂಧಿಸಿದ ಛಾಯಾಚಿತ್ರಗಳನ್ನು ಬಹಿರಂಗಪಡಿಸಿದೆ. ಆ ಮೂಲಕ ಚಂದ್ರಯಾನ-3 ಸಾಹಸದ ಮೊದಲ ಚಿತ್ರಗಳು ಅಂತಿಮವಾಗಿ ಬಂದಿವೆ. ಈ ದೃಶ್ಯಾವಳಿಯು ಚಂದ್ರಯಾನ-3 ಲ್ಯಾಂಡರ್ ಅನ್ನು ಚಿತ್ರಿಕರಿಸಲಾಗಿದೆ.  ಮತ್ತು ಅದು ಚಂದ್ರ (Moon) ನ ಮೇಲೆ ಸ್ಪರ್ಶಿಸಲಿದೆ ಎಂಬುದನ್ನ ಕಾಣಬಹುದು. ಈ ಮಿಷನ್ ಚಂದ್ರಯಾನ-2 ಮಿಷನ್ನ ಅನುಸರಣೆಯಾಗಿದೆ. ಆದರೆ, ಮಿಷನ್ 2019ರಲ್ಲಿ ಕೈಗೊಂಡ ದುರದೃಷ್ಟವಶಾತ್ ಅದು ಚಂದ್ರನ ಡಾರ್ಕ್ ಸೈಡ್ಗೆ ಹೋಗಿ ಅಪ್ಪಳಿಸಿತ್ತು. ಸಾಕ್ಷ್ಯಚಿತ್ರ (Documentary) ವು ಚಂದ್ರಯಾನ-3 ಲ್ಯಾಂಡರ್ (Chandrayaan- 3 Lander) ಅನ್ನು ಚಿತ್ರಿಸುತ್ತದೆ, ಇದು ಭಾರತದ ಎರಡನೇ ಚಂದ್ರನ ಲ್ಯಾಂಡಿಂಗ್ ಪ್ರಯತ್ನವನ್ನು ನಿರ್ವಹಿಸುತ್ತದೆ. ವೀಡಿಯೊದಲ್ಲಿ ತೋರಿಸಿರುವ ಇತರ ISRO ಯೋಜನೆಗಳು ಗಗನಯಾನ (Gaganyaan), ಶುಕ್ರ ಆರ್ಬಿಟರ್ (Venus orbiter) ಮತ್ತು ಪ್ರಾಜೆಕ್ಟ್ ಎನ್ಐಎಸ್ಎಆರ್ (Project NISAR) ಇದು ಅಮೆರಿಕ-ಭಾರತ ಸಹಯೋಗವನ್ನು ಒಳಗೊಂಡಿವೆ.

Follow Us:
Download App:
  • android
  • ios