ಪಠ್ಯಪುಸ್ತಕದಲ್ಲಿ ರಾಜಕಾರಣ ಮಾಡಬಾರದು : Basavaraj Horatti

ಪಠ್ಯಪುಸ್ತಕದಲ್ಲಿ ರಾಜಕಾರಣ ಮಾಡಬಾರದು. ಅದನ್ನು ಶಿಕ್ಷಣ ಇಲಾಖೆಗೆ ಬಿಡಬೇಕು. ಯಾರೇ ಇದ್ದರೂ ಅದರಲ್ಲಿ ರಾಜಕಾರಣ ಮಾಡಬಾರದು ಎಂದು ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿ ಹೇಳಿಕೆ ನೀಡಿದ್ದಾರೆ. 

do not do Politics  in textbook says Basavaraj Horatti gow

ಧಾರವಾಡ (ಜೂ.10): ಪಶ್ಚಿಮ ಶಿಕ್ಷಕರ ಕ್ಷೇತ್ರದ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ  ಧಾರವಾಡದಲ್ಲಿ ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿ (Basavaraj Horatti)  ಪಠ್ಯ ಪುಸ್ತಕ ವಿವಾದ (Textbook row) ಚುನಾವಣೆ ಮೇಲೆ‌ ಪರಿಣಾಮ ವಿಚಾರವಾಗಿ  ಹೇಳಿಕೆ ನೀಡಿ ಅದು ನನಗೆ ಗೊತ್ತಿಲ್ಲ. ಆದರೆ ಪಠ್ಯಪುಸ್ತಕದಲ್ಲಿ ರಾಜಕಾರಣ ಮಾಡಬಾರದು. ಅದನ್ನು ಶಿಕ್ಷಣ ಇಲಾಖೆಗೆ ಬಿಡಬೇಕು. ಯಾರೇ ಇದ್ದರೂ ಅದರಲ್ಲಿ ರಾಜಕಾರಣ ಮಾಡಬಾರದು ಎಂದಿದ್ದಾರೆ.

ಇನ್ನು ಬಸವಣ್ಣನವರ ವಿಷಯ ಬಂದಾಗ ಅಪಪ್ರಚಾರ ಆಗಬಾರದು ಎಂಬುದು ನನ್ನ ನಿಲುವು. ಬಸವಣ್ಣನವರ ವಿಷಯದಲ್ಲಿ ಯಾರೇ ಒಳ್ಳೆ ಕೆಲಸ ಮಾಡಿದರೂ ನನ್ನ ಸಹಮತವಿದೆ. ಬೇರೆ ದೇಶಗಳಲ್ಲಿ ಸರ್ಕಾರಗಳು ಬದಲಾದರೂ ಶಿಕ್ಷಣ ನೀತಿ ಬದಲಾಗುವುದಿಲ್ಲ.  ಆದರೆ ನಮ್ಮ ದೇಶದಲ್ಲಿ ಶಿಕ್ಷಣ ನೀತಿಯೇ ಬದಲಾಗುತ್ತಾ ಹೊರಟಿದೆ. ಬೇರೆ ಬೇರೆ ಸರ್ಕಾರ, ಮಂತ್ರಿ ಬಂದಾಗೆಲ್ಲ ಬದಲಾಗುತ್ತಾ ಹೊರಟಿದೆ. ಚುನಾವಣೆ ಮುಗಿದ ಬಳಿಕ ಈಗಿನ ಪಠ್ಯದ ಬಗ್ಗೆ ಅಧ್ಯಯನ ಮಾಡಲಿದ್ದೇನೆ.  ಅಧ್ಯಯನ ಮಾಡಿ ನನಗೆ ತಿಳಿದ ಸಲಹೆ ನೀಡುತ್ತೇನೆ ಎಂದಿದ್ದಾರೆ.

Rajya Sabha Elections: ನವಾಬ್ ಮಲ್ಲಿಕ್ ಮತ್ತು ದೇಶ್‌ಮುಖ್ ಮತದಾನ ಮಾಡಲು ಕೋರಿ 

ಹೊರಟ್ಟಿಗೆ  ದಾಖಲೆಯ ಗೆಲುವು ತನ್ನಿ, ಶಿಕ್ಷಕರಲ್ಲಿ ಬೊಮ್ಮಾಯಿ ಮನವಿ!: ಶಿಕ್ಷಣ ಕ್ಷೇತ್ರದ ಅಮೂಲಾಗ್ರ ಸುಧಾರಣೆಗೆ ಕಳೆದ ನಾಲ್ಕು ದಶಕ ಗಳಿಂದ ಅವಿರತವಾಗಿ ಶ್ರಮಿಸುತ್ತಿರುವ ರಾಜ್ಯದ ಶಿಕ್ಷಕ ಸಮುದಾಯದ ಏಕೈಕ ಆಶಾಕಿರಣವಾಗಿರುವ ಬಸವರಾಜ ಹೊರಟ್ಟಿಯವರು ಶಿಕ್ಷಣ ಕ್ಷೇತ್ರದ ದಂತ ಕಥೆಯಾಗಿದ್ದು ಈ ಬಾರಿಯ ಚುನಾವಣೆಯಲ್ಲಿ ದಾಖಲೆಯ ಗೆಲುವು ಸಾಧಿಸಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.

ಹುಬ್ಬಳ್ಳಿಯ ಆದರ್ಶನಗರದ ಡಾ. ಜಿ.ವ್ಹಿ.ಜೋಶಿ ರೋಟರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹೊರಟ್ಟಿಯವರ ಚುನಾವಣಾ ಪ್ರಚಾರಾರ್ಥ ನಡೆದ ಶಿಕ್ಷಕರೊಂದಿಗಿನ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು. ಹೊರಟ್ಟಿಯವರ ಚುನಾವಣೆ ಎಂದರೆ ಶಿಕ್ಷಕ ಸಮೂಹದಲ್ಲೆಡೆ ಸಂಭ್ರಮ ಮನೆಮಾಡಿ ಹಬ್ಬದ ವಾತಾವರಣ ಸೃಷ್ಟಿಯಾಗುತ್ತದೆ. 

ಕಳೆದ 42 ವರ್ಷ ಗಳಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಹೊರಟ್ಟಿಯವರು ಅಮೂಲ್ಯ ಕೊಡುಗೆ ನೀಡಿದ್ದು ಶಿಕ್ಷಣ ಕ್ಷೇತ್ರದಲ್ಲಿರುವ ಹಲವಾರು ಸಮಸ್ಯೆಗಳನ್ನು ನಿವಾರಿಸಿ ಕಾನೂನು ತೊಡಕನ್ನು ಸರಳಗೊಳಿಸಿ ಶಿಕ್ಷಣ ಕ್ಷೇತ್ರಕ್ಕೆ ಹಾಗೂ ಶಿಕ್ಷಕರಿಗೆ ನ್ಯಾಯ ಒದಗಿಸುವ ಮೂಲಕ ರಾಜ್ಯದ ಶಿಕ್ಷಕ ಸ್ನೇಹಿ ರಾಜಕಾರಣಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಎಂದರು.

1983 ರಲ್ಲಿ ಕರ್ನಾಟಕ ಶಿಕ್ಷಣ ಕಾಯ್ದೆ ಜಾರಿಗೆ ಬಂದ ನಂತರ ಶಿಕ್ಷಣ ಕ್ಷೇತ್ರದಲ್ಲಿ ಹಲವಾರು ಬದಲಾವಣೆ ಬಂದಿದ್ದು ಶಿಕ್ಷಕರ ಪಾತ್ರ ಅತೀ ಮುಖ್ಯವಾಗಿದೆ. ಬದಲಾವಣೆಗೆ ತಕ್ಕಂತೆ ಶಿಕ್ಷಣ ಕ್ಷೇತ್ರಕ್ಕೆ ಸದಾಕಾಲ ಬೆಂಬಲ ನೀಡುತ್ತ ಹೊರಟ್ಟಿಯವರು ಪ್ರತಿಯೊಂದು ಸಮಸ್ಯೆಯನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. 

 ಬೆಂಗಳೂರು: ಮದುವೆಗೆ ಒಪ್ಪಲಿಲ್ಲ ಅಂತ ವಿವಾಹಿತ ಮಹಿಳೆ ಮೇಲೆ ಆ್ಯಸಿಡ್ ದಾಳಿ..!

ರಾಜ್ಯದಲ್ಲಿ ಶಿಕ್ಷಕರಿಗೆ ಎಲ್ಲ ರೀತಿಯ ನ್ಯಾಯ ಒದಗಿಸಿ ರುವ ಏಕೈಕ ನಾಯಕ ಎಂದರೆ ಅದು ಬಸವರಾಜ ಹೊರಟ್ಟಿಯವರು. ಶಿಕ್ಷಕರ ಬಗ್ಗೆ ಅಪಾರವಾದ ಶೃದ್ಧೆ, ಕಾಳಜಿ ಇರುವ ಏಕೈಕ ನಾಯಕ ರಾಗಿರುವ ಹೊರಟ್ಟಿಯವರು ಶಿಕ್ಷಣ ಕ್ಷೇತ್ರದ ಸುಧಾರಣೆ ಮತ್ತು ಶಿಕ್ಷಕರ ಸಮಸ್ಯೆಗಳ ಈಡೇರಿಕೆ ಕುರಿತು ನಡೆಸಿದ ಹೋರಾಟ ಹಾಗೂ ಅವರ ಕೊಡುಗೆ ಕುರಿತು ಸಂಶೋಧನೆ ನಡೆಸಬೇಕೆನ್ನುವದು ನನ್ನ ಆಕಾಂಕ್ಷೆಯಾಗಿದೆ ಎಂದು ಬೊಮ್ಮಾಯಿ ತಿಳಿಸಿದರು.

ಇಂದು ಮೋದಿ ನೇತೃತ್ವದ ಸರಕಾರ ಹೊಸ ಶಿಕ್ಷಣ ನೀತಿ ಜಾರಿಗೊಳಿಸಿದ್ದು ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ತರಲಾಗುತ್ತಿದೆ. ಈ ಸಂದರ್ಭದಲ್ಲಿ ಹೊರಟ್ಟಿಯವರು ರಾಜ್ಯದ ಮಕ್ಕಳ ಉಜ್ವಲ ಭವಿಷ್ಯ ರೂಪಿಸುವ ಚಿಂತನೆಯಿಂದ ಬಿ.ಜೆ.ಪಿ. ಸೇರಿದ್ದಾರೆ. ಬಿ.ಜೆ.ಪಿ. ಮತ್ತು ಹೊರಟ್ಟಿ ಎರಡೂ ಶಕ್ತಿಗಳು ಇಂದು ಸಮ್ಮಿಳಿತಗೊಂಡಿದ್ದು ಇದರಿಂದ ಈ ಬಾರಿ ಚುನಾವಣೆಯಲ್ಲಿ ಬಿ.ಜೆ.ಪಿ. ಅರ್ಭರ್ಥಿ ದಾಖಲೆ ಪ್ರಮಾಣದಲ್ಲಿ ಜಯಶಾಲಿಯಾಗಲಿದ್ದು ಹೊರಟ್ಟಿಯವರ ಗೆಲುವು ನಾಡಿನ ಶಿಕ್ಷಕರೆಲ್ಲರ ಗೆಲುವು ಆಗಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.

Latest Videos
Follow Us:
Download App:
  • android
  • ios