ಸಖತ್ ಸಂಬಳ ನೀಡುವ ವೃತ್ತಿಗಳು ಯಾವವು ಗೊತ್ತಾ?
ಎಲ್ಲರೂ ಶಿಕ್ಷಣವನ್ನು ಪಡೆಯುವುದು ಎರಡು ಉದ್ದೇಶಕ್ಕಾಗಿ ಮೊದಲನೆಯದ್ದು ಜ್ಞಾನ. ಎರಡನೆಯದು ವೃತ್ತಿ ಕೈಗೊಳ್ಳಲು. ಹಾಗಾಗಿ, ಯಾವ ವೃತ್ತಿಯಲ್ಲಿ ನೀವು ಮುಂದುವರಿದರೆ ಹೆಚ್ಚಿನ ಸಂಬಳ ಪಡೆಯಬಹುದು ಎಂಬುದನ್ನು ತಿಳಿದುಕೊಳ್ಳವುದು. ಈ ಬಗ್ಗೆ ನಿಮಗೆ ಗೊತ್ತಿದ್ದರೆ ಅದಕ್ಕೆ ಬೇಕಾದ ಶಿಕ್ಷಣವನ್ನು ಪಡೆಯಲು, ಕೋರ್ಸು ಮಾಡಲು ಸಾಧ್ಯವಾಗುತ್ತದೆ.
ಸಣ್ಣ ಮಕ್ಕಳನ್ನ ಏನಾಗ್ತಿಯಾ ಅಂತ ಕೇಳಿದ್ರೆ ಸಾಕು ಥಟ್ಟನೆ ನಾವು ಡಾಕ್ಟರ್ ಆಗ್ತೀವಿ, ಇಂಜಿನಿಯರ್ ಆಗ್ತೀವಿ ಅಂತ ಹೇಳೋ ಕಾಲ ಒಂದಿತ್ತು. ಇನ್ನು ಕಾಲೇಜು ಮೆಟ್ಟಿಲು ಹತ್ತಿರಲ್ಲ, ಆಗಲೇ ನಾವು ಪಕ್ಕಾ ಡಾಕ್ಟರ್ ಆಗೇ ಆಗ್ತೀವಿ ಅನ್ನೋ ಹುಮ್ಮಸ್ಸು ಮಕ್ಕಳಲ್ಲಿ ಇರುತ್ತಿತ್ತು. ಪೋಷಕರಿಗೂ ಅಷ್ಟೇ ಇನ್ನೇನು ನಮ್ಮ ಮಕ್ಕಳು ಡಾಕ್ಟರ್, ಇಂಜಿನಿಯರ್ ಆಗೇ ಬಿಟ್ಟರು ಅನ್ನೋವಷ್ಟು ಖುಷಿಪಡುತ್ತಿದ್ರು. ಆದ್ರೀಗ ಜಮಾನ ಚೇಂಜ್ ಆಗಿದೆ. ಪ್ರತೀ ವರ್ಷ ಕಾಲೇಜುಗಳಿಂದ ಹೊರಬರುತ್ತಿರೋ ಇಂಜಿನಿಯರಿಂಗ್ ಪದವೀಧರರ ಸಂಖ್ಯೆ ಜಾಸ್ತಿ ಇದೆ. ಆದ್ರೆ ಅವರಿಗೆ ಉದ್ಯೋಗಾವಕಾಶಗಳು ತೀರಾ ಕಡಿಮೆ. ಅದಕ್ಕೆ ಹೇಳೋದು ಇಂಜಿನಿಯರಿಂಗ್, ಡಾಕ್ಟರ್ ವೃತ್ತಿಗಳೆರಡೇ ಅಲ್ಲ, ಇನ್ನು ಸಾಕಷ್ಟು ವಲಯಗಳಲ್ಲಿ ಉದ್ಯೋಗ ಅವಕಾಶಗಳು ಇವೆ.
ಸದ್ಯದ ಪರಿಸ್ಥಿತಿಯಲ್ಲಿ ಕೊರೊನಾ ಲಾಕ್‌ಡೌನ್ ನಿಂದಾಗಿ ದೇಶದಲ್ಲಿ ಆರ್ಥಿಕ ಬಿಕ್ಕಟ್ಟು ತಲೆದೋರಿದೆ. ಹೀಗಾಗಿ ಮುಂಬರುವ ವರ್ಷದಲ್ಲಿ ಡಾಕ್ಟರ್ ಹಾಗೂ ಇಂಜಿನಿಯರ್ ಅಷ್ಟೇ ಅಲ್ಲದೇ, ಉತ್ತಮ ಸಂಭಾವನೆ ನೀಡುವ ಸಾಕಷ್ಟು ಅವಕಾಶಗಳು ನಿಮ್ಮ ಮುಂದಿವೆ.
ಬಿಡದ ಛಲ, MBBS ಸೀಟು ಪಡೆಯಲು ಯಶಸ್ವಿಯಾದ ದನ ಕಾಯೋ ಹುಡುಗಿ!
1. ವಕೀಲಿ ವೃತ್ತಿ
ಕಾನೂನು ಅನ್ನೋದು ಎಲ್ಲ ಅಪರಾಧ, ವ್ಯಾಜ್ಯ, ಕಾರ್ಪೊರೇಟ್‌ನಂತಹ ಹಲವು ವಲಯಗಳಲ್ಲೂ ಇದ್ದೇ ಇದೆ. ಹೀಗಾಗಿ ವಕೀಲಿಕೆ ಮೂಲಕ ನ್ಯಾಯ ಕೊಡಿಸಲು ಪ್ರತೀ ರಾಜ್ಯ ಅಥವಾ ದೇಶದಲ್ಲಿ ಸದಾ ಹೋರಾಡಬಹುದು. ಬಿಎ ಎಲ್‌ಎಲ್‌ಬಿ ಮಾಡಿದ್ದರೆ ಅಥವಾ ಯಾವುದಾದ್ರೂ ವಿಷಯದಲ್ಲಿ ಸ್ಪೆಷಲೈಜೇಷನ್ ಮಾಡಿದ್ದರೆ, ಬಳಿಕ ಸ್ನಾತಕೋತರ ಪದವಿ ಪಡೆಯಬಹುದು. ವಕೀಲರು ವರ್ಷಕ್ಕೆ ೭ ರಿಂದ ೧೦ ಲಕ್ಷ ಸಂಪಾದನೆ ಮಾಡಬಹುದು.
2. ಕಮರ್ಷಿಯಲ್ ಪೈಲಟ್
ಪೈಲಟ್ ವೃತ್ತಿ ಕೂಡ ಅತೀ ಹೆಚ್ಚು ಸಂಭಾವನೆ ಬೇಡುವ ವೃತ್ತಿ. ಇದೊಂದು ಗ್ಲಾಮರಸ್ ವರ್ಲ್ಸ್ ಆಗಿದ್ದು, ನೀವು ಸದಾ ಗಅಳಿಯಲ್ಲೇ ತೇಲಾಡಬಹುದು. ೧೨ನೇ ತರಗತಿ ಮುಗಿದ ಕೂಡಲೇ ನೇರವಾಗಿ ಪೈಲಟ್ ಜಾಬ್ ಗೆ ಅರ್ಜಿ ಸಲ್ಲಿಸಬಹುದು. ವರ್ಷಕ್ಕೆ೧.೫ ರಿಂದ೨ ಲಕ್ಷ ಗಳಿಸಬಹುದು.
3.ಮ್ಯಾನೇಜ್‌ಮೆಂಟ್ ಕನ್ಸಲ್ಟೆಂಟ್
ಬ್ಯುಸಿನೆಸ್‌ಗೆ ಸಂಬಂಧಿಸಿದ ಸಮಸ್ಯೆಗಳನ್ನ ಪರಿಹರಿಸಲು ಸಮರ್ಥರಿರುವಂತಹ ಕನ್ಸಲ್ಟೆನ್ಸಿಗಳನ್ನು ಕೆಲವು ಪ್ರಮುಖ ಕಂಪನಿಗಳು ಕೆಲಸಕ್ಕೆ ತೆಗೆದುಕೊಳ್ಳುತ್ತವೆ.ಇಂಥ ಕೆಲಸಕ್ಕೆ ಸೇರಲು ಯಾವುದೇ ನಿರ್ದಿಷ್ಟ ಕೋರ್ಸ್ ಅಂತ ಇಲ್ಲ. ಆದ್ರೆ ಕ್ಯಾಂಡಿಡೇಟ್ ಗೆ ಅನುಭವವಿರಬೇಕು. ಆಗ ವರ್ಷಕ್ಕೆ ೮-೧೦ ಲಕ್ಷ ಗಳಿಸಬಹುದು.
4.ಚಾರ್ಟೆಡ್ ಅಕೌಂಟೆಂಟ್ಸ್:
ಸ್ಟಾರ್ಟ್ಸ್ ಅಪ್‌ಗಳಿಂದ ಹಿಡಿದು ಮಲ್ಟಿ ನ್ಯಾಷನಲ್ ಕಂಪನಿಗಳವರೆಗೂ ಈ ಉದ್ಯೋಗಕ್ಕೆ ಭಾರೀ ಬೇಡಿಕೆಯಿದೆ. ೩ ಹಂತದ ಪರೀಕ್ಷೆಯಲ್ಲಿ ತೇರ್ಗಡೆಯಾದ ಬಳಿಕ ಈ ವೃತ್ತಿಯನ್ನ ಆರಿಸಿಕೊಳ್ಲಬಹುದು. ೧೧ ರಿಂದ ೧೫ ಲಕ್ಷ ರೂಪಾಯಿಯ ಸ್ಯಾಲರಿ ಪ್ಯಾಕೇಜ್ ಅನ್ನು ನೀವು ಪಡೆಯಬಹುದು.
ಸ್ಟ್ರೆಂಥ್ ಹೈಲೈಟ್ ಆಗಲಿ, ವೀಕೆನೆಸ್ ಮರೆ ಮಾಚಿ, ಕನಸಿನ ಕೆಲಸ ನಿಮ್ಮದಾಗಿಸಿಕೊಳ್ಳಿ
5. ಮ್ಯಾನೇಜ್‌ಮೆಂಟ್ ಪ್ರೊಫೆಷನಲ್:
ಫೈನಾನ್ಸ್, ಮಾರ್ಕೆಟ್., ಮಾನವ ಸಂಪನ್ಮೂಲ. ಲಾಜಿಸ್ಟಿಕ್ಸ್ ಸದ್ಯ ಹೆಚ್ಚು ಪ್ರಚಲಿತದಲ್ಲಿವೆ. ಅದೇ ರೀತಿ ಮ್ಯಾನೇಜ್ ಮೆಂಟ್ ಉದ್ಯೋಗ ಕೂಡ ಲಭ್ಯವಿರುತ್ತದೆ. ಆದ್ರೆ ಉದ್ಯೋಗಿಯೂ ಕಡ್ಡಾಯವಾಗಿ ಎಂಬಿಎ ಪದವಿ ಪಡೆದಿರಬೇಕು. ಇದಿಷ್ಟೇ ಅಲ್ಲ, ಒಂದು ವೇಳೆ ನಿಮ್ಮ ಕಾಲೇಜು ಕ್ಯಾಂಪಸ್‌ನಲ್ಲಿ ಉದ್ಯೋಗ ಸಿಕ್ಕರೇ, ಮತ್ತಷ್ಟು ಎಕ್ಸ್‌ಪೊಜರ್ ಸಿಕ್ಕಂತಾಗುತ್ತದೆ. ಈ ವೃತ್ತಿಯಲ್ಲಿ ವರ್ಷಕ್ಕೆ ನೀವು ೨೦ ಲಕ್ಷ ಗಳಿಸಬಹುದು.
6. ಸಿವಿಲ್ ಸರ್ವೀಸಸ್
ಬ್ರಿಟಿಷರಿಂದ ಶುರುವಾಗಿರೋ ಈ ವೃತ್ತಿ ಕೂಡ ಒಂದು ಪ್ರೆಸ್ಟಿಜಸ್ ಜಾಬ್. ಇದ್ರಿಂದ ಪವರ್ ಹಾಗೂ ಹಣ ಎರಡೂ ಸಿಗುತ್ತೆ. ಈ ಪ್ರೊಫೆಷನ್‌ನಲ್ಲಿ ಸಾಕಷ್ಟು ಶಾಖೆಗಳಲ್ಲಿವೆ. ಅದರಲ್ಲೊಂದು ಇಂಡಿಯನ್ ಫಾರಿನ್ ಸರ್ವಿಸ್ಸ್. ಈ ವೃತ್ತಿಯಲ್ಲಿ ಮಾಸಿಕ ೮೦ ರಿಂದ ೮೫ ಸಾವಿರ ಸಂಪಾದಿಸಬಹುದು.
7. ಮರ್ಚೆಂಟ್ ನೇವಿ
ನಿಮಗೆ ಸಮುದ್ರ ಅಂದ್ರೆ ತುಂಬಾ ಇಷ್ನನಾ? ಬೀಚ್ ವಿಂಡ್ಸ್ ಬಗ್ಗೆ ನಿಮಗೆ ಊಹಿಸೋಕು ಕಷ್ಟ. ಇದೀಗ ನೀವು ಆ ಜಾಬ್ ಅನ್ನು ಪಡೆಯಬಹುದು. ಈ ಕೆಲಸ ಅತ್ಯಂತ ಸವಾಲಿದ್ದಾಗಿದ್ದು, ಅತಿ ಹೆಚ್ಚು ಸಂಭಾವನೆ ಬೇಡುವ ವೃತ್ತಿ ಆಗಿದೆ. ನಿಮಗೆ ಫಿಸಿಕ್ಸ್, ಕೆಮಿಸ್ಟ್ರಿ ಹಾಗೂ ಮ್ಯಾಥ್ಸ್ ಗೊತ್ತಿದ್ರೆ ಈ ಉದ್ಯೋಗವನ್ನ ಸುಲಭವಾಗಿ ಪಡೆಯಬಹುದು. ಒಂದಷ್ಟು ವರ್ಷಗಳ ಕಾಲ ಅನುಭವ ಪಡೆದ ಬಳಿಕ ಇದ್ರಿಂದ ಮಾಸಿಕ ೧.೫ ಲಕ್ಷ ರೂಪಾಯಿ ಗಳಿಸಬಹುದು.
ಕೋವಿಡ್ ಸೋಂಕಿನ ಮಧ್ಯೆಯೂ ಮಕ್ಕಳು ಓಡಾಡ್ಕೊಂಡು ಕಲಿಯಬಹುದು!