Asianet Suvarna News Asianet Suvarna News

Covid 19: ಜನವರಿ 24 ರಿಂದಲೇ ಶಾಲೆಗಳು ಆರಂಭ ಸಾಧ್ಯತೆ, ಮುಖ್ಯಮಂತ್ರಿ ನೇತೃತ್ವದ ಸಭೆಯ ಬಳಿಕ ನಿರ್ಧಾರ

ಶಿಕ್ಷಣ ಸಚಿವ ಬಿಸಿ ನಾಗೇಶ್ ಹೇಳಿಕೆ
ನಾಳೆ ಮುಖ್ಯಮಂತ್ರಿ ನೇತೃತ್ವದಲ್ಲಿ ತಾಂತ್ರಿಕ ಸಲಹಾ ಸಮಿತಿ ಸಭೆ
ಜನವರಿ 24ಕ್ಕೆ ಶಾಲೆ ಪುನರಾರಂಭ ಸಾಧ್ಯತೆ ಅಧಿಕ

Covid 19 Karnataka education minister BC Nagesh statement schools in karnataka likely to reopen from 24th january san
Author
Bengaluru, First Published Jan 20, 2022, 4:27 PM IST

ಬೆಂಗಳೂರು (ಜ. 20): ರಾಜ್ಯದಲ್ಲಿ ಕೋವಿಡ್-19 (Covid-19) ಸೋಂಕು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ನಡುವೆಯೂ ಜನವರಿ 24 ರಿಂದ ರಾಜ್ಯಾದ್ಯಂತ ಶಾಲೆಗಳನ್ನು (School) ಮರಳಿ ತೆರೆಯುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಬೆಂಗಳೂರು ನಗರ (Banglore) ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಬಂದ್ ಮಾಡಿರುವ 1 ರಿಂದ 9ನೇ ತರಗತಿ ಹಾಗೂ 5 ರಿಂದ 9ನೇ ತರಗತಿಗಳನ್ನು ಮರಳಿ ಆರಂಭಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ. ಮೊದಲ ಹಂತದಲ್ಲಿ 5ನೇ ತರಗತಿ ಮೇಲ್ಪಟ್ಟ ಶಾಲೆಗಳ ಆರಂಭಕ್ಕೆ ಅವಕಾಶ ನೀಡುವ ಸಾಧ್ಯತೆ ಇದೆ. ಶುಕ್ರವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Chief Minister Basavaraj Bommai) ನೇತೃತ್ವದಲ್ಲಿ ವಿಧಾನಸೌಧದಲ್ಲಿ ಸಭೆ ನಡೆಯಲಿದ್ದು, ಈ ವೇಳೆ ಶಿಕ್ಷಣ ಸಚಿವರು ಹಾಗೂ ತಾಂತ್ರಿಕ ಸಲಹಾ ಸಮಿತಿ ಭಾಗವಹಿಸಲಿದೆ.

ಈ ಕುರಿತಾಗಿ ಸುದ್ದಿಗಾರರ ಜೊತೆ ಮಾತನಾಡಿದ ಸಚಿವ ನಾಗೇಶ್ (BC Nagesh), ಈ ಹಿಂದೆ ಮುಖ್ಯಮಂತ್ರಿಯ ಜೊತೆ ಸಭೆ ನಡೆಸಿದ್ದಾಗ ಕೋವಿಡ್ ನಿಂದ ಆದ ಸಮಸ್ಯೆಗಳನ್ನು ಚರ್ಚೆ ಮಾಡಿದ್ದೆವು. ಹಿಂದಿನ ಥರ ಶಾಲೆಗಳನ್ನು ಸಂಪೂರ್ಣವಾಗಿ ಬಂದ್ ಮಾಡುವ ಬದಲಿಗೆ ಇದರ ನಿರ್ಧಾರಗಳನ್ನು ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗೆ ನೀಡಿದ್ದೆವು. ಶಾಲೆಗಳಲ್ಲಿ ಕರೋನಾ ಕೇಸ್ ಕಂಡುಬಂದಲ್ಲಿ ಕ್ರಮ ತೆಗೆದುಕೊಳ್ಳಿ ಎಂದು ತಿಳಿಸಿದ್ದೆವು ಎಂದಿದ್ದಾರೆ. ಇದುವರೆಗೂ ಕೋವಿಡ್ ನಿಂದಾಗಿ ಯಾವುದೇ ಮಗುವಿನ ಮೇಲೆ ಕೆಟ್ಟ ಪರಿಣಾಮ ಬೀರಿಲ್ಲ. ಶುಕ್ರವಾರ ತಾಂತ್ರಿಕ ಸಲಹಾ ಸಮಿತಿ ಕೂಡ ಸಭೆಯಲ್ಲಿ ಭಾಗವಹಿಸಲಿದ್ದು, ಪ್ರಸ್ತುತ ಮಕ್ಕಳಲ್ಲಿರುವ ಪಾಸಿಟಿವಿಟಿ ರೇಟ್ ಬಗ್ಗೆಯೂ ಚರ್ಚೆ ನಡೆಸಲಿದ್ದೇವೆ. ಈಗಾಗಲೇ ಕೋವಿಡ್ ಕೇಸ್ ಗಳು ಹೆಚ್ಚಿದ್ದ ಕಡೆ ಶಾಲೆಗಳನ್ನು ಬಂದ್ ಮಾಡಿದ್ದೇವೆ. ಶಾಲೆಗಳಲ್ಲಿ ಕರೋನಾ ಪರಿಸ್ಥಿತಿ ಹೇಗಿದೆ ಎನ್ನುವ ಚರ್ಚೆಯೂ ಆಗಲಿದೆ. ಮಕ್ಕಳ ಶಿಕ್ಷಣ ಗುಣಮಟ್ಟ ಹಾಗೂ ಕಲಿಕೆಯನ್ನು ನೋಡಿದಾಗ ಶಾಲೆಗಳನ್ನು ನಡೆಸಬೇಕು ಅನಿಸುತ್ತದೆ. ಆದರೆ, ಈ ಕುರಿತಾಗಿ ಸಿಎಂ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಹೇಳಿದ್ದಾರೆ. 10, 11 ಹಾಗೂ 12ನೇ ತರಗತಿಯ ಮಕ್ಕಳಿಗೆ ಲಸಿಕೆಗಳನ್ನು ನೀಡಲಾಗುತ್ತಿದೆ. 10ನೇ ತರಗತಿಗೆ ಬರುತ್ತಿರೋ ಹೆಚ್ಚಿನ ಮಕ್ಕಳಲ್ಲಿ ಸೋಂಕು ಕಾಣಿಸಿಕೊಂಡಿಲ್ಲ ಇದು ಖುಷಿಯ ವಿಚಾರ ಎಂದರು.

ಡಿಸೆಂಬರ್ ಕೊನೆಯಲ್ಲಿ ಪಾಸಿಟಿವಿಟಿ ನೋಡಿಕೊಂಡು ಶಾಲೆಯನ್ನು ಬಂದ್ ಮಾಡಿದ್ದೆವು. ಅವಶ್ಯಕತೆಗೆ ತಕ್ಕಂತೆ ಮಹಾನಗರಗಳಲ್ಲಿ ಮಾತ್ರವೇ ಶಾಲೆಗಳನ್ನು ಮುಚ್ಚಿದ್ದೆವು.  ಮೈಸೂರು, ಶಿವಮೊಗ್ಗ ಸೇರದಂತೆ ಕೆಲವೆಡೆ ಮಾತ್ರ ಸಮಸ್ಯೆ ಇತ್ತು. ಇನ್ನು ಶೇ.80ರಷ್ಟು ಶಾಲೆಗಳು ಎಂದಿನಂತೆ ನಡೆದವು. ಪಾಸಿಟಿವ್ ದರ ಹೆಚ್ಚಾದ್ರೂ ಮಕ್ಕಳಿಗೆ ಯಾವುದೇ ಸಮಸ್ಯೆ ಆಗಿಲ್ಲ ಎಂದರು.

Covid 19: ಜನವರಿ 24ರಿಂದಲೇ ಶಾಲೆಗಳು ಆರಂಭ..?
1250 ಮಕ್ಕಳಲ್ಲಿ ಕೊರೋನಾ: ಶಿಕ್ಷಣ ಇಲಾಖೆಯ ಮಾಹಿತಿಯ ಪ್ರಕಾರ ಈವರೆಗೂ 1250 ಮಕ್ಕಳಲ್ಲಿ ಕೊರೋನಾ ಕಂಡುಬಂದಿದ್ದು, 1 ರಿಂದ 10ನೇ ತರಗತಿಯ 6700 ಮಕ್ಕಳಿಗೆ ಕೋವಿಡ್ ಪಾಸಿಟಿವ್ ಆಗಿದೆ. ಆರೋಗ್ಯ ಇಲಾಖೆಯಿಂದ ಈ ಕುರಿತಾಗಿ ಇನ್ನಷ್ಟು ಹೆಚ್ಚಿನ ಮಾಹಿತಿ ಪಡೆಯಲಿದ್ದೇನೆ ಎಂದು ನಾಗೇಶ್ ತಿಳಿಸಿದ್ದಾರೆ. ಪ್ರಸ್ತುತ 892 ಮಕ್ಕಳಲ್ಲಿ ಕೋವಿಡ್ ಪಾಸಿಟಿವ್ ಸಕ್ರಿಯವಾಗಿದೆ. ನಿನ್ನೆ ಒಂದೇ ದಿನ ಪಿಯುಸಿಯಲ್ಲಿ 166 ಮಕ್ಕಳಿಗೆ ಪಾಸಿಟಿವ್ ಬಂದಿದೆ ಎಂದು ವಿವರಣೆ ನೀಡಿದರು. 0-5 ವರ್ಷದ ಮಕ್ಕಳಲ್ಲಿ ಶೇ. 13.01, 6-15 ವರ್ಷದ ಮಕ್ಕಳಲ್ಲಿ ಶೇ.5.94 ಹಾಗೂ 16-20 ವರ್ಷದ ಮಕ್ಕಳಲ್ಲಿ ಶೇ. 8.17ರಷ್ಟು ಪಾಸಿಟಿವಿಟಿ ದರವಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ..

Coronavirus: ಕೋವಿಡ್‌ನಿಂದ ಚೇತರಿಸಿಕೊಂಡ ಸಿಎಂ ಬೊಮ್ಮಾಯಿ: ಕರ್ತವ್ಯಕ್ಕೆ ಹಾಜರ್‌
146 ಶಾಲೆಗಳು ಬಂದ್: ರಾಜ್ಯದಲ್ಲಿ ಒಟ್ಟು 48 ಸಾವಿರ ಶಾಲೆಗಳಲ್ಲಿದ್ದು ಈ ಪೈಕಿ 146 ಶಾಲೆಗಳು ಕೋವಿಡ್ ಕೇಸ್ ಗಳ ಕಾರಣದಿಂದಾಗಿ ಬಂದ್ ಆಗಿದೆ.  ಹಾವೇರಿ, ಕಲಬುರಗಿ, ಬೀದರ್, ರಾಯಚೂರು, ಮಧುಗಿರಿಯಲ್ಲಿ ಒಂದು ಶಾಲೆಯೂ ಕ್ಲೋಸ್ ಆಗಿಲ್ಲ. ಕೋಲಾರಲ್ಲಿ 2 , ತುಮಕೂರು 32, ಚಿತ್ರದುರ್ಗ 6, ಚಿಕ್ಕಮಗಳೂರು 7 ಕೊಪ್ಪಳ 2 ದಾವಣಗೆರೆ 6 , ಚಿಕ್ಕೋಡಿ 3,ಗದಗ ಜಿಲ್ಲೆಯಲ್ಲಿ 3 ಚಿಕ್ಕಬಳ್ಳಾಪುರ 11 ಶಾಲೆಗಳು ಕ್ಲೋಸ್ ಆಗಿದೆ ಎಂದು ಮಾಹಿತಿ ನೀಡಿದರು.

Follow Us:
Download App:
  • android
  • ios