Hijab Controversy ಕೇರಳದ ಮುಸ್ಲಿಂ ಶಿಕ್ಷಣ ಸಂಸ್ಥೆಯ ಎಲ್ಲಾ 150 ಶಾಲಾ ಕಾಲೇಜಿನಲ್ಲಿ ಹಿಬಾಜ್ ಬ್ಯಾನ್!
- ಹಿಜಾಬ್ ಧರಿಸಿವುದು ವ್ಯಕ್ತಿಯ ವ್ಯಕ್ತಿತ್ವಕ್ಕೆ ವಿರುದ್ಧ
- ಬುರ್ಕಾ, ಹಿಜಾಬ್ ಅರಬ್ ಸಂಸ್ಕೃತಿಯ ಭಾಗ
- ಇಸ್ಲಾಮಿಗೂ ಹಿಜಾಬ್‌ಗೂ ಸಂಬಂಧವಿಲ್ಲ
- ಮುಸ್ಲಿ ಶಿಕ್ಷಣ ಸಂಸ್ಥೆಯ ಸುತ್ತೋಲೆಯಲ್ಲಿದೆ ಮಹತ್ವದ ವಿಚಾರ
ಕೇರಳ(ಫೆ.10): ಹಿಜಾಬ್ ವಿವಾದ(Karnataka Hijab Controversy) ಇಡೀ ದೇಶವನ್ನೇ ಆವರಿಸಿಕೊಂಡಿದೆ. ಮುಸ್ಲಿಮರ ಮೂಲಭೂತ ಹಕ್ಕನ್ನು ದಮನಿಸಲಾಗುತ್ತಿದೆ ಅನ್ನೋ ವಾದ ಒಂದಡೆಯಾದರೆ, ಸಮವಸ್ತ್ರ ಹೊರತು ಇನ್ಯಾವ ಧರ್ಮದ ವಸ್ತ್ರಗಳಿಗೆ ಅವಕಾಶವಿಲ್ಲ ಅನ್ನೋ ವಾದ ಮತ್ತೊಂದೆಡೆ. ಇದರ ನಡುವೆ ಅತೀ ಮುಖ್ಯವಾಗಿ ಕೇರಳದ(Kerala) ಮುಸ್ಲಿಂ ಶಿಕ್ಷಣ ಸಂಸ್ಥೆ(Muslim Educational Society) ನೀಡಿದ ಸುತ್ತೋಲೆ ಎಲ್ಲರೂ ಗಮನಿಸಲೇಬೇಕು. ಮುಸ್ಲಿಂ ಶಿಕ್ಷಣ ಸಂಸ್ಥೆ ಕೇರಳದ 150 ಶಾಲಾ ಕಾಲೇಜಿನಲ್ಲಿ ಹಿಜಾಬ್, ಬುರ್ಖಾ ಬ್ಯಾನ್(Hijab Ban) ಮಾಡಿದೆ.
ಮುಸ್ಲಿಂ ಎಜುಕೇಶನಲ್ ಸೊಸೈಟಿ(MES) ಈ ಸುತ್ತೋಲೆ ಹೊರಡಿಸಿರುವುದು 2019ರಲ್ಲಿ. MES ಕೇರಳದಲ್ಲಿ 150 ಶಾಲಾ ಕಾಲೇಜುಗಳನ್ನು ನಡೆಸುತ್ತಿದೆ. ಒಟ್ಟು 85,000 ವಿದ್ಯಾರ್ಥಿಗಳು ಹಾಗೂ 15,000 ಶಿಕ್ಷಕರು, ಸಹಾಯಕ ಸಿಬ್ಬಂದಿ ಸೇರಿದಂತೆ ವೃತ್ತಿಪರರು ಈ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. MES ನಡೆಸಲ್ಪಡುವ ಎಲ್ಲಾ ಮುಸ್ಲಿಂ ಶಾಲಾ ಕಾಲೇಜುಗಳಲ್ಲಿ(Schools College) ಹಿಜಾಬ್ ಬ್ಯಾನ್ ಮಾಡಿದೆ. MESನಿಂದ 10 ವೃತ್ತಿಪರ ಸಂಸ್ಥೆಗಳು, 18 ಕಲೆ ಮತ್ತು ವಿಜ್ಞಾನ ಕಾಲೇಜುಗಳು, 36 CBSE ಶಾಲೆಗಳು ಹಾಗೂ ಇತರ ಶಿಕ್ಷಣ ಸಂಸ್ಥೆಗಳು ನಡೆಸುತ್ತಿದೆ.
2019ರಲ್ಲಿ MES ಅಧ್ಯಕ್ಷ ಪಿಎ ಗಸಲ್ ಗಫೂರ್ ನೀಡಿದ ಸುತ್ತೊಲೆಯಲ್ಲಿ ಹಿಜಾಬ್ ಬ್ಯಾನ್ ಹಾಗೂ ಕಾರಣವನ್ನು ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. MES ಶಿಕ್ಷಣ ಸಂಸ್ಥೆಗಳ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ(2020) ಈ ನಿಯಮ ಜಾರಿಯಾಗಲಿದೆ ಎಂದು ಆರಂಭದಲ್ಲೇ ಉಲ್ಲೇಖಿಸಿದೆ. ಹಿಜಾಬ್ ಮೂಲಕ ಮುಸ್ಲಿಂ ಹೆಣ್ಣುಮಕ್ಕಳು ಮುಖ ಮುಚ್ಚಿಕೊಳ್ಳುವುದು ವ್ಯಕ್ತಿಯ ವ್ಯಕ್ತಿತ್ವಕ್ಕೆ ವಿರುದ್ಧವಾಗಿದೆ. ಇದು ಸಮಾಜಕ್ಕೆ ಒಪ್ಪಿಗೆ ಇರದ ಡ್ರೆಸ್ ಆಗಿದೆ. ಹಿಜಾಬ್ ಕುರಿತು ಇತ್ತೀಚೆಗೆ ಕೇರಳ ಹೈಕೋರ್ಟ್ ನೀಡಿದ ತೀರ್ಪಿನ್ನು ಉಲ್ಲೇಖಿಸಿ ಈ ಸುತ್ತೋಲೆ ಹೊರಡಿಸಲಾಗಿದೆ ಎಂದು ಗಸಲ್ ಗಫೂರ್ ಹಿಜಾಬ್ ಕುರಿತು ಸುತ್ತೊಲೆಯಲ್ಲಿ ವಿವರಿಸಿದ್ದಾರೆ.
ಕೆಲ ಸಾಂಪ್ರದಾಯ ವಾದಿಗಳು ಮುಸ್ಲಿಂ ಹೆಣ್ಣುಮಕ್ಕಳಿಗೆ ಡ್ರೆಸ್ ಕೋಡ್ ಹೇರುತ್ತಿದ್ದಾರೆ. ಹೆಣ್ಣನ್ನು ಡ್ರೆಸ್‌ನೊಳಗಡೆ ಬಂಧಿಯಾಗಿಡಲು ಮೂಲಭೂತ ಸಂಪ್ರದಾಯವಾದಿಗಳು ಬಯಸುತ್ತಿದ್ದಾರೆ. ಮುಸ್ಲಿಂ ಶಿಕ್ಷಣ ಸಂಸ್ಥೆಯ ಎಲ್ಲಾ ವಿದ್ಯಾಸಂಸ್ಥೆಗಳಲ್ಲಿ ಹಿಜಾಬ್ ಬ್ಯಾನ್ ಮಾಡಲಾಗಿದೆ. ಹೀಗಾಗಿ ಶಾಲೆಯ ಸಮವಸ್ತ್ರಕ್ಕೆ ಎಲ್ಲರೂ ಬದ್ಧರಾಗಿರಬೇಕು ಎಂದು 2019ರಲ್ಲಿ ಸುತ್ತೊಲೆಯಲ್ಲಿ ಹೇಳಲಾಗಿದೆ.
Hijab Karnataka Breaking ಹಿಜಾಬ್-ಕೇಸರಿ ವಿವಾದಕ್ಕೆ ತಾತ್ಕಾಲಿಕ ಬ್ರೇಕ್ ಹಾಕಿದ ಹೈಕೋರ್ಟ್
ಹಿಜಾಬ್‌ಗೂ ಇದಕ್ಕೂ ಇಸ್ಲಾಂಗೂ ಸಂಬಂಧವಿಲ್ಲ. ಹಿಜಾಬ್ ಅರಬ್ ಸಂಸ್ಕತಿಯ ಭಾಗ. ಇದನ್ನು ಕೇರಳದಲ್ಲಿ ಹೇರಲು ಹಲವು ಸಂಪ್ರದಾಯವಾದಿಗಳು ಮುಂದಾಗಿದ್ದಾರೆ. 25 ವರ್ಷಗಳ ಹಿಂದೆ ಕೆಲ ಮೂಲಭೂತವಾದಿ ಸಂಘಟನೆಗಳು ಧರ್ಮವನ್ನು ಪ್ರವೇಶಿಸಿ ಇಲ್ಲ ಸಲ್ಲದ ಸಂಪ್ರದಾಯ, ನಿರ್ಬಂಧಗಳನ್ನು ಹೇರುತ್ತಿದ್ದಾರೆ. ಈ ಸಂಘಟನೆಗಳು ಧರ್ಮ ಪ್ರವೇಶಿಸಿದ ಬಳಿಕ ಬುರ್ಕಾ ಸಂಸ್ಕೃತಿ ಹೆಚ್ಚಾಗಿದೆ ಎಂದು ಇಸ್ಲಾಮಿಕ್ ವಿದ್ವಾಂಸ ಪ್ರೊ.ಹಮೀದ್ ಚೆನಮಂಗಳೂರು ಹೇಳಿದ್ದಾರೆ.
ನಾನು 40 ವರ್ಷಗಳ ಹಿಂದೆ ಕಾಲೇಜಿನಲ್ಲಿ ಅಭ್ಯಾಸ ಮಾಡುತ್ತಿದ್ದೆ. ಈ ವೇಳೆ ಮುಸ್ಲಿಂ ಹೆಣ್ಣುಮಕ್ಕಳು ಸಾಮಾನ್ಯರಂತೆ ಉಡುಗೆಯಲ್ಲಿ ಬರುತ್ತಿದ್ದರು. ಅಂದು ಹಿಜಾಬ್, ಬುರ್ಖಾ ಅನ್ನುವ ಪರಿಕಲ್ಪನೆಯೇ ಇರಲಿಲ್ಲ. ಶಾಲಾ ಕಾಲೇಜುಗಳಲ್ಲಿ ಎಂದೂ ಹಿಜಾಬ್ ಕುರಿತ ಮಾತೇ ಬಂದಿರಲಿಲ್ಲ ಎಂದು ಪ್ರೊ.ಹಮೀದ್ ಹೇಳಿದ್ದಾರೆ.
ಕೇರಳದ ಮುಸ್ಲಿಂ ಶಿಕ್ಷಣ ಸಂಸ್ಥೆ 2019ರಲ್ಲಿ ಹೊರಡಿಸಿದ ಸುತ್ತೊಲೆಯನ್ನು ಹಲವು ಮುಸ್ಲಿಂರು ಸ್ವಾಗತಿಸಿದ್ದರೆ, ಇನ್ನೂ ಹಲವರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಕೆಲ ಮುಸ್ಲಿಂ ಪರ ಸಂಘಟನಗಳು, ಮೌಲ್ವಿಗಳು MES ನಿರ್ಧಾರವನ್ನು ಕಟುವಾಗಿ ಟೀಕಿಸಿದ್ದರು.
ದೇಶ ಹಲವು ಕೋಮು ಸಂಘರ್ಷಗಳನ್ನು ಕಂಡಿದೆ. ಶಾಲಾ ಕಾಲೇಜಿನಿಂದ ಹೊರಗಡೆ ನಡೆಯುತ್ತಿದ್ದ ಧರ್ಮದ ಕಿಚ್ಚು, ಪ್ರತಿಭಟನೆ ಇತ್ತೀಚೆಗೆ ವಿದ್ಯಾಸಂಸ್ಥೆಗಳಲ್ಲೇ ಹೆಚ್ಚಾಗುತ್ತಿದೆ. ಶಾಲಾ ಕಾಲೇಜುಗಳಲ್ಲಿ ಧರ್ಮ, ರಾಜಕೀಯ ಎಂದೂ ಪ್ರವೇಶಿಸಬಾರದು. ದುರಂತ ಅಂದರೆ ಇದೀಗ ಅದೇ ವಿಚಾರ ವಿದ್ಯಾ ಸಂಸ್ಥೆಗಳಲ್ಲಿ ಪ್ರಮುಖವಾಗಿದೆ.