Asianet Suvarna News Asianet Suvarna News

Weekend Curfew ಶಿವಮೊಗಗ್ಗದಲ್ಲಿ ಕೊರೋನಾ, ವೀಕೆಂಡ್ ಕರ್ಫ್ಯೂ ನಗೆಪಾಟಲಿಗೆ

*ಕಟ್ಟುನಿಟ್ಟಿನ ವೀಕೆಂಡ್ ಕರ್ಪ್ಯೂ ನಡುವೆಯೂ ಪರೀಕ್ಷೆ 
* ಶಿವಮೊಗಗ್ಗದಲ್ಲಿ ವೀಕೆಂಡ್ ಕರ್ಪ್ಯೂ ನಗೆಪಾಟಲಿಗೆ 
* ರಾಜ್ಯ ಸರ್ಕಾರದ ಕಾನೂನನ್ನ ಅಣುಕಿಸಿದಂತಾಗಿದೆ

covid and Weekend Curfew rules break in shivamogg rbj
Author
Bengaluru, First Published Jan 9, 2022, 10:11 PM IST

ಶಿವಮೊಗ್ಗ,( ಜ09): ಕಟ್ಟುನಿಟ್ಟಿನ ವೀಕೆಂಡ್ ಕರ್ಪ್ಯೂ (Weekend Curfew) ನಡುವೆಯೂ ಪರೀಕ್ಷೆಗಳು(Exams) ನಡೆಯುತ್ತಿವೆ . ಇದರಿಂದ ಕೊರೋನಾ ನಿಯಮಗಳು (Corona Rules) ನಗೆ ಪಾಟಲಿಗೆ ಗುರಿಯಾಗಿದೆ .

ಹೌದು.. ಶಿವಮೊಗ್ಗ (Shivamogga) ನಗರದ ಕಸ್ತೂರ ಬಾ ಪದವಿ ಪೂರ್ವ ಕಾಲೇಜಿನಲ್ಲಿ ಸೈನಿಕ ಪರೀಕ್ಷೆ ನಡೆಯುತ್ತಿದ್ದು ಕಾಲೇಜಿನ ಉಪ ಪ್ರಾಂಶುಪಾಲರು ಇದು ಕೇಂದ್ರ ಸರ್ಕಾರದ ಅಡಿಯಲ್ಲಿ ಅನುಮತಿಯೊಂದಿಗೆ ನಡೆಯುತ್ತಿದೆ ಎಂದು  ಮಾಹಿತಿ ನೀಡಿದ್ದಾರೆ. 

Weekend Curfew in Shivamogga: ಆಡಳಿತ ಪಕ್ಷದ ಶಾಸಕರ ಕಾಲೇಜಲ್ಲೇ ಕೋವಿಡ್‌ ರೂಲ್ಸ್‌ ಬ್ರೇಕ್‌

ಒಟ್ಟಿನಲ್ಲಿ ಕೇಂದ್ರ ಸರ್ಕಾರದ ಅನುಮತಿಯಿದ್ದರೆ ಕಾನೂನು ನಿಯಮಗಳು ಉಲ್ಲಂಘನೆ ಮಾಡಬಹುದು , ಕೊರೋನಾನೂ ಬರೊಲ್ಲ ಎಂಬಂತಾಗಿದೆ . ರಾಜ್ಯ ಸರ್ಕಾರದ ಕಾನೂನನ್ನ ಅಣುಕಿಸಿದಂತಾಗಿದೆ . ನಗರದ ಮುಖ್ಯ ವೃತ್ತದ ಬಳಿ ಪೊಲೀಸರು , ಪಾಲಿಕೆ ಸಿಬ್ಬಂದಿಗಳು ಮಾಸ್ಕ್ ಜಾಗೃತಿ ಮತ್ತು ಸಾಮಾಜಿಕ ಅಂತರ  ಕಾಪಾಡಿಕೊಳ್ಳಿ ಎಂದು ದಂಡ ವಿಧಿಸುತ್ತಿದ್ದಾರೆ. 

ಕೆಲವೊಂದು ಕಡೆ ದ್ವಿಚಕ್ರ ವಾಹನ ಸವಾರರಿಗೆ ಅನಾವಶ್ಯಕ ತಿರುಗುತ್ತಿದ್ದೀರಾ  ಎಂದು ದಂಡ ಕಟ್ಟಿಸಿ ಕೊಳ್ಳುತ್ತಿದ್ದಾರೆ .  ಅಂಗಡಿ ಮುಂಗಟ್ಟು ಮಾಲೀಕರಿಗೆ ಬಲವಂತವಾಗಿ ಬಾಗಿಲು ಹಾಕಿಸಲಾಗುತ್ತಿದೆ . ಹಾಗಾದರೆ ದಂಡ ಯಾಕೆ ಎಂಬುದು ಪ್ರಶ್ನೆಯಾಗಿದೆ . ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ಮೂಲಕ ಸೈನಿಕ ಪರೀಕ್ಷೆ ನಡೆಯುತ್ತಿದೆ. 

6 ನೇ ತರಗತಿ ಮತ್ತು 9 ನೇ ತರಗತಿಯ ಪ್ರವೇಶ ಪರಣಿಕೆಗಾಗಿ ಇಂದು(ಭಾನುವಾರ) 337 ಜನ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ . ಸಂಜೆ ನಾಲ್ಕು ವರೆವರೆಗೆ ಈ ಪರೀಕ್ಷೆ ನಡೆದಿದೆ . ಪರೀಕ್ಷೆ ನಡೆಯುವ ಮೊದಲು ಮತ್ತು ನಂತರ ತಮ್ಮ ಮಕ್ಕಳನ್ನ ಕರೆದುಕೊಂಡು ಬರುವ ವೇಳೆ ನಿಯಮಾವಳಿಗಳು ಗಾಳಿಗೆ ತೂರಲಾಗಿದೆ . ನಿನ್ನೆ ಗೃಹ ಸಚಿವರ ಕ್ಷೇತ್ರದಲ್ಲಿ ಜಾತ್ರೆ ನಡೆಯುತ್ತೆ . ಯಾವ ಕ್ರಮನೂ ಇಲ್ಲ . ಆದರೆ ದಾರಿ ಮೇಲೆ ಸಿಗುವ ಸಾರ್ವಜನಿಕರು ತೆರಿಗೆ ತುಂಬಿಸುವ ಮಿಷನ್ ಆಗಿದ್ದಾರೆ . ಒಟ್ಟಿನಲ್ಲಿ ಮೂರನೇ ಅಲೆಯ ವೀಕೆಂಡ್ ಕರ್ಪ್ಯೂ ನಗೆಪಾಟಲಿಗೆ ಗುರಿಯಾಗಿದೆ.

ಶಾಸಕರ ಕಾಲೇಜಲ್ಲೇ ಕೋವಿಡ್‌ ರೂಲ್ಸ್‌ ಬ್ರೇಕ್‌
 ರಾಜ್ಯಾದ್ಯಂತ(Karnataka) ನಿನ್ನೆ ರಾತ್ರಿಯಿಂದ ವೀಕೆಂಡ್ ಕರ್ಫ್ಯೂ(Weekend Curfew) ಜಾರಿಯಲ್ಲಿದೆ. ಆದರೆ, ಶಿವಮೊಗ್ಗದಲ್ಲಿ(Shivamogga) ವೀಕೆಂಡ್ ಕರ್ಫ್ಯೂ ವೇಳೆ ಶಾಸಕ ಒಡೆತನದ ಕಾಲೇಜಿನಲ್ಲಿ ಮಾತ್ರ ತರಗತಿಗಳು ನಡೆಯುತ್ತಿವೆ. ಹೌದು, ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಬಿಜೆಪಿ ಶಾಸಕ ಕೆ.ಬಿ. ಅಶೋಕ್(KB Ashok) ನಾಯ್ಕ ಅವರಿಗೆ ಸೇರಿದ ಕಾಲೇಜಿನಲ್ಲಿ ತರಗತಿಗಳು ನಡೆದಿವೆ ಎಂದು ತಿಳಿದು ಬಂದಿದೆ. ಆಡಳಿತ ಪಕ್ಷದ ಶಾಸಕರ ಕಾಲೇಜಿನಲ್ಲಿ ಕೋವಿಡ್ ರೂಲ್ಸ್(Covid Rukes) ಬ್ರೇಕ್ ಮಾಡಲಾಗಿದೆ. ಶಿವಮೊಗ್ಗ ತಾಲೂಕಿನ ಚನ್ನಾಮುಂಭಾಪುರ ಗ್ರಾಮದ ಅಕ್ಷರ ಕಾಲೇಜಿನಲ್ಲಿ(College) ಪಾಠಗಳು ನಡೆದಿವೆ. ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ವಿದ್ಯಾರ್ಥಿಗಳಿಗೆ(Students) ಪಾಠ ಮಾಡಲಾಗುತ್ತಿದೆ. 

ಇಂದು ಸರ್ಕಾರದ ವತಿಯಿಂದ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ವಾಕ್ಸಿನೇಶನ್‌ಗೆ(Vaccination) ಅವಕಾಶ ಕಲ್ಪಿಸಲಾಗಿದೆ. ಆದರೆ ವಾಕ್ಸಿನೇಶನ್ ನೆಪದಲ್ಲಿ ಕಾಲೇಜಿನಲ್ಲಿ ಪಾಠ ಮಾಡಲಾಗಿದೆ. ಪಾಠ ಮಾಡಿ, ನೋಟ್ಸ್ ಬರೆಸಿದ ಬಗ್ಗೆ ವಿದ್ಯಾರ್ಥಿಗಳು ಏಷ್ಯಾನೆಟ್‌ ಸುವರ್ಣ ನ್ಯೂಸ್‌ಗೆ(Asianet Suvarna News) ಮುಂದೆ ಒಪ್ಪಿಕೊಂಡಿದ್ದಾರೆ. ಶಿಕ್ಷಕರೂ ಸಹ ಪ್ರಾಕ್ಟಿಕಲ್ ನೋಟ್ಸ್ ಕೊಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. 

Follow Us:
Download App:
  • android
  • ios