Asianet Suvarna News Asianet Suvarna News

ಶಿಕ್ಷಕರಿಗೆ ‘Google Guru’ ಸ್ಪರ್ಧಿ: ಬಸವರಾಜ ಬೊಮ್ಮಾಯಿ ಎಚ್ಚರಿಕೆ

‘ಬದಲಾದ ಕಾಲಘಟ್ಟದಲ್ಲಿ ಇಂದು ತಂತ್ರಜ್ಞಾನ ಪಾರಮ್ಯ ಮೆರೆದಿದೆ. ಶಿಕ್ಷಕರು, ಪ್ರಾಧ್ಯಾಪಕರಿಗೆ ‘ಗೂಗಲ್‌’ಗುರು ಸ್ಪರ್ಧಿಯಾಗಿದ್ದು ಜಾಗೃತರಾಗಿರಿ. ನಿಖರ ಮಾಹಿತಿಯನ್ನೇ ನೀಡಿ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರೆ ನೀಡಿದರು.

Google Guru competitor for teachers Basavaraja Bommai warn rav
Author
First Published Sep 6, 2022, 12:45 PM IST

ಬೆಂಗಳೂರು (ಸೆ.6) :‘ಬದಲಾದ ಕಾಲಘಟ್ಟದಲ್ಲಿ ಇಂದು ತಂತ್ರಜ್ಞಾನ ಪಾರಮ್ಯ ಮೆರೆದಿದೆ. ಶಿಕ್ಷಕರು, ಪ್ರಾಧ್ಯಾಪಕರಿಗೆ ‘ಗೂಗಲ್‌’ಗುರು ಸ್ಪರ್ಧಿಯಾಗಿದ್ದು ಜಾಗೃತರಾಗಿರಿ. ನಿಖರ ಮಾಹಿತಿಯನ್ನೇ ನೀಡಿ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರೆ ನೀಡಿದರು. ಉನ್ನತ ಶಿಕ್ಷಣ ಇಲಾಖೆಯಿಂದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಬೋಧನೆ ಮಾಡುವಾಗ ಶಿಕ್ಷಕರಿಗೆ ವಿಷಯದ ಬಗ್ಗೆ ಸ್ಪಷ್ಟತೆ ಇರಬೇಕು. ಇಲ್ಲದಿದ್ದರೆ ’ಗೂಗಲ್‌ ಗುರು’ ಮೂಲಕ ವಿದ್ಯಾರ್ಥಿಗಳು ಸರಿ ಉತ್ತರ ಕಂಡುಕೊಳ್ಳುತ್ತಾರೆ ಎಂಬ ಅರಿವಿರಲಿ. ನೈತಿಕತೆ, ತಂತ್ರಜ್ಞಾನ, ತಂತ್ರಾಂಶ ಆಧಾರಿತ ಶಿಕ್ಷಣ ನೀಡಿ ಮಕ್ಕಳನ್ನು ಸತ್ೊ್ರಜೆಗಳನ್ನಾಗಿ ಮಾಡಿ’ ಎಂದು ಸಲಹೆ ನೀಡಿದರು.

ಧಾರವಾಡದಲ್ಲಿ ಎನ್‌ಡಿಎ ಮಾದರಿಯ ತರಬೇತಿ ಕೇಂದ್ರ: ಸಿಎಂ ಬೊಮ್ಮಾಯಿ

‘ಎಲ್ಲ ತಿಳಿದುಕೊಳ್ಳುವ ಹಂಬಲ ಮತ್ತು ಮುಗ್ಧತೆ ಮಕ್ಕಳಲ್ಲಿ ಇರುತ್ತದೆ. ಪ್ರಶ್ನೆ ಕೇಳುವ ಹಕ್ಕು ನಿಮಗಿಂತ ಮಕ್ಕಳಿಗೆ ಅಧಿಕವಾಗಿದೆ. ಭೋಧನೆಯ ಶೈಲಿಯಿಂದ ಶಿಕ್ಷಕರು ವಿದ್ಯಾರ್ಥಿಗಳ ಪ್ರೀತಿಗೆ ಪಾತ್ರರಾದರೆ ಗಮನಾರ್ಹ ಬದಲಾವಣೆಯಾಗಲಿದ್ದು, ಉತ್ತಮ ಫಲಿತಾಂಶವೂ ಬರುತ್ತದೆ. ನೀವು ಕಲಿಸುವ ಶಿಕ್ಷಣ ನಿಜ ಜೀವನಕ್ಕೂ ಸಂಬಂಧ ಹೊಂದಿರಲಿ. ಹೀಗಾದರೆ ಯಾವಾಗಲೂ ವಿದ್ಯಾರ್ಥಿಗಳ ನೆನಪಿನಲ್ಲಿರುತ್ತೀರಿ’ ಎಂದು ವ್ಯಾಖ್ಯಾನಿಸಿದರು.

‘ಶಿಕ್ಷಕರು(Teachers) ವಿದ್ಯಾರ್ಥಿಗಳನ್ನು(Students) ಸ್ನೇಹಿತ()Friends(ರಂತೆ ನೋಡಬೇಕು. ಇದರಿಂದಾಗಿ ಮಕ್ಕಳು ಮನಬಿಚ್ಚಿ ತಮ್ಮ ಸಮಸ್ಯೆ ಹೇಳಿಕೊಂಡು ಪರಿಹಾರ ಕಂಡುಕೊಳ್ಳುತ್ತಾರೆ. ಶಿಕ್ಷಣ ಕ್ಷೇತ್ರದ ಸಮಗ್ರ ಬದಲಾವಣೆಗಾಗಿ ನೂತನ ಶಿಕ್ಷಣ ನೀತಿ ಜಾರಿಗೆ ತರಲಾಗಿದೆ. ನೀತಿ ಜಾರಿಗೆ ತಂದ ಮೊದಲ ರಾಜ್ಯ ಕರ್ನಾಟಕ ಎಂಬ ಹೆಗ್ಗಳಿಕೆಗೆ ನಾವು ಪಾತ್ರರಾಗಿದ್ದೇವೆ. ಇದರ ಅನುಷ್ಠಾನದಲ್ಲಿ ನಿಮ್ಮ ಶ್ರಮ ಬಹಳಷ್ಟಿದೆ ಎಂಬುದನ್ನು ಮರೆಯಬೇಡಿ’ ಎಂದು ತಿಳಿಸಿದರು.

ಸಮಸ್ಯೆ ಪರಿಹರಿಸಲು ಬದ್ಧ: ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ(Dr.C.N.Ashwath Narayan) ಮಾತನಾಡಿ, ಪ್ರಸ್ತುತ ವರ್ಷ ಉನ್ನತ ಶಿಕ್ಷಣಕ್ಕೆ ಸರ್ಕಾರ ಕಳೆದ ವರ್ಷಕ್ಕಿಂತ ಸಾವಿರ ಕೋಟಿ ರು. ಹೆಚ್ಚುವರಿ ಅನುದಾನ ನೀಡಿದೆ. ಕಾಲೇಜು ಉಪನ್ಯಾಸಕರ ನೇಮಕಾತಿ ಪೂರ್ಣಗೊಳಿಸಲಾಗಿದೆ. ನೂತನ 6 ವಿಶ್ವವಿದ್ಯಾಲಯಗಳು ಪೂರ್ಣಗೊಂಡಿದ್ದು, ಇನ್ನು 8 ವಿವಿಗಳನ್ನು ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಅಧ್ಯಾಪಕರ ಸಮಸ್ಯೆಗಳನ್ನು ಸೌಹಾರ್ದಯುತವಾಗಿ ಬಗೆಹರಿಸಲು ಸರ್ಕಾರ ಬದ್ಧವಾಗಿದೆ ಎಂದು ಭರವಸೆ ನೀಡಿದರು.

 

ಕರ್ನಾಟಕದಲ್ಲಿ 6 ಹೊಸ ನಗರ ನಿರ್ಮಾಣಕ್ಕೆ ತೀರ್ಮಾನ: ಸಿಎಂ ಬೊಮ್ಮಾಯಿ

ಈಗಾಗಲೇ 375 ಅಧ್ಯಾಪಕರಿಗೆ ಪ್ರಾಧ್ಯಾಕಪ ಹುದ್ದೆಗೆ ಬಡ್ತಿ ನೀಡಲಾಗಿದೆ. 2015ರಿಂದ ಬಾಕಿ ಉಳಿದಿರುವ ಶಿಕ್ಷಕರ ಖಾಲಿ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಸಲು ಕ್ರಮ ಕೈಗೊಳ್ಳಲಾಗಿದೆ. ಖಾಲಿ ಇರುವ ಎಲ್ಲಾ ಹುದ್ದೆ ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುವುದು. ಹೊಸ ಶಿಕ್ಷಣ ಪದ್ಧತಿಯಿಂದ ವಿದ್ಯಾರ್ಥಿಗಳಿಗೆ ಸಾಕಷ್ಟುಅವಕಾಶ ಸಿಕ್ಕಿದೆ ಎಂದು ಹೇಳಿದರು. ಗದಗದ ರಾಮಕೃಷ್ಣ ವಿವೇಕಾನಂದ ಆಶ್ರಮ(Gadag Ramakrishna Vivekanand Ashrama)ದ ಅಧ್ಯಕ್ಷ ನಿರ್ಭಯಾನಂದ ಸರಸ್ವತಿ ಸ್ವಾಮೀಜಿ, ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜು, ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ವಿ.ರಶ್ಮಿ ಮಹೇಶ್‌ ಮತ್ತಿತರರು ಉಪಸ್ಥಿತರಿದ್ದರು.

Follow Us:
Download App:
  • android
  • ios