ಕನ್ನಡ ಸೇರಿದಂತೆ ಪ್ರಾದೇಶಿಕ ಭಾಷೆಯಲ್ಲೂ ಇನ್ನು ಸಿಬಿಎಸ್‌ಇ ಶಿಕ್ಷಣ
ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಅಡಿ ತನ್ನ ನಿಯಮ ಬದಲಿಸಿಕೊಂಡಿರುವ ಕೇಂದ್ರೀಯ ಪಠ್ಯಕ್ರಮದ ಸಿಬಿಎಸ್‌ಇ, ಇನ್ನು ಪ್ರಾದೇಶಿಕ ಭಾಷೆಗಳ ಮಾಧ್ಯಮಗಳಲ್ಲೂ ಶಿಕ್ಷಣ ನೀಡಬಹುದು ಎಂದು ತನ್ನ ಅಧೀನದ ಶಾಲೆಗಳಿಗೆ ಸೂಚಿಸಿದೆ.
ನವದೆಹಲಿ: ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಅಡಿ ತನ್ನ ನಿಯಮ ಬದಲಿಸಿಕೊಂಡಿರುವ ಕೇಂದ್ರೀಯ ಪಠ್ಯಕ್ರಮದ ಸಿಬಿಎಸ್‌ಇ, ಇನ್ನು ಪ್ರಾದೇಶಿಕ ಭಾಷೆಗಳ ಮಾಧ್ಯಮಗಳಲ್ಲೂ ಶಿಕ್ಷಣ ನೀಡಬಹುದು ಎಂದು ತನ್ನ ಅಧೀನದ ಶಾಲೆಗಳಿಗೆ ಸೂಚಿಸಿದೆ. ಈವರೆಗೆ ಸಿಬಿಎಸ್‌ಇ ಶಾಲೆಗಳು ಇಂಗ್ಲಿಷ್ ಮಾಧ್ಯಮದಲ್ಲಿ ಮಾತ್ರ ನಡೆಯುತ್ತಿದ್ದವು. ಹೊಸ ಸೂಚನೆಯಿಂದ ಇನ್ನು ರಾಜ್ಯ ಪಠ್ಯಕ್ರಮಗಳ ಶಾಲೆಯಂತೆ ಕನ್ನಡದಂಥ ಪ್ರಾದೇಶಿಕ ಭಾಷಾ ಮಾಧ್ಯಮದಲ್ಲೂ ಸಿಬಿಎಸ್‌ಇ ಶಾಲೆಗಳು ಬೋಧನೆ ನಡೆಸಬಹುದಾಗಿದೆ.
ಈ ಬಗ್ಗೆ ಶಾಲೆಗಳಿಗೆ ಪತ್ರ ಮುಖೇನ ಸೂಚನೆ ನೀಡಿರುವ ಸಿಬಿಎಸ್‌ಇ, ಪ್ರಾದೇಶಿಕ ಭಾಷೆಯಲ್ಲೂ ಶಿಕ್ಷಣಕ್ಕೆ ಮಹತ್ವ ನೀಡಬೇಕು ಎಂಬ ಎನ್‌ಇಪಿ ನೀತಿಯಂತೆ ಸಿಬಿಎಸ್ಇ ಶಾಲೆಗಳು ತಮ್ಮಲ್ಲಿನ ಲಭ್ಯ ಸಂಪನ್ಮೂಲ ಬಳಸಿಕೊಂಡು ತಜ್ಞರ ಸಂಪರ್ಕಿಸಲು ಹಾಗೂ ಇತರ ಶಾಲೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ಬಹುಭಾಷೆಗಳಲ್ಲಿ ಶಿಕ್ಷಣ ನೀಡಬಹುದು. ಇದಲ್ಲದೇ ಮುಂದಿನ ವರ್ಷದಿಂದ ಸಿಬಿಎಸ್‌ಇ ಪಠ್ಯಗಳು 22 ನಿಗದಿತ ಭಾಷೆಗಳಲ್ಲಿ ಲಭ್ಯ ಆಗಲಿವೆ ಎಂದಿದೆ.
12ನೇ ತರಗತಿ ಪರೀಕ್ಷೇಲಿ 80 ಬಾರಿಸಿದ ಶಫಾಲಿ ವರ್ಮಾ..!
CBSE ಟಾಪರ್, ಐಎಎಫ್ ಕೆಲಸ, ಎಲ್ಲವನ್ನೂ ಬಿಟ್ಟು ಈಕೆ ಆಯ್ಕೆ ಮಾಡಿಕೊಂಡಿದ್ದು ಕ್ರಿಕೆಟ್!