Asianet Suvarna News Asianet Suvarna News

K-CET Counseling: ಬಿಇ ಸೀಟು ಕಾಯ್ದಿರಿಸಿ ವೈದ್ಯ ಸೀಟು ಪಡೆದರೆ ಡಬಲ್‌ ಶುಲ್ಕ!

*  ಎರಡೂ ಶುಲ್ಕ ಪಾವತಿಸಿ ಎಂದು ವಿದ್ಯಾರ್ಥಿಗಳಿಗೆ ಸಂದೇಶ
*  ತಾಂತ್ರಿಕ ಕಾರಣದಿಂದ ಹೀಗಾಗಿರಬಹುದು: ಪರೀಕ್ಷಾ ಪ್ರಾಧಿಕಾರ
*  ತಮ್ಮದಲ್ಲದ ತಪ್ಪಿಗೆ ಎರಡೂ ಕೋರ್ಸ್‌ಗಳಿಗೆ ಶುಲ್ಕ ಪಾವತಿಸುತ್ತಿರುವ ವಿದ್ಯಾರ್ಥಿಗಳು
 

Double fee For If Reserve BE Seat And Get Doctor Seat in Karnataka grg
Author
Bengaluru, First Published Feb 11, 2022, 6:06 AM IST | Last Updated Feb 11, 2022, 6:15 AM IST

ಬೆಂಗಳೂರು(ಫೆ.11):  ಕರ್ನಾಟಕ ಪರೀಕ್ಷಾ ಪ್ರಾಧಿಕಾರ(Karnataka Examination Authority) ನಡೆಸಿದ ಕೆ-ಸಿಇಟಿ ಕೌನ್ಸೆಲಿಂಗ್‌ನಲ್ಲಿ ಎಂಜಿನಿಯರಿಂಗ್‌ ಸೀಟುಗಳನ್ನು ಕಾಯ್ದಿರಿಸಿ ನಂತರ ನಡೆದ ನೀಟ್‌-ಯುಜಿ ಕೌನ್ಸೆಲಿಂಗ್‌ನಲ್ಲಿ ವೈದ್ಯಕೀಯ ಸೀಟುಗಳನ್ನು ಆಯ್ಕೆ ಮಾಡಿಕೊಂಡ ಸಾವಿರಾರು ವಿದ್ಯಾರ್ಥಿಗಳು ತಮ್ಮದಲ್ಲದ ತಪ್ಪಿಗೆ ಎರಡೂ ಕೋರ್ಸ್‌ಗಳಿಗೆ ಶುಲ್ಕ ಪಾವತಿಸಬೇಕೆಂಬ ಒತ್ತಾಯಕ್ಕೆ ಸಿಲುಕಿದ್ದಾರೆ.

ನೀಟ್‌ಗೆ(NEET) ಸಂಬಂಧಿಸಿದ ಅರ್ಜಿ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿದ್ದಿದ್ದರಿಂದ ಪ್ರಸಕ್ತ ಸಾಲಿನ ನೀಟ್‌-ಯುಜಿ ಕೌನ್ಸೆಲಿಂಗ್‌ ವಿಳಂಬವಾಗಿತ್ತು. ಹಾಗಾಗಿ ಅನೇಕ ವೈದ್ಯಕೀಯ ಸೀಟು(Medical Seat) ಆಕಾಂಕ್ಷಿಗಳು ಕೆ-ಸಿಇಟಿ ಕೌನ್ಸೆಲಿಂಗ್‌ನಲ್ಲಿ ಎಂಜಿನಿಯರಿಂಗ್‌ ಸೀಟುಗಳನ್ನು(Engineering seat) ಆಯ್ಕೆ ಮಾಡಿಕೊಂಡು ಶುಲ್ಕ ಪಾವತಿಸದೆ ಕಾಯ್ದಿರಿಸಿಕೊಂಡಿದ್ದರು. ಮತ್ತೆ ಕೆಲವು ವಿದ್ಯಾರ್ತಿಗಳು ಶುಲ್ಕ ಪಾವತಿಸಿ ಬಿಟ್ಟಿದ್ದರು.

Hijab Controversy ಕೇರಳದ ಮುಸ್ಲಿಂ ಶಿಕ್ಷಣ ಸಂಸ್ಥೆಯ ಎಲ್ಲಾ 150 ಶಾಲಾ ಕಾಲೇಜಿನಲ್ಲಿ ಹಿಬಾಜ್ ಬ್ಯಾನ್!

ಸದರಿ ವಿದ್ಯಾರ್ಥಿಗಳಿಗೆ(Studentys) ನೀಟ್‌ ಯುಜಿ ಕೌನ್ಸೆಲಿಂಗ್‌ನಲ್ಲಿ ವೈದ್ಯಕೀಯ ಸೀಟುಗಳು ದೊರೆತಿವೆ. ಹೀಗಾಗಿ ಈ ವಿದ್ಯಾರ್ಥಿಗಳು ಎಂಜಿನಿಯರಿಂಗ್‌ ಸೀಟು ಬಿಟ್ಟು, ವೈದ್ಯಕೀಯ ಸೀಟು ಪ್ರವೇಶಕ್ಕಾಗಿ ಚಲನ್‌ ಡೌನ್‌ಲೋಡ್‌ ಮಾಡಿಕೊಳ್ಳುವಾಗ ಎಂಜಿನಿಯರಿಂಗ್‌ ಮತ್ತು ವೈದ್ಯಕೀಯ ಎರಡೂ ಸೀಟುಗಳಿಗೆ ಶುಲ್ಕ ಪಾವತಿಸಬೇಕು ಎಂಬ ಸಂದೇಶ ಬರುತ್ತಿದೆ. ಇನ್ನು ಶುಲ್ಕ ಪಾವತಿಸಿದ್ದವರಿಗೆ ವೈದ್ಯಕೀಯ ಸೀಟಿಗೂ ಪ್ರತ್ಯೇಕವಾಗಿ ಸಂಪೂರ್ಣ ಶುಲ್ಕ ಪಾವತಿಸುವಂತೆ ಸಂದೇಶ ಬರುತ್ತಿದೆ.

ಈ ಸಂಬಂಧ ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಪ್ರವೀಣ್‌ ಎಂಬ ವಿದ್ಯಾರ್ಥಿ(ಹೆಸರು ಬದಲಿಸಲಾಗಿದೆ) ನಾನು ಮೊದಲು ಇಂಜಿನಿಯರಿಂಗ್‌ ಸೀಟು ಕಾಯ್ದಿರಿಸಿಕೊಂಡಿದ್ದೆ. ಈಗ ನನಗೆ ವೈದ್ಯಕೀಯ ಸೀಟು ಲಭ್ಯವಾಗಿದೆ. ಈ ಸೀಟಿನ ಪ್ರವೇಶಕ್ಕೆ ಶುಲ್ಕ ಪಾವತಿಸಲು ನಾನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಚಲನ್‌ ಡೌನ್‌ಲೋಡ್‌ ಮಾಡಲು ಪ್ರಯತ್ನಿಸಿದಾಗ, ವೈದ್ಯಕೀಯ ಕೋರ್ಸ್‌ನ ಶುಲ್ಕ 1.41 ಲಕ್ಷ ರು. ಬದಲು ಎಂಜಿನಿಯರಿಂಗ್‌ ಸೀಟು ಶುಲ್ಕವನ್ನೂ ಸೇರಿಸಿ 2.24 ಲಕ್ಷ ರು. ಪಾವತಿಸಬೇಕು ಎಂದು ಬರುತ್ತಿದೆ ಎಂದರು.

ಪ್ರಾಧಿಕಾರದ ಅಧಿಕಾರಿಗಳ ಪ್ರಕಾರ, ವೈದ್ಯಕೀಯ ಸೀಟು ಆಕಾಂಕ್ಷಿಗಳಿಗೆ ಎಂಜಿನಿಯರಿಂಗ್‌ ಸೀಟು ರದ್ದುಪಡಿಸಲು ಯಾವುದೇ ದಂಡ ಮತ್ತಿತರ ಷರತ್ತುಗಳಿಂದ ವಿನಾಯಿತಿ ನೀಡಲಾಗಿದೆ. ಆದರೂ, ತಾಂತ್ರಿಕ ಕಾರಣಗಳಿಂದ ಈ ಸಮಸ್ಯೆಯಾಗಿರಬಹುದು. ಈ ಸಂಬಂಧ ಪರಿಶೀಲಿಸಲಾಗುವುದು ಎಂದು ಹೇಳುತ್ತಿದ್ದಾರೆ. ಮಾಹಿತಿ ಪ್ರಕಾರ, ಎಂಜಿನಿಯರಿಂಗ್‌ ಸೀಟು ಕಾಯ್ದಿರಿಸಿದ್ದ 2000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮೊದಲ ಸುತ್ತಿನ ವೈದ್ಯಕೀಯ ಕೌನ್ಸೆಲಿಂಗ್‌ನಲ್ಲಿ ವೈದ್ಯಕೀಯ ಸೀಟು ಪಡೆದುಕೊಂಡಿದ್ದಾರೆ. ಅವರೆಲ್ಲರೂ ಫೆಬ್ರವರಿ 14ರೊಳಗೆ ನಿಗದಿಪಡಿಸಿದ ಕಾಲೇಜುಗಳಿಗೆ ವರದಿ ಮಾಡಿಕೊಳ್ಳಬೇಕಾಗಿದೆ. ಕೆಇಎ ಸಮಸ್ಯೆ ಬಗೆಹರಿಸದಿದ್ದರೆ ಸೀಟು ಕಳೆದುಕೊಳ್ಳುವ ಆತಂಕ ವಿದ್ಯಾರ್ಥಿಗಳನ್ನು ಕಾಡುತ್ತಿದೆ.

ವಿದೇಶಿ ಕಾಲೇಜಗಳ ಮಾಹಿತಿಗೆ ಹೈದರಾಬಾದ್‌ನಲ್ಲಿ ವರ್ಚುವಲ್ ಶಿಕ್ಷಣ ಮೇಳ

ಕೋವಿಡ್ (covid-19) ಬಂದ ಮೇಲೆ ಶಾಲೆ-ಕಾಲೇಜು, ಆಫೀಸ್, ಬ್ಯುಸಿನೆಸ್, ಶಾಪಿಂಗ್ ಎಲ್ಲಾ ಆನ್ ಲೈನ್ ಆಗೋಗಿದೆ. ಪ್ರತೀ ವರ್ಷ ಕಾಲೇಜುಗಳಲ್ಲಿ ನಡೀತಿದ್ದ ಕ್ಯಾಂಪಸ್ ಸೆಲೆಕ್ಷನ್ (Campus Selection), ಇಂಟರ್ ವ್ಯೂ (interview) ಕೂಡ ಈಗ ವರ್ಚುವಲ್ ಆಗ್ಬಿಟ್ಟಿವೆ.  ಇನ್ನು ವಿದೇಶಗಳಿಗೆ ಹೋಗಿ ಓದುವ ಕನಸು ಹೊತ್ತವರಿಗೂ ಇದೇ ಆನ್ ಲೈನ್ ವರದಾನವಾಗಿದೆ. ಜಗತ್ತಿನ ಪ್ರತಿಷ್ಟಿತ ವಿಶ್ವವಿದ್ಯಾನಿಲಯಗಳು ವರ್ಚುವಲ್ ಮೇಳ (Virtual Fair) ನಡೆಸಿ, ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಿವೆ.  ವಿಶ್ವವಿದ್ಯಾನಿಲಯಗಳ ವರ್ಚುವಲ್ ಮೇಳಗಳು ಈಗ ಆನ್‌ಲೈನ್ ಈವೆಂಟ್‌ಗಳಾಗಿವೆ. ಅಲ್ಲಿ ಹಲವಾರು ಸಂಸ್ಥೆಗಳು ನಿರೀಕ್ಷಿತ ವಿದ್ಯಾರ್ಥಿಗಳಿಗೆ ಮಾತುಕತೆಗಳು, ಕಾರ್ಯಾಗಾರಗಳು, ಮಾದರಿ ಸೆಮಿನಾರ್‌ಗಳು ಮತ್ತು ಪ್ರವೇಶಾತಿಯನ್ನು ಕಲ್ಪಿಸಲು ಉತ್ತಮ ವೇದಿಕೆಯಾಗಿವೆ.  

Digital Documentation: ರಾಜ್ಯಪಾಲರ ಡಿಜಿಟಲ್‌ ಅಂಕಪಟ್ಟಿ ಆದೇಶ ವಾಪಸ್‌: ಗೊಂದಲಕ್ಕೆ ತೆರೆ

ಶೈಕ್ಷಣಿಕ ಸಿಬ್ಬಂದಿಯೊಂದಿಗೆ ಚಾಟ್ ಮೂಲಕ  ವಿಶ್ವವಿದ್ಯಾಲಯ, ಕೋರ್ಸ್ ಕುರಿತು ಇನ್ನಷ್ಟು ತಿಳಿದುಕೊಳ್ಳಲು ಅವಕಾಶವನ್ನು ನೀಡುತ್ತವೆ. ವಿದೇಶದಲ್ಲಿ ಅಧ್ಯಯನ ಮಾಡಲು ಬಯಸುವ ವಿದ್ಯಾರ್ಥಿ(Students)ಗಳಿಗೆ ಸದ್ಯ ಬಂಪರ್ ಅವಕಾಶವೊಂದು ಒಲಿದು ಬಂದಿದೆ. ಫೆಬ್ರುವರಿ 10ರಿಂದ 5 ದಿನಗಳ ಕಾಲ ವರ್ಚುವಲ್ ಶಿಕ್ಷಣ ಮೇಳ ನಡೀತಾ ಇದೆ. ಆಸ್ಟ್ರೇಲಿಯಾ, ನ್ಯೂಜಿಲೆಂಡ್, USA, UK, ರಿಪಬ್ಲಿಕ್ ಆಫ್ ಐರ್ಲೆಂಡ್ (ireland ಮತ್ತು ಕೆನಡಾ (Canada)ದಲ್ಲಿ ಅಧ್ಯಯನ ಮಾಡಲು ಬಯಸುವ ವಿದ್ಯಾರ್ಥಿಗಳಿಗೆ ಇದೊಂದು ಸುವರ್ಣಾವಕಾಶವಾಗಿದೆ.

ಅಂದಹಾಗೆ ಐಡಿಪಿ ಹೈದರಾಬಾದ್(IDP Hyderabad) ಸಂಸ್ಥೆಯು, ವಿದೇಶದಲ್ಲಿ ಅಧ್ಯಯನ ಮಾಡಲು ಯೋಜಿಸುತ್ತಿರುವ ವಿದ್ಯಾರ್ಥಿಗಳಿಗೆ ವರ್ಚುವಲ್ ಶಿಕ್ಷಣ ಮೇಳ ಆಯೋಜಿಸಿದೆ.  ಫೆಬ್ರುವರಿ 10, 11, 12, 13 ಮತ್ತು 19 ರಂದು ಆನ್ ಲೈನ್ ಶಿಕ್ಷಣ ಜಾತ್ರೆ ನಡೆಸುತ್ತಿದೆ. IDP ಹೈದ್ರಾಬಾದ್ ಸಂಸ್ಥೆಯು ವಿದೇಶದಲ್ಲಿ ಅಧ್ಯಯನ ಮಾಡಲು ಬಯಸುವ ಆಕಾಂಕ್ಷಿಗಳಿಗೆ ತಮ್ಮ ಕನಸಿನ ಸಂಸ್ಥೆಗಳನ್ನು ಮನೆಯಿಂದಲೇ  ಭೇಟಿ ಆಗುವ ಅವಕಾಶ ಒದಗಿಸುತ್ತದೆ.
 

Latest Videos
Follow Us:
Download App:
  • android
  • ios