4 ವರ್ಷದ ಡಿಗ್ರಿ ಪಾಸ್ ಆದ ವಿದ್ಯಾರ್ಥಿಗಳಿಗೆ ಪಿಎಚ್‌ಡಿಗೆ ನೇರ ಅವಕಾಶ
ರಾಷ್ಟ್ರೀಯ ಶಿಕ್ಷಣ ನೀತಿ 2020 ಅನ್ವಯ ನಾಲ್ಕು ವರ್ಷದ ಪದವಿಯನ್ನು ಶೇ.75 ಅಂಕಗಳಿಂದ ಪೂರೈಸಿದವರು ನೇರವಾಗಿ ಪಿಎಚ್‌ಡಿ ಮಾಡಬಹುದು. ಇಲ್ಲವೇ ನೆಟ್ ಪರೀಕ್ಷೆ ಎದುರಿಸಬಹುದು ಎಂದು ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಘೋಷಿಸಿದೆ.
ನವದೆಹಲಿ: ರಾಷ್ಟ್ರೀಯ ಶಿಕ್ಷಣ ನೀತಿ 2020 ಅನ್ವಯ ನಾಲ್ಕು ವರ್ಷದ ಪದವಿಯನ್ನು ಶೇ.75 ಅಂಕಗಳಿಂದ ಪೂರೈಸಿದವರು ನೇರವಾಗಿ ಪಿಎಚ್‌ಡಿ ಮಾಡಬಹುದು. ಇಲ್ಲವೇ ನೆಟ್ ಪರೀಕ್ಷೆ ಎದುರಿಸಬಹುದು ಎಂದು ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಘೋಷಿಸಿದೆ.
ನಾಲ್ಕು ವರ್ಷದ ಪದವಿಯಲ್ಲಿ ಒಟ್ಟಾರೆ ಶೇ.75 ಅಂಕಗಳನ್ನು ಪಡೆದಿದ್ದಲ್ಲಿ ಪಿಎಚ್‌ಡಿ ಮಾಡಬಹುದು ಹಾಗೂ ರಾಷ್ಟ್ರೀಯ ಅರ್ಹತಾ ಪರೀಕ್ಷೆ (ನೆಟ್) ಬರೆಯಲು ವಿದ್ಯಾರ್ಥಿಗೆ ಅರ್ಹತೆ ಇರುತ್ತದೆ. ಅವರು ಯಾವುದೇ ವಿಷಯದಲ್ಲಿ ಬೇಕಾದರೂ ಪಿಎಚ್‌ಡಿ ಮಾಡಬಹುದು. ಅಂಕಗಳಲ್ಲಿ ಶೇ.5ರಷ್ಟು ಪರಿಶಿಷ್ಟ ಜಾತಿ, ವರ್ಗ, ಮೇಲ್ಪದರಕ್ಕೆ ಸೇರಿರದ ಒಬಿಸಿಗಳು, ಆರ್ಥಿಕವಾಗಿ ಹಿಂದುಳಿದವರು ಮತ್ತು ಅಂಗವಿಕಲರಿಗೆ ವಿನಾಯಿತಿಯನ್ನು ವಿಶ್ವವಿದ್ಯಾನಿಲಯಗಳು ನೀಡಬಹುದಾಗಿದೆ ಎಂದು ಯುಜಿಸಿ ಅಧ್ಯಕ್ಷ ಜಗದೀಶ್ ಕುಮಾರ್ ತಿಳಿಸಿದ್ದಾರೆ. ಇದುವರೆಗೂ ಪಿಎಚ್‌ಡಿ ಪ್ರವೇಶ ಪರೀಕ್ಷೆ ಹಾಗೂ ನೆಟ್ ಪರೀಕ್ಷೆಗೆ ಸ್ನಾತಕೋತ್ತರ ಪದವಿಯನ್ನು ಒಟ್ಟಾರೆ ಶೇ.55 ಅಂಕಗಳೊಂದಿಗೆ ತೇರ್ಗಡೆಯಾಗಬೇಕಿರುವುದು ಕಡ್ಡಾಯವಾಗಿತ್ತು.
ಸಿಇಟಿ ಪರೀಕ್ಷೆ ಮುಗಿದ ಮೇಲೆ ಪಿಯು ಹೊಸ ಪಠ್ಯದ ಮಾಹಿತಿ ಕೇಳಿದ ಕೆಇಎ!
ಕೇಜ್ರಿವಾಲ್‌ಗೆ ಚಿಕಿತ್ಸೆ ಕುರಿತು ತಿಹಾರ್ ಜೈಲಿನ ಸಿಬ್ಬಂದಿ ಎಎಪಿ ಮಧ್ಯೆ ಜಟಾಪಟಿ
ನವದೆಹಲಿ: ಮಧುಮೇಹದಿಂದ ಬಳಲುತ್ತಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ತಿಹಾರ್ ಜೈಲಿನಲ್ಲಿ ನೀಡುತ್ತಿರುವ ವೈದ್ಯಕೀಯ ಸೌಲಭ್ಯದ ಕುರಿತು ಆಮ್‌ಆದ್ಮಿ ಪಕ್ಷ ಮತ್ತು ತಿಹಾರ್ ಜೈಲು ಅಧಿಕಾರಿಗಳ ನಡುವೆ ಜಟಾಪಟಿ ಆರಂಭವಾಗಿದೆ.
ಜೈಲಿನಲ್ಲಿ ಕೇಜ್ರಿವಾಲ್‌ಗೆ ಇನ್ಸುಲಿನ್ ಮತ್ತು ವೈದ್ಯರ ಭೇಟಿಗೆ ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿದ್ದ ಆಪ್ ನಾಯಕರು ಇದೀಗ ತಮ್ಮ ವಾಗ್ದಾಳಿ ತೀವ್ರಗೊಳಿಸಿದ್ದಾರೆ. ಆಪ್ ಸಚಿವ ಸೌರಭ್ ಭಾರದ್ವಾಜ್ ಮಾತನಾಡಿ, ‘ಮಧುಮೇಹಿಗಳಿಗೆ ಅಗತ್ಯವಾದ ಎಲ್ಲಾ ಚಿಕಿತ್ಸೆ ತಿಹಾರ್ ಜೈಲಿನೊಳಗೇ ಇದೆ ಎಂದು ಈ ಮೊದಲು ಅಧಿಕಾರಿಗಳು ಹೇಳಿಕೊಂಡಿದ್ದರು. ಆದರೆ ಶನಿವಾರ ಏಮ್ಸ್‌ಗೆ ಪತ್ರ ಬರೆದಿರುವ ಜೈಲಧಿಕಾರಿಗಳು ಹಿರಿಯ ಮಧುಮೇಹ ತಜ್ಞ ವೈದ್ಯರ ನಿಯೋಜನೆಗೆ ಏಮ್ಸ್ ಆಸ್ಪತ್ರೆಗೆ ಕೋರಿದ್ದಾರೆ. ಸಿಎಂ ದಾಖಲಾದ 20 ದಿನಗಳ ಬಳಿಕ ಇದೀಗ ಮಧುಮೇಹ ತಜ್ಞರನ್ನು ಕರೆಸಲಾಗುತ್ತಿದೆ’ ಎಂದು ಕಿಡಿಕಾರಿದ್ದಾರೆ.
ಇದಕ್ಕೆ ತಿರುಗೇಟು ನೀಡಿರುವ ಜೈಲಧಿಕಾರಿಗಳು, ‘ಕೇಜ್ರಿವಾಲ್ ಪತ್ನಿ ಸುನಿತಾ ಕೇಜ್ರಿವಾಲ್ ಕೋರಿಕೆ ಮೇರೆಗೆ ಏಮ್ಸ್‌ನ ಹಿರಿಯ ವೈದ್ಯರು ಶನಿವಾರ ವಿಡಿಯೋ ಕಾನ್ಫರೆನ್ಸ್ ಮೂಲಕವೇ ಕೇಜ್ರಿವಾಲ್ ಜೊತೆ ಸಮಾಲೋಚನೆ ನಡೆಸಿದ್ದಾರೆ. ಈ ವೇಳೆ ಅವರ ಆರೋಗ್ಯದಲ್ಲಿ ಆತಂಕಪಡುವಂಥದ್ದು ಏನೂ ಇಲ್ಲ ಮತ್ತು ಹಾಲಿ ಪಡೆಯುತ್ತಿರುವ ಔಷಧವನ್ನು ಮುಂದುವರೆಸುವಂತೆ ಸೂಚಿಸಿದ್ದಾರೆ. ಈ ಸಮಾಲೋಚನೆ ವೇಳೆ ಕೇಜ್ರಿವಾಲ್ ಕೂಡಾ ಇನ್ಸುಲಿನ್ ಬಗ್ಗೆ ಪ್ರಸ್ತಾಪಿಸಿಲ್ಲ, ವೈದ್ಯರೂ ಈ ಬಗ್ಗೆ ಸಲಹೆ ನೀಡಲಿಲ್ಲ. ಇದನ್ನು ಮುಂದಿನ ದಿನಗಳಲ್ಲಿ ಕಾಲಕಾಲಕ್ಕೆ ಪರಿಶೀಲನೆ ನಡೆಸಲಾಗುವುದು’ ಎಂದು ಹೇಳಿದ್ಧಾರೆ.
CET Exam: ಮೊದಲ ದಿನವೇ ಗೊಂದಲದ ಗೂಡು: ಜೀವಶಾಸ್ತ್ರ, ಗಣಿತದಲ್ಲಿ ಪಠ್ಯಕ್ಕೆ ಸಂಬಂಧಿಸದ 20 ಪ್ರಶ್ನೆ!
ಆದರೆ ಜೈಲಧಿಕಾರಿಗಳ ಈ ಸ್ಪಷ್ಟನೆ ಹೊರತಾಗಿಯೂ ಜೈಲಿನಲ್ಲಿ ಕೇಜ್ರಿವಾಲ್‌ಗೆ ಹಾನಿ ಎಸಗಲು ಸಂಚು ರೂಪಿಸಲಾಗಿದೆ ಎಂದು ಭಾರಧ್ವಾಜ್ ಆರೋಪಿಸಿದ್ದಾರೆ.