ದ್ವಿತೀಯ ಪಿಯುಸಿ ಫಲಿತಾಂಶ: ಶೂನ್ಯ ಸುತ್ತಿದ ಪಿಯು ಕಾಲೇಜು ಬಂದ್‌ಗೆ ಒತ್ತಡ..!

ಶೇ.100ರಷ್ಟು ಫಲಿತಾಂಶ ಪಡೆದ ಕಾಲೇಜುಗಳ ಸಂಖ್ಯೆ ಈ ಬಾರಿ ನೂರಾರು ಸಂಖ್ಯೆಯಲ್ಲಿ ಏರಿಕೆಯಾಗಿದೆ. ಕಳೆದ ವರ್ಷ 42 ಸರ್ಕಾರಿ ಕಾಲೇಜುಗಳು ಸೇರಿ 317 ಕಾಲೇಜುಗಳಲ್ಲಿ ಪರೀಕ್ಷೆ ಬರೆದಿದ್ದ ಎಲ್ಲರೂ ಪಾಸಾಗಿದ್ದರು. ಈ ವರ್ಷ 91 ಪಿಯು ಕಾಲೇಜುಗಳು ಸೇರಿ ಒಟ್ಟು 463 ಕಾಲೇಜುಗಳಲ್ಲಿ ನೂರಕ್ಕೆ ನೂರು ಫಲಿತಾಂಶದ ಸಾಧನೆ ಮಾಡಿವೆ.

Demand to Shut Down PUC Zero Result Colleges in Karnataka grg

ಬೆಂಗಳೂರು(ಏ.12): ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಒಟ್ಟು 35 ಕಾಲೇಜುಗಳು ಶೂನ್ಯ ಫಲಿತಾಂಶ ಪಡೆದಿದ್ದು, ಈ ಪೈಕಿ ಖಾಸಗಿ ಕಾಲೇಜುಗಳ ಸಂಖ್ಯೆ 32! ಉಳಿದ ಮೂರರಲ್ಲಿ ಎರಡು ಸರ್ಕಾರಿ ಕಾಲೇಜು, ಮತ್ತೊಂದು ವಿಭಜಿತ ಕಾಲೇಜು ಇವೆ.

ಕಳೆದ ವರ್ಷ ಒಟ್ಟು 78 ಖಾಸಗಿ ಪಿಯು ಕಾಲೇಜುಗಳು ಶೂನ್ಯ ಫಲಿತಾಂಶ ಪಡೆದಿದ್ದವು. ಸರ್ಕಾರಿ ಕಾಲೇಜುಗಳು ಒಂದೂ ಇರಲಿಲ್ಲ. ಸಮಾಧಾನದ ವಿಷಯ ಎಂದರೆ ಕಳೆದ ಬಾರಿಗಿಂತ ಈ ಬಾರಿ ಶೂನ್ಯ ಫಲಿತಾಂಶದ ಕಾಲೇಜುಗಳ ಸಂಖ್ಯೆ ಅರ್ಧಕ್ಕರ್ಧ ಕಡಿಮೆಯಾಗಿದೆ. ಈ ಪೈಕಿ ಎರಡು ಸರ್ಕಾರಿ ಪಿಯು ಕಾಲೇಜುಗಳು ಸೇರಿವೆ. ಉಳಿದಂತೆ ಒಂದು ವಿಭಜಿತ ಕಾಲೇಜು ಸೇರಿದೆ. ಉಳಿದಂತೆ 6 ಅನುದಾನಿತ ಮತ್ತು 26 ಕಾಲೇಜುಗಳು ಅನುದಾನರಹಿತ ಖಾಸಗಿ ಪಿಯು ಕಾಲೇಜುಗಳಾಗಿವೆ. ಈ ಕಾಲೇಜುಗಳಲ್ಲಿ ಒಬ್ಬ ವಿದ್ಯಾರ್ಥಿಯೂ ಪಾಸಾಗಿಲ್ಲ.

ಫಲಿತಾಂಶ ಪ್ರಕಟ ಬೆನ್ನಲ್ಲೇ ದ್ವಿತೀಯ ಪಿಯುಸಿ ಪರೀಕ್ಷೆ-2ರ ಅಂತಿಮ ವೇಳಾಪಟ್ಟಿ ರಿಲೀಸ್

ಶೂನ್ಯ ಫಲಿತಾಂಶ ಪಡೆದ ಕಾಲೇಜುಗಳ ಬಾಗಿಲು ಹಾಕಿಸುವ ಕೆಲಸವನ್ನು ಸರ್ಕಾರ ಮಾಡಬೇಕು. ಮಕ್ಕಳನ್ನು ದಾಖಲಿಸಿಕೊಂಡು ಬೋಧನೆ ಮಾಡದೆ, ಯಾವುದೇ ಸೌಲಭ್ಯಗಳನ್ನು ನೀಡದೆ ವಂಚಿಸುವುದು ಕಾನೂನು ಬಾಹಿರ. ಹಾಗಾಗಿ ಮುಂದಿನ ಶೈಕ್ಷಣಿಕ ವರ್ಷಕ್ಕೆ ಅಂತಹ ಕಾಲೇಜುಗಳಲ್ಲಿ ಮಕ್ಕಳ ದಾಖಲಾತಿಗೆ ಅವಕಾಶ ನೀಡಬಾರದು ಎಂಬುದು ಪೋಷಕರು, ಶಿಕ್ಷಣ ತಜ್ಞರ ಒತ್ತಾಯವಾಗಿದೆ. ಆದರೆ, ಪಿಯು ಇಲಾಖೆ ಅಧಿಕಾರಿಗಳು ಹೇಳುವ ಪ್ರಕಾರ, ಸತತ ಮೂರು ವರ್ಷ ಶೂನ್ಯ ಫಲಿತಾಂಶ ಬಂದರೆ ಅಂತಹ ಕಾಲೇಜುಗಳ ಮಾನ್ಯತೆ ರದ್ದುಪಡಿಸಲಾಗುತ್ತದೆಯಂತೆ.

ಇನ್ನು, ಶೇ.100ರಷ್ಟು ಫಲಿತಾಂಶ ಪಡೆದ ಕಾಲೇಜುಗಳ ಸಂಖ್ಯೆ ಈ ಬಾರಿ ನೂರಾರು ಸಂಖ್ಯೆಯಲ್ಲಿ ಏರಿಕೆಯಾಗಿದೆ. ಕಳೆದ ವರ್ಷ 42 ಸರ್ಕಾರಿ ಕಾಲೇಜುಗಳು ಸೇರಿ 317 ಕಾಲೇಜುಗಳಲ್ಲಿ ಪರೀಕ್ಷೆ ಬರೆದಿದ್ದ ಎಲ್ಲರೂ ಪಾಸಾಗಿದ್ದರು. ಈ ವರ್ಷ 91 ಪಿಯು ಕಾಲೇಜುಗಳು ಸೇರಿ ಒಟ್ಟು 463 ಕಾಲೇಜುಗಳಲ್ಲಿ ನೂರಕ್ಕೆ ನೂರು ಫಲಿತಾಂಶದ ಸಾಧನೆ ಮಾಡಿವೆ.

ಪರೀಕ್ಷೆ ಬರೆಯಲು ತಂಗಿಗೆ ಚೀಟಿ ತಂದ ಅಣ್ಣ, ಬಿಡದ್ದಕ್ಕೆ ಪೊಲೀಸ್‌ ವಿರುದ್ಧ ಹಿಗ್ಗಾಮುಗ್ಗಾ ಥಳಿತ!

2024ನೇ ಸಾಲಿನ ಶೂನ್ಯ ಫಲಿತಾಂಶದ ಕಾಲೇಜುಗಳು

ಸರ್ಕಾರಿ

ಸರ್ಕಾರಿ ಪಿಯು ಕಾಲೇಜು, ಕೊಡಗನೂರು, ದಾವಣಗೆರೆ ತಾ.
ಸರ್ಕಾರಿ ಪಿಯು ಕಾಲೇಜು, ಕೋಕುಲ, ಧಾರವಾಡ ಜಿಲ್ಲೆ

ಅನುದಾನಿತ ಖಾಸಗಿ

ಸಿದ್ದಗಂಗಾ ಪಿಯು ಕಾಲೇಜು, ಬೂದಿಗೆರೆ, ಬೆಂಗಳೂರು
ಸಾರ್ವಜನಿಕ ಕಾಂಪೋಸಿಟ್‌ ಪಿಯು ಕಾಲೇಜು, ಶೆಟ್ಟಿಹಳ್ಳಿ, ರಾಮನಗರ ಜಿಲ್ಲೆ
ಕೆಎಲ್‌ಇಎಸ್‌ ಇಂಡಿಪೆಂಟೆಂಟ್‌ ಪಿಯು ಕಾಲೇಜು, ಗಣೇಶನಗರ, ಬೀದರ್‌ ಜಿಲ್ಲೆ
ಜಿವಿಎ ಬಾಲಕರ ಪಿಯು ಕಾಲೇಜು, ಬೇಡರೆಡ್ಡಿ ಹಳ್ಳಿ, ಚಿತ್ರದುರ್ಗ ಜಿಲ್ಲೆ
ಮೆಥೋಡಿಸ್ಟ್‌ ಬಾಲಕಿಯರ ಪಿಯು ಕಾಲೇಜು, ಕೋಲಾರ
ಸೆಂಟ್ರಲ್‌ ಕಾಂಪೋಸಿಟ್‌ ಪಿಯು ಕಾಲೇಜು, ಊರ್ಡಿಗೆರೆ, ತುಮಕೂರು ತಾ.
ಡಾ.ಅಂಬೇಡ್ಕರ್‌ ಪಿಯು ಕಾಲೇಜು(ವಿಭಜಿತ), ಇಂದಿರಾನಗರ, ಬೆಂಗಳೂರು

ಅನುದಾನರಹಿತ ಖಾಸಗಿ 

ವಿನಾಯಕ ಪಿಯು ಕಾಲೇಜ್ ಫಾರ್‌ ವಿಮೆನ್‌ ಅನುದಾನರಹಿತ), ಸುಂಕದಕಟ್ಟೆ ಬೆಂಗಳೂರು
ಪವನ್ ಪಿಯು ಕಾಲೇಜು, ಶ್ರೀರಾಮಪುರಂ, ಬೆಂಗಳೂರು
ಶ್ರೀ ಬಸವರಾಜ್ ಸ್ವಾಮಿ ಪಿಯು ಕಾಲೇಜು, ಲಗ್ಗೆರೆ, ಬೆಂಗಳೂರು
ಮೊಹರೆ ಪಿಯು ಕಾಲೇಜು, ಬಾಬುಸಪಾಳ್ಯ, ಬೆಂಗಳೂರು
ವಿನಾಯಕ ಸರಸ್ವತಿ ಪಿಯು ಕಾಲೇಜು, ಹೊಸಪೇಟೆ, ಬಳ್ಳಾರಿ ಜಿಲ್ಲೆ
ಬಸವ ಪಿಯು ಕಾಲೇಜು, ಇಂಡಿ ತಾ. ವಿಜಯಪುರ ಜಿಲ್ಲೆ
ಶ್ರೀ ದಯಾನಂದ ಪಿಯು ಕಾಲೇಜು, ಸಿಂಧಗಿ, ವಿಜಯಪುರ ಜಿಲ್ಲೆ
ವಿಜಯ ಪಿಯು ಕಾಲೇಜು, ಗದಗ ನಗರ
ಎಸ್ ಕೆ ಆರ್ ಸ್ವಾಮಿ ಪಿಯು ಕಾಲೇಜು, ನೇರಳಕೆರೆ, ಚಿತ್ರದುರ್ಗ ಜಿಲ್ಲೆ
ಶ್ರೀ ಸುಣಗಾರ್‌ ಪಿಯು ಕಾಲೇಜು, ಸಿಂದಗಿ, ವಿಜಯಪುರ ಜಿಲ್ಲೆ
ಎಸ್‌ವಿ ಪಿಯು ಕಾಲೇಜು, ಬಾಲ್ಕಿ, ಬೀದರ್ ಜಿಲ್ಲೆ
ಜಾಸ್ಮಿನ್ ಪಿಯು ಕಾಲೇಜು, ಬೀದರ್ ನಗರ
ಶಾರದಾ ಪಿಯು ಕಾಲೇಜು, ಬೀದರ್ ನಗರ
ಎಚ್‌ಎಸ್‌ಬಿ ಪಿಯು ಕಾಲೇಜು, ರಾಣೆಬೆನ್ನೂರು, ಹಾವೇರಿ ಜಿಲ್ಲೆ
ಡಾ. ಬಿ ಆರ್ ಅಂಬೇಡ್ಕರ್ ಪಿಯು ಕಾಲೇಜು, ಲಯಗಚ್ಚ, ಹಾವೇರಿ ಜಿಲ್ಲೆ
ಮಲ್ಲಿಕಾ ಪಿಯು ಕಾಲೇಜು, ಯಾದಗಿರಿ
ನೀಲಕಂಠ ಪಿಯು ಕಾಲೇಜು, ದೇವಪುರ, ಯಾದಗಿರಿ ಜಿಲ್ಲೆ
ಜಿಯಾಂಟ್ಸ್‌ ಕಾಮರ್ಸ್ ಪಿಯು ಕಾಲೇಜು, ಹುಬ್ಬಳ್ಳಿ, ಧಾರವಾಡ ಜಿಲ್ಲೆ
ಟಿಇಎಸ್‌ ಖಾದರ್ ಪಟೇಲ್ ಪಿಯು ಕಾಲೇಜು, ಅಫಜಲಪುರ, ಕಲಬುರಗಿ ಜಿಲ್ಲೆ
ಎಚ್‌ಕೆ ಗರೀಬ್ ನವಾಜ್ ಪಿಯು ಕಾಲೇಜು, ಕಲಬುರಗಿ
ಎಸ್‌ಟಿಎಂಇಎಸ್‌ ಬಾಲಕಿಯರ ಪಿಯು ಕಾಲೇಜು, ಯಾದಗಿರಿ
ಸಾಗರ್ನಾಡು ಪಿಯು ಕಾಲೇಜು, ಸುರಪುರ, ಯಾದಗಿರಿ ಜಿಲ್ಲೆ
ಶ್ರೀ ಆದಿತ್ಯ ಪಿಯು ಕಾಲೇಜು, ಸಿಂಧನೂರು, ರಾಯಚೂರು ಜಿಲ್ಲೆ
ಕೆಆರ್‌ಸಿ ಗರ್ಲ್ಸ್ ರೂರಲ್ ಪಿಯು ಕಾಲೇಜು, ಯಲಬುರ್ಗಾ, ಕೊಪ್ಪಳ ಜಿಲ್ಲೆ
ಬ್ರಮರಾಂಭ ವಿಮೆನ್‌ ಪಿಯು ಕಾಲೇಜು, ಯಲಬುರ್ಗಾ, ಕೊಪ್ಪಳ ಜಿಲ್ಲೆ
ಶಿರಡಿ ಸಾಯಿ ಪಿಯು ಕಾಲೇಜು, ಕಾರ್ಕಳ, ಉಡುಪಿ ಜಿಲ್ಲೆ

Latest Videos
Follow Us:
Download App:
  • android
  • ios