10ನೇ ತರಗತಿ ಪಾಸ್‌ ಆದವರಿಗೆ ರೈಲ್ವೆಯಲ್ಲಿ ಬಂಪರ್‌ ಆಫರ್

ರೈಲ್ವೆ ಇಲಾಖೆ ನಿರುದ್ಯೋಗಿಗಳಿಗೆ ಖುಷಿ ಸುದ್ದಿ ನೀಡಿದೆ. ಮೂರು ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳ ನೇಮಕಕ್ಕೆ ಇಲಾಖೆ ಮುಂದಾಗಿದೆ. ಹತ್ತನೇ ತರಗತಿ ಪಾಸ್ ಆಗಿ ಐಐಟಿ ಮುಗಿಸಿರುವ ಅಭ್ಯರ್ಥಿಗಳಿಗೆ ಬಂಪರ್ ಆಫರ್ ಸಿಗ್ತಿದೆ.
 

Railway recruitment notification

ಭಾರತೀಯ ರೈಲ್ವೆ ಇಲಾಖೆ (Indian Railway Department) ಯಲ್ಲಿ ಉದ್ಯೋಗ ಪಡೆಯಲು ಆಸಕ್ತಿ ಹೊಂದಿದ್ದರೆ ನಿಮಗೊಂದು ಸುವರ್ಣಾವಕಾಶವಿದೆ. ಭಾರತೀಯ ರೈಲ್ವೆ ಇಲಾಖೆ, ಒಂದರ ಹಿಂದೆ ಒಂದರಂತೆ ಬಂಪರ್ ನೇಮಕಾತಿಗೆ ಮಾಡಿಕೊಳ್ತಿದೆ. ಈಗ ಆರ್ ಆರ್ ಸಿ ಪೂರ್ವ ರೈಲ್ವೆ (RRC Eastern Railway) ಯು, ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. 3,115 ಹುದ್ದೆಗಳು ಖಾಲಿ ಇದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಸೆಪ್ಟೆಂಬರ್ 23ರಿಂದಲೇ ಆನ್ಲೈನ್ ಅರ್ಜಿ (Online Application) ಸಲ್ಲಿಕೆಗೆ ಅವಕಾಶ ನೀಡಲಾಗಿದ್ದು, ಅಭ್ಯರ್ಥಿಗಳು ಅಕ್ಟೋಬರ್ 23, 2024 ರ ಒಳಗೆ ಅರ್ಜಿ ಸಲ್ಲಿಸಬೇಕು. ಆ ನಂತ್ರ ಸಲ್ಲಿಸಿದ ಅರ್ಜಿಯನ್ನು ಮಾನ್ಯ ಮಾಡಲಾಗುವುದಿಲ್ಲ. ಅಪ್ಲಿಕೇಶನ್ ಪ್ರಕ್ರಿಯೆಯು RRC rrcrecruit.co.in ನ ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿದೆ.

ರೈಲ್ವೆ ಇಲಾಖೆಯಲ್ಲಿ ಕೆಲಸ : 

ಹುದ್ದೆ ಹೆಸರು (Post Name) :  ಅಪ್ರೆಂಟಿಸ್ ಪೋಸ್ಟ್‌ (Apprentice Post) ಗಳು. ವಿವಿಧ ವಿಭಾಗಗಳಿಗೆ ಫಿಟ್ಟರ್, ವೆಲ್ಡರ್, ಮೆಕ್ಯಾನಿಕ್, ಕಾರ್ಪೆಂಟರ್, ಪೇಂಟರ್, ಎಲೆಕ್ಟ್ರಿಷಿಯನ್ ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.  

ಒಟ್ಟು ಹುದ್ದೆ : 3,115 

ಬೆಂಗಳೂರು ಟೆಕ್ಕಿಗೆ ಜಾಬ್‌ interview ಅಲ್ಲಿ ಭಾರತದ ಧ್ವಜ ಚಿತ್ರಿಸುವಂತೆ ಹೇಳಿದ ಕಂಪನಿ!

ಕೊನೆಯ ದಿನಾಂಕ (Last Date) : ಅಕ್ಟೋಬರ್ 23, 2024

 ಅರ್ಹತೆ (Eligibility) : ಅಭ್ಯರ್ಥಿಯು ಮಾನ್ಯತೆ ಪಡೆದ ಮಂಡಳಿಯಿಂದ 10 ನೇ ತರಗತಿಯಲ್ಲಿ ಶೇಕಡಾ 50 ಅಂಕ ಪಡೆದು ಉತ್ತೀರ್ಣರಾಗಿರಬೇಕು. ಅಲ್ಲದೆ ಆಯಾ ಕ್ಷೇತ್ರದಲ್ಲಿ ಐಟಿಐ ಸರ್ಟಿಫಿಕೆಟ್ ಹೊಂದಿರಬೇಕು.

ವಯಸ್ಸಿನ ಮಿತಿ : ಅಪ್ರೆಂಟಿಸ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ಕನಿಷ್ಠ 15 ವರ್ಷಗಳು. ಗರಿಷ್ಠ 24 ವರ್ಷಗಳು. ಕಾಯ್ದಿರಿಸಿದ ವರ್ಗಕ್ಕೆ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುವುದು.

ಅರ್ಜಿ ಶುಲ್ಕ (Application Fee) : ಸಾಮಾನ್ಯ ವರ್ಗ, ಅರ್ಜಿ ಶುಲ್ಕವಾಗಿ 100 ರೂಪಾಯಿ ಪಾವತಿಸಬೇಕು. ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿಲ್ಲ.

ತರಬೇತಿಯ ಅವಧಿ : ಆಯ್ಕೆಯಾದ ಅಭ್ಯರ್ಥಿಗಳು ವಿವಿಧ ವಿಭಾಗಗಳಲ್ಲಿ 1 ವರ್ಷದ ತರಬೇತಿಯನ್ನು ಪಡೆಯುತ್ತಾರೆ.

ಸ್ಟೈಪೆಂಡ್ (Stipend) : ಸರ್ಕಾರದ ನಿಯಮಗಳ ಪ್ರಕಾರ ಅಪ್ರೆಂಟಿಸ್‌ಶಿಪ್ ತರಬೇತಿಯ ಸಮಯದಲ್ಲಿ ಅಭ್ಯರ್ಥಿಗಳಿಗೆ ಸ್ಟೈಫಂಡ್ ನೀಡಲಾಗುವುದು.

ಆಯ್ಕೆ ಪ್ರಕ್ರಿಯೆ : ಈ ಹುದ್ದೆಗೆ ಯಾವುದೇ ಲಿಖಿತ ಪರೀಕ್ಷೆ ನಡೆಯುತ್ತಿಲ್ಲ. 10ನೇ ತರಗತಿ ಮತ್ತು ಐಟಿಐ ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳ ಶಾರ್ಟ್‌ಲಿಸ್ಟ್ ಸಿದ್ಧವಾಗುವುದು. ನಂತರ ಅಭ್ಯರ್ಥಿಗಳ ದಾಖಲೆ ಪರಿಶೀಲನೆ ನಡೆಸಿ, ಅಭ್ಯರ್ಥಿಗಳ ನೇಮಕ ನಡೆಯಲಿದೆ. 

ಮ್ಯಾನೇಜರ್ ಬೇಡಿಕೆಗೆ ಬೇಸತ್ತು, ಮೊದಲ ದಿನವೇ ಕೆಲಸ ಬಿಟ್ಟ ಉದ್ಯೋಗಿ!

ಅಪ್ಲಿಕೇಶನ್ ಪ್ರಕ್ರಿಯೆ : ನೀವು ಆನ್ಲೈನ್ ನಲ್ಲಿ ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಅಧಿಕೃತ ವೆಬ್‌ಸೈಟ್ rrcrecruit.co.in  ಗೆ ಭೇಟಿ ನೀಡಿ. ಮುಖಪುಟದಲ್ಲಿ ಆಕ್ಟ್ ಅಪ್ರೆಂಟಿಸ್‌ಗಾಗಿ ಆನ್‌ಲೈನ್ ಅಪ್ಲಿಕೇಶನ್ 2024-25  ಅನ್ನು ಕ್ಲಿಕ್ ಮಾಡಿ. ನಂತರ ಹೊಸ ನೋಂದಣಿ ಲಿಂಕ್‌ಗೆ ಹೋಗಿ ಮತ್ತು ಅಗತ್ಯವಿರುವ ವಿವರಗಳನ್ನು ಭರ್ತಿ ಮಾಡಿ. ಫಾರ್ಮ್ ಅನ್ನು ಭರ್ತಿ ಮಾಡಿ. ಕೇಳಿದ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ ಮತ್ತು ಶುಲ್ಕವನ್ನು ಪಾವತಿಸಿ. ಫಾರ್ಮ್ ಅನ್ನು ಸಲ್ಲಿಸಿ ಮತ್ತು ಅಪ್ಲಿಕೇಶನ್‌ನ ಪ್ರಿಂಟ್‌ಔಟ್ ತೆಗೆದುಕೊಳ್ಳಿ.

ಮುಖ್ಯ ಮಾಹಿತಿ : ಪರೀಕ್ಷೆ ಫಲಿತಾಂಶ ಬರದ ಯಾವುದೇ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವಂತಿಲ್ಲ. ಹಾಗೆಯೇ ಪದವಿ, ಇಂಜಿನಿಯರ್ ವಿದ್ಯಾರ್ಥಿಗಳಿಗೆ ಕೂಡ ಅರ್ಜಿ ಸಲ್ಲಿಸಲು ಅವಕಾಶವಿಲ್ಲ. 
 

Latest Videos
Follow Us:
Download App:
  • android
  • ios