Davanagere: ನಾಲ್ಕು ಚಿನ್ನದ ಪದಕ ಪಡೆದ ಎಗ್‌ರೈಸ್ ಮಾರಾಟಗಾರನ ಪುತ್ರ!

ಮನೆಯಲ್ಲಿ ಕಿತ್ತು ತಿನ್ನುವ ಬಡತನ, ತಾಯಿ ಕೂಡ ರೋಗಪೀಡಿತೆ, ತಂದೆ ಎಗ್‌ರೈಸ್ ಬಂಡಿ ಇಟ್ಟು ಜೀವನವನ್ನು ನಡೆಸುತ್ತಿದ್ದರು. ಅದರೂ ಛಲ ಬಿಡದ ವಿದ್ಯಾರ್ಥಿ ಓದಿ ಸೈ ಎನಿಸಿಕೊಂಡು ನಾಲ್ಕು ಚಿನ್ನದ ಪದಕಗಳನ್ನು ಬಾಚಿಕೊಂಡಿದ್ದಾ‌ನೆ.

davanagere student harish grab 4 gold medal gvd

ವರದಿ: ವರದರಾಜ್, ದಾವಣಗೆರೆ

ದಾವಣಗೆರೆ (ಮೇ.05): ಮನೆಯಲ್ಲಿ ಕಿತ್ತು ತಿನ್ನುವ ಬಡತನ, ತಾಯಿ ಕೂಡ ರೋಗಪೀಡಿತೆ, ತಂದೆ ಎಗ್‌ರೈಸ್ ಬಂಡಿ ಇಟ್ಟು ಜೀವನವನ್ನು ನಡೆಸುತ್ತಿದ್ದರು. ಅದರೂ ಛಲ ಬಿಡದ ವಿದ್ಯಾರ್ಥಿ ಓದಿ ಸೈ ಎನಿಸಿಕೊಂಡು ನಾಲ್ಕು ಚಿನ್ನದ ಪದಕಗಳನ್ನು (4 Gold Medal) ಬಾಚಿಕೊಂಡಿದ್ದಾ‌ನೆ. ದಾವಣಗೆರೆ (Davanagere) ಜಿಲ್ಲೆಯ ಹರಿಹರ ವಿದ್ಯಾನಗರದ ನಿವಾಸಿ ಹನುಮಂತಪ್ಪನವರ ಪುತ್ರ ಹರೀಶ್ (Harish) ಎಂಬಿಎ ವಿದ್ಯಾರ್ಥಿ (MBA Student) ಆಗಿದ್ದು, ಬೆಂಗಳೂರು ವಿವಿಯಲ್ಲಿ (Bangalore University) ಎಂಬಿಎ ಸ್ನಾತಕೋತ್ತರ ಪದವಿಯಲ್ಲಿ ಪ್ರಥಮ ರ್ಯಾಂಕ್ ಪಡೆದು ನಾಲ್ಕು ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡು ಸಾಧನೆ ಗೈದಿದ್ದಾನೆ. 

ಹರೀಶ ಅವರ ತಂದೆ ಹನುಮಂತಪ್ಪನವರು ತಳ್ಳುವ ಗಾಡಿಯಲ್ಲಿ ಎಗ್‌ರೈಸ್ ಮಾರಾಟ ಮಾಡುತ್ತ ಜೀವನದ ಬಂಡಿ ಸಾಗಿಸುತ್ತಿದ್ದಾರೆ. ಎಗ್‌ರೈಸ್ ಮಾರಾಟದಿಂದ ಉಳಿತಾಯವಾದ ಹಣವನ್ನು ಮಗ ಹರೀಶ್‌ನ ಉನ್ನತ ಶಿಕ್ಷಣಕ್ಕಾಗಿ ವ್ಯಯ ಮಾಡಿದ್ದರು. ಹರಿಹರ ನಗರದ ಸೆಟ್ ಅಲೋಷಿಯಸ್ ಕಾಲೇಜಿನಲ್ಲಿ ಪಿಯು, ಬಿಕಾಂ, ಪದವಿ ಪಡೆದ ಹರೀಶ್‌ ಬೆಂಗಳೂರಿನ ಖಾಸಗಿ ಬ್ಯಾಂಕ್‌ವೊಂದರಲ್ಲಿ ಕೆಲಸ ದಕ್ಕಿಸಿಕೊಂಡಿದ್ದರು. 

Davanagere: ಜ್ಯೋತಿಷಿ ಬಳಿ ಶಾಸ್ತ್ರ ಕೇಳಿ ಹಣ ದೋಚುತ್ತಿದ್ದ ಇಬ್ಬರು ಕಳ್ಳರ ಬಂಧನ

ಬಳಿಕ ಅದೇ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಾ ಬೆಂಗಳೂರು ವಿವಿಯಲ್ಲಿ ಎಂಬಿಎ ಪ್ರವೇಶ ಪಡೆದು ವ್ಯಾಸಂಗ ಮಾಡಿ ಸಾಧನೆ ಮಾಡಿದ್ದಾರೆ. ಎಂಬಿಎನ ಪ್ರತಿಯೊಂದು ಸೆಮಿಸ್ಟರ್‌ಗಳಲ್ಲಿ ಉತ್ತಮವಾಗಿ ಅಂಕಗಳನ್ನು ಪಡೆದು 2019-2020ರ ಸಾಲಿನಲ್ಲಿ ಪ್ರಥಮ ರ್ಯಾಂಕ್ ಗಳಿಸಿದ್ದಾರೆ. ಕೋವಿಡ್ ಇದ್ದ ಕಾರಣ 2022 ಏ.30ರಂದು ಜರುಗಿದ 56 ನೇ ಘಟಿಕೋತ್ಸವದಲ್ಲಿ ರ್ಯಾಂಕ್ ಘೋಷಿಸಿದ ವಿವಿ ಪ್ರಮಾಣ ಪತ್ರ ಹಾಗು ನಾಲ್ಕು ಚಿನ್ನದ ಪದಕಗಳನ್ನು ನೀಡಿ ಗೌರವಿಸಿದೆ. 

Davanagere: 300 ಲೋಡು ಅಕ್ರಮ ಗಣಿಗಾರಿಕೆ ಮಣ್ಣು ಸಂಗ್ರಹ: ಅರಣ್ಯ ಅಧಿಕಾರಿಗಳು ಶಾಮೀಲಾಗಿರುವ ಶಂಕೆ

ಮನೆಯಲ್ಲಿ ಸಂಕಷ್ಟ ಇದ್ದರೂ ಛಲಬಿಡದೆ ಓದಿದ ಹರೀಶ್: ಎಂಬಿಎ ವ್ಯಾಸಂಗ ಮಾಡುವ ವೇಳೆ ಹರೀಶ್ ರವರ ತಾಯಿ ತೀವ್ರ ಅನಾರೋಗ್ಯಕ್ಕೀಡಿದ್ದರು. ಇದೇ ವೇಳೆ ಹರೀ ಶ್‌ಉನ್ನತ ಶಿಕ್ಷಣವನ್ನು ಮೊಟಕುಗೊಳಿಸುವ ನಿರ್ಧಾರ ಮಾಡಿದ್ದ ಹರೀಶ್‌ಗೆ ತಂದೆಯಾದ ಹನುಂತಪ್ಪನವರು ಧೈರ್ಯ ತುಂಬಿ ಓದು ನಿಲ್ಲಿಸದಂತೆ ತಿಳಿಸಿದ್ದರು. ತಂದೆ ಹನುಂತಪ್ಪನವರು ಆ ಒಂದು ಒಳ್ಳೆ ನಿರ್ಧಾರದಿಂದ ಮಗ ಇದೀಗ ಬೆಂಗಳೂರು ವಿವಿಗೆ ಎಂಬಿಎ ಫೈನಾನ್ಸ್ ಪದವಿಯಲ್ಲಿ ರ್ಯಾಂಕ್ ಬಂದಿದ್ದು, ಇಡೀ ದಾವಣಗೆರೆ ಜಿಲ್ಲೆಯ ಕೀರ್ತಿ ಪತಾಕೆ ಹಾರಿಸಿದ್ದಾರೆ. ಪ್ರಸ್ತುತವಾಗಿ ಹರೀಶ್ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕಾರ್ಯನಿರ್ವಾಹಿಸುತ್ತ ಮನೆಯ ಜವಾಬ್ದಾರಿ ಹೊತ್ತಿದ್ದಾರೆ.

Latest Videos
Follow Us:
Download App:
  • android
  • ios