CET Exam: ಮೊದಲ ದಿನವೇ ಗೊಂದಲದ ಗೂಡು: ಜೀವಶಾಸ್ತ್ರ, ಗಣಿತದಲ್ಲಿ ಪಠ್ಯಕ್ಕೆ ಸಂಬಂಧಿಸದ 20 ಪ್ರಶ್ನೆ!
ಎಂಜಿನಿಯರಿಂಗ್ ಸೇರಿದಂತೆ ವೃತ್ತಿಪರ ಶಿಕ್ಷಣ ಕೋರ್ಸುಗಳ ಪ್ರವೇಶಕ್ಕಾಗಿ ನಡೆಯುವ 'ಸಾಮಾನ್ಯ ಪ್ರವೇಶ ಪರೀಕ್ಷೆ' (ಸಿಇಟಿ)ಯು ಮೊದಲ ದಿನವೇ ಗೊಂದಲದ ಗೂಡಾಗಿತ್ತು.
ಬೆಂಗಳೂರು (ಏ.19): ಎಂಜಿನಿಯರಿಂಗ್ ಸೇರಿದಂತೆ ವೃತ್ತಿಪರ ಶಿಕ್ಷಣ ಕೋರ್ಸುಗಳ ಪ್ರವೇಶಕ್ಕಾಗಿ ನಡೆಯುವ 'ಸಾಮಾನ್ಯ ಪ್ರವೇಶ ಪರೀಕ್ಷೆ' (ಸಿಇಟಿ)ಯು ಮೊದಲ ದಿನವೇ ಗೊಂದಲದ ಗೂಡಾಗಿತ್ತು. ಜೀವಶಾಸ್ತ್ರ ಮತ್ತು ಗಣಿತ ಪತ್ರಿಕೆಯಲ್ಲಿ ಸುಮಾರು 20 'ಪತ್ಯೇತರ ಪ್ರಶ್ನೆಗಳು' ಮತ್ತು ಕಲಬುರಗಿ ಪರೀಕ್ಷಾ ಕೇಂದ್ರದಲ್ಲಿ ಒಂದೇ ನೋಂದಣಿ ಸಂಖ್ಯೆಯನ್ನು ಇಬ್ಬರು ವಿದ್ಯಾರ್ಥಿಗಳಿಗೆ ನೀಡಿರುವುದು ಬೆಳಕಿಗೆ ಬಂದಿತು. ದ್ವಿತೀಯ ಪಿಯುಸಿ ಜೀವಶಾಸ್ತ್ರ ಪಠ್ಯ ಪುಸ್ತಕದಿಂದ ತೆಗೆದು ಹಾಕಿರುವ ಅಧ್ಯಾಯಕ್ಕೆ ಸಂಬಂಧಿಸಿದ 11 ಪ್ರಶ್ನೆಗಳು ಮತ್ತು ಗಣಿತಕ್ಕೆ ಸಂಬಂಧಿಸಿದ 9 ಪ್ರಶ್ನೆಗಳನ್ನು ಕೇಳಲಾಗಿತ್ತು ಎಂದು ಪರೀಕ್ಷೆ ಬರೆದ ರಾಜ್ಯದ ವಿವಿಧೆಡೆಯ ಹಲವು ಅಭ್ಯರ್ಥಿಗಳುಹಾಗೂ ಉಪನ್ಯಾಸಕರು ದೂರಿದ್ದಾರೆ.
ಅಲ್ಲದೇ, ಪತ್ಯೇತರ ಪ್ರಶ್ನೆಗಳನ್ನು ಕೇಳಿರುವುದಕ್ಕೆ ಆತಂಕ ಮತ್ತು ಬೇಸರ ವ್ಯಕ್ತ ಪಡಿಸಿರುವ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಪತ್ರ ಬರೆದು ತಮ್ಮ ಅಸಮಾಧಾನ ಹಾಕಿದ್ದಾರೆ. ತಜ್ಞರಲ್ಲದವರಿಂದ ಸಿಇಟಿಗೆ ಪ್ರಶ್ನೆಗಳನ್ನು ತೆಗೆಸಿರುವುದರಿಂದ ಇಂತಹ ದೊಡ್ಡ ಅಚಾತುರ್ಯ ನಡೆದಿದೆ. ಪರೀಕ್ಷೆ ತೆಗೆದುಕೊಂಡ ಅಭ್ಯರ್ಥಿಗಳು ಅನಗತ್ಯವಾಗಿ ಗೊಂದಲಕ್ಕೆ ಒಳಗಾಗುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಆರ್.ಆರ್.ನಗರದಲ್ಲಿ ಮತ್ತೆ ಚುನಾವಣಾ ಗುರುತಿನ ಚೀಟಿ ಹಗರಣ: ಇಬ್ಬರ ಬಂಧನ
ಪಠ್ಯ ಹೊರತಾದ ಪ್ರಶ್ನೆ- ಪರಿಶೀಲನೆ: ಜೀವವಿಜ್ಞಾನ ಮತ್ತು ಗಣಿತ ಪ್ರಶ್ನೆ ಪತ್ರಿಕೆಗಳಲ್ಲಿ ಪಠ್ಯ ವ್ಯಾಪ್ತಿಯ ಹೊರಗಿನ ಪ್ರಶ್ನೆಗಳನ್ನು ಕೇಳಲಾಗಿದೆ ಎನ್ನುವ ದೂರುಗಳ ಬಗ್ಗೆ ಪ್ರತಿ ಕ್ರಿಯಿಸಿರುವ ರಮ್ಯಾ, ಶನಿವಾರ ಕೀ ಉತ್ತರ ಗಳನ್ನು ಪ್ರಕಟಿಸಲಾಗುವುದು. ಅದಕ್ಕೆ ಆಕ್ಷೇಪ ಣೆಗಳನ್ನು ಸಲ್ಲಿಸಬಹುದು. ವಿಷಯ ತಜ್ಞರ ತಂಡ ಪರಿಶೀಲಿಸಿ ನೀಡುವ ಸಲಹೆ ಬಗ್ಗೆ ಕೆಲ ತೀರ್ಮಾನ ಮಾಡಲಿದೆ ಎಂದರು.
ಶೇ.80ರಷ್ಟು ಹಾಜರಾತಿ: ಪರೀಕ್ಷೆಗೆ ಒಟ್ಟು 3,49,637 ಅಭ್ಯರ್ಥಿಗಳು ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಂಡಿದ್ದರು. ಗುರುವಾರ ನಡೆದ ಪರೀಕ್ಷೆಗೆ ಶೇ.80ರಷ್ಟು ಅಭ್ಯರ್ಥಿಗಳು ಹಾಜರಾಗಿದ್ದರು. ಮಲ್ಲೇಶ್ವರದ ಸರ್ಕಾರಿ ಪಿಯು ಕಾಲೇಜಿಗೆ ಭೇಟಿ ನೀಡಿದ ರಮ್ಯಾ ಅವರು ಪರೀಕ್ಷಾ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ವಿದ್ಯಾರ್ಥಿಗಳಿಗೆ ಒದಗಿಸಿರುವ ಮೂಲಸೌಲಭ್ಯಗಳ ಬಗ್ಗೆ ಖುದ್ದು ಮಾಹಿತಿ ಪಡೆದುಕೊಂಡರು.
ಇಬ್ಬರಿಗೆ ಒಂದೇ ನೋಂದಣಿ ಸಂಖ್ಯೆ!: ಸಿಇಟಿ ಪರೀಕ್ಷೆ ನಡೆದ ಕಲಬುರಗಿಯ ಮುಕ್ತಾಂಬಿಕಾ ಇಂಡಿಪೆಂಡೆಂಟ್ ಪಿಯು ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಇಬ್ಬರು ಅಭ್ಯರ್ಥಿಗಳಿಗೆ ಒಂದೇ ನೋಂದಣಿ ಸಂಖ್ಯೆಯನ್ನು ನೀಡಲಾಗಿತ್ತು. ಇದರಿಂದ ವಿದ್ಯಾರ್ಥಿಗಳು ಗೊಂದಲಕ್ಕೆ ಒಳಗಾಗಿದ್ದರು. ಆದರೆ, ಪರೀಕ್ಷಾ ಕೇಂದ್ರದ ಉಸ್ತುವಾರಿಯವರ ಮೇಲ್ವಿಚಾರಣೆಯಿಂದ ಸಮಸ್ಯೆಯನ್ನು ಬಗೆಹರಿಸಿ ಇಬ್ಬರು ವಿದ್ಯಾರ್ಥಿ ಗಳಿಗೂ ಪರೀಕ್ಷೆ ಬರೆಯಲು ಅವಕಾಶ ನೀಡಲಾಯಿತು ಎಂದು ತಿಳಿದು ಬಂದಿದೆ. ಇಂದು ಎರಡು ಪತ್ರಿಕೆಗೆ ಪರೀಕ್ಷೆ: ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ಪತ್ರಿಕೆಗಳ ಪರೀಕ್ಷೆ ಶುಕ್ರವಾರ ನಡೆಯಲಿದ್ದು, ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಕೆಇಎ ತಿಳಿಸಿದೆ.
Gadag: ನಗರಸಭೆ ಮಾಜಿ ಉಪಾಧ್ಯಕ್ಷೆ ಮನೆಯಲ್ಲಿ ಮರ್ಡರ್: ಚಾಕುವಿನಿಂದ ಇರಿದು ಮಲಗಿದ್ದ ನಾಲ್ವರ ಹತ್ಯೆ!
ಗುರುವಾರದ ಸಿಇಟಿ ಪರೀಕ್ಷೆಯಲ್ಲಿ ಸಿಲೆಬಸ್‌ನಲ್ಲಿ ಇಲ್ಲದ 10 ಪ್ರಶ್ನೆ ಕೇಳಿದ್ದಾರೆ. ಇದರಿಂದ ಮಕ್ಕಳಿಗೆ ಶಾಕ್ ಆಗಿದ್ದು, ಮಧ್ಯಾಹ್ನದ ಪರೀಕ್ಷೆಯಲ್ಲಿ ಪಠ್ಯದಲ್ಲಿ ಇಲ್ಲದ 11 ಪ್ರಶ್ನೆ ಕೇಳಿದ್ದಾರೆ. ಕೆಇಎಗೆ ನಾನು ಕರೆ ಮಾಡಿದ್ದು, ಗ್ರೇಸ್ ಮಾರ್ಕ್ಸ್ ಕೊಡಲು ಆಗಲ್ಲ ಎಂದಿದ್ದಾರೆ. ವಿದ್ಯಾರ್ಥಿಗಳೆಲ್ಲ ಬೇಸರಗೊಂಡಿದ್ದು, ಎಲ್ಲಾ ಪ್ರಾಚಾರ್ಯರು ಸೇರಿ ದೂರು ನೀಡುತ್ತೇವೆ.
-ನರೇಂದ್ರ.ಎಲ್. ನಾಯಕ ಅಧ್ಯಕ್ಷರು, ಎಕ್ಸ್‌ಪರ್ಟ್ ಪ.ಪೂ. ಕಾಲೇಜು ಮಂಗಳೂರು