Gadag: ಮಹಿಳಾ ಅಭ್ಯರ್ಥಿಗಳಿಗೆ ಮೀಸಲಾತಿ ಗೊಂದಲ ಸೃಷ್ಟಿಸಿದ ಶಿಕ್ಷಣ ಇಲಾಖೆ!

ಇತ್ತೀಚೆಗೆ ಶಿಕ್ಷಣ ಇಲಾಖೆಯಿಂದ ಕರೆದಿದ್ದ ಜಿಪಿಟಿ ಹುದ್ದೆಗೆ ಅರ್ಜಿ ಸಲಿಸಿದ್ದ ಮಹಿಳಾ  ಅಭ್ಯರ್ಥಿಗಳು ಮೀಸಲಾತಿ ವಿಷಯವಾಗಿ ಗೊಂದಲಕ್ಕೀಡಾಗಿದ್ದಾರೆ. ಮಾರ್ಚ್ ತಿಂಗಳಲ್ಲಿ( ಜಿಪಿಟಿ) ಗ್ರ್ಯಾಜುವೆಟ್ ಪ್ರೈಮರಿ ಟೀಚರ್ ಗುದ್ದುಗೆ ರಾಜ್ಯಾದ್ಯಂತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು.

Education Department has created confusion about reservation for women candidates gvd

ಗಿರೀಶ್ ಕಮ್ಮಾರ್, ಏಷ್ಯಾನೆಟ್ ಸುವರ್ಣ ನ್ಯೂಸ್, ಗದಗ

ಗದಗ (ನ.15): ಇತ್ತೀಚೆಗೆ ಶಿಕ್ಷಣ ಇಲಾಖೆಯಿಂದ ಕರೆದಿದ್ದ ಜಿಪಿಟಿ ಹುದ್ದೆಗೆ ಅರ್ಜಿ ಸಲಿಸಿದ್ದ ಮಹಿಳಾ  ಅಭ್ಯರ್ಥಿಗಳು ಮೀಸಲಾತಿ ವಿಷಯವಾಗಿ ಗೊಂದಲಕ್ಕೀಡಾಗಿದ್ದಾರೆ. ಮಾರ್ಚ್ ತಿಂಗಳಲ್ಲಿ( ಜಿಪಿಟಿ) ಗ್ರ್ಯಾಜುವೆಟ್ ಪ್ರೈಮರಿ ಟೀಚರ್ ಗುದ್ದುಗೆ ರಾಜ್ಯಾದ್ಯಂತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಮೇ ತಿಂಗಳಿನಲ್ಲಿಯೂ ಪರೀಕ್ಷೆಯನ್ನೂ ಬರೆದಿದ್ದರು. ಅರ್ಹ ಅಭ್ಯರ್ಥಿಗಳಿಗೆ  ಅಕ್ಟೋಬರ್, 6, 19 ತಾರೀಕು ದಾಖಲೆಗಳ ಪರಿಶೀಲನೆ ಮಾಡಲಾಯ್ತು. ದಾಖಲೆಗಳ ಪರಿಶೀಲನೆ ವೇಳೆ ಕೆಲ ಮಹಿಳಾ ಅಭ್ಯರ್ಥಿಗಳಿಗೆ ಗಂಡನ ಮನೆಯ ದಾಖಲೆಗಳನ್ನ ಕೊಡುವಂತೆ ಕೇಳಿದ್ದಾರೆ. 

ಸದ್ಯ ಈ ವಿಷಯ ಅಭ್ಯರ್ಥಿಗಳಲ್ಲಿ ಗೊಂದಲ ಮೂಡಿಸಿದೆ. ನೋಟಿಫಿಕೇಷನ್‌ನಲ್ಲಿ ಅಭ್ಯರ್ಥಿಗಳು ಗಂಡನ ಮನೆಯ ದಾಖಲೆ ಕೊಡಬೇಕು ಅನ್ನೋ ಉಲ್ಲೇಖ ಇಲ್ಲ. ಹೀಗಾಗಿ ತಂದೆ ಮನೆಯಿಂದಲೇ ಇರುವ ದಾಖಲೆಗಳನ್ನ ಮಹಿಳಾ ಅಭ್ಯರ್ಥಿಗಳು ನೀಡಿದ್ದಾರೆ. ಜಾತಿ ಪ್ರಮಾಣ ಪತ್ರ ಹಾಗೂ ಆದಾಯ ಪ್ರಮಾಣ ಪತ್ರ ತಂದೆ ಹೆಸರಲ್ಲೇ ಇರೋದ್ರಿಂದ ಅದೇ ದಾಖಲೆಗಳನ್ನ ಇಲಾಖೆಗೆ ನೀಡಲಾಗಿತ್ತು. ದಾಖಲೆ ಪರಿಶೀಲನೆ ವೇಳೆಯೂ ಅದೇ ದಾಖಲೆಗಳನ್ನ ಪರಿಗಣಿಸಲಾಗಿದೆ. ಆದ್ರೀಗ ಏಕಾಏಕಿ ಗಂಡನ ಮನೆಯ ಆದಾಯ ಹಾಗೂ ಜಾತಿ ಪ್ರಮಾಣ ಪತ್ರ ನೀಡುವಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಕೇಳ್ತಿದಾರೆ. 

ಕುತೂಹಲ ಹುಟ್ಟಿಸಿದ 'ಹಿಟ್ಲರ್ ಕೀಟ': ಮನುಷ್ಯನ ಮುಖದ ಹೋಲಿಕೆ

ಇಂಟರ್ ಕಾಸ್ಟ್ ಮದ್ವೆಯಾಗಿರೋ ಅಭ್ಯರ್ಥಿಗಳಲ್ಲದೇ ಒಂದೇ ಜಾತಿಯಲ್ಲಿ ಮದ್ವೆಯಾಗಿರೋ ಮಹಿಳಾ ಅಭ್ಯರ್ಥಿಗಳಿಗೂ ಈಗ ಗೊಂದಲ ಮೂಡಿದೆ. 3B ಜಾತಿ ಪ್ರಮಾಣ ಪತ್ರ ನೀಡಿರುವ ಗದಗನ ಮಹಿಳಾ ಅಭ್ಯರ್ಥಿ, ತಂದೆಯ ಆದಾಯ ಪ್ರಮಾಣ ಪತ್ರ ನೀಡಿದ್ದಾರೆ.. ದ್ಯ ಈಗ ಗಂಡನ ಆದಾಯ ಪ್ರಮಾಣ ಪತ್ರ ಕೇಳ್ತಿರೋದ್ರಿಂದ ಅಭ್ಯರ್ಥಿಗಳಿಗೆ ಮೀಸಲಾತಿ ಸೌಲಭ್ಯ ವಂಚನೆಯಾಗುವ ಭಯ ಶುರುವಾಗಿದೆ.

ಒಬಿಸಿ ಅಭ್ಯರ್ಥಿಗಳಿಗೆ ಗೊಂದಲ: ಎಸ್‌ಸಿ/ಎಸ್‌ಟಿ ಹಾಗೂ ಕ್ಯಾಟಗರಿ 1 ಅಭ್ಯರ್ಥಿಗಳಿಗೆ ದಾಖಲೆ ಸ್ವೀಕರಿಸಲಾಗಿದೆ. ಆದಾಯ ಪ್ರಮಾಣ ಪತ್ರ ಅಗತ್ಯ ಇಲ್ಲ ಅಂತಾ ಪರಿಗಣಿಸಲಾಗಿದೆ. ಆದ್ರೆ, 2A, 2B, 3A, 3B ಇತರ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಗಂಡನ ಮನೆಯ ಆದಾಯ ದಾಖಲೆ ತರುವಂತೆ ಕೇಳಿದ್ದಾರೆ. ಒಬಿಸಿ ಮೀಸಲಾತಿ‌ ಬಯಸಿ ಅರ್ಜಿಸಲ್ಲಿಸಿದ 2,300  ಮಹಿಳಾ ಅಭ್ಯರ್ಥಿಗಳು ಈಗ ತ್ರಿಶಂಕು ಸ್ಥಿತಿಯಲ್ಲಿದ್ದಾರೆ. ನೋಟಿಫಿಕೇಷನ್‌ನಲ್ಲೇ ಸ್ಪಷ್ಟವಾಗಿ ನಮೂದಿಸಿದ್ರೆ ಗಂಡನ ಮನೆಯ ದಾಖಲೆಗಳನ್ನೇ ನೀಡುತ್ತಿದ್ದೇವು. 

ಟಿಪ್ಪು ದೇಶ ಕಂಡ ಶ್ರೇಷ್ಠ ವ್ಯಕ್ತಿಯೆಂದು ಓದಿದ್ದೇವೆ.! - ಶಿಕ್ಷಣ ಸಚಿವ ನಾಗೇಶ್‌

ನೋಟಿಫಿಕೇಷನ್ ಗೊಂದಲದಿಂದಾಗಿ ನೀಡಿರುವ ದಾಖಲೆಗಳನ್ನ ಪರಿಗಣಿಸ್ಬೇಕು ಅಂತಾ ಅಧ್ಯರ್ಥಿಗಳು ಆಗ್ರಹಿಸ್ತಿದ್ದಾರೆ. ಈ ಬಗ್ಗೆ ಶಿಕ್ಷಣ ಸಚಿವರನ್ನ ಕೇಳಿದ್ರೆ, ಮೀಸಲಾತಿ ಬೇಕೆಂದ್ರೆ ದಾಖಲಾತಿ ಕೊಡಬೇಕು. ಮೊದಲಿನಿಂದಲೂ ಇದೇ ರೀತಿನಡೆದುಕೊಂಡು ವಂದಿದೆ. ನೋಟಿಫಿಕೇಷನ್‌ನಲ್ಲಿ ಗಂಡನ ಮನೆ ಪ್ರಮಾಣದ ಬಗ್ಗೆ ಉಲ್ಲೇಖ ಇರುವುದಿಲ್ಲ. ಆದರೆ ಅದೇ ದಾಖಲಾತಿಗಳನ್ನ ಕೊಡಬೇಕಾಗುತ್ತೆ ಅಂತಾ ಉತ್ತರಿಸಿದ್ದಾರೆ. ಗೊಂದಲದಲ್ಲಿರುವ ಅಭ್ಯರ್ಥಿಗಳ ಪರವಾಗಿ ಕನ್ನಡಪರ ಸಂಘಟನೆಗಳು ನಿಂತಿವೆ..ಗೊಂದಲ ಬಗೆಹರಿಸದಿದ್ದಲ್ಲಿ ಹೋರಾಟ ಮಾಡ್ತೀವಿ ಅಂತಾ ಹೇಳ್ತಿದಾರೆ. ಈ ಬಗ್ಗೆ ಸರ್ಕಾರ ಗಮನಹರಿಸಿ ಗೊಂದಲ ಪರಿಹರಿಸ್ಬೇಕಿದೆ.

Latest Videos
Follow Us:
Download App:
  • android
  • ios