Uttara Kannada :ಮಾತೃಭಾಷಾ ಶಿಕ್ಷಣಕ್ಕೆ ಒತ್ತು: ಸಚಿವ ನಾಗೇಶ

ಶಿಕ್ಷಣಕ್ಕೆ ಬಿಜೆಪಿ ಸರ್ಕಾರದ ಅಪಾರ ಕೊಡುಗೆ ನೀಡಿದ್ದು, ಮುಂದಿನ ದಿನದಲ್ಲಿ ಮಾತೃ ಭಾಷಾ ಶಿಕ್ಷಣಕ್ಕೆ ಒತ್ತು ನೀಡುವುದಾಗಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ ಹೇಳಿದರು. ನಮ್ಮಲ್ಲಿ ಮೆಕಾಲೆ ಶಿಕ್ಷಣ ಪದ್ಧತಿಯ ಮೂಲಕ ಶಿಕ್ಷಣ ವ್ಯವಸ್ಥೆ ಹದಗೆಟ್ಟಿತ್ತು. ಇದೀಗ ಹೊಸ ಶಿಕ್ಷಣ ಪದ್ಧತಿ ಜಾರಿಗೆ ತಂದು ಮೌಲ್ಯಧಾರಿತ ಶಿಕ್ಷಣದ ಜತೆ ಸ್ವಾವಲಂಬಿ ಶಿಕ್ಷಣ ಅನುಷ್ಠಾನಕ್ಕೆ ಮುಂದಾಗಿದ್ದೇವೆ ಎಂದರು.

Emphasis on mother tongue education says Minister Nagesh rav

ಹೊನ್ನಾವರ (ಡಿ.10) : ಶಿಕ್ಷಣಕ್ಕೆ ಬಿಜೆಪಿ ಸರ್ಕಾರದ ಅಪಾರ ಕೊಡುಗೆ ನೀಡಿದ್ದು, ಮುಂದಿನ ದಿನದಲ್ಲಿ ಮಾತೃ ಭಾಷಾ ಶಿಕ್ಷಣಕ್ಕೆ ಒತ್ತು ನೀಡುವುದಾಗಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ ಹೇಳಿದರು. ತಾಲೂಕಿನ ಹೆರಂಗಡಿ ಕ್ಲಸ್ಟರ್‌ ಮಟ್ಟದ ಜಲವಳಕರ್ಕಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿ, ಧ್ವಜಸ್ತಂಭ, ನಲಿ-ಕಲಿ ಕೊಠಡಿ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜ ಮತ್ತು ದೇಶವನ್ನು ಅಭಿವೃದ್ಧಿಪಡಿಸಲು ಶಾಲೆ ಬಹುಮುಖ್ಯ ಪಾತ್ರ ವಹಿಸಲಿದೆ ಎಂದರು.

ನಮ್ಮಲ್ಲಿ ಮೆಕಾಲೆ ಶಿಕ್ಷಣ ಪದ್ಧತಿಯ ಮೂಲಕ ಶಿಕ್ಷಣ ವ್ಯವಸ್ಥೆ ಹದಗೆಟ್ಟಿತ್ತು. ಇದೀಗ ಹೊಸ ಶಿಕ್ಷಣ ಪದ್ಧತಿ ಜಾರಿಗೆ ತಂದು ಮೌಲ್ಯಧಾರಿತ ಶಿಕ್ಷಣದ ಜತೆ ಸ್ವಾವಲಂಬಿ ಶಿಕ್ಷಣ ಅನುಷ್ಠಾನಕ್ಕೆ ಮುಂದಾಗಿದ್ದೇವೆ. ಶಿಕ್ಷಣ ವ್ಯವಸ್ಥೆಯ ಬಲವರ್ಧನೆಗೆ ಅಟಲ್‌ ಬಿಹಾರಿ ವಾಜಪೇಯಿ ಅವರು ಸರ್ವಶಿಕ್ಷಾ ಅಭಿಯಾನ, ನರೇಂದ್ರ ಮೋದಿ ಅವರು ಹೊಸ ಶಿಕ್ಷಣ ನೀತಿ ಜಾರಿಗೊಳಿಸಿದ್ದಾರೆ ಎಂದರು.

ಶಿಕ್ಷಣದಲ್ಲಿ ಭಾರತೀಯತೆ ತರಲು ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ: ಶಿಕ್ಷಣ ಸಚಿವ ನಾಗೇಶ್

ಶಾಲಾ ಶತಮಾನೊತ್ಸವ ಕಾರ್ಯಕ್ರಮ ಉದ್ಘಾಟಿಸಿದ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ, ಶಿಕ್ಷಣ ಎಂದರೆ ಕೇವಲ ಅಂಕ ಪಡೆಯುವುದು ಮಾತ್ರವಲ್ಲ, ಸಂಸ್ಕಾರ, ಯೋಗ್ಯ ಶಿಕ್ಷಣ ಪಡೆಯುವುದಾಗಿದೆ. ಮಕ್ಕಳನ್ನು ಹಣ ಗಳಿಸುವ ಯಂತ್ರವಾಗಿಸದೇ ಮಾನವೀಯ ಹೃದಯವುಳ್ಳ ವ್ಯಕ್ತಿಯಾಗಿಸಿ ಎಂದು ಸಲಹೆ ನೀಡಿದರು.

ಇಲ್ಲಿನ ಜನತೆ ಸಂಭ್ರಮ, ಶಾಲೆ ಎಂಬ ಅಭಿಮಾನದಿಂದ ಹಬ್ಬದ ರೀತಿಯಲ್ಲಿ ಶಾಲಾ ಶತಮಾನೋತ್ಸವ ಆಚರಿಸಿದ್ದಾರೆ. ಇಂದು ಯಾವುದೇ ಸರ್ಕಾರಿ ಶಾಲೆಗಳು, ಖಾಸಗಿ ಶಾಲೆಗಳಿಗೆ ಕಡಿಮೆ ಇಲ್ಲದ ರೀತಿಯಲ್ಲಿದೆ. ಯಾವಾಗಲೂ ಕಲಿತ ಶಾಲೆಯೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿರಬೇಕು ಎಂದರು. ಶಾಲಾ ವಿದ್ಯಾರ್ಥಿಗಳ ಜಲಧಿ ಹಸ್ತಪತ್ರಿಕೆ, ಶತಮಾನೋತ್ಸವ ಸ್ಮರಣ ಸಂಚಿಕೆ ವಿದ್ಯಾ ಶರಾವತಿಯನ್ನು ಗಣ್ಯರು ಬಿಡುಗಡೆಗೊಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಸುನೀಲ ನಾಯ್ಕ ಮಾತನಾಡಿ, ಈ ಗ್ರಾಮದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡುವ ದಿನವಾಗಿದೆ. ಶಿಕ್ಷಣ ಇಲಾಖೆಯ ಹಾಲಿ ಮಾಜಿ ಸಚಿವರಿಬ್ಬರು ಒಂದೇ ವೇದಿಕೆಯಲ್ಲಿ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ಅವಿಸ್ಮರಣೀಯವಾಗಿದೆ. ನನ್ನ ಕ್ಷೇತ್ರದಲ್ಲಿ ಇಬ್ಬರು ಸಚಿವರು ಶಾಲಾ ಕೊಠಡಿಗೆ ಹೆಚ್ಚಿನ ಅನುದಾನ ನೀಡುವ ಮೂಲಕ ಪ್ರೋತ್ಸಾಹಿಸಿದ್ದಾರೆ. ಮುಂದೆಯೂ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡುವಂತೆ ಮನವಿ ಮಾಡಿದರು.

ರಾಜ್ಯ ಪಶ್ಚಿಮ ಘಟ್ಟಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷ ಗೋವಿಂದ ನಾಯ್ಕ, ಗ್ರಾಪಂ ಅಧ್ಯಕ್ಷ ಮಂಜುಳಾ ಗೌಡ, ತಹಸೀಲ್ದಾರ ನಾಗರಾಜ ನಾಯ್ಕರ್‌, ಶಿಕ್ಷಣಾಧಿಕಾರಿ ಜಿ.ಎಸ್‌. ನಾಯ್ಕ, ಸಾಹಿತಿ ಸುಮುಖಾನಂದ ಜಲವಳ್ಳಿ, ಶತಮಾನೋತ್ಸವ ಸಮಿತಿ ಅಧ್ಯಕ್ಷ ಶ್ರೀಧರ ನಾಯ್ಕ, ಗ್ರಾಪಂ ಸದಸ್ಯರು, ಶಿಕ್ಷಣ ಇಲಾಖೆಯ ಅಧಿಕಾರಿಗಳು ಮತ್ತಿತರು ಇದ್ದರು.

ಶಿಕ್ಷಣ ಇಲಾಖೆಯ ಉಪನಿರ್ದೇಶಕ ಈಶ್ವರ ನಾಯ್ಕ ಸ್ವಾಗತಿಸಿದರು. ಎಂ.ಎನ್‌. ಸುಬ್ರಹ್ಮಣ್ಯ ಅಭಿನಂದನಾ ನುಡಿಗಳನ್ನಾಡಿದರು. ಯುವಜನಸೇವಾ ಕ್ರೀಡಾಧಿಕಾರಿ ಸುಧೀಶ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.

Karnataka Teacher Recruitment: 13363 ಶಿಕ್ಷಕರ ನೇಮಕ: ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

ಪಠ್ಯದಲ್ಲಿ ಭಗವದ್ಗೀತೆ: ಸ್ಪೀಕರ್‌

ಶಿಕ್ಷಣದಲ್ಲಿ ಭಾರತೀಯ ದೃಷ್ಟಿಕೋನದ ಇತಿಹಾಸ ತಿಳಿಸುವಂತಹ ಶಿಕ್ಷಣ ಜಾರಿಗೆ ತರುವಂತಹ ಪ್ರಯತ್ನ ನಡೆಯುತ್ತಿದೆ. ಪಠ್ಯದಲ್ಲಿ ಭಗವದ್ಗೀತೆ ಅಳವಡಿಸುವ ಯೋಜನೆ ಕಾರ್ಯರೂಪದಲ್ಲಿದೆ. ಅದರಲ್ಲಿನ ವಿಷಯಗಳು ಸದಾ ಪ್ರಸ್ತುತವಾಗಿರಬೇಕು. ಜೀವನದ ಸಾರ್ಥಕತೆ ತೆರೆದುಕೊಟ್ಟಿದೆ. ಪ್ರತಿ ಮನೆಗಳಲ್ಲಿ ಶಾಲೆಯಂತೆ ಯೋಗ್ಯ ಶಿಕ್ಷಣ ದೊರೆಯುವಂತಾಗಬೇಕು ಎಂದು ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

Latest Videos
Follow Us:
Download App:
  • android
  • ios