980 ಖಾಸಗಿ ಶಾಲೆಗಳಿಗೆ ಕುತ್ತು ತಂದ ಶಿಕ್ಷಣ ಇಲಾಖೆ ಹೊಸ ಆದೇಶ
ಶಿಕ್ಷಣ ಇಲಾಖೆ ಹೊಸ ಆದೇಶಕ್ಕೆ 980 ಖಾಸಗಿ ಶಾಲೆಗಳಿಗೆ ಸಂಕಷ್ಟ ಎದುರಾಗಿದೆ. ಆದೇಶದಲ್ಲಿ ಅನಧಿಕೃತ ಪಟ್ಟಿಗೆ ಸೇರಿಸಲು ಶಿಕ್ಷಣ ಇಲಾಖೆ ತಯಾರಿ ನಡೆಸಿದೆ.
ವರದಿ- ನಂದೀಶ್ ಮಲ್ಲೇನಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್
ಬೆಂಗಳೂರು (ಜುಲೈ 23): ಶಿಕ್ಷಣ ಇಲಾಖೆ ಹೊಸ ಆದೇಶಕ್ಕೆ ಖಾಸಗಿ ಶಾಲೆಗಳಿಗೆ ಸಂಕಷ್ಟ ಎದುರಾಗಿದೆ.ಸುಮಾರು 980 ಕ್ಕೂ ಹೆಚ್ಚು ಖಾಸಗಿ ಶಾಲೆಗಳಿಗೆ ಸಂಕಷ್ಟ ಎದುರಾಗಿದ್ದು, ಶಾಲೆಯಲ್ಲಿ ಓದುತ್ತಿರುವ ಸುಮಾರು 30000 ಸಾವಿರ ವಿದ್ಯಾರ್ಥಿಗಳು ಶಾಲೆಯಿಂದ ಹೊರ ಬೀಳುವಂತ ಸ್ಥಿತಿ ನಿರ್ಮಾಣವಾಗಲಿದೆ ಅಂತ ಖಾಸಗಿ ಶಾಲೆಗಳ ಒಕ್ಕೂಟ ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಹೇಳಿದ್ದಾರೆ. ಈಗಾಗಲೇ ಶಾಲೆಗಳಲ್ಲಿ
1 ರಿಂದ 10 ನೇ ತರಗತಿವರೆಗೆ ವಿದ್ಯಾರ್ಥಿಗಳು ವ್ಯಾಸಂಗ ಮಾಡ್ತಾ ಇದ್ದಾರೆ.ಆದ್ರೆ ದಿನಕ್ಕೊಂದು ಆದೇಶ ಹೊರಡಿಸುವ ಮೂಲಕ ಶಿಕ್ಷಣ ಇಲಾಖೆ ಖಾಸಗಿ ಶಾಲೆಗಳ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಅಂತ ಆಕ್ರೋಶ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳ ಶುಲ್ಕ ಆಯಾ ಕಾಲೇಜುಗಳ ಶೈಕ್ಷಣಿಕ ಅಭಿವೃದ್ಧಿಗೆ ಮೀಸಲು: ಅಶ್ವತ್ಥ್ ನಾರಾಯಣ್
ಶಿಕ್ಷಣ ಇಲಾಖೆಯ ದಿನಕ್ಕೊಂದು ಆದೇಶ:
\2022-23 ರ ಶೈಕ್ಷಣಿಕ ವರ್ಷಕ್ಕೆ ಅನುಮತಿ ಕೋರಿ ಅರ್ಜಿ ಸಲ್ಲಿಸಲು ಸುತ್ತೋಲೆ ಹೊರಡಿಸಿದ್ದ ಶಿಕ್ಷಣ ಇಲಾಖೆ(Department of Education) ಜುಲೈ 19 ರಿಂದ ಜುಲೈ 25 ರವರೆಗೆ ಆನ್‌ಲೈನ್(Online) ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಇದೀಗ ಮತ್ತೆ ಶಿಕ್ಷಣ ಇಲಾಖೆ ಆದೇಶ ಬದಲಾಯಿಸಿ ಮತ್ತೊಂದು ಆದೇಶ ಹೊರಡಿಸಿದೆ.ಅದೇನೆಂದರೆ 2022-23 ರ ಶೈಕ್ಷಣಿಕ ವರ್ಷದ ಮಾನ್ಯತೆ ಅವಧಿ ಮುಕ್ತಾಯವಾಗಿದ್ದು, ಮಾನ್ಯತೆ ಇಲ್ಲದೆ ಶಾಲೆಗಳನ್ನ ಕಾನೂನು ಬಾಹಿರ ಎಂದು ಘೋಷಣೆ ಮಾಡುವಂತೆ ಎಲ್ಲಾ ಬಿಇಒ(BEO) ಗಳಿಗೆ ಸೂಚನೆ ನೀಡಲಾಗಿದ್ದು,ಅನಧಿಕೃತ ಶಾಲೆಗಳ ಬಗ್ಗೆ ಮಾಹಿತಿ ನೀಡುವಂತೆ ಆದೇಶ ನೀಡಿದ್ದಾರೆ. ಆದ್ರೆ ಈ ಆದೇಶ ಜಾರಿಯಾದ್ರೆ ಸಾವಿರಾರು ಶಾಲೆಗಳು ಸಂಕಷ್ಟಕ್ಕೆ ಸಿಲುಕಲಿದ್ದು, ವಿದ್ಯಾರ್ಥಿಗಳು ಭವಿಷ್ಯ ತೊಡಕಾಗಲಿದೆ.ಶಾಲೆಗಳ ಮಾನ್ಯತೆ ಪಡೆದುಕೊಳ್ಳಲು ಅರ್ಜಿ ಆಹ್ವಾನಿಸಿ ಕೇವಲ 6 ದಿನಕ್ಕೆ ಕ್ಲೋಸ್ ಮಾಡಿದ ಶಿಕ್ಷಣ ಇಲಾಖೆ ವಿರುದ್ಧ ಖಾಸಗಿ ಶಾಲಾ ಆಡಳಿತ ಮಂಡಳಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಿಕ್ಷಣ ಇಲಾಖೆ ವಿರುದ್ಧವೇ ಬೀದಿಗಿಳಿದ ಸರ್ಕಾರಿ ಶಾಲೆಯ ಮಕ್ಕಳು!
ಶಿಕ್ಷಣ ಇಲಾಖೆಯ ಆದೇಶದಿಂದ ಬಿಇಒಗಳಿಗೆ ಹಣ ಮಾಡಿಕೊಳ್ಳಲು ದಾರಿಮಾಡಿ ಕೊಟ್ಟಂತಾಗಿದೆ ಅಂತ ಖಾಸಗಿ ಶಾಲಾ ಒಕ್ಕೂಟ ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 2022-23 ನೇ ಶೈಕ್ಷಣಿಕ ವರ್ಷಕ್ಕೆ ಮಾನ್ಯತೆ ಪಡೆದುಕೊಳ್ಳಲು ಅರ್ಜಿ ಸಲ್ಲಿಸಿದ್ದ ಶಾಲೆಗಳು ಈಗಾಗಲೇ ಅರ್ಜಿ ಸಲ್ಲಿಸಿರುವ ಶಾಲೆಗಳು ಅನಧಿಕೃತ ಪಟ್ಟಿಗೆ ಸೇರಿಸಲು ಆದೇಶ ಮಾಡಲಾಗಿದು, ಸುಮಾರು 980 ಶಾಲೆಗಳು ಅನಧಿಕೃತ ಪಟ್ಟಿಗೆ ಸೇರುವ ಸಾಧ್ಯತೆ ಎನ್ನಲಾಗಿದೆ.ಈಗಾಗಲೇ ಶಿಕ್ಷಣ ಇಲಾಖೆ ವಿಧಿಸಿದ್ದ ಎಲ್ಲಾ ಷರತ್ತುಗಳನ್ನ ಶಾಲೆಗಳು ತೆಗೆದುಕೊಂಡು ಶಾಲೆಯ ಮಾನ್ಯತೆ ಪಡೆದುಕೊಳ್ಳಲು ಅರ್ಜಿ ಸಲ್ಲಿಸಲಾಗಿತ್ತು ಅಂತ ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಹೇಳಿದ್ದಾರೆ. ಆಲ್ಲದೆ ಶಿಕ್ಷಣ ಇಲಾಖೆ ಹೊರಡಿಸಿರುವ ಆದೇಶ ಕೂಡಲೇ ಹಿಂಪಡೆಯುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.