ಡ್ರೀಮ್ ಜಾಬ್ ಪಡೆಯಬೇಕು ಅನ್ನೋದು ಪ್ರತಿಯೊಬ್ಬರ ಆಸೆ. ಆದ್ರೆ ಅದು ಅಷ್ಟು ಸುಲಭವಲ್ಲ. ‌ಕೆಲವರು ಹಗಲು ರಾತ್ರಿ ಕಷ್ಟಪಟ್ಟು ಹೇಗೋ ಓದಿ ರ್ಯಾಂಕ್ ಪಡೆಯುತ್ತಾರೆ. ಆದ್ರೆ ಉದ್ಯೋಗ, ಸಂದರ್ಶನ ಅಂತ ಬಂದಾಗ ಸೋತು ಹೋಗ್ತಾರೆ. ಕೆಲಸದ ಸಂದರ್ಶನವೆಂದರೆ  ಅನೇಕ ದಿನಗಳಿಂದ ತಯಾರಾಗಿ, ಸಂಭವಿತ ಪ್ರಶ್ನೆಗಳ ಉತ್ತರವನ್ನು ಸತತವಾಗಿ ಅಭ್ಯಾಸ ಮಾಡಿ ಸಂದರ್ಶನಕ್ಕೆ ಹಾಜರಾಗ್ತಾರೆ. ಏಕೆಂದರೆ ಸಂದರ್ಶನ ಎದುರಿಸುವುದು ಎಂದರೆ ಆಟ ಆಡಿದಷ್ಟು ಸುಲಭವಲ್ಲ. 

ಕೋವಿಡ್ ಸೋಂಕಿನ ಮಧ್ಯೆಯೂ ಮಕ್ಕಳು ಓಡಾಡ್ಕೊಂಡು ಕಲಿಯಬಹುದು!

ಅಭ್ಯರ್ಥಿ ಎಷ್ಟೇ ಅಭ್ಯಾಸ ಮಾಡಿದರೂ ಉತ್ತರವಿಲ್ಲದ ಕೆಲವು ಪ್ರಶ್ನೆಗಳಂತೂ ಇದ್ದೆ ಇರುತ್ತವೆ. ಅಂದಹಾಗೆ ಎಲ್ಲ ಸಂದರ್ಶಕರು ಅನಿರೀಕ್ಷಿತ ಪ್ರಶ್ನೆಗಳನ್ನೇ ಕೇಳುತ್ತಾರೆ ಎಂದಲ್ಲ. ಅದು ಸಂದರ್ಶಕರು ಮತ್ತು ಸಂದರ್ಭದ ಮೇಲೆ ಅವಲಂಬಿತ. ಆದ್ರೆ ಸಂದರ್ಶನಕ್ಕೂ ಹೋಗುವ ಮುನ್ನ ನಿಮ್ಮನ್ನ ನೀವು ಸ್ವಲ್ಪ ಮಟ್ಟಿಗೆ ತಯಾರು‌ ಮಾಡ್ಕೊಳ್ಳಬೇಕು. ಇನ್ನು ಕೆಲವರಿಗೆ ಸಂದರ್ಶನದ ವೇಳೆ ಕೈ-ಕಾಲು ನಡುಕ ಬರುತ್ತೆ. ನರ್ವಸ್ ಆಗಿ ಸರಿಯಾಗಿ ಉತ್ತರಿಸಲು ಆಗಲ್ಲ. ಅಂಥವರು ಸಂದರ್ಶಕರು‌ ಕೇಳುವ ಪ್ರಶ್ನೆಗಳಿಗೆ ಹೇಗೆ ಉತ್ತರಿಸಬೇಕು ಅನ್ನೋದಕ್ಕೆ ಸಿಂಪಲ್ಲಾಗಿ ಈ ಐದು ಟಿಪ್ಸ್ ಮಾಡಿ.

ನಿಮ್ಮ ಬಗ್ಗೆ ಪರಿಚಯ ಮಾಡಿಕೊಳ್ಳುವುದು
ಇಂಟರ್ ವ್ಯೂನಲ್ಲಿ ಇದೊಂದು ಕ್ಲಾಸಿಕ್ ಪ್ರಶ್ನೆ ಇದ್ದೇ ಇರುತ್ತದೆ. ಇದನ್ನ  ಹೇಳುವುದು ಕಷ್ಟ, ಆದರೆ ನೀವು ಆಸಕ್ತಿದಾಯಕ ಹಾಗೂ ಉದ್ದೇಶಪೂರ್ವಕವಾಗಿ ನಿಮ್ಮ ಪರಿಚಯ ಮಾಡಿಕೊಳ್ಳಬೇಕು. ಇದ್ರಿಂದ ನಿಮ್ಮ ಬಗ್ಗೆ ಸಂದರ್ಶಕರಿಗೆ ಸ್ಪಷ್ಟ ಮಾಹಿತಿವಾಗಿ ಅರ್ಥವಾಗುತ್ತದೆ.

ಇಂಪ್ರೆಸ್ ಆಗುವಂಥ ಡ್ರೆಸ್ ಇರಲಿ
ಸಂದರ್ಶನದಲ್ಲಿ ಸುಕ್ಕುಗಟ್ಟಿದ ಶರ್ಟ್ ಅಥವಾ ರಫಲ್ಡ್ ಕೂದಲನ್ನು ಸಂದರ್ಶಕರು ನೋಡಲು ಇಷ್ಟಪಡುವುದಿಲ್ಲ. ಹೀಗಾಗಿ ಚೆನ್ನಾಗಿ ಡ್ರೆಸ್ ಮಾಡಿಕೊಳ್ಳಿ. ಫಸ್ಟ್ ಇಂಪ್ರೆಷನ್ ಈಸ್ ಬೆಸ್ಟ್ ಇಂಪ್ರೆಷನ್ ಅನ್ನೋ ಹಾಗಿರಬೇಕು. ಇದು ಕೆಲಸದ ಕಡೆಗೆ ನಿಮ್ಮ ಗಂಭೀರತೆಯನ್ನು ತೋರಿಸುತ್ತದೆ. ಅಂತಹ ಸಂದರ್ಭಗಳಲ್ಲಿ ಒಬ್ಬರ ಪಾತ್ರವನ್ನು ನಿರ್ಧರಿಸುವಲ್ಲಿ ಒಬ್ಬರ ಹೊರ ನೋಟವು ಪ್ರಮುಖ ಪಾತ್ರ ವಹಿಸುತ್ತದೆ ಎಂಬುದನ್ನು ಎಂದಿಗೂ ಮರೆಯಬಾರದು.

ಖಾಸಗಿ ಶಾಲೆ ತೊರೆದು ಸರ್ಕಾರಿ ಶಾಲೆ ಸೇರಿದ 2 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು

ಕಂಪನಿಯ ಹಿನ್ನೆಲೆ ತಿಳಿದುಕೊಳ್ಳಿ
ನೀವು ಸಂದರ್ಶನಕ್ಕೆ ಹೋಗುತ್ತಿರುವ ಕಂಪನಿಯ ಹಿನ್ನೆಲೆಯ ಬಗ್ಗೆ ಓದಿ ತಿಳಿದುಕೊಳ್ಳಿ. ಇದರಿಂದ ನೀವು ಮುಂದೆ ಕೆಲಸಕ್ಕೆ ಹೋದಾಗ ಪ್ರೇಕ್ಷಕರನ್ನು ಹೇಗೆ ನಿಭಾಯಿಸುತ್ತೀರಾ ಅನ್ನೋದನ್ನ ಅರ್ಥ ಮಾಡಿಸಬಹುದು. ಅಲ್ಲದೆ, ಸಂದರ್ಶಕರ ಪ್ರಶ್ನೆಗಳಿಗೆ ಸುಲಭವಾಗಿ ಉತ್ತರಿಸಲು ಇದು ನಿಮಗೆ ಸಹಾಯ ಮಾಡುತ್ತದೆ.

ಹಿಂದಿನ ಕೆಲಸದ ಅನುಭವ ಹಂಚಿಕೊಳ್ಳಿ
ಈ ಮುಂಚೆ ಬೇರೆ ಕಂಪನಿಗಳಲ್ಲಿ ಕೆಲಸ ಮಾಡಿದ್ದರೆ, ಅದರ ಬಗ್ಗೆ ಸಂದರ್ಶಕರ ಮುಂದೆ ಹೇಳಿ. ನಿಮ್ಮ ಎಲ್ಲ ಸರ್ಟಿಫಿಕೇಟ್ ಗಳನ್ನು ಅವರಿಗೆ ತೋರಿಸಿ. ಒಂದು ವೇಳೆ ನೀವು ಫ್ರೆಶರ್ ಆಗಿದ್ರೆ, ಶೈಕ್ಷಣಿಕ ದಾಖಲೆ, ಸರ್ಟಿಫಿಕೇಟ್ ಹಾಗೂ ಕಾಲೇಜು ಚಟುವಟಿಕೆಯ ಮಾಹಿತಿ ಶೇರ್ ಮಾಡಿಕೊಳ್ಳಿ.

ನಿಮ್ಮ ವೀಕ್ನೆಸ್ ತೋರಿಸಿಕೊಳ್ಳಬೇಡಿ
ಸಂದರ್ಶಕರು‌ ನಿಮಗೆ ಸಾಕಷ್ಟು ಟ್ರಿಕ್ಕಿ ಪ್ರಶ್ನೆ ಗಳನ್ನು ಹಾಕುತ್ತಾರೆ. ಆದ್ರೆ ನೀವು ನಿಮ್ಮ ದೌರ್ಬಲ್ಯಗಳನ್ನು ಅವರಿಗೆ ಹೇಳಬೇಡಿ, ಬದಲಾಗಿ ನಿಮ್ಮ ನ್ಯೂನತೆಯನ್ನು ಮೀರಿ ನಿಮ್ಮ ಪ್ರಗತಿಯನ್ನು ತೋರಿಸಿ. ನಕಾರಾತ್ಮಕ ಅಂಶವನ್ನು ಸಕಾರಾತ್ಮಕತೆಗೆ ಪರಿವರ್ತಿಸಿ.

OnePlus Education Benefits: ಟಿವಿ ಖರೀದಿಸಿದರೆ ಸಾವಿರ ರೂ. ಆಫರ್