ಪಿಯು, ಡಿಗ್ರಿ ಕಾಲೇಜು ಆರಂಭಕ್ಕೆ ಟೈಮ್ ಫಿಕ್ಸ್?

ಶೀಘ್ರವೇ ರಾಜ್ಯದಲ್ಲಿ ಪಿಯುಸಿ ಹಾಗೂ ಅದಕ್ಕೂ ಮೆಲ್ಪಟ್ಟದರ್ಜೆಯ ಕಾಲೇಜುಗಳನ್ನು ಸರ್ಕಾರ ಪುನಾರಂಭಿಸುವ ಸಾಧ್ಯತೆ ಇದೆಯೇ?

DCM Ashwath Narayan Speaks About PU Degree College Open snr

ಬೆಂಗಳೂರು (ಅ.16):  ರಾಜ್ಯದಲ್ಲಿ ಶೀಘ್ರವೇ (ನವೆಂಬರ್‌ ಮಾಸದಲ್ಲಿ?) ಪಿಯುಸಿ ಹಾಗೂ ಅದಕ್ಕೂ ಮೆಲ್ಪಟ್ಟದರ್ಜೆಯ ಕಾಲೇಜುಗಳನ್ನು ಸರ್ಕಾರ ಪುನಾರಂಭಿಸುವ ಸಾಧ್ಯತೆ ಇದೆಯೇ?

ಉನ್ನತ ಶಿಕ್ಷಣ ಸಚಿವರೂ ಆದ ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ್‌ ಗುರುವಾರ ಇಂತಹದೊಂದು ಸುಳಿವು ನೀಡಿದ್ದಾರೆ.

ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ ನಾವು ಕಾಲೇಜುಗಳನ್ನು ಪುನಃ ತೆರೆಯದಿದ್ದರೆ, ಮಂಡಳಿಯ ಪರೀಕ್ಷೆಗಳನ್ನು ನಡೆಸುವುದು ಕಷ್ಟವಾಗುತ್ತದೆ. ನಮ್ಮ ಸರ್ಕಾರ ನೀಟ್‌, ಸಿಇಟಿ ಮತ್ತು ಇತರ ಪರೀಕ್ಷೆಗಳನ್ನು ಯಶಸ್ವಿಯಾಗಿ ನಡೆಸಿದೆ ಮತ್ತು ಆ ಎಲ್ಲ ವಿಶ್ವಾಸದಿಂದ ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ ಶೀಘ್ರದಲ್ಲೇ ಕಾಲೇಜುಗಳನ್ನು ಸಹ ತೆರೆಯುವ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಹುಬ್ಬಳ್ಳಿ: ಯುವಪಡೆಯಿಂದ ಸರ್ಕಾರಿ ಶಾಲೆಗಳಿಗೆ ರಂಗು, ಗೋಡೆಗಳೇ ಮಕ್ಕಳಿಗೆ ಪಾಠ ಹೇಳ್ತವೆ..!

ನೇಮಕಾತಿ ಆದೇಶ ನೀಡುವಂತೆ ಆಗ್ರಹಿಸಿ ಭಾವಿ ಉಪನ್ಯಾಸಕರು ಕಳೆದ ನಾಲ್ಕು ದಿನಗಳಿಂದ ಧರಣಿ ನಡೆಸುತ್ತಿರುವ ಪಿಯು ಮಂಡಳಿ ಆವರಣಕ್ಕೆ ಗುರುವಾರ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಸೂಚನೆಯಂತೆ ಶೀಘ್ರದಲ್ಲೇ ರಾಜ್ಯದಲ್ಲಿ ಕಾಲೇಜುಗಳನ್ನು ಆರಂಭಿಸುತ್ತಿದ್ದು, ಆರಂಭಿಸಿದ ಕೂಡಲೇ ಪದವಿ ಪೂರ್ವ ಕಾಲೇಜು ಉಪನ್ಯಾಸಕರಾಗಿ ಆಯ್ಕೆಯಾಗಿರುವ ಎಲ್ಲ ಅಭ್ಯರ್ಥಿಗಳಿಗೂ ನೇಮಕಾತಿ ಪತ್ರ ನೀಡಲಾಗುವುದು. ಹಾಗಾಗಿ ಧರಣಿ ಕೈಬಿಡುವಂತೆ ಮನವಿ ಮಾಡಿದ್ದು, ಉಪನ್ಯಾಸಕರು ಸ್ಪಂಧಿಸುವ ವಿಶ್ವಾಸವಿದೆ ಎಂದರು.

ಇದೇ ವೇಳೆ ಕಾಲೇಜು ಆರಂಭದ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕಾಲೇಜುಗಳು ಅಕ್ಟೋಬರ್‌ನಲ್ಲಿ ಮತ್ತೆ ತೆರೆಯಬೇಕಿತ್ತು, ಆದರೆ ಈಗ ಅದನ್ನು ನವೆಂಬರ್‌ಗೆ ಮುಂದೂಡಲಾಗಿದೆ. ಕಾಲೇಜುಗಳ ಆರಂಭಕ್ಕೆ ಆರೋಗ್ಯ ಮತ್ತು ಸಾರಿಗೆ ಇಲಾಖೆಗಳು ಪ್ರತ್ಯೇಕ ಮಾರ್ಗಸೂಚಿಗಳನ್ನು ರೂಪಿಸುತ್ತಿರುವುದರಿಂದ ಮುಂದೂಡಲಾಗಿದೆ. ಮುಖ್ಯಮಂತ್ರಿಗಳ ನಿರ್ದೇಶನದಂತೆ ಕಾಲೇಜುಗಳ ಆರಂಭಕ್ಕೆ ಅಗತ್ಯ ಮೂಲ ಸೌಕರ್ಯ ಸಿದ್ಧತೆಯನ್ನೂ ಮಾಡಿಕೊಳ್ಳಲಾಗುತ್ತಿದೆ. ಶೀಘ್ರದಲ್ಲೇ ಮುಖ್ಯಮಂತ್ರಿಯೊಂದಿಗೆ ಚರ್ಚಿಸಿ ಕಾಲೇಜುಗಳ ಆರಂಭಕ್ಕೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.

ಕಾಲೇಜುಗಳನ್ನು ತೆರೆದು ತರಗತಿ ನಡೆಸದೆ ಪರೀಕ್ಷೆಗಳನ್ನು ನಡೆಸಲು ಆಗುವ ತೊಂದರೆಗಳ ಕುರಿತು ಮಾತನಾಡಿದ ಅಶ್ವತ್ಥನಾರಾಯಣ್‌ ಅವರು, ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಹೊರಡಿಸಿದ ಮಾರ್ಗಸೂಚಿ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳನ್ನು ಅಕ್ಟೋಬರ್‌ನಿಂದ ಮತ್ತೆ ತೆರೆಯಲು ಅವಕಾಶ ಮಾಡಿಕೊಟ್ಟರೂ, ರಾಜ್ಯದಾದ್ಯಂತ ಕೋವಿಡ್‌ ಮತ್ತು 19 ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಅದನ್ನು ನವೆಂಬರ್‌ಗೆ ಮುಂದೂಡಿದೆ. ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ ನಾವು ಕಾಲೇಜುಗಳನ್ನು ಪುನಃ ತೆರೆಯದಿದ್ದರೆ, ಮಂಡಳಿಯ ಪರೀಕ್ಷೆಗಳನ್ನು ನಡೆಸುವುದು ಕಷ್ಟವಾಗುತ್ತದೆ. ನಮ್ಮ ಸರ್ಕಾರ ನೀಟ್‌, ಸಿಇಟಿ ಮತ್ತು ಇತರ ಪರೀಕ್ಷೆಗಳನ್ನು ಯಶಸ್ವಿಯಾಗಿ ನಡೆಸಿದೆ ಮತ್ತು ಆ ಎಲ್ಲ ವಿಶ್ವಾಸದಿಂದ ನಾವು ಕಾಲೇಜುಗಳನ್ನು ಸಹ ತೆರೆಯುತ್ತೇವೆ ಎಂದರು.

Latest Videos
Follow Us:
Download App:
  • android
  • ios