Dharwad News: ಉದ್ಘಾಟನೆಗೆ ಮೊದಲೇ ಬಿರುಕು ಬಿಟ್ಟ ಶಾಲಾ ಕೊಠಡಿ!
ಸರಕಾರಿ ಕಟ್ಟಡವೊಂದು ಉದ್ಘಾಟನೆಗೂ ಮುನ್ನವೆ ಬಿರುಕು ಬಿಟ್ಟಿರುವ ಘಟನೆ ನಡೆದಿದೆ. ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಗುಮ್ಮಗೊಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಬ್ಯಾಲಾಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ನಾಲ್ಕುಕೊಠಡಿಗಳು ಉದ್ಘಾಟನೆಗೂ ಮುನ್ನವೆ ಬಿರುಕು ಬಿಟ್ಟಿವೆ.
ಧಾರವಾಡ (ಅ.6) : ಸರಕಾರಿ ಕಟ್ಟಡವೊಂದು ಉದ್ಘಾಟನೆಗೂ ಮುನ್ನವೆ ಬಿರುಕು ಬಿಟ್ಟಿರುವ ಘಟನೆ ನಡೆದಿದೆ. ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಗುಮ್ಮಗೊಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಬ್ಯಾಲಾಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ನಾಲ್ಕುಕೊಠಡಿಗಳು ಉದ್ಘಾಟನೆಗೂ ಮುನ್ನವೆ ಬಿರುಕು ಬಿಟ್ಟಿವೆ.
ಬಿರುಕು ಬಿಟ್ಟ ಸರ್ಕಾರಿ ಶಾಲೆ; ಮನೆಯಲ್ಲೇ ಶಿಕ್ಷಕರ ಪಾಠ!
2019-20 ನೇಯ ಸಾಲಿನಲ್ಲಿ 48 ಲಕ್ಷರೂ. ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆಯಿಂದ ನಿರ್ಮಾಣವಾದ 4 ಕೊಠಡಿಗಳನ್ನ ನಿರ್ಮಾಣ ಮಾಡಲಾಗಿದೆ. ಕಟ್ಟಡ ನಿರ್ಮಾಣ ಕಳಪೆ ಕಳಪೆಯಾಗಿದೆ. ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇದೀಗ ನಾಲ್ಕು ಕೊಠಡಿಗಳು ಉದ್ಘಾಟನೆಗೆ ಮುನ್ನವೇ ಬಿರುಕು ಬಿಟ್ಟಿರುವುದು ಸ್ಥಳೀಯರ ಆರೋಪ ನಿಜವಾಗಿದೆ.
ಈ ಕಟ್ಟಡವನ್ನ ಸರಿಯಾಗಿ ನಿರ್ಮಾಣ ಮಾಡಬೇಕು ಎಂದು ಗುತ್ತಿಗೆದಾರರಿಗೆ ಸೂಚನೆಯನ್ನು ಕೊಟ್ಟಿದ್ದಾರೆ. ಇದೀಗ ಎಲ್ಲೆಲ್ಲಿ ಬಿರುಕು ಬಿಟ್ಟಿದೆ ಅಲ್ಲಿ ಮತ್ತೆ ಪ್ಲಾಸ್ಟರ್ ಮಾಡಿಸಲಾಗುತ್ತಿದೆ ಎಂದು ಅಧಿಕಾರಿಗಳು ಸ್ಪಷ್ಟ ಪಡಿಸಿದ್ದಾರೆ. ಇನ್ನು ಗ್ರಾಮಸ್ಥರು ಕೂಡಾ ಈ ಕಟ್ಟಡವನ್ನ ಹಿರಿಯ ಪಿಡಬ್ಲುಡಿ ಅಧಿಕಾರಿಗಳು ಗಮನ ಹರಿಸಿ ಈ ಕಟ್ಟಡವನ್ನ ಸರಿಯಾಗಿ ನಿರ್ಮಾಣ ಮಾಡಿಸಿ ಮಕ್ಕಳಿಗೆ ಅನೂಕೂಲವಾಗುವಂತೆ ಮಾಡಿಕೊಡಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಸುವರ್ಣ ನ್ಯೂಸ್ ಪ್ರತಿನಿಧಿಗಳು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಶಾಲೆಯ ಪರಿಸ್ಥಿತಿಯ ಬಗ್ಗೆ ಪ್ರಶ್ನಿಸಿದಾಗ, ಇದು ನಮ್ಮಗಮನಕ್ಕೆ ಬಂದಿದೆ. ಎಲ್ಲಿ ಲೋಪದೋಷ ಆಗಿದೆ ಎಂಬುದನ್ನು ಪರಿಶೀಲಿಸಿ ಆದಷ್ಟು ಬೇಗ ಕಟ್ಟಡವನ್ನ ಸರಿಪಡಿಸಲಾಗುವುದು ಎಂದು ಭರವಸೆ ನೀಡಿದ್ದಾರೆ. ಈ ಕುರಿತು ಗ್ರಾಮಸ್ಥರು ಕೂಡಾ ನಮ್ಮಕೆಳಗಿನ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ ಎಂದು ಲೋಕೋಪಯೋಗಿ ಇಲಾಖೆಯ ಇಇ ಅವರು ಸ್ಪಷ್ಟಪಡಿಸಿದರು.
ಮಕ್ಕಳು ಹೊರಹೋದ ಅರ್ಧ ತಾಸಲ್ಲಿ ಸರ್ಕಾರಿ ಶಾಲೆ ಚಾವಣಿ ಪದರ ಕುಸಿತ!
ಈ ಕಟ್ಟಡವನ್ನ ಆದಷ್ಟು ಬೇಗ ಬಿರುಕುಬಿಟ್ಟ ಸ್ಥಳವನ್ನು ಸರಿಪಡಿಸಬೇಕು ಮತ್ತು ಅದನ್ನ ಕಟ್ಟಡವನ್ನು ಶಾಲೆ ಮುಖ್ಯೋಪಾಧ್ಯಯರಿಗೆ ಶೀಘ್ರ ಹಸ್ತಾಂತರ ಮಾಡಿ ಕೊಡಬೇಕು ಎಂದು ಗ್ರಾಮಸ್ಥರು ಅಧಿಕಾರಿಗಳನ್ನ ಒತ್ತಾಯಿಸಿದ್ದಾರೆ. ಗುತ್ತಿಗೆದಾರರು ಮತ್ತು ಅಧಿಕಾರಿಗಳು ಸ್ಥಳಕ್ಕೆ ಬೇಟಿ ನೀಡಿದ್ದು. ಪರಿಶೀಲನೆ ನಡೆಸಿದ್ದಾರೆ. ಆದಷ್ಟು ಬೇಗ ಕೊಠಡಿ ಸರಿಪಡಿಸಿ ಶೀಘ್ರ ಉದ್ಘಾಟನೆಗೊಳಿಸಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ.