ಶಿಕ್ಷಣ ಇಲಾಖೆ ವಿರುದ್ಧವೇ ಬೀದಿಗಿಳಿದ ಸರ್ಕಾರಿ ಶಾಲೆಯ ಮಕ್ಕಳು!

ಶಾಲೆ ಸಂಪೂರ್ಣವಾಗಿ ಶಿಥಿಲಾವಸ್ಥೆ ತಲುಪಿದ್ದರೂ, ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಹಾಗು ಸ್ಥಳೀಯ ಶಿಕ್ಷಣ ಇಲಾಖೆಯ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ಬೇಸತ್ತ ಸರ್ಕಾರಿ ಶಾಲೆಯ ಮಕ್ಕಳು, ಇಲಾಖೆಯ ಅಧಿಕಾರಿಗಳ ವಿರುದ್ಧವೇ ಬೀದಿಗಿಳಿದು ಪ್ರತಿಭಟನೆ ಮಾಡಿದ್ದು, ಸೂಕ್ತ ವ್ಯವಸ್ಥೆ ಮಾಡುವಂತೆ ಆಗ್ರಹಿಸಿದ್ದಾರೆ, ತರಗತಿಗಳನ್ನು ಬಹಿಷ್ಕರಿಸಿ ಮಕ್ಕಳು ಪ್ರತಿಭಟನೆ ಮಾಡಿದ್ದಾರೆ.

government School Childrens protest against education department In haveri san

ವರದಿ - ಪವನ್ ಕುಮಾರ್ , ಏಷ್ಯಾನೆಟ್ ಸುವರ್ಣ ನ್ಯೂಸ್ ಹಾವೇರಿ
ಹಾವೇರಿ ( ಜುಲೈ 11):
 ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ಸುರಿಯುತ್ತಿರುವ ಜಿಟಿ ಜಿಟಿ ಮಳೆಗೆ ಜನ ಜೀವನವೆಲ್ಲಾ ಅಸ್ತವ್ಯಸ್ಥವಾಗಿದೆ. ಅದರಲ್ಲೂ ಶಾಲಾ ಮಕ್ಕಳ ಗೋಳಂತೂ ಹೇಳತೀರದು. ನಿರಂತರ ಮಳೆಯಿಂದ ಸರ್ಕಾರಿ ಶಾಲೆಯೊಂದು ಶಿಥಿಲಾವಸ್ಥೆ ತಲುಪಿದೆ. ಬಿರುಕು ಬಿಟ್ಟಿರೋ ಕೊಠಡಿಗಳನ್ನು ಕೆಡವಿ ಪುನರ್ ನಿರ್ಮಿಸಿ ಕೊಡಿ ಎಂದು ಎಷ್ಟೋ ಬಾರಿ ಮನವಿ ಮಾಡಿದರೂ ತಲೆಕೆಡಿಸಿಕೊಳ್ಳದ ಶಾಸಕರು ಹಾಗೂ ಶಿಕ್ಷಣ ಇಲಾಖೆ ವಿರುದ್ದ ಸ್ವತಃ ಮಕ್ಕಳೇ ಇಂದು ಪ್ರತಿಭಟನೆ ನಡೆಸಿದವು. ರಾಣೆಬೆನ್ನೂರು ತಾಲೂಕು ಜೋಯಿಸರಹಳ್ಳಿ ಸರ್ಕಾರಿ ಶಾಲೆ ಶಿಥಿಲಾವಸ್ಥೆ ತಲುಪಿದೆ. ಶಾಲೆಯ 9  ಕೊಠಡಿಗಳು ಶಿಥಿಲಾವಸ್ಥೆ ತಲುಪಿವೆ.ಶಿಥಿಲಗೊಂಡ ಕೊಠಡಿಗಳನ್ನು ಕೆಡವಿ 7 ಕೊಠಡಿಗಳನ್ನಾದರೂ ನಿರ್ಮಿಸಿ ಕೊಡಿ ಎಂದು ಗ್ರಾಮಸ್ಥರು  ಮನವಿ ಮಾಡಿದ್ದಾರೆ.ಆದರೆ ಇದಕ್ಕೆ ಸೂಕ್ತ ಸ್ಪಂದನೆ ನೀಡದ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು,ಕೇವಲ 3 ಕೊಠಡಿಗಳನ್ನು ಪುನರ್ ನಿರ್ಮಿಸಿ ಕೊಡೋದಾಗಿ ಭರವಸೆ ನೀಡಿದ್ದಾರೆ ಇದರಿಂದ ತೀವ್ರವಾಗಿ ನೊಂದ ಗ್ರಾಮಸ್ಥರು ಹಾಗೂ ಶಾಲಾ ವಿದ್ಯಾರ್ಥಿಗಳು  ಇಂದು ಪ್ರತಿಭಟನೆ ನಡೆಸಿದರು.

government School Childrens protest against education department In haveri san
ದಾರಿಗಾಗಿ ತಕರಾರು:
ಗ್ರಾಮಸ್ಥರ ಜೊತೆ  ಪ್ರತಿಭಟನೆಗೆ ನಿಂತ ಶಾಲಾ ಮಕ್ಕಳು (School Childrens), ಶಿಕ್ಷಣ ಇಲಾಖೆ (Education department) ವಿರುದ್ದ ಧಿಕ್ಕಾರ ಕೂಗಿದರು.  ಇತ್ತ ಈ ಸರ್ಕಾರಿ ಶಾಲೆ ಕಟ್ಟಲು ಭೂಮಿ ದಾನ ಮಾಡಿದ್ದ ಬಣಕಾರ್ (Banakar Family) ಕುಟುಂಬಸ್ಥರು ದಾರಿಗಾಗಿ ತಕರಾರು ಮಾಡಿದ್ದಾರಂತೆ. ಸರ್ಕಾರಿ ಶಾಲೆ (government School) ಕಟ್ಟಲು   ಹಲವು ವರ್ಷಗಳ ಹಿಂದೆ ಜಗನ್ನಾಥ್ ಬಣಕಾರ್ (Jagannath Banakar) ಎಂಬುವವರ ಪೂರ್ವಜರು ಭೂಮಿ ದಾನ ಮಾಡಿದ್ದರು. ಶಾಲೆ ಹಿಂದೆಯೇ ಜಗನ್ನಾಥ ಬಣಕಾರ್ ಹಾಗೂ ಅವರ ಸಹೋದರರ ಜಮೀನಿದೆ.
government School Childrens protest against education department In haveri san

ಇದನ್ನೂ ಓದಿ: ವಿಜಯಪುರ: ಗ್ರಾಮೀಣ ಭಾಗದಲ್ಲಿ ಬಂದ್‌ ಆಯ್ತಾ ಬಿಸಿಯೂಟ..?

ತಕರಾರು ಆರಂಭ:
ಜಮೀನಿಗೆ ದಾರಿ ಮಾಡಿ ಕೊಡಿ ಎಂದು ಜಗನ್ನಾಥ ಬಣಕಾರ್ ಎಂಬುವವರಿಂದ  ತಕರಾರು ಆರಂಭ ಆಗಿದೆ. ದಾರಿ ಕೊಡಲು ಗ್ರಾಮಸ್ಥರು, ಎಸ್ ಡಿಎಂಸಿ (SDMC) ಸದಸ್ಯರ ಒಪ್ಪಿಗೆ ಇದೆ. ಆದರೆ ದಾರಿ ನಿರ್ಮಾಣದ ಆದೇಶ ಬರಲಿ. ಬಳಿಕ ದಾರಿ ಕೊಡುತ್ತೇವೆ ಅಂತಿರೋ ಗ್ರಾಮಸ್ಥರು, ಎಸ್‌ಡಿಎಂಸಿ ಸದಸ್ಯರು ವಾದ ಮಾಡಿದ್ದಾರೆ. ಆದರೆ ಈಗಲೇ ದಾರಿ ಮಾಡಿ ಕೊಡಿ ಎಂದು ಜಗನ್ನಾಥ ಪೂಜಾರ್ ಹಾಗೂ ಸಹೋದರರ ಪಟ್ಟು ಹಿಡಿದಿದ್ದಾರೆ.

ಇದನ್ನೂ ಓದಿ: Raichur: ಸರ್ಕಾರಿ ಶಾಲೆಗಳ ಮಕ್ಕಳಿಗಾಗಿ ಬಸ್ ಖರೀದಿಗೆ ಸರ್ಕಾರ ಚಿಂತನೆ: ಸಚಿವ ಬಿ.ಸಿ.ನಾಗೇಶ್
JCB ಯಿಂದ  ಶಾಲಾ‌ ಕೊಠಡಿ ಕೆಡವಲು ಮುಂದಾಗಿದ್ದ ಜಗನ್ನಾಥ ಪೂಜಾರ್ ಹಾಗೂ ಕುಟುಂಬಸ್ಥರನ್ನು ಗ್ರಾಮಸ್ಥರು ತಡೆದಿದ್ದಾರೆ.ಗ್ರಾಮಸ್ಥರು ವಿರೋಧಿಸಿದ ಬಳಿಕ ಗುದ್ದಲಿಯಿಂದ ಶಾಲಾ ಕೊಠಡಿಯ ಕಿಡಕಿ ಹಾಗೂ ಗೋಡೆ ಒಡೆದಿದ್ದಾರೆ ಎಂದು  ಜೋಯಿಸರಹಳ್ಳಿ ಗ್ರಾಮಸ್ಥರು ಆರೋಪಿಸಿದ್ದಾರೆ. ಶಾಲೆಯಲ್ಲಿ ಇಷ್ಟೆಲ್ಲಾ ಸಮಸ್ಯೆ ಇದ್ದ ಮೇಲೆ  ವಿದ್ಯಾಭ್ಯಾಸ ಮಾಡೋದು ಹೇಗೆ ಎಂದು ಬೇಸರ ಮಾಡಿಕೊಂಡ ಮಕ್ಕಳು ಹಾಗೂ ಗ್ರಾಮದ ಜನ ರೊಚ್ಚಿಗೆದ್ದು ಶಾಲೆ ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ಶಾಲಾ ಶಿಕ್ಷಕರನ್ನು ಶಾಲೆ ಹೊರಗೇ  ತಡೆದು ನಿಲ್ಲಸಿದ ಗ್ರಾಮಸ್ಥರು, ಮಕ್ಕಳ ಜೊತೆ ಶಾಲೆ ಮುಂದೆ ನಿಂತು ಧಿಕ್ಕಾರ ಕೂಗಿದರು.

Latest Videos
Follow Us:
Download App:
  • android
  • ios