ಚಂಡೀಗಢ(ನ.19): ಕರ್ನಾಟಕ ಸೇರಿ ದೇಶದ ಹಲವು ರಾಜ್ಯಗಳಲ್ಲಿ ಶೈಕ್ಷಣಿಕ ಸಂಸ್ಥೆಗಳು ಕಾರಾರ‍ಯರಂಭ ಮಾಡಿರುವ ಬೆನ್ನಲ್ಲೇ, ಹರಾರ‍ಯಣದ ಮೂರು ಜಿಲ್ಲೆಗಳಲ್ಲಿ 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಕೆಲವು ದಿನಗಳ ಕಾಲ ಕೊರೋನಾ ಪತ್ತೆಯಾದ ಶಿಕ್ಷಣ ಸಂಸ್ಥೆಗಳನ್ನು ಮುಚ್ಚುವಂತೆ ಸೂಚಿಸಲಾಗಿದೆ.

ಈ ಬಗ್ಗೆ ಬುಧವಾರ ಮಾಹಿತಿ ನೀಡಿದ ಅಧಿಕಾರಿಗಳು, ರೆವಾರಿ ಜಿಲ್ಲೆಯ 13 ಶಾಲೆಗಳು 91 ವಿದ್ಯಾರ್ಥಿಗಳು, ಜಿಂದ್‌ ಜಿಲ್ಲೆಯ ವಿವಿಧ ಶಾಲೆಗಳ 30 ವಿದ್ಯಾರ್ಥಿಗಳು ಮತ್ತು 10 ಶಿಕ್ಷಕರು ಮತ್ತು ಝಜ್ಜರ್‌ ಜಿಲ್ಲೆಯ 34 ವಿದ್ಯಾರ್ಥಿಗಳಿಗೆ ಸೋಂಕು ದೃಢಪಟ್ಟಿದೆ.

ಸೋಂಕಿಗೆ ತುತ್ತಾದವರೆಲ್ಲಾ 9-12ನೇ ತರಗತಿವರೆಗಿನ ವಿದ್ಯಾರ್ಥಿಗಳು. ರಾಜ್ಯದಲ್ಲಿ ನ.2ರಿಂದ ಶಾಲಾ-ಕಾಲೇಜು ಆರಂಭವಾಗಿತ್ತು.